ಮಂಗಳವಾರ (ಆ. 13): ರಾಜ್ಯ ಕರಾವಳಿಯಲ್ಲಿ ಉಗ್ರಪರವಾದ ಚಟುವಟಿಕೆಗಳು ಹೆಚ್ಚಾಗುತ್ತಿದೆ. ಹೀಗಾಗಿ ಮಂಗಳೂರಿನಲ್ಲಿ ಎನ್.ಐ.ಎ ಕಚೇರಿ ಆರಂಭಿಸುವಂತೆ ಬಹಳಷ್ಟು ಒತ್ತಾಯ ಕೇಳಿ ಬಂದಿದೆ. ಈ ನಡುವೆ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮಂಗಳೂರಿನಲ್ಲಿ ರಾಷ್ಟ್ರೀಯ ತನಿಖಾ ದಳದ ಕಚೇರಿ ಆರಂಭಿಸುವ ಸುಳಿವು ನೀಡಿದ್ದಾರೆ. ಕಡಲನಗರಿಯಲ್ಲಿ ಸದ್ದಿಲ್ಲದೇ ಉಗ್ರಪರವಾದ ವ್ಯಕ್ತಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಆರೋಪ ಕಳೆದ ಹಲವು ಸಮಯಗಳಿಂದಲೂ ಇದೆ. ಇದಕ್ಕೆ ಸಾಕ್ಷಿಯೆನ್ನುವಂತೆ ಕೆಲ ವಾರಗಳ ಹಿಂದಷ್ಟೇ ಉಳ್ಳಾಲದಲ್ಲಿ ಮಾಜಿ ಶಾಸಕ ದಿ.ಇದಿನಬ್ಬ ಮೊಮ್ಮಗನನ್ನು ಎನ್.ಐ.ಎ ಅಧಿಕಾರಿಗಳು ಅರೆಸ್ಟ್ ಮಾಡಿದ್ದರು. ಹೀಗಾಗಿ ಮಂಗಳೂರಿನಲ್ಲಿ ಎನ್.ಐ.ಎ ಕಚೇರಿಯನ್ನು ಸ್ಥಾಪಿಸಬೇಕು ಎಂಬ ಹಲವು ಸಮಯಗಳ ಒತ್ತಾಯ ಇದೀಗ ಮತ್ತೆ ಕೇಳಿ ಬರುತ್ತಿದೆ. ಈ ಬಗ್ಗೆ ಸುಳಿವು ನೀಡಿದ ಮುಖ್ಯಮಂತ್ರಿಗಳು, ಈಗಾಗಲೇ ಒಬ್ಬ ದಕ್ಷ ಗೃಹ ಸಚಿವರನ್ನು ಮಾಡಲಾಗಿದೆ. ಅವರು ಈಗಾಗಲೇ ಎರಡು ಮೀಟಿಂಗ್ ಮಾಡಿದ್ದು, ಮುಂದೆಯೂ ಕೆಲ ಸಭೆ ನಡೆಸಲಿದ್ದಾರೆ. ಮುಂಬರುವ ದಿನಗಳಲ್ಲಿ ಗೃಹ ಸಚಿವರು ಇಲ್ಲಿಗೆ ಭೇಟಿ ಕೊಟ್ಟು ಪರಿಶೀಲಿಸ್ತಾರೆ. ಆ ಬಳಿಕ ನಾವೆಲ್ಲರೂ ಒಟ್ಟಾಗಿ ಚರ್ಚಿಸಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ತೇವೆ ಎಂದಿದ್ದಾರೆ.
ಈ ಬಗ್ಗೆ ಕೆಲವು ವಿಚಾರಗಳನ್ನು ನಾವು ಬಹಿರಂಗ ಪಡಿಸಲು ಆಗಲ್ಲ ಮುಂದಿನ ದಿನಗಳಲ್ಲಿ ಈ ಬಗ್ಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳಲಿದ್ದೇವೆ ಎಂದು ಸಿ.ಎಂ ಇದೇ ಸಂದರ್ಭ ಹೇಳಿದ್ದಾರೆ. ಇನ್ನು ಈ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಂಗಳೂರು ಶಾಸಕ ಯು.ಟಿ ಖಾದರ್ ದೇಶದ್ರೋಹದ ಕೆಲಸವನ್ನು ಯಾರೂ ಕ್ಷಮಿಸಲ್ಲ, ಯಾರೂ ಬೆಂಬಲಿಸಲ್ಲ. ಉಳ್ಳಾಲದ ನಾಗರಿಕರು ಇದನ್ನ ಒಪ್ಪಲ್ಲ ಎಂದಿದ್ದಾರೆ. ಎನ್.ಐ.ಎ ಘಟಕ ಮಂಗಳೂರಿನಲ್ಲಿ ಆಗಲಿ, ಅದು ಸಂತೋಷದ ವಿಚಾರ ಅದರ ಜೊತೆಗೆ ನಾರ್ಕೋಟೀಕ್ ಮತ್ತು ಸೈಬರ್ ಸೆಲ್ ಕೂಡ ಆಗಲಿ ಎಂದು ಹೇಳಿದ್ದಾರೆ.
ಇದನ್ನು ಓದಿ: ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ರಕ್ಷಾ ರಾಮಯ್ಯ ಪದಗ್ರಹಣ; ನಿರೀಕ್ಷೆ ಹುಸಿಯಾಗದಂತೆ ಕೆಲಸ ಮಾಡುವಂತೆ ಕೈ ನಾಯಕರ ಕಿವಿಮಾತು
ಉಳ್ಳಾಲದ ನಾಗರಿಕರು ಭಯೋತ್ಪಾದನೆಯನ್ನು ಒಪ್ಪಲ್ಲ, ಎನ್ ಐಎ ಅಂತಲ್ಲ, ಯಾರೂ ಬಿಡಲ್ಲ.ಮೊನ್ನೆ ಘಟನೆಯಲ್ಲಿ ಎನ್ ಐಎ ಬಂದು ಒಬ್ಬನನ್ನ ಅರೆಸ್ಟ್ ಮಾಡಿದ್ದಾರೆ. ಹೀಗಾಗಿ ತನಿಖೆ ನಡೆಯುವಾಗ ಅದರ ಬಗ್ಗೆ ಯಾರೂ ಮಾತನಾಡುವುದು ಸರಿಯಲ್ಲ..ಅದರ ತನಿಖೆ ನಡೆದು ಸಮಗ್ರವಾದ ವಿಚಾರ ಬೆಳಕಿಗೆ ಬರಲಿ. ಎನ್ ಐಎ ಬಂದಿರೋದು ಗಂಭೀರ ವಿಚಾರ, ಈ ಬಗ್ಗೆ ಸಮಗ್ರ ತನಿಖೆ ನಡೆಯಲಿ ಎಂದು ಆಗ್ರಹಿಸಿದ್ದಾರೆ.
ಇನ್ನು ಈ ಬಗ್ಗೆ ರಾಜಕೀಯ ಮಾಡಿ ಯಾರೂ ಗೊಂದಲ ಸೃಷ್ಟಿಸಬಾರದು.ಇದನ್ನ ರಾಜಕೀಯ ಮಾಡಲು ಹೋದ್ರೆ ಕ್ಷೇತ್ರದ ಜನ ಯಾರೂ ಕ್ಷಮಿಸಲ್ಲ..ಅಪರಾಧಿ ಆಗಿದ್ರೆ ಉಳ್ಳಾಲದ ಜನರು ಅವರನ್ನ ಯಾವತ್ತೂ ಕ್ಷಮಿಸಲ್ಲ..ಅವರು ನಿರಪರಾಧಿ ಆಗಿದ್ದರೆ ಯಾಕೆ ಅವರ ಮೇಲೆ ಆರೋಪ ಬಂತು ಎನ್ನುವುದರ ಬಗ್ಗೆ ತನಿಖೆ ನಡೆಯಲಿ ಅಂತಾ ಯುಟಿ ಖಾದರ್ ಹೇಳಿದ್ದಾರೆ.
ಸದ್ಯ ಕರ್ನಾಟಕದಲ್ಲಿ ಎನ್.ಐ.ಎ ಕಚೇರಿ ಬೆಂಗಳೂರಿನಲ್ಲಿ ಮಾತ್ರವಿದೆ. ಹೀಗಾಗಿ ಇನ್ನೊಂದು ಕಚೇರಿ ಮಂಗಳೂರಿನಲ್ಲಿ ಆಗಬೇಕು ಎಂಬುದು ಬಹು ಸಮಯಗಳ ಒತ್ತಾಯವಾಗಿದೆ. ಈ ಬಾರಿ ಸರ್ಕಾರ ಈ ಬಗ್ಗೆ ಮನಸ್ಸು ಮಾಡಿದ್ದು ಕೇಂದ್ರ ಸರ್ಕಾರದ ಜೊತೆ ಮಾತುಕತೆ ನಡೆಸಿ ಒಂದು ಉತ್ತಮ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆಯಿದೆ.
ನ್ಯೂಸ್18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ