• ಹೋಂ
  • »
  • ನ್ಯೂಸ್
  • »
  • state
  • »
  • Dakshina Kannada Jobs: ದಕ್ಷಿಣ ಕನ್ನಡದಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ; ತಿಂಗಳಿಗೆ ₹10 ಸಾವಿರ ಸಂಬಳ

Dakshina Kannada Jobs: ದಕ್ಷಿಣ ಕನ್ನಡದಲ್ಲಿ ಅಂಗನವಾಡಿ ಹುದ್ದೆಗಳಿಗೆ ನೇಮಕಾತಿ; ತಿಂಗಳಿಗೆ ₹10 ಸಾವಿರ ಸಂಬಳ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಂಗನವಾಡಿ ಕೇಂದ್ರಗಳಿಗೆ ನೇಮಕಾತಿ ನಡೆಯುತ್ತಿದೆ. ಆಸಕ್ತ ಮಹಿಳಾ ಅಭ್ಯರ್ಥಿಗಳು ಕೂಡಲೇ ಆನ್ ಲೈನ್ ಮೂಲಕ ಅಂಗನವಾಡಿ ಕಾರ್ಯಕರ್ತೆ ಅಥವಾ ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ.

  • Share this:

ಮಂಗಳೂರು: ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರಾಗಿ ಸೇವೆ ಸಲ್ಲಿಸಲು ನೀವೇನಾದರೂ ಬಯಸುತ್ತೀರಾ? ಉದ್ಯೋಗದ ಕನಸು ಕಾಣುವ ಮಹಿಳೆಯರ ಸಾಲಿನಲ್ಲಿ ನೀವೂ ಇದ್ದೀರ? ಹಾಗಿದ್ರೆ ಇಲ್ಲಿದೆ ಒಂದು ಸುವರ್ಣಾವಕಾಶ. ಗೌರವ ಧನದ ಜೊತೆಗೆ ಪುಟ್ಟ ಮಕ್ಕಳ ಭವಿಷ್ಯ ನಿರೂಪಿಸುವ ಹೊಣೆಗಾರಿಕೆಯೊಂದಿಗೆ ಸಮಾಜದ ಗೌರವಾನ್ವಿತ ಸ್ಥಾನ ಪಡೆಯುವ ಅವಕಾಶ. ದಕ್ಷಿಣ ಕನ್ನಡ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಹುದ್ದೆಗಳು ಖಾಲಿಯಿದ್ದು, ಭರ್ತಿ ಮಾಡಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ಕೂಡಲೇ ಸೂಕ್ತ ವಿವರಗಳೊಂದಿಗೆ ಆನ್ ಲೈನ್ ಮೂಲಕ ಕಾರ್ಯಕರ್ತೆ ಹಾಗೂ ಸಹಾಯಕಿಯರ ಹುದ್ದೆಗಳಿಗಾಗಿ ಅರ್ಜಿ ಸಲ್ಲಿಸಿ. 

ಹುದ್ದೆಯ ಹೆಸರುಹುದ್ದೆಗಳ ಸಂಖ್ಯೆ
ಅಂಗನವಾಡಿ ಸಹಾಯಕಿ09
ಸಹಾಯಕಿಯರು78
ಸ್ಥಳದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳು
ವಿದ್ಯಾರ್ಹತೆಅಂಗನವಾಡಿ ಸಹಾಯಕಿ ಹುದ್ದೆಗೆ ಎಸ್​ಎಸ್​ಎಲ್​ಸಿಸಹಾಯಕಿಯರ ಹುದ್ದೆಗೆ ಗರಿಷ್ಟ 9 ನೇ ತರಗತಿ
ವಯೋಮಿತಿಕನಿಷ್ಟ 18 ಹಾಗೂ ಗರಿಷ್ಟ 35
ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ21.07.2022

ಹುದ್ದೆಗಳು (ದ.ಕ. ಜಿಲ್ಲೆಯಾದ್ಯಂತ) ಅಂಗನವಾಡಿ ಸಹಾಯಕಿ ಹುದ್ದೆಗಳು -09 ಸಹಾಯಕಿಯರ ಹುದ್ದೆಗಳು – 78 ಈ ಎರಡೂ ಹುದ್ದೆಗಳಿಗೂ ಮಹಿಳೆಯರಷ್ಟೇ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.


ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ವಿದ್ಯಾರ್ಹತೆ ಮಾಹಿತಿ ಇಲ್ಲಿದೆ
ಕಡ್ಡಾಯವಾಗಿ ಎಸ್ಎಸ್ಎಸ್​ಲಿ (SSLC) ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿರಬೇಕು. ಸಹಾಯಕಿ ಹುದ್ದೆಗೆ: 4ನೇ ತರಗತಿ ಹಾಗೂ ಗರಿಷ್ಟ 9ನೇ ತರಗತಿ ಕಲಿತಿರಬೇಕು. (9ಕ್ಕಿಂತ ಹೆಚ್ಚಿನ ತರಗತಿ ಕಲಿತಿದ್ದರೆ ಆಯ್ಕೆಗೆ ಪರಿಗಣಿಸಲಾಗದು.) 


ವಯೋಮಿತಿ ಎಷ್ಟಿರಬೇಕು?
ಅಭ್ಯರ್ಥಿಗಳು ಕನಿಷ್ಟ 18 ಹಾಗೂ ಗರಿಷ್ಟ 35 ವರ್ಷ ವಯಸ್ಸನ್ನು ಮೀರಿರುವಂತಿಲ್ಲ. ಆದರೆ, ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವ ವಿಕಲಚೇತನ ಅಭ್ಯರ್ಥಿಗಳಿಗೆ ಗರಿಷ್ಟ 45 ವರ್ಷ ವಯೋಮಿತಿಯನ್ನು ನಿಗದಿಪಡಿಸಲಾಗಿದೆ. 


ಅರ್ಜಿ ಸಲ್ಲಿಸುವುದು ಹೇಗೆ?
ಅರ್ಜಿದಾರರು ಕಡ್ಡಾಯವಾಗಿ ಆನ್ ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಾಗಿರುತ್ತದೆ. ಹಾಗಾಗಿ ಈ ಕೆಳಗಿನ ವೆಬ್ ಸೈಟ್ ಲಿಂಕ್ ಮೂಲಕ ಆಸಕ್ತ ಮಹಿಳೆಯರು ಕಾರ್ಯಕರ್ತೆ/ಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ. ವೆಬ್ ಸೈಟ್ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ
ಅರ್ಜಿ ಸಲ್ಲಿಸುವವರು 21.07.2022ರ ಸಂಜೆ ಗಂಟೆ 5.30ರ ಒಳಗಾಗಿ ಸಲ್ಲಿಸಬೇಕಿದೆ.


ಲಗತ್ತಿಸಬೇಕಾದ ದಾಖಲಾತಿಗಳು ಹೀಗಿವೆ
1. ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು SSLC ಅಂಕ ಪಟ್ಟಿ ಹಾಗೂಸಹಾಯಕಿ ಹುದ್ದೆಗೆ ಅರ್ಜಿ ಸಲ್ಲಿಸುವವರು ಶಾಲೆಯಿಂದ ಪಡೆದ ವರ್ಗಾವಣೆ ಪತ್ರ/ ಕಂದಾಯ ಇಲಾಖೆ ನೀಡಿರುವ ಜನನ ಪ್ರಮಾಣ ಪತ್ರ
2. ನಿಗದಿಪಡಿಸಿದ ವಿದ್ಯಾರ್ಹತೆಯ ಅಂಕಪಟ್ಟಿ
3. ವಾಸ ಸ್ಥಳ ದೃಢೀಕರಣ ಪತ್ರ
4. ಜಾತಿ ಪ್ರಮಾಣ ಪತ್ರ (ಪರಿಶಿಷ್ಟ ಜಾತಿ/ ಪಂಗಡ ಮೀಸಲು ಕೇಂದ್ರಗಳಿದ್ದಲ್ಲಿ)
5. ವಿಧವೆಯಾಗಿದ್ದಲ್ಲಿ ಪತಿಯ ಮರಣ ಪ್ರಮಾಣ ಪತ್ರ
6. ಆತ್ಮಹತ್ಯೆ ಮಾಡಿಕೊಂಡ ರೈತನ ಪತ್ನಿಯಾಗಿದ್ದಲ್ಲಿ ಉಪವಿಭಾಗಾಧಿಕಾರಿಯಿಂದ ಪಡೆದ ಪ್ರಮಾಣ ಪತ್ರ
7. ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಸಲ್ಲಿಸುವವರು ವಿಕಲ ಚೇತನರಾಗಿದ್ದಲ್ಲಿ, ಶೇಕಡಾ 60 ಕ್ಕಿಂತ ಕಡಿಮೆ ಅಂಗವಿಕಲತೆ ಹೊಂದಿರುವ ಪ್ರಮಾಣ ಪತ್ರ
8. ವಿಚ್ಛೇದಿತರಾಗಿದ್ದಲ್ಲಿ ಸಂಬಂಧಿಸಿದ ಪ್ರಮಾಣ ಪತ್ರ
9. ಯೋಜನಾ ನಿರಾಶ್ರಿತರಾಗಿದ್ದಲ್ಲಿ ಅದಕ್ಕೆ ಸಂಬಂಧಿತ ಪ್ರಮಾಣ ಪತ್ರ


ಇಲ್ಲೆಲ್ಲ ಹುದ್ದೆಗಳು ಖಾಲಿಯಿವೆ
1.
ಬೆಳ್ತಂಗಡಿ
2. ಸುಳ್ಯ
3. ಮಂಗಳೂರು ನಗರ
4. ಮಂಗಳೂರು ಗ್ರಾಮಾಂತರ
5. ಬಂಟ್ವಾಳ
6. ವಿಟ್ಲ
7. ಪುತ್ತೂರು


ಇದನ್ನೂ ಓದಿ: Belagavi: ನಾಯಿ ಬರ್ತ್​ಡೇ ಆಚರಣೆ ವಿಡಿಯೋ ನೋಡಿ! 1 ಕ್ವಿಂಟಲ್ ಕೇಕ್, 5 ಸಾವಿರ ಜನರಿಗೆ ಭರ್ಜರಿ ಊಟ!


ಸಂಪೂರ್ಣ ಮಾಹಿತಿ ಗಮನಿಸಿಅರ್ಜಿದಾರರು ಹುದ್ದೆಗಳು ಖಾಲಿ ಇರುವ ಅಂಗನವಾಡಿ ಕೇಂದ್ರ ಹಾಗೂ ಹೆಚ್ಚಿನ ವಿವರಗಳಿಗಾಗಿ ವೆಬ್ ಸೈಟ್ ನಲ್ಲಿರುವ ಅಧಿಸೂಚನೆಯಲ್ಲಿ ಗಮನಿಸಬಹುದಾಗಿದೆ. ಅರ್ಜಿದಾರರು ಸಂಪೂರ್ಣ ಅಧಿಸೂಚನೆ ಓದಿದ ಬಳಿಕವಷ್ಟೇ ಅರ್ಜಿ ಸಲ್ಲಿಸುವುದು ಸೂಕ್ತ. ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ


ಇದನ್ನೂ ಓದಿ: Mangaluru Collages: ಮಂಗಳೂರಿನ ಈ ಕಾಲೇಜುಗಳಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಡಿ ಹೊಸ ಹೊಸ ಕೋರ್ಸ್ ಶುರು!

ಊರಿನ ಹೆಸರುಸಹಾಯವಾಣಿ ಸಂಖ್ಯೆ
ಬೆಳ್ತಂಗಡಿ08256-2321342
ಸುಳ್ಯ08257-2302393
ಮಂಗಳೂರು ನಗರ0824-24328094
ಮಂಗಳೂರು ಗ್ರಾಮಾಂತರ0824-2263199
ಬಂಟ್ವಾಳ 08255-232465
ವಿಟ್ಲ08255-2380807
ಪುತ್ತೂರು 08251-230388

ಹೆಚ್ಚಿನ ಮಾಹಿತಿಗಾಗಿ ಅರ್ಜಿದಾರ ಮಹಿಳೆಯರು ಯಾವುದೇ ಸಂಶಯಗಳಿದ್ದಲ್ಲಿ ಸಹಾಯವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದಾಗಿದೆ.

top videos
    First published:

    ಸುದ್ದಿ 18ಕನ್ನಡ ಟ್ರೆಂಡಿಂಗ್

    ಮತ್ತಷ್ಟು ಓದು