ಮಂಗಳೂರು: ಮಹಿಳಾ ಪ್ರಾಧ್ಯಾಪಕಿಯ (Lady Lecturer) ವಿರುದ್ಧ ಅತ್ಯಂತ ಕೀಳು ಮಟ್ಟದ ಮಾನಹಾನಿಗೆ ಯತ್ನಿಸಿದ ಕಾಲೇಜಿನ (College) ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕನನ್ನು ಮಂಗಳೂರಿನ ಸಿಸಿಬಿ ಪೊಲೀಸರು (Mangaluru CCB Police) ವಶಕ್ಕೆ ಪಡೆದುಕೊಂಡಿದ್ದಾರೆ.. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ (Bantwal) ಪ್ರತಿಷ್ಠಿತ ಕಾಲೇಜಿನ ಸಂಚಾಲಕ ಮತ್ತು ಇಬ್ಬರು ಪ್ರಾಧ್ಯಾಪಕರನ್ನು ಮಂಗಳೂರು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದು, ವಿಚಾರಣೆ ವೇಳೆ ಆರೋಪಿಗಳ ಅತೀ ನೀಚ ಪ್ರವೃತ್ತಿತನ ಬಯಲಾಗಿದೆ. ಈ ಘಟನೆಯಿಂದಾಗಿ ಇಡೀ ಶಿಕ್ಷಕ (Teacher) ಸಮುದಾಯವೇ ತಲೆತಗ್ಗಿಸುವಂತಾಗಿದೆ.
ಹಳೆ ದ್ವೇಷದ ಹಿನ್ನೆಲೆಯಲ್ಲಿ ಕೃತ್ಯ
ಬಂಟ್ವಾಳ ದ ಪ್ರತಿಷ್ಠಿತ ಕಾಲೇಜಿನ ಆಡಳಿತ ಮಂಡಳಿ ಮತ್ತು ಶಿಕ್ಷಕ ವೃಂದ ನಡುವೆ ಪ್ರಾಧ್ಯಾಪಕರ ನೇಮಕಾತಿ ಹಾಗೂ ಆಡಳಿತ ವಿಚಾರದ ನಡುವೆ ಉಂಟಾದ ವೈಮನಸ್ಸಿನ ಹಿನ್ನಲೆಯಲ್ಲಿ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಎಂಬುವವರನ್ನು ಟಾರ್ಗೆಟ್ ಮಾಡಿದ ಅದೇ ಕಾಲೇಜಿನ ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕ ಮಹಿಳೆಯ ವಿರುದ್ಧ ಮಾನಹಾನಿಕಾರಕ ಪೋಸ್ಟ್ ಗಳನ್ನು ರಚಿಸಿ ಹಂಚಿದ್ದಾರೆ..
ಶೌಚಾಲಯದಲ್ಲಿ ಶಿಕ್ಷಕಿ ಫೋನ್ ನಂಬರ್ ಬರೆದ ಕಿರಾತಕರು
ಕರಾವಳಿ ಉ ಸುತ್ತಮುತ್ತ ಪಟ್ಟಣ ಗಳ ಬಸ್ ಸ್ಟ್ಯಾಂಡ್ ನ ಸಾರ್ವಜನಿಕ ಬಸ್ ನಿಲ್ದಾಣ ಗಳ ಶೌಚಾಲಯದಲ್ಲಿ ಮಹಿಳೆಯ ವಾಟ್ಸಪ್ ನಂಬರ್ ಮತ್ತು ಈಮೇಲ್ ವಿಳಾಸ ಹಾಕಿ ಕಡಿಮೆ ಬೆಲೆಗೆ ಲೈಂಗಿಕ ಕ್ರಿಯೆಗೆ ಕರೆ ಮಾಡಿ ಅಂತಾ ಪೋಸ್ಟರ್ ತಯಾರಿಸಿ ಅಂಟಿಸಿದ್ದಾರೆ..
ಇದನ್ನೂ ಓದಿ: Mangaluru: ಹಿಜಾಬ್ ಗಲಾಟೆ ವೇಳೆ ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದವ ಅರೆಸ್ಟ್! ಫೇಕ್ ಅಕೌಂಟ್ ಹಿಂದಿರೋದು ಇದೇ ಆರೋಪಿ
800ಕ್ಕೂ ಹೆಚ್ಚು ಮಂದಿಯಿಂದ ಕಾಲ್!
ಶಿಕ್ಷಕಿಗೆ 10 ದಿನಗಳ ಅವಧಿಯಲ್ಲಿ ಸುಮಾರು 800 ಅಶ್ಲೀಲ ಕರೆಗಳು ಬಂದಿದ್ದು, ಕಿರುಕುಳ ಸಹಿಸಿಕೊಳ್ಳಲಾಗದೆ ಸಾವಿಗೆ ಶರಣಾಗಲು ಯೋಚಿಸಿದ್ದಾಗಿ ಉಪನ್ಯಾಸಕಿ ಹೇಳಿದ್ದಾರೆ. ನಿರಂತರ ಕರೆಗಳು ಬರಲಾರಂಭಿಸಿದ ಹಿನ್ನಲೆಯಲ್ಲಿ ಮಹಿಳಾ ಪ್ರಾಧ್ಯಾಪಕಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ರನ್ನು ಸಂಪರ್ಕಿಸಿ ದೂರು ನೀಡಿದ್ದಾರೆ..
ಮೂವರನ್ನು ಬಂಧಿಸಿದ ಪೊಲೀಸರು
ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ನೀಡಿದ ದೂರಿನ ಹಿನ್ನಲೆಯಲ್ಲಿ ಕಾರ್ಯಪ್ರವೃತರಾದ ಮಂಗಳೂರು ಪೊಲೀಸರು ಆರೋಪಿ ಪ್ರಾಧ್ಯಾಪಕರಾದ ಬಂಟ್ವಾಳ ಸಿದ್ಧಕಟ್ಟೆ ನಿವಾಸಿ ಪ್ರದೀಪ್ ಪೂಜಾರಿ, ಉಡುಪಿಯ ಹೆಬ್ರಿ ನಿವಾಸಿ ತಾರಾನಾಥ ಬಿ ಎಸ್ ಶೆಟ್ಟಿ ಮತ್ತು ಕಾಲೇಜು ಸಂಚಾಲಕರಾದ ಬೆಳ್ತಂಗಡಿ ನಿವಾಸಿ ಪ್ರಕಾಶ್ ಶೆಣೈ ನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ..
ವಿವಿಧ ರೀತಿಯಲ್ಲಿ ಶಿಕ್ಷಕಿಯ ಮಾನಹಾನಿ
ಆರೋಪಿಗಳು ಮಹಿಳಾ ಪ್ರಾಧ್ಯಾಪಕಿಯ ವಿರುದ್ಧ ಅವಹೇಳನಕಾರಿ ಪೋಸ್ಟರ್ ತಯಾರಿಸಿ ಅಂಚೆ ಮೂಲಕ ಸಹೋದ್ಯೋಗಿ ಪ್ರಾಧ್ಯಾಪಕರಿಗೆ, ಕಾಲೇಜಿನ ಮುಖ್ಯಸ್ಥರಿಗೆ, ಶಿಕ್ಷಣ ಇಲಾಖೆಯ ಉನ್ನತ ದರ್ಜೆಯ ಅಧಿಕಾರಿಗಳಿಗೆ ಪೋಸ್ಟ್ ಮಾಡಿದ್ದಾರೆ.. ಮಾನಹಾನಿಕರವಾದ ಬರಹವನ್ನು ಪ್ರಾರಂಭದಲ್ಲಿ ಪೋಸ್ಟ್ ಕಾರ್ಡ್, ಇನ್ ಲ್ಯಾಂಡ್ ಲೆಟರ್ ಮೂಲಕ ಪ್ರಾಧ್ಯಾಪಕಿ ಫೋಟೋ ಬಳಸಿ ಪೋಸ್ಟ್ ಮಾಡಲಾಗಿದೆ..ಜೊತೆಗೆ ಪ್ರಾಧ್ಯಾಪಕಿಯ ಮೊಬೈಲ್ ನಂಬ್ರ ಹಾಗೂ ಇ-ಮೇಲ್ ಐಡಿಯನ್ನು ನಮೂದಿಸಿ ಅಶ್ಲೀಲವಾಗಿ ಬರೆದು ಪೋಸ್ಟರ್ ಮಾಡಲಾಗಿದೆ..
ಈ ಹಿಂದೆಯೂ ಆರೋಪಿ ವಿರುದ್ಧ ಕೇಸ್
ಆರೋಪಿ ಪ್ರದೀಪ್ ಪೂಜಾರಿ ಕಾಲೇಜಿನ ಇಕನಾಮಿಕ್ ಪ್ರಾಧ್ಯಾಪಕನಾಗಿದ್ದ.. ಈತನಿಗೆ ಕಾಲೇಜಿನಲ್ಲಿ ಪ್ರಾಧ್ಯಾಪಕಿ ಜೊತೆ ಇದ್ದ ಮನಸ್ತಾಪದ ಹಿನ್ನೆಲೆಯಲ್ಲಿ ಕೃತ್ಯ ಮಾಡಿದ್ದಾನೆ ಅಂತಾ ಹೇಳಲಾಗಿದೆ. ಇತನ ವಿರುದ್ಧ 2019ರ ಲ್ಲಿ ಮಹಿಳಾ ಪ್ರಾಧ್ಯಾಪಕಿಯ ಮೇಲೆ ಮಾನಹಾನಿಯ ಪ್ರಕರಣವೂ ಈ ಹಿಂದೆ ದಾಖಲಾಗಿತ್ತು..
ನೀಚ ಕೃತ್ಯದ ಕುರಿತು ಸಿಕ್ಕಿದೆ ಸಾಕ್ಷಿ
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್ ಶಶಿಕುಮಾರ್, ಮಹಿಳಾ ಪ್ರಾಧ್ಯಾಪಕಿ ನೀಡಿದ ದೂರಿನ ಹಿನ್ನಲೆಯಲ್ಲಿ ಆರೋಪಿಗಳನ್ನು ಬಂಧಿಸಿದ್ದೇವೆ.. ಆದರೆ ಪ್ರಾರಂಭದಲ್ಲಿ ಆರೋಪಿಗಳು ತಾವು ಈ ತಪ್ಪು ಮಾಡಿಲ್ಲ ಅಂತಾ ಹೇಳಿದ್ದಾರೆ..ಆದರೆ ತನಿಖೆ ವೇಳೆ ಆರೋಪಿಗಳು ಕೃತ್ಯ ಎಸಗಿರುವ ಬಗ್ಗೆ ಸಾಕ್ಷ್ಯ ಲಭ್ಯವಾಗಿದೆ.. ಆರೋಪಿಗಳ ಮೊಬೈಲ್ ನಲ್ಲಿ ಬೇಕಾದ ಸಾಕ್ಷ್ಯ ಲಭ್ಯವಾಗಿದೆ. ಸಾರ್ವಜನಿಕ ಶೌಚಾಲಯ ದಲ್ಲಿ ಪೋಸ್ಟರ್ ಅಂಟಿಸಿದ ದಿನದಂದೇ ಅದೇ ಸ್ಥಳದಲ್ಲಿ ಆರೋಪಿ ಗಳ ಮೊಬೈಲ್ ಲೋಕೇಶನ್ ಪತ್ತೆಯಾಗಿದೆ ಅಂತಾ ಹೇಳಿದ್ದಾರೆ..
ಇದನ್ನೂ ಓದಿ: PSI Exam Scam: ಇಂದು 50 ಅಭ್ಯರ್ಥಿಗಳ ವಿಚಾರಣೆ; ಇನ್ನೂ ಪತ್ತೆಯಾಗದ ಬಿಜೆಪಿ ನಾಯಕಿ
ಇನ್ನು ಘಟನೆ ಬಗ್ಗೆ ಮಹಿಳಾ ಪ್ರಾಧ್ಯಾಪಕಿ ನಾಗವೇಣಿ ಕೂಡಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ..ಕಳೆದ ಐದು ವರ್ಷಗಳ ಹಿಂದೆ ಬಂಟ್ವಾಳ ದ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕಿಯಾಗಿ ಕರ್ತವ್ಯ ನಿರ್ವಹಿಸಿದ್ದೆ. ಈ ವೇಳೆ ಇಬ್ಬರು ಪ್ರಾಧ್ಯಾಪಕರು ಮತ್ತು ಕಾಲೇಜಿನ ಸಂಚಾಲಕ ಮಾನಸಿಕ ಕಿರುಕುಳ ನೀಡಿದ್ದಾರೆ.. ಅವರ ಕಿರುಕುಳ ತಾಳಲಾರದೇ ಅಲ್ಲಿಂದ ಮಂಗಳೂರು ಕಾಲೇಜಿಗೆ ವರ್ಗಾವಣೆ ಗೊಂಡಿದ್ದೆ ..ಆದರೆ ಅವರ ಕಿರುಕುಳ ಮತ್ತೆ ಆರಂಭ ವಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ ಅಂತ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ