Children Missing Case: ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಮಕ್ಕಳು ಮಂಗಳೂರಿನಲ್ಲಿ ಪತ್ತೆ, ಆಟೋ ಚಾಲಕರಿಂದ ರಕ್ಷಣೆ

ಕುಟುಂಬಸ್ಥರ ಮುಂದೆಯೇ ವಿಚಾರಣೆ ಮಾಡ್ತೀವಿ.  ಮಕ್ಕಳನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ಗೊತ್ತಾಗುತ್ತೆ. ಬರೀ ಟ್ರೈನ್ ನಲ್ಲಿಯೇ ಇಷ್ಟು ದಿನ ಟ್ರಾವೆಲ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಬೆಂಗಳೂರು(ಅ.12):  ಬೆಂಗಳೂರಿನಲ್ಲಿ(Bengaluru) ಮುಂಜಾನೆ ವಾಕಿಂಗ್​ ಹೋಗಿದ್ದ 7 ಮಕ್ಕಳು(Children Missing case) ನಿನ್ನೆ ನಾಪತ್ತೆಯಾಗಿದ್ದರು. ಅವರಲ್ಲಿ ನಿನ್ನೆಯೇ ಮೂವರು ಮಕ್ಕಳು ಪತ್ತೆಯಾಗಿದ್ದರು. ಇಂದು ಉಳಿದ ನಾಲ್ವರು ಮಕ್ಕಳು ಪತ್ತೆಯಾಗಿದ್ದು, ಪ್ರಕರಣ ಸುಖಾಂತ್ಯ ಕಂಡಿದೆ. ಹೌದು, ನಿನ್ನೆ ಬೆಂಗಳೂರಿನಲ್ಲಿ ನಾಪತ್ತೆಯಾಗಿದ್ದ ಈ ನಾಲ್ವರು ಮಕ್ಕಳು ಇಂದು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ಆಟೋ ಚಾಲಕರು(Auto drivers) ನಾಪತ್ತೆಯಾದ ಮಕ್ಕಳ ಗುರುತು ಪತ್ತೆ ಮಾಡಿ ಪಾಂಡೇಶ್ವರ್​ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಬಳಿಕ ಅಲ್ಲಿನ ಪೊಲೀಸರು ಬೆಂಗಳೂರು ಪೊಲೀಸರಿಗೆ ವಿಷಯ ರವಾನಿಸಿದ್ದಾರೆ. 

ಅಮೃತವರ್ಷಿಣಿ, ರಾಯಲ್ ಸಿದ್ಧಾರ್ಥ , ಚಿಂತನ್, ಭೂಮಿ, ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ. ನಾಲ್ಕು ಮಕ್ಕಳು ನಾಪತ್ತೆಯಾದ ಪ್ರಕರಣ ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾಗಿತ್ತು.

ಪ್ರಕರಣ ಕುರಿತು ಮಾತನಾಡಿದ ಡಿಸಿಪಿ ಧರ್ಮೆಂದ್ರ ಕುಮಾರ್ ಮೀನಾ, ಎಳೆ-ಎಳೆಯಾಗಿ ಮಾಹಿತಿ ಬಿಚ್ಚಿಟ್ಟಿದ್ದಾರೆ. ಅಮೃತ ವರ್ಷಿಣಿ ಹಾಗೂ ಅಪ್ರಾಪ್ತ ಮೂವರು ಮಕ್ಕಳು ಪತ್ತೆಯಾಗಿದ್ದಾರೆ. ನಾಲ್ವರೂ ಕೂಡ ಹಣ, ಚಿನ್ನ, ಫುಡ್ ಕಿಟ್​​ನೊಂದಿಗೆ ನಾಪತ್ತೆಯಾಗಿದ್ದರು. ತನಿಖೆಯಲ್ಲಿ ಚಿಕ್ಕಬಾಣಾವರ ರೈಲ್ವೆ ಸ್ಟೇಷನ್​​ಗೆ ಹೋಗಿದ್ದು ಮಾತ್ರ ಗೊತ್ತಾಗಿತ್ತು.  ನಂತ್ರ ತುಮಕೂರು, ಮೈಸೂರಿಗೆ ಆನ್‌ಲೈನ್ ನಲ್ಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಪರಶೀಲನೆ ಮಾಡಿದ್ದರು. ಅದ್ರಂತೆ ಎರಡು ತಂಡಗಳನ್ನು ಮೈಸೂರು ತುಮಕೂರಿಗೆ ಕಳುಹಿಸಲಾಗಿತ್ತು.  ಇವತ್ತು ಅಮೃತ ವರ್ಷಿಣಿ ತನ್ನ ಕುಟುಂಬಸ್ಥರಿಗೆ ಕಾಲ್ ಮಾಡಿದ್ದಾರೆ. ನಮಗೆ ಭಯ ಆಗ್ತಾ ಇದೆ, ದುಡ್ಡು ಇಲ್ಲ ಅಂತ ಕಾಲ್ ಮಾಡಿದ್ದಾರೆ. ಕೂಡಲೇ ಮಂಗಳೂರು ಪೊಲೀಸರಿಗೆ ಮಾಹಿತಿ ನೀಡಿದೆವು.

ಇದನ್ನೂ ಓದಿ:Children Missing: ಬೆಂಗಳೂರಿನಲ್ಲಿ ಮುಂಜಾನೆ ವಾಕಿಂಗ್ ಹೋಗಿದ್ದ 7 ಮಕ್ಕಳು ನಿಗೂಢವಾಗಿ ನಾಪತ್ತೆ

ಬೆಂಗಳೂರು-ಬೆಳಗಾವಿ-ಮಂಗಳೂರು ಟ್ರಾವೆಲ್ ಮಾಡಿದ್ದ ಮಕ್ಕಳು

ಚಿಕ್ಕಬಾಣಾವರದಿಂದ ಯಶವಂತಪುರ - ಮೈಸೂರು - ಅರಸಿಕೆರೆ - ಬೆಳಗಾವಿಗೆ ಹೋಗಿದ್ದರು. ನಿನ್ನೆ ರಾತ್ರಿ ಮತ್ತೆ ಬೆಂಗಳೂರಿಗೆ ಬಂದಿದ್ದರು. ರಾತ್ರಿ ಮತ್ತೆ ಮಂಗಳೂರಿಗೆ ಟಿಕೆಟ್ ತಗೊಂಡು ಹೋಗಿದ್ದಾರೆ. ಮಂಗಳೂರಿಗೆ ಹೋಗುವಷ್ಟರಲ್ಲಿ ಹಣ ಖಾಲಿ ಆಗಿದೆ. ಈ ವೇಳೆ ವರ್ಷಿಣಿ ಕುಟುಂಬಸ್ಥರಿಗೆ ಕಾಲ್ ಮಾಡಿದ್ದಾರೆ. ಟ್ರಿಪ್ ಹೋಗುವಂತಹ ಪ್ಲ್ಯಾನ್ ಮಾಡಿಕೊಂಡು ಹೋಗಿದ್ದಾರೆ. ಆದ್ರೆ ಎಲ್ಲಿಗೆ ಹೋಗಬೇಕು ಅನ್ನೋದು ಗೊತ್ತಾಗಿಲ್ಲ. ಹಣದ ಸಮಸ್ಯೆ ಎದುರಾಗಿರೋದ್ರಿಂದ ಅವರೇ ಕಾಲ್ ಮಾಡಿದ್ದಾರೆ. ಈಗ ಅವರನ್ನು ಮಂಗಳೂರಿನಿಂದ ಕರೆದುಕೊಂಡು ಬರ್ತೀವಿ.ಕುಟುಂಬಸ್ಥರ ಮುಂದೆಯೇ ವಿಚಾರಣೆ ಮಾಡ್ತೀವಿ.  ಮಕ್ಕಳನ್ನು ಕರೆದುಕೊಂಡು ಬಂದು ವಿಚಾರಣೆ ಮಾಡಿದಾಗ ಗೊತ್ತಾಗುತ್ತೆ. ಬರೀ ಟ್ರೈನ್ ನಲ್ಲಿಯೇ ಇಷ್ಟು ದಿನ ಟ್ರಾವೆಲ್ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು.

ಪೊಲೀಸರ ಮುಂದೆ ವರ್ಷಿಣಿ ಹೇಳಿದ್ದೇನು?

ಪೊಲೀಸರ ವಿಚಾರಣೆ ವೇಳೆ ಬೆಳಗಾವಿಗೆ ಹೋಗಿದ್ದಾಗಿ ವರ್ಷಿಣಿ ಹೇಳಿದ್ದಾರೆ. ಎಲ್ಲರೂ ಪ್ಲ್ಯಾನ್​ ಮಾಡಿಕೊಂಡು ಟ್ರಪ್ ಹೋಗಲು ನಿರ್ಧಾರ ಮಾಡಿದ್ವಿ. ಮೊದಲು ಬೆಳಗಾವಿಗೆ ಹೋಗಿದ್ದೆವು, ನಂತ್ರ ಮಂಗಳೂರಿಗೆ ಬಂದ್ವಿ. ನಾವೆಲ್ಲ ಒಟ್ಟಾಗಿಯೇ ಇದ್ದೋರು ಹಾಗಾಗಿ ಈ ತರ ಟ್ರಿಪ್ ಪ್ಲ್ಯಾನ್​ ಮಾಡಿದ್ದೆವು.

ಆಟೋ ಚಾಲಕರಿಗೆ ಸಿಕ್ಕಿದ ಮಕ್ಕಳು

ಬೆಂಗಳೂರಿನಿಂದ ನಾಪತ್ತೆಯಾದ ಮಕ್ಕಳು ಮಂಗಳೂರಿನಲ್ಲಿ ಪತ್ತೆಯಾಗಿದ್ದಾರೆ.  ಪ್ರಕರಣ ಸುಖಾಂತ್ಯಗೊಳ್ಳಲು ಪ್ರಮುಖ‌ ಕಾರಣವಾದವರು ಆಟೋ ಚಾಲಕರು. ಮಂಗಳೂರು ನಗರದ ಜ್ಯೋತಿ ಆಟೋಸ್ಟ್ಯಾಂಡ್​ನ  ರಮೇಶ್, ಪ್ರಶಾಂತ್ ಎಂಬ ಆಟೋ ಚಾಲಕರು ಮಕ್ಕಳನ್ನು ರಕ್ಷಣೆ ಮಾಡಿದ್ದಾರೆ.

ಮಕ್ಕಳ ರಕ್ಷಣಾ ಕಾರ್ಯಾಚರಣೆ ಬಗ್ಗೆ ಆಟೋ ಚಾಲಕ ರಮೇಶ್, ಪ್ರಶಾಂತ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಳಗ್ಗೆ ಬಸ್ಸಿನಿಂದ‌‌ ನಾಲ್ಕು ಮಕ್ಕಳು ಇಳಿದಿದ್ರು. ಮಕ್ಕಳ ಚಲನ ವಲನ ಗಮನಿಸಿ ನಮಗೆ ಅನುಮಾನ ಬಂತು. ಉಳಿದುಕೊಳ್ಳಲು ಲಾಡ್ಜ್ ಸಿಗುತ್ತಾ ಎಂದು‌ ಕೇಳಿದ್ರು..  ಚಿನ್ನ ಅಡಮಾನ ಇಡುವ ಬಗ್ಗೆ ಮಾಹಿತಿ ಕೇಳಿದ್ರು. ಬೇರೆಯವರ ಮೊಬೈಲ್ ತೆಗೆದುಕೊಂಡು ಕಾಲ್ ಮಾಡೋದಕ್ಕೆ ಟ್ರೈ ಮಾಡ್ತಿದ್ರು. ಮಕ್ಕಳ ಮಾತು, ಚಲನ ವಲನ ಗಮನಿಸಿ ಅನುಮಾನ ಬಂತು. ಹೆಚ್ಚಿನ ಮಾಹಿತಿ ಕೇಳುವ ಸಂದರ್ಭ ಸತ್ಯ ವಿಚಾರ ಹೇಳಿದ್ರು. ಆಟೋದ ಮೂಲಕ ಪಾಂಡೇಶ್ವರ ಠಾಣೆಗೆ ಮಕ್ಕಳನ್ನು ಕರೆದುಕೊಂಡು ಹೋದೆವು. ಮಕ್ಕಳನ್ನು ಸುರಕ್ಷಿತವಾಗಿ  ಠಾಣೆಗೆ ಸೇರಿಸಿದ ಆಟೋ ಚಾಲಕರು ನ್ಯೂಸ್18 ಕನ್ನಡದ ಜೊತೆ ಅಭಿಪ್ರಾಯ ಹಂಚಿಕೊಂಡರು.

ನಾಲ್ವರು ಮಕ್ಕಳ ವಿಚಾರಣೆ ಮುಗಿಸಿದ ಡಿಸಿಪಿ ಹರಿರಾಂ ಶಂಕರ್ ಮಾತನಾಡಿ,  ನಾಲ್ವರು ಮಕ್ಕಳು ಒಂದೇ ಲೇಔಟ್ ನ ನಿವಾಸಿಗಳು. ಎಲ್ಲರೂ ಒಟ್ಟಿಗೆ ಆಡೋಕೆ ಹೋಗ್ತಿದ್ರು. ಆದರೆ ಇವರ ಸ್ನೇಹ ಮನೆಯವರಿಗೆ ಹಿಡಿಸಿರಲಿಲ್ಲ. ಹೀಗಾಗಿ ಮಕ್ಕಳಿಗೆ ಪೋಷಕರು ತಮ್ಮನ್ನು ಹಾಸ್ಟೆಲ್ ಗೆ ಹಾಕುವ ಭಯವಾಗಿದೆ. ಹೀಗಾಗಿ ಎಲ್ಲರೂ ಒಟ್ಟಿಗೆ ಯಾವುದಾದರೂ ಹಳ್ಳಿಗೆ ಹೋಗಿ ವಾಸಿಸುವ ನಿರ್ಧಾರ ಮಾಡಿದ್ದಾರೆ. ಪ್ರಯಾಣಕ್ಕೆ ಎಲ್ಲರೂ ಮನೆಯಿಂದ ಹಣ ತಂದಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಖಾಸಗಿ ಬಸ್ ಮೂಲಕ ಬಂದಿದ್ದಾರೆ. ತಮ್ಮ ಗುರುತನ್ನು ಯಾರೂ ಪತ್ತೆ ಹಚ್ಚಬಾರದೆಂದು ಸಿಮ್ ಕಾರ್ಡ್,ಮೈ ಮೇಲಿದ್ದ ಚಿನ್ನಾಭರಣ ಎಸೆದಿದ್ದಾರೆ. ಮಂಗಳೂರಿನ ಖಾಸಗಿ ಬಸ್ ನಿಲ್ದಾಣ ದ ಡಸ್ಟ್ ಬಿನ್ ಗೆ ಎಸೆದಿದ್ದಾರೆ. ಆದರೆ ಸದ್ಯ ಪೊಲೀಸರು ಈ ವಸ್ತುಗಳನ್ನು ರಿಕವರಿ ಮಾಡಿದ್ದಾರೆ. ಮಕ್ಕಳು ಸಿಕ್ಕಿರುವ ಬಗ್ಗೆ ಈಗಾಗಲೇ ಬೆಂಗಳೂರು ಡಿಸಿಪಿಗೆ ಮಾಹಿತಿ ನೀಡಿದ್ದೇವೆ ಎಂದರು.

ಬೆಂಗಳೂರಿನಿಂದ ಹೆತ್ತವರು ಮಂಗಳೂರಿಗೆ ಬರುತ್ತಿದ್ದಾರೆ. ಸಣ್ಣ ಮಕ್ಕಳನ್ನು ಹೆತ್ತವರ ಜೊತೆ ಕಳುಹಿಸುತ್ತೇವೆ. ಆದರೆ ಮಕ್ಕಳನ್ನು ಕರೆತಂದ ಯುವತಿಗೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ  ಎಂದು ಮಕ್ಕಳ ವಿಚಾರಣೆ ಬಳಿಕ ಡಿಸಿಪಿ ಹರಿರಾಂ ಶಂಕರ್ ಹೇಳಿದ್ದಾರೆ.
Published by:Latha CG
First published: