• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • Dakshina Kannada: ಬೆಳ್ತಂಗಡಿಯ ನೆರಿಯಾದಲ್ಲಿ ಕೋವಿಡ್ ಸ್ಫೋಟ; ಸಿಯೋನ್ ಅನಾಥಾಶ್ರಮದ 210 ಜನರಿಗೆ ಕೊರೋನಾ

Dakshina Kannada: ಬೆಳ್ತಂಗಡಿಯ ನೆರಿಯಾದಲ್ಲಿ ಕೋವಿಡ್ ಸ್ಫೋಟ; ಸಿಯೋನ್ ಅನಾಥಾಶ್ರಮದ 210 ಜನರಿಗೆ ಕೊರೋನಾ

ಸಿಯೋನ್ ಅನಾಥಾಶ್ರಮ

ಸಿಯೋನ್ ಅನಾಥಾಶ್ರಮ

Beltangady Coronavirus: ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಅನಾಥಾಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

  • Share this:

ಮಂಗಳೂರು (ಮೇ 31): ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿ ಕೊರೊನಾ ಮಹಾಸ್ಪೋಟವಾಗಿದೆ. ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ಗಂಡಿಬಾಗಿಲಿನಲ್ಲಿರುವ ಸಿಯೋನ್ ಅನಾಥಾಶ್ರಮದಲ್ಲಿ ಕೊರೊನಾ ಸ್ಫೋಟವಾಗಿದೆ. ಆಶ್ರಮದ 270 ಜನರಲ್ಲಿ 210 ಮಂದಿಯಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ರ್ಯಾಂಡಮ್ ಟೆಸ್ಟ್ ಮಾಡುವಾಗ ಕೊರೊನಾ ಸೋಂಕು ಪತ್ತೆಯಾಗಿದೆ.


ಒಟ್ಟು 270 ಜನರಿರುವ ಆಶ್ರಮ ಇದಾಗಿದ್ದು,ಕಳೆದ ಕೆಲ ದಿನಗಳ ಹಿಂದೆ ಕೆಲವು ಮಂದಿಯಲ್ಲಿ ಕಂಡು ಬಂದಿದ್ದ ಸೋಂಕು ಕಂಡುಬಂದಿತ್ತು. ಶನಿವಾರ  ನಡೆಸಿದ ರ್ಯಾಂಡಮ್ ಟೆಸ್ಟ್ ನಲ್ಲಿ ಬಹುತೇಕ ಎಲ್ಲರಲ್ಲೂ ಸೋಂಕು ಪತ್ತೆಯಾಗಿದೆ. ಸಿಯೋನ್ ಆಶ್ರಮದಲ್ಲಿ ಬಹುತೇಕ ವೃದ್ಧರು ಮತ್ತು ಮನೋರೋಗಿಗಳಿದ್ದು, ಸೋಂಕಿತರನ್ನು ಕೊವೀಡ್ ಕೇರ್ ಸೆಂಟರ್ ಗೆ ಶಿಫ್ಟ್ ಮಾಡಲು ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಶಾಸಕ ಹರೀಶ್ ಪೂಂಜಾ ಮುಂದಾಗಿದ್ದಾರೆ. ಹತ್ತಕ್ಕೂ ಹೆಚ್ಚು ಅಂಬುಲೆನ್ಸ್ ಗಳಲ್ಲಿ ಸೋಂಕಿತರ ಶಿಫ್ಟ್ ಮಾಡಲಾಗಿದೆ‌‌.


ಧರ್ಮಸ್ಥಳದ ರಜತಾದ್ರಿ ವಸತಿಗೃಹಕ್ಕೆ ಸೋಂಕಿತರು ಶಿಫ್ಟ್ ಆಗಲಿದ್ದು, ಶ್ರೀ ಕ್ಷೇತ್ರ ಧರ್ಮಸ್ಥಳ ದ ರಜತಾದ್ರಿ ವಸತಿ ಗೃಹ ಕೋವಿಡ್ ಕೇರ್ ಸೆಂಟರ್ ಆಗಿ ಬದಲಾಗಿದೆ.
ಅತೀ ಹೆಚ್ಚಾಗಿ ವೃದ್ಧರು ಮತ್ತು ಮನೋರೋಗಿಗಳೇ ಇರುವ ಸಿಯೋನ್ ಆಶ್ರಮದಲ್ಲಿ 50ಕ್ಕೂ ಹೆಚ್ಚು ಜಾನುವಾರುಗಳಿದ್ದು, ಅವುಗಳ ಸ್ಥಿತಿಯೂ ಕರುಣಾಜನಕವಾಗಿದೆ. ಕ್ರೈಸ್ತ ಧಾರ್ಮಿಕ ಮುಖಂಡರಿಂದ ನಡೆಸಲ್ಪಡುವ ಸಿಯೋನ್ ಆಶ್ರಮದಲ್ಲಿ 50ಕ್ಕೂ ಹೆಚ್ಚು ದನಗಳು, 10 ಹೆಚ್ಚು ಎಮ್ಮೆ, ಕೋಣಗಳು, 10ಕ್ಕೂ ಹೆಚ್ಚು ಕರುಗಳಿವೆ.


ಇದನ್ನೂ ಓದಿ: Lockdown: ಕರ್ನಾಟಕ ಸೇರಿ ಯಾವ ರಾಜ್ಯಗಳಲ್ಲಿ ಲಾಕ್​ಡೌನ್ ಜಾರಿಯಲ್ಲಿದೆ?; ಇಲ್ಲಿದೆ ಪೂರ್ತಿ ಮಾಹಿತಿ


ಈ ಹಿಂದೆ ಆಕಳುಗಳ ಲಾಲನೆ ಪಾಲನೆ ಮಾಡುತ್ತಿದ್ದವರಿಗೂ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಒಂದು ವಾರದಿಂದ ಆಕಳುಗಳ ನಿರ್ವಹಣೆ ಯಾಗುತ್ತಿಲ್ಲ. ದನಗಳಿಗೆ ಆಹಾರವೂ ಕಡಿಮೆಯಾಗಿದೆ. ಹುಲ್ಲು, ಒಣಹುಲ್ಲು, ನೀರು ನೀಡೋಕೂ ಆಶ್ರಮದಲ್ಲಿ ಸಿಬ್ಬಂದಿಗಳಿಲ್ಲ. ಇದರಿಂದ ಹಸಿವಿನಿಂದ ಬಳಲಿ ನಿತ್ರಾಣವಾದ ಸ್ಥಿತಿಯಲ್ಲಿ ಸಿಯೋನ್ ಆಶ್ರಮದ ಜಾನುವಾರುಗಳಿವೆ.


ಕಳೆದ ಒಂದು ವಾರದಿಂದ ಪಶುಗಳಿಗೆ ಸರಿಯಾದ ಆಹಾರದ ವ್ಯವಸ್ಥೆಗಳಿಲ್ಲ. ಕೋಣವೊಂದರ ಕುತ್ತಿಗೆ ಭಾಗಕ್ಕೆ ತೀವ್ರವಾದ ಗಾಯವಾಗಿದ್ದು, ಉಪಚಾರವಿಲ್ಲದೆ ನರಳಾಡುತ್ತಿದೆ. ಕೊರೊನಾ ಸ್ಫೋಟದ ನಡುವೆಯೇ ಆಶ್ರಮದ ದನ ಕರುವೊಂದಕ್ಕೆ ಜನ್ಮ ನೀಡಿದ್ದು, ಬಾಣಂತಿ ದನ ಹಸಿವಿನಿಂದ ಬಳಲಿ ಮೇಲೇಳುವ ಸ್ಥಿತಿಯಲ್ಲೂ ಇಲ್ಲ. ದನಗಳ ಮೂಕರೋಧನೆ ಎಂತವರ ಹೃದಯವನ್ನೂ ಕರಗಿಸುವಂತೆ ಮಾಡಿದೆ.


ಇದನ್ನೂ ಓದಿ: Karnataka Rain: ಕೇರಳದಲ್ಲಿ ಜೂನ್ 3ಕ್ಕೆ ಮುಂಗಾರು ಪ್ರವೇಶ; ನಾಳೆಯಿಂದ ಕರ್ನಾಟಕದಲ್ಲಿ ಭಾರೀ ಮಳೆ


ಇನ್ನು ಆಶ್ರಮಕ್ಕೆ ಭೇಟಿ ನೀಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಗೋವುಗಳಿದ್ದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದಾರೆ. ಸ್ಥಳೀಯ ಪಶುವೈದ್ಯಾಧಿಕಾರಿಗಳಿಗೆ ಕೋಣ ಮತ್ತು ಹಸುಗಳ ಆರೋಗ್ಯ ಸ್ಥಿತಿ ಗಮನಿಸುವಂತೆ ಸೂಚನೆ ನೀಡಿದ್ದಾರೆ. ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳ ನಡೆಸುವ ವಿವೇಕಾನಂದ ಟ್ರಸ್ಟ್ ಗೆ ಜಾನುವಾರ ಆರೈಕೆಯ ಜವಾಬ್ದಾರಿಯನ್ನು ವಹಿಸಲಾಗಿದ್ದು, ಆಹಾರ ಮತ್ತು ನೀರಿನ ವ್ಯವಸ್ಥೆ ಮಾಡುವಂತೆ ಮನವಿ ಮಾಡಿದ್ದಾರೆ.


ಸಿಯೋನ್ ಆಶ್ರಮದ ತುಂಬಾ ಸೋಂಕಿತರು ತುಂಬಿದ್ದು, ಇದರ ನಡುವೆ ಆಶ್ರಮದ ಜಾನುವಾರುಗಳ ಹಸಿವಿನ ತೊಳಲಾಟ ಕರುಣಾಜನಕವಾಗಿದೆ. ನೆರಿಯಾ ಗ್ರಾಮದಲ್ಲಿ ಒಟ್ಟು 6802 ಜನರು ವಾಸವಿದ್ದು, 1,382 ಮನೆಗಳಿವೆ. ಒಟ್ಟು 376 ಸೋಂಕಿತರಿದ್ದು, ಈವರೆಗೆ ಒಟ್ಟು 968 ಜನರ ಸ್ವಾಬ್ ಟೆಸ್ಟ್ ಮಾಡಲಾಗಿದೆ‌‌.


ಕರ್ನಾಟಕದಲ್ಲಿ ನಿನ್ನೆ ಒಂದೇ ದಿನ 20,378 ಜನ ಕೊರೋನಾ ಸೋಂಕಿಗೆ ತುತ್ತಾಗಿದ್ದಾರೆ, 382 ಜನ ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಒಂದೇ ದಿನ 4,734 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 213 ಜನ ಸಾವನ್ನಪ್ಪಿದ್ದಾರೆ. ಅಲ್ಲದೆ, 28,053 ಜನ ಡಿಸ್ವಾರ್ಜ್ ಆಗಿದ್ದು, ಆಕ್ಟಿವ್ ಕೇಸ್​ಗಳ ಸಂಖ್ಯೆ 1,62,625 ಆಗಿದೆ. ತಜ್ಞರ ಪ್ರಕಾರ, ಮುಂದಿನ ಕನಿಷ್ಠ 10 ರಿಂದ 14 ದಿನ ಬಹಳ ಕಷ್ಟಕರವಾದ ದಿನವಾಗಿದ್ದು, ಸೋಂಕು ಹೆಚ್ಚು ಉಲ್ಬಣಗೊಳ್ಳಲಿದೆ.

Published by:Sushma Chakre
First published: