ಮಂಗಳೂರು: ಮಾನ್ಸೂನ್ ಆರಂಭವಾಗಿದ್ದು ಇನ್ನೇನು ಕರಾವಳಿ ಭಾಗದಲ್ಲಿ ಭಾರೀ ಮಳೆಯಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ ಈ ಭಾಗಗಳಲ್ಲಿ ಭೂಕುಸಿತ, ನೆರೆ (Landslide And Flood) ಉಂಟಾಗುವ ಸಾಧ್ಯತೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲಾಡಳಿತವು ಸಂಭಾವ್ಯ ಅನಾಹುತಗಳನ್ನು ತಪ್ಪಿಸಲು ಈಗಾಗಲೇ ಕಾರ್ಯ ಪ್ರವೃತ್ತವಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ (Belthangady) ಕಳೆದ ಬಾರಿ ಭೂಕುಸಿತ ಆಗಿರುವ ಹಿನ್ನೆಲೆಯಲ್ಲಿ ಈ ಬಾರಿ ಮತ್ತಷ್ಟು ನಿಗಾ ವಹಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ (Dakshina Kannada) ಈ ಸಹಾಯವಾಣಿ (Landslide And Flood Helpline) ತೆರೆಯಲಾಗಿದ್ದು ಸಾರ್ವಜನಿಕರು ಯಾವುದೇ ಸಂದರ್ಭದಲ್ಲಿ ಸಂಪರ್ಕಿಸಬಹುದಾಗಿದೆ. ಈ ಸಹಾಯವಾಣಿ ಸಂಖ್ಯೆಗಳನ್ನು ನೀವು ಈಗಲೇ ಸೇವೆ ಮಾಡಿ ಇಟ್ಟುಕೊಂಡರೆ ಅಗತ್ಯ ಪರಿಸ್ಥಿತಿಯಲ್ಲಿ ಸಹಾಯವಾಗಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪರಿಸ್ಥಿತಿ ಹೀಗಿದೆ
ದಕ್ಷಿಣ ಕನ್ನಡ ಜಿಲ್ಲೆಯ 9 ತಾಲೂಕುಗಳಲ್ಲಿ 96 ನೆರೆ ಹಾಗೂ ಭೂಕುಸಿತ ಸಾಧ್ಯತೆ ಇರುವ ಗ್ರಾಮಗಳೆಂದು ಗುರುತಿಸಲಾಗಿದೆ. ಹೀಗಾಗಿ ಜಿಲ್ಲೆಯಾದ್ಯಂತ 88 ಕಾಳಜಿ ಕೇಂದ್ರಗಳನ್ನು ತೆರೆಯಲಾಗಿದೆ. ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಭೂ ಕುಸಿತ ಪ್ರದೇಶಗಳನ್ನು ಗುರುತಿಸಿ ನೋಡಲ್ ಅಧಿಕಾರಿಯನ್ನು ನೇಮಿಸಲಾಗಿದೆ.
ಕಾರ್ಯಾಚರಣೆ ಪಡೆ ಹೇಗಿದೆ?
ಈಗಾಗಲೇ ಜಿಲ್ಲೆಗೆ 20 ಮಂದಿ ಸದಸ್ಯರು ಇರುವ NDRF, 36 ಸದಸ್ಯರ SDRF ತಂಡಗಳು ಆಗಮಿಸಿವೆ. ಜೊತೆಗೆ ಜಿಲ್ಲೆಯ ಗೃಹ ರಕ್ಷಕ ಹಾಗೂ ಅಗ್ನಿಶಾಮಕದಳವೂ ಸನ್ನದ್ಧವಾಗಿವೆ. 23 ಬೋಟ್ ಗಳು, 72 ಲೈಫ್ ಬೋಟ್, 341 ಲೈಫ್ ಜಾಕೆಟ್, 89 ಸರ್ಚ್ ಲೈಟ್, 27 ಅಸ್ಕಾ ಲೈಟ್, 14 ಪೋರ್ಟೆಬಲ್ ಜನರೇಟರ್, 29 ಪೋರ್ಟೆಬಲ್ ಪಂಪ್, 3 ಸ್ಕೂಬಾ ಡೈವಿಂಗ್ ಸೆಟ್ ಸೇರಿದಂತೆ ನೆರೆ, ಭೂಕುಸಿತ ಪರಿಸ್ಥಿತಿಯನ್ನು ಎದುರಿಸಲು ಜಿಲ್ಲಾಡಳಿತವು ಸಜ್ಜಾಗಿವೆ.
ಇದನ್ನೂ ಓದಿ: Bengaluru News: ಬೆಂಗಳೂರಿನ ಸೈನಿಕ ಶಾಲೆಗೆ ಸೇರಬೇಕೆ? ವಿದ್ಯಾರ್ಥಿನಿಯರೇ ಈ ಅವಕಾಶ ಬಿಡಬೇಡಿ
ಸಹಾಯವಾಣಿ ಸಂಖ್ಯೆಯನ್ನು ಈಗಲೇ ಸೇವೆ ಮಾಡಿ ಇಟ್ಕೊಳ್ಳಿ!
ಪ್ರಾಕೃತಿಕ ವಿಕೋಪ ಸಂದರ್ಭ ಸಂಪರ್ಕಿಸಲು ಜಿಲ್ಲಾಡಳಿತವು ಸಹಾಯವಾಣಿ ಕೇಂದ್ರವನ್ನು ತೆರೆದಿದ್ದು, ಅವುಗಳ ಸಂಪರ್ಕ ಸಂಖ್ಯೆ ಹೀಗಿದೆ.
ತುರ್ತು ಸಹಾಯವಾಣಿ ಸಂಖ್ಯೆ - 1077
ಮೆಸ್ಕಾಂ – 1912 (ವಿದ್ಯುತ್ ಸಂಬಂಧಿತ ದೂರು)
ಪೊಲೀಸ್ – 100
ಜಿಲ್ಲಾಡಳಿತ ಸಹಾಯವಾಣಿ ಸಂಖ್ಯೆ: 0824-2442590, 2220319, 9483908000
ಹೀಗೆ ಮುಂಗಾರು ಮಳೆ ಸಂದರ್ಭ ನೆರೆ, ಪ್ರವಾಹ ಹಾಗೂ ಭೂಕುಸಿತ ಸಂಭವಿಸಿದ್ದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಜನತೆಯ ಸುರಕ್ಷತೆಗೆ ಜಿಲ್ಲಾಡಳಿತ ಸನ್ನದ್ಧವಾಗಿವೆ. ಅಗತ್ಯ ತಯಾರಿ ಮಾಡಿಕೊಂಡಿದೆ.
ಇದನ್ನೂ ಓದಿ: Mangaluru Power Cut: ಮಂಗಳೂರಲ್ಲಿ ಈ 2 ದಿನ ಕೈ ಕೊಡಲಿದೆ ಕರೆಂಟ್! ಸಮಯ, ಏರಿಯಾ ಮಾಹಿತಿ ಇಲ್ಲಿದೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಅಪಾಯದ ಮುನ್ಸೂಚನೆ ಇದ್ದರೂ ಸಾರ್ವಜನಿಕರು ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೆರವನ್ನು ಪಡೆಯಬಹುದಾಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ