ಸೋಂಕಿನ ಸುಳಿವೇ ಇಲ್ಲ ಈ ಗ್ರಾಮದಲ್ಲಿ; ಕೋವಿಡ್​ ಮುಕ್ತವಾಗಲು ಈ ಹಳ್ಳಿ ಜನ ಮಾಡಿದ್ದೇನು?

ಪೇಟೆಯಿಂದ ಅಂತರ ಕಾಯ್ದುಕೊಂಡಿರುವ ಕುಗ್ರಾಮದ ಜನರಿಗೆ ಗ್ರಾಮದ ಇಬ್ಬರು ಯುವಕರು ಎಲ್ಲರಿಗೂ ದಿನನಿತ್ಯದ ಅವಶ್ಯಕ ವಸ್ತುಗಳನ್ನ ತಂದು ಕೊಡುತ್ತಾರೆ. 

ಗ್ರಾಮಸ್ಥರು

ಗ್ರಾಮಸ್ಥರು

  • Share this:
ಮಂಗಳೂರು (ಜೂ. 5): ಮಹಾಮರಿ ಕೊರೋನಾ ಇಡೀ ವಿಶ್ವವನ್ನೇ ಬಾಧಿಸಿದೆ. ಹಳ್ಳಿಯಿಂದ ದಿಲ್ಲಿ ವರೆಗೂ ಕಾಲಿಟ್ಟ ಈ ಸೊಂಕು‌ ಮಾತ್ರ ಈ ಕುಗ್ರಾಮದತ್ತ ಮಾತ್ರ ಸುಳಿಯುವ ಧೈರ್ಯ ತೋರಿಲ್ಲ. ಕಾರಣ ಈ ಹಳ್ಳಿಯ ಗ್ರಾಮಸ್ಥರು.  ಕೊರೋನಾ ವಿರುದ್ಧ ಕುಗ್ರಾಮದ ಜನರ ಹೋರಾಟ ನಿಜಕ್ಕೂ ಶ್ಲಾಘನೀಯ. ಕೊರೋನಾ ಎರಡು ಅಲೆಯಲ್ಲೂ ಒಂದೇ ಒಂದು ಸೋಂಕು ಕಾಣಿಸಿಕೊಳ್ಳದ ಗ್ರಾಮ ಸದ್ಯ ಕೋವಿಡ್​ ಮುಕ್ತ ಹಳ್ಳಿಯಾಗಿ ಎಲ್ಲರ ಮೆಚ್ಚುಗೆ ಪಡೆದಿದೆ. ಅಷ್ಟಕ್ಕೂ ಎಲ್ಲೆಡೆ ಸಾಮೂದಾಯಿಕವಾಗಿ ಹಬ್ಬಿರುವ ಈ ಸೋಂಕು ಈ ಗ್ರಾಮಕ್ಕೆ ಬಾರದಿರಲು ಹಳ್ಳಿಗರು ವಿಧಿಸಿರುವ ಕಟ್ಟುಪಾಡುಗಳು ಕಾರಣ.

ಹಚ್ಚ ಹಸಿರುನಿಂದ ಕಂಗೊಳಿಸುವ ಈ ಕುಗ್ರಾ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಬಾಂಜಾರುಮಲೆ ಗ್ರಾಮ. ನೆರಿಯಾ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಇದೊಂದು ಕುಗ್ರಾಮ. ದಕ್ಷಿಣ ಕನ್ನಡದಲ್ಲೂ ಅತಿ ಹೆಚ್ಚಾಗಿ ಕಾಣಿಸಿಕೊಂಡಿದ್ದ ಕೊರೋನಾ ಸೋಂಕು ಈ ಗ್ರಾಮಕ್ಕೆ ನುಸುಳಲು ಮಾತ್ರ ಸಾಧ್ಯವಾಗಿಲ್ಲ. ಕೊರೋನಾ ಪ್ರಾರಂಭದಿಂದಲೂ ಈ ಗ್ರಾಮಸ್ಥರ ಸ್ವಯಂ ಶಿಸ್ತು ವಿಧಿಸಿದ್ದು, ಅವುಗಳನ್ನು ಪಾಲಿಸುವ ಮೂಲಕ ಮಾದರಿಯಾಗಿದ್ದಾರೆ. 40 ಕ್ಕೂ ಹೆಚ್ಚು ಕುಟುಂಬಗಳಿರು ಈ ಕುಗ್ರಾಮದಲ್ಲಿ 170 ಕ್ಕೂ ಹೆಚ್ಚು ಜನರು ವಾಸಿಸುತ್ತಿದ್ದಾರೆ. ಕೊರೋನಾ ಎರಡು ಅಲೆಯಲ್ಲೂ ಒಂದೇ ಒಂದು  ಪ್ರಕರಣ ದಾಖಲಾಗಿಲ್ಲ. ಕೊರೋನಾ ದೂರವಿಡಲು ಗ್ರಾಮಸ್ಥರು ಒಗ್ಗಟ್ಟಿನ ಮಂತ್ರ ಜಪಿಸಿದ್ದು,ಯಾರೂ ಕೂಡ ಹೊರಗಿನಿಂದ ಗ್ರಾಮಕ್ಕೆ ಬಾರದಂತೆ ಗ್ರಾಮಸ್ಥರೇ ಎಚ್ಚರ ವಹಿಸಿದ್ದಾರೆ.

ಇದನ್ನು ಓದಿ: ಟಿಎಂಸಿ ಪ್ರಧಾನ ಕಾರ್ಯದರ್ಶಿಯಾಗಿ ಸಿಎಂ ಮಮತಾ ಬ್ಯಾನರ್ಜಿ ಸೋದರಳಿಯ ನೇಮಕ

ನೆರಿಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಹುತೇಕ ಗ್ರಾಮಸ್ಥರಲ್ಲಿ ಕೊರೋನಾ ಸೊಂಕು ಧೃಡವಾಗಿದೆ. ಪೇಟೆಯಿಂದ ಅಂತರ ಕಾಯ್ದುಕೊಂಡಿರುವ ಕುಗ್ರಾಮದ ಜನರಿಗೆ ಗ್ರಾಮದ ಇಬ್ಬರು ಯುವಕರು ಎಲ್ಲರಿಗೂ ದಿನನಿತ್ಯದ ಅವಶ್ಯಕ ವಸ್ತುಗಳನ್ನ ತಂದು ಕೊಡುತ್ತಾರೆ.  .ಗ್ರಾಮದ ಎಲ್ಲಾ ಮನೆಯಿಂದ ದಿನಸಿ ಚೀಟಿ ಸಂಗ್ರಹಿಸಿ ಯುವಕರೇ ಪೇಟೆಗೆ ಹೋಗಿ ಬರುತ್ತಾರೆ. ಇನ್ನೂ ಪೇಟೆಗೆ ಹೋಗಿ ಬಂದ ಯುವಕರು ಮನೆಯ ಒಳ ಬರುವ ಮುಂಚೆ ಬಿಸಿ ನೀರಿನ ಸ್ನಾನ ಮಾಡಿಸಿ ಒಳಗೆ ಕರೆದುಕೊಳ್ಳುವ ಪದ್ದತಿ ರೂಢಿಸಿದ್ದಾರೆ. ಸಾಮಾಜಿಕ ಅಂತರ ಕಾಯ್ದುಕೊಳ್ಳವುದನ್ನು ಪಾಲಿಸಿ ಗ್ರಾಮದಿಂದ ಕೊರೋನಾ ದೂರವಿಟ್ಟಿದ್ದಾರೆ ಗ್ರಾಮಸ್ಥರು.

ಇದನ್ನು ಓದಿ: ಕೋವಿಡ್​ ಬಿಕ್ಕಟ್ಟಿನಲ್ಲಿ ಮೃಗಾಲಯಗಳು; ಪ್ರಾಣಿ ದತ್ತು ಪಡೆಯುವಂತೆ ನಟ ದರ್ಶನ್​ ಮನವಿ

ಹಳ್ಳಿಯತ್ತ ಕೊರೋನಾ ಸುಳಿದ್ರೂ ಈ ಗ್ರಾಮಕ್ಕೆ ಕೊರೊನಾ ಸುಳಿಯದೇ ಇರುವುದು ನಿಜಕ್ಕೂ ಸಂತೋಷದ ವಿಷಯವಾಗಿದೆ. ರಾಜ್ಯಕ್ಕೆ ಮಾದರಿಯಾದ ಬಾಂಜಾರುಮಲೆ ಗ್ರಾಮದ ಜನರು ಮಾದರಿಯಾಗಿದ್ದು, ಈ ಗ್ರಾಮ ಬೆಳ್ತಂಗಡಿ ಪೇಟೆಯದ 35 ಕಿಮೀ ದೂರವಿದೆ. ಆಹಾರಕ್ಕೆ ಬೇಕಾದ ತರಕಾರಿಗಳನ್ನು ಗ್ರಾಮಸ್ಥರು ತಾವೇ ಬೆಳೆಯುತ್ತಾರೆ. ಕೊರೋನಾ ತಾಂಡವದ ನಡುವೆಯೂ ಗ್ರಾಮಸ್ಥರು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ನಿಸರ್ಗ ಸಹಜ ಆಹಾರ,ಶುದ್ಧ ಗಾಳಿ, ನೀರು ಗ್ರಾಮದ ಜನರ ಆರೋಗ್ಯದ ಗುಟ್ಟಾಗಿದೆ.

ಬಂಜಾರುಮಲೆ ಗ್ರಾಮಸ್ಥರು ಅವರೇ ಅಲಿಖಿತ ನಿಯಮ ಮಾಡಿದ್ದಾರೆ. ಗ್ರಾಮದೊಳಗೆ ಹೊರಗಿನಿಂದ ಯಾರೂ ಬರುವಂತಿಲ್ಲ.  ಗ್ರಾಮದಿಂದ ಯಾರೂ ಹೊರಹೋಗುವಂತಿಲ್ಲ ಅಂತಾಸ್ವಯಂ ಶಿಸ್ತು ಪಾಲಿಸಿ ಕೊರೋನಾ ವನ್ನು ಗ್ರಾಮದೊಳಗೆ ನುಸುಳಲು ಬಿಟ್ಟಿಲ್ಲ ಗ್ರಾಮಸ್ಥರ ಶಿಸ್ತು ಕಾಪಾಡಿದೆ.

ಕೊರೋನಾ ಮೊದಲ ಅಲೆಯಲ್ಲೂ ಎಲ್ಲರ ಸ್ವಾಬ್ ಟೆಸ್ಟ್ ಎಲ್ಲರ ವರದಿಯೂ ನೆಗೆಟಿವ್ ಬಂದಿದ್ದು,ಎರಡನೇ ಅಲೆಯಲ್ಲೂ ಎಲ್ಲರ ಸ್ವಾಬ್ ಟೆಸ್ಟ್,ವರದಿಯೂ ನೆಗೆಟಿವ್ ಆಗಿದೆ. ವಿಶೇಷ ಎಂಬಂತೆ ವರ್ಷದಿಂದ ಯಾವುದೇ ಕಾರ್ಯಕ್ರಮ ವನ್ನು ಗ್ರಾಮಸ್ಥರು ಊರೊಳಗೆ ಆಯೋಜಿಸಿಲ್ಲ. ಊರಿನ ಜನ ಕಠಿಣ ಜೀವನ, ಸ್ವಯಂ ಶಿಸ್ತು ನಿಂದ ಕೊರೋನಾ ಊರಿಂದ ಹೊರಗಡೆ ಇದೆ ಅನ್ನೋದೇ ಗ್ರಾಮಸ್ಥರ ಹೆಮ್ಮೆ.
Published by:Seema R
First published: