• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ಲಾಕ್​ಡೌನ್​​ನಿಂದ ಆರ್ಥಿಕ ಸಂಕಷ್ಟ: ಹಣಕ್ಕಾಗಿ ಪರದಾಡಿ ಆತ್ಮಹತ್ಯೆಗೆ ಶರಣಾದ ದಂಪತಿ

ಲಾಕ್​ಡೌನ್​​ನಿಂದ ಆರ್ಥಿಕ ಸಂಕಷ್ಟ: ಹಣಕ್ಕಾಗಿ ಪರದಾಡಿ ಆತ್ಮಹತ್ಯೆಗೆ ಶರಣಾದ ದಂಪತಿ

ಆತ್ಮಹತ್ಯೆಗೆ ಶರಣಾದ ದಂಪತಿ, ಪೊಲೀಸ್​ ಅಧಿಕಾರಿ

ಆತ್ಮಹತ್ಯೆಗೆ ಶರಣಾದ ದಂಪತಿ, ಪೊಲೀಸ್​ ಅಧಿಕಾರಿ

ಪತ್ನಿ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಪತಿ ಸುರೇಶ್ ಮನೆ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

  • Share this:

ಮಂಗಳೂರು: ಕೊರೊನಾ ಲಾಕ್‌ಡೌನ್‌ನಿಂದಾಗಿ ಹೆಚ್ಚಿನ ಮಂದಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೇ ರೀತಿ ಹಣಕಾಸಿನ ಮುಗ್ಗಟ್ಟಿನಿಂದ ನೊಂದ ದಂಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗ್ಗಿನ 7 ಗಂಟೆಯ ಸಮಯ. ಎಲ್ರೂ ನಿದ್ದೆಯಿಂದ ಎದ್ದು ನಿತ್ಯದ ಕಾರ್ಯದಲ್ಲಿ ತೊಡಗಿಕೊಳ್ಳುವ ಆ ಹೊತ್ತಿನಲ್ಲಿ ನಗರದ ಕದ್ರಿ ಬಳಿಯ ಪಿಂಟೋಸ್ ಲೇನ್‌ನಲ್ಲಿನ ದಂಪತಿ ಕೆಟ್ಟ ನಿರ್ಧಾರವೊಂದಕ್ಕೆ ಬಂದಿದ್ದರು. ಹಣಕಾಸಿನ ತೊಂದರೆಯಿಂದ ಚೌಟಾಸ್ ಕಾಪೌಂಡ್‌ನ ಸುರೇಶ್ ಶೆಟ್ಟಿ, ವಾಣಿ ದಂಪತಿ ಆತ್ಮಹತ್ಯೆಯ ನಿರ್ಧಾರ ಮಾಡಿ ಬಾರದ ಲೋಕಕ್ಕೆ ತೆರಳಿದ್ದಾರೆ. ಮನೆ ಎದುರಿನ ಬಾವಿಗೆ ಹಾರಿ ಪತಿ ಸುರೇಶ್ ಆತ್ಮಹತ್ಯೆ ಮಾಡಿಕೊಂಡರೆ, ಪತ್ನಿ ವಾಣಿ ಮನೆಯ ಟೇರೆಸ್ ಮೇಲೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.


ಡೆತ್‌ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಇವರು ಚಿಟ್ ಫಂಡ್‌ನಿಂದ ನಷ್ಟ ಅನುಭವಿಸಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಮೃತ ಸುರೇಶ್ ಶೆಟ್ಟಿ ಪ್ರಿಂಟಿಗ್ ಪ್ರೆಸ್‌ನಲ್ಲಿ ಕೆಲಸ ಮಾಡ್ತಿದ್ರು. ಇದರ ಜೊತೆ ತಬಲ ವಾದಕರಾಗಿದ್ರು. ಪತ್ನಿ ವಾಣಿ ನಗರದ ಖಾಸಗಿ ಆಸ್ಪತ್ರೆಯೊಂದರಲ್ಲಿ ಕ್ಲಿನಿಕಲ್ ಅಸಿಸ್ಟೆಂಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಈ ನಡುವೆ ಚೀಟಿ ವ್ಯವಹಾರ ನಡೆಸುತ್ತಿದ್ದರು. ಆದ್ರೆ ಕಳೆದ ಒಂದೂವರೆ ವರ್ಷದಿಂದ ಕೊರೊನಾ ಕಾರಣದ ಲಾಕ್‌ಡೌನ್‌ನಿಂದ ಚೀಟಿ ವ್ಯವಹಾರದಲ್ಲಿ ನಷ್ಟ ಹೊಂದಿದ್ದರು. ಹಣ ಪಡೆದುಕೊಂಡವರು ವಾಪಾಸು ಕಟ್ಟದೇ ಇದ್ದುದರಿಂದ ಹಣ ಬೇಕಿದ್ದವರು ಕಿರಿಕ್ ಮಾಡ್ತಿದ್ರು.


ಹೀಗಾಗಿ ಇಂದು ಪತ್ನಿ ಮೊದಲು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದನ್ನು ಗಮನಿಸಿದ ಪತಿ ಸುರೇಶ್ ಅವರು ವಾಣಿ ಅವರ ಸಹೋದರಿಯರಿಗೆ ಕರೆ ಮಾಡಿ ವಿಷಯ ತಿಳಿಸಿ, ತಾನೂ ಸಹ ನೊಂದಿರುವುದಾಗಿ ಹೇಳಿದ್ದಾರೆ. ಕರೆ ಕಟ್ ಮಾಡಿ ಮನೆ ಎದುರಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮನೆಯಲ್ಲಿದ್ದ ಮಗ ನೋಡಿದಾಗ ಇಬ್ಬರು ಬಾರದ ಲೋಕಕ್ಕೆ ತೆರಳಿದ್ದಾರೆ.


ಇದನ್ನೂ ಓದಿ: Vaccine Power: ವ್ಯಾಕ್ಸಿನ್ ಹಾಕಿಸಿಕೊಂಡವರ ಮೈಯಲ್ಲಿ ವಿದ್ಯುತ್: ಲಸಿಕೆ ಚುಚ್ಚಿದ ಸ್ಥಳದಲ್ಲಿ ಬೆಳಗಿತು ಬಲ್ಬ್!


ಕದ್ರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಭೇಟಿ ನೀಡಿದ್ರು. ಬಳಿಕ ಮಾತನಾಡಿದ ಅವರು, ಲಾಕ್‌ಡೌನ್‌ನ ಈ ಸಮಯದಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ, ಈ ಮಧ್ಯೆ ಹಲವೆಡೆ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡ್ತಿರೋದು ಗಮನಕ್ಕೆ ಬಂದಿದೆ. ಈ ರೀತಿ ಕಂಡುಬಂದರೆ ದೂರು ಕೊಡಿ ಸೂಕ್ತ ಕಾನೂನು ‌ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ. ಒಟ್ಟಿನಲ್ಲಿ ಬಗೆಹರಿಸಬಹುದಾಗಿದ್ದ ಸಮಸ್ಯೆಗೆ ಆತ್ಮಹತ್ಯೆ ಮಾಡಿಕೊಂಡಿರುವುದು ನಿಜಕ್ಕೂ ದುರಂತದ ಸಂಗತಿ ಎಂದಿದ್ದಾರೆ. ದಂಪತಿ ಆತ್ಮಹತ್ಯೆ ಬೆನ್ನಲ್ಲೇ ಬಡ್ಡಿ ಮಾಫಿಯಾಗೆ ಕಮಿಷನರ್ ವಾರ್ನಿಂಗ್ ನೀಡಿದ್ದಾರೆ.


ದಂಪತಿಗಳ ಆತ್ಮಹತ್ಯೆ ಕೆಟ್ಟ ನಿರ್ಧಾರವಾಗಿದೆ. ಚೀಟಿ ವ್ಯವಹಾರ, ಹಣಕಾಸು ಸಮಸ್ಯೆ ಇದ್ದಲ್ಲಿ ಹೇಳಿಕೊಳ್ಳಬಹುದಿತ್ತು. ಈ ಲಾಕ್ ಡೌನ್ ಸಮಯದಲ್ಲಿ ಸಾಕಷ್ಟು ಜನರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ..ಈ ಮಧ್ಯೆ ಹಲವೆಡೆ ಹೆಚ್ಚಿನ ದರದಲ್ಲಿ ಬಡ್ಡಿ ವಸೂಲಿ ಮಾಡ್ತಿರೋದು ಗಮನಕ್ಕೆ ಬಂದಿದೆ. ಇಂಥವರ ವಿರುದ್ದ ಎಕ್ಸೋರ್ಬಿಟಂಟ್ ರೇಟ್ ಅಫ್ ಇಂಟ್ರೆಸ್ಟ್ ಆಕ್ಟ್ ನಡಿ‌ ಪ್ರಕರಣ ದಾಖಲಿಸಲು ಅವಕಾಶ ಇದೆ. ಅತಿಯಾದ ಬಡ್ಡಿ ವಸೂಲಿಗೆ ಒತ್ತಡ, ಬೆದರಿಕೆ ಹಾಕಿದಲ್ಲಿ ಸ್ಥಳೀಯ ಠಾಣೆಗೆ ದೂರು ನೀಡಿ ಅಂತಾ ಜನರಿಗೆ ಮನವಿ ಮಾಡಿದರು.


ಚೀಟಿ ವ್ಯವಹಾರ ಮಾಡೋರು ಆತ್ಮಹತ್ಯೆ ಮಾಡೋದು, ಊರು ಬಿಟ್ಟು ಹೋಗೋದು ಮಾಡ್ತಿದಾರೆ. ಇಂಥಹ ರಿಸ್ಕ್ ತೆಗೆದುಕೊಳ್ಳದೇ ಸುರಕ್ಷಿತ ಹಣಕಾಸು ವ್ಯವಹಾರ ಮಾಡಿದ್ರೆ ಉತ್ತಮ. ಕಮಿಷನರೇಟ್ ವ್ಯಾಪ್ತಿಯಲ್ಲಿ ಹೆಚ್ಚಿನ ಬಡ್ಡಿ ವಸೂಲಿ ಕಂಡುಬಂದರೆ ದೂರು ಕೊಡಿ. ಸೂಕ್ತ ಕಾನೂನು ‌ಕ್ರಮಕ್ಕೆ ನಮ್ಮ ಎಲ್ಲಾ ಅಧಿಕಾರಿಗಳಿಗೆ ಸೂಚನೆ ಕೊಡ್ತೇನೆ ಅಂತಾ ಕಮೀಷನರ್ ಎನ್ ಶಶಿಕುಮಾರ್ ಹೇಳಿದ್ದಾರೆ.

Published by:Kavya V
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು