ಕೊರೋನಾ ಆತಂಕದಿಂದ ನೇಣಿಗೆ ಶರಣಾದ ದಂಪತಿಯ ಕೋವಿಡ್ ರಿಪೋರ್ಟ್ ನೆಗೆಟಿವ್

Mangalore Couple Suicide: ಸೂಸೈಡ್ ನೋಟಲ್ಲಿ ನಮಗೆ ಕೊರೋನಾ ಇದೆ, ಬ್ಲಾಕ್ ಫಂಗಸ್ ಬಂದರೆ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೋನಾ ಇರೋ ಬಗ್ಗೆ ಮಾಹಿತಿಯಿಲ್ಲ

ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಸುವರ್ಣ, ಗುಣ

ಆತ್ಮಹತ್ಯೆ ಮಾಡಿಕೊಂಡ ರಮೇಶ್​ ಸುವರ್ಣ, ಗುಣ

  • Share this:
ಮಂಗಳೂರು: ಕೊರೊನಾ ಕಾರಣದಿಂದ ದಂಪತಿ ಆತ್ಮಹತ್ಯೆಗೆ ಶರಣಾದ ಘಟನೆ ಮಂಗಳೂರು ನಗರ ಹೊರವಲಯದ ಚಿತ್ರಾಪುರ ಎಂಬಲ್ಲಿ ನಡೆದಿದೆ.ಚಿತ್ರಾಪುರದ ರೆಹೆಜಾ ಅಪಾರ್ಟ್ಮೆಂಟ್ ನಲ್ಲಿ ಘಟನೆ ನಡೆದಿದ್ದು, ರಮೇಶ್ ಸುವರ್ಣ ಮತ್ತು ಗುಣ ಆತ್ಮಹತ್ಯೆ ಮಾಡಿಕೊಂಡ ದಂಪತಿ. ಕೊರೋನಾ ವೈರಸ್​ ಆರಂಭವಾದ ದಿನದಿಂದ ಹಲವರು ರೋಗಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಗಳು ಈ ಹಿಂದೆಯೂ ನಡೆದಿವೆ. ಆದರೆ ದುರಾದೃಷ್ಟವೆಂದರೆ ಈ ದಂಪತಿಗೆ ಕೊರೋನಾವೇ ಇರಲಿಲ್ಲ. ಆದರೂ ಬಂದಿದೆ ಎಂಬ ಕಲ್ಪನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. 

ಚಿತ್ರಾಪುರದ ಫ್ಲ್ಯಾಟ್​ನಲ್ಲಿ ವಾಸವಿರುವ ದಂಪತಿ, ಒಂದು ವಾರದಿಂದ ಕೊರೋನಾ ಸೋಂಕಿಗೆ ಒಳಗಾಗಿದ್ದರು. ರಮೇಶ್ ಸುವರ್ಣ ಮತ್ತು ಹೆಂಡತಿ ಗುಣ ಅವರಿಗೆ ಆರೋಗ್ಯ ತೀವ್ರ ಹದಗೆಟ್ಟ ಹಿನ್ನಲೆಯಲ್ಲಿ ಆತ್ಮಹತ್ಯೆಗೆ ನಿರ್ಧಾರ ಮಾಡಿದ್ದರು. ರಮೇಶ್ ಸುವರ್ಣ ಆತ್ಮಹತ್ಯೆ ಮಾಡಿಕೊಂಡ ಬಳಿಕ‌ ಪತಿ ರಮೇಶ್ ಸುವರ್ಣ ಕೂಡಾ ಆತ್ಮಹತ್ಯೆ ಮಾಡಿಕೊಂಡಿದ್ದರು.

ಆತ್ಮಹತ್ಯೆ ಮಾಡುವ ಮುನ್ನ ಪೊಲೀಸ್ ಕಮೀಷನರ್, ಹಿಂದೂ ಸಂಘಟನೆ ಮುಖಂಡರಿಗೆ ವಾಯ್ಸ್ ಮೆಸೇಜ್ ಕಳುಹಿಸಿದ್ದಾರೆ. ಮೊದಲು ಮಂಗಳೂರು ನಗರ ಪೊಲೀಸ್ ಕಮೀಷನರ್​ಗೆ ಕರೆ ಮಾಡಿದ ರಮೇಶ್, ಆತ್ಮಹತ್ಯೆ ಮಾಡಿಕೊಳ್ಳುತ್ತಿರುವ ಬಗ್ಗೆ ಹೇಳಿ ಕರೆ ಕಟ್ ಮಾಡಿದ್ದಾರೆ. ನಂತರ ಹತ್ತಕ್ಕೂ ಹೆಚ್ಚು ವಾಯ್ಸ್ ಮೆಸೇಜ್ ಕಳುಹಿಸಿ ಆತ್ಮಹತ್ಯೆ ಗೆ ಕಾರಣ ಹೇಳಿದ್ದಾರೆ.

ಬಳಿಕ ಹಿಂದೂ ಸಂಘಟನೆಗಳ ಮುಖಂಡರಾದ ಶರಣ್ ಪಂಪ್ವೆಲ್, ಸತ್ಯಜಿತ್ ಸುರತ್ಕಲ್​ಗೂ ವಾಯ್ಸ್ ಮೆಸೇಜ್ ಮಾಡಿ ಅಂತ್ಯಕ್ರಿಯೆಯನ್ನು ಮಾಡುವಂತೆ ಮನವಿ ಮಾಡಿದ್ದಾರೆ. ಈ ಬಗ್ಗೆ ಸುಧೀರ್ಘ ಡೆತ್ ನೋಟ್ ಬರೆದು ಅದರ ಮೇಲೆ ಅಂತ್ಯಕ್ರಿಯೆಗಾಗಿ ಒಂದು ಲಕ್ಷ ರೂಪಾಯಿ ಹಣ ಇಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯ ಉಪಕರಣ ಮಾರಿ ಬಡವರಿಗೆ ನೀಡುವಂತೆ ಮನವಿ ಮಾಡಿದ್ದಾರೆ.

ವಾಯ್ಸ್ ಮೆಸೇಜ್ ಬಂದ ಕೂಡಲೇ ಅಡ್ರೆಸ್ ಟ್ರ್ಯಾಕ್ ಮಾಡಿದ ಕಮೀಷನರ್, ಪೊಲೀಸ್ ಸಿಬ್ಬಂದಿಯನ್ನು ಸ್ಥಳಕ್ಕೆ ಹೋಗುವಂತೆ ಸೂಚನೆ ನೀಡಿದ್ದಾರೆ. ಆದರೆ ಪೊಲೀಸರು ಮನೆ ತಲುಪುವ ವೇಳೆಯಲ್ಲಿ ದಂಪತಿ ಆತ್ಮಹತ್ಯೆ ಗೆ ಶರಣಾಗಿದ್ದರು.

ಸ್ಥಳಕ್ಕೆ ಮಂಗಳೂರು ಡಿಸಿಪಿ ಹರಿರಾಂ ಶಂಕರ್, ಸ್ಥಳ ಪರಿಶೀಲನೆ ಬಳಿಕ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಬೆಳಗ್ಗೆ 6.40ರ ಹೊತ್ತಿಗೆ ಕಮಿಷನರ್ ಗೆ ವಾಟ್ಸಪ್​ಗೆ ಮೆಸೇಜ್ ಮತ್ತು ಕಾಲ್ ಬಂದಿದೆ. ಕೊರೋನಾ ಭಯದಿಂದ ನಾನು ಮತ್ತು ನನ್ನ ಹೆಂಡತಿ ‌ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೀವಿ ಅಂತ ಹೇಳಿದ್ದಾರೆ. ಈ ವೇಳೆ ತಕ್ಷಣ ಕಮಿಷನರ್ ಅವರು ಕಾಲ್ ಮಾಡಿದ್ರೂ ಅವರು ಎತ್ತಲಿಲ್ಲ. ವಾಯ್ಸ್ ಮೆಸೇಜ್ ಮಾಡಿ ಧೈರ್ಯ ತುಂಬಿದ್ರೂ ರಿಪ್ಲೈ ಮಾಡಿಲ್ಲ. ನಂತರ ಲೊಕೇಶನ್ ಟ್ರೇಸ್ ಮಾಡಿ ಪೊಲೀಸ್​ ತಂಡ ಬಾಗಿಲು ಒಡೆದು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿದ್ದರು. ಸೂಸೈಡ್ ನೋಟಲ್ಲಿ ನಮಗೆ ಕೊರೋನಾ ಇದೆ, ಬ್ಲಾಕ್ ಫಂಗಸ್ ಬಂದರೆ ಸಮಸ್ಯೆ ಅಂತೆಲ್ಲಾ ಬರೆದಿದ್ದಾರೆ. ಆದರೆ ಜಿಲ್ಲಾ ಆರೋಗ್ಯಾಧಿಕಾರಿ ಮಾಹಿತಿ ಪ್ರಕಾರ ಅವರಿಗೆ ಕೊರೋನಾ ಇರೋ ಬಗ್ಗೆ ಮಾಹಿತಿಯಿಲ್ಲ. ಅವರೇ ಸ್ವಂತ ನಿರ್ಧಾರಕ್ಕೆ ಬಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ತಂದೆಯನ್ನೇ ಪ್ರೀತಿಸಿ ವಿವಾಹವಾದ ಮಲೇಷಿಯಾದ ಯುವತಿ

ಎರಡು ಸಲ ಮಗು ಪಡೆಯಲು ಯತ್ನಿಸಿ ವಿಫಲರಾಗಿದ್ದು, ಇದರ ಖಿನ್ನತೆ ಕೂಡ ಸೇರಿರಬಹುದು. ಆದರೆ ಇವರು ಯಾರ ಜೊತೆಗೂ ಹೆಚ್ಚಾಗಿ ಬೆರೆತ ಬಗ್ಗೆ ಮಾಹಿತಿಯಿಲ್ಲ ಅಂತಾ ಪೊಲೀಸರು ಹೇಳಿದ್ದಾರೆ.

ಇದನ್ನೂ ಓದಿ: ಕಾಬೂಲ್​ನಲ್ಲಿದ್ದ ಭಾರತದ ರಾಯಭಾರ ಕಚೇರಿಯ ಎಲ್ಲಾ ಸಿಬ್ಬಂದಿ ಸುರಕ್ಷಿತವಾಗಿ ವಾಪಸ್

ಅಪಾರ್ಟ್ಮೆಂಟ್​ನಿಂದ ದಂಪತಿ ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಗೆ ರವಾನಿಸಲಾಗಿದೆ‌‌. ಆದರೆ ಮೃತದೇಹದ ಕೋವಿಡ್ ಟೆಸ್ಟ್​ನಲ್ಲಿ ರಿಪೋರ್ಟ್ ನೆಗೆಟಿವ್ ಬಂದಿದೆ. ಪೋಸ್ಟ್ ಮಾರ್ಟಮ್​ಗೂ ಮುನ್ನ ನಡೆಸಿದ ಕೋವಿಡ್ ಟೆಸ್ಟ್​ನಲ್ಲಿ ರಿಪೋರ್ಟ್ ನೆಗೆಟಿವ್ ದಾಖಲಾಗಿದೆ. ರಿಪೋರ್ಟ್ ನೆಗೆಟಿವ್ ಬೆನ್ನಲ್ಲೇ ಮೃತದೇಹದ ಪೋಸ್ಟ್‌ ಮಾರ್ಟಮ್​ಗೆ ಸಿದ್ದತೆ ಮಾಡಲಾಗಿದ್ದು, ಕೋವಿಡ್ ಬಂದಿದೆ ಅನ್ನೋ ಅತಂಕದಲ್ಲಿ ದಂಪತಿ ನೇಣಿಗೆ ಶರಣಾಗಿದ್ದರು.
Published by:Sharath Sharma Kalagaru
First published: