Azan: ಪ್ರಾರ್ಥನೆಗೆ ಲೌಡ್ ಸ್ಪೀಕರ್ ಬಳಸುವಂತೆ ಹೇಳಿಲ್ಲ, ಭಯೋತ್ಪಾದಕ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ಬೆಂಬಲ: ಚಕ್ರವರ್ತಿ ಸೂಲಿಬೆಲೆ

ಮುಸ್ಲಿಂ ಧರ್ಮದಲ್ಲಿ ಎಲ್ಲೂ ಪ್ರಾರ್ಥನೆ ಸಂಧರ್ಭದಲ್ಲಿ ಮೈಕ್ ಅಳವಡಿಸಬೇಕೆಂದು ಹೇಳಿಲ್ಲ..ಆದರೆ ನಿಯಮ ಮೀರಿ ಮೈಕ್ ನಲ್ಲಿ ಜೋರಾದ ಸ್ವರದಲ್ಲಿ ಮೈಕ್‌ ನಲ್ಲಿ ಅಲ್ಲಾಹು ಒಬ್ಬನೇ ದೇವರು.ಬೇರೆ ಯಾರೂ ದೇವರಿಲ್ಲ ಅಂತಾ ಹೇಳುತ್ತಾರೆ..ಈ ಸದ್ದನ್ನು ಕಳೆದ 75 ವರ್ಷದಿಂದ ಭಾರತದಲ್ಲಿ ಹಿಂದೂ ಕೇಳಿಕೊಂಡು ಬಂದಿದ್ದಾನೆ..ಆದರೆ ಇನ್ನ

ಚಕ್ರವರ್ತಿ ಸೂಲಿಬೆಲೆ

ಚಕ್ರವರ್ತಿ ಸೂಲಿಬೆಲೆ

  • Share this:
ರಾಜ್ಯದಲ್ಲಿ ಲೌಡ್ ಸ್ಪೀಕರ್ ಲಡಾಯಿ (Loud speaker Row) ಆರಂಭವಾಗಿದೆ. ಅಜಾನ್ (Azan) ಸದ್ದಿಗೆ ವಿರುದ್ಧವಾಗಿ ಹಿಂದೂ ಸಂಘಟನೆಗಳು ದೇವಸ್ಥಾನದಲ್ಲಿ ಭಕ್ತಿಗೀತೆ ಹನುಮಾನ್ ಚಾಲೀಸಾ (Hanuman Chalisa) ಮೊಳಗಿಸಿದೆ. ಈ ಅಭಿಯಾನದ ಬಗ್ಗೆ ಮಂಗಳೂರಿನಲ್ಲಿ‌‌ ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarti sulibele)  ಪ್ರತಿಕ್ರಿಯೆ ನೀಡಿದ್ದಾರೆ.  ಪ್ರತಿ ನಾಗರಿಕನಿಗೆ ತೊಂದರೆಯಾಗದಂತೆ ನೋಡಿಕೊಳ್ಳೋದು ಸರ್ಕಾರದ ಜಬಾವ್ದಾರಿಯಾಗಿದೆ..ಆದರೆ ದುರಾದೃಷ್ಟವಶಾತ್ ಸರ್ಕಾರ ಮುಂದೆ ಎಷ್ಟೇ ಮೊರೆ ಹೋದರೂ ಇದು ಸಾಧ್ಯ ಆಗಿಲ್ಲ. ಬೆಳಗ್ಗಿನ ಅಜಾನ್ ಜ್ಯಾತ್ಯಾತೀತ ರಾಷ್ಟ್ರಕ್ಕೆ ಹೇಳಿ ಮಾಡಿಸಿರೋದು ಅಲ್ಲ.. ಅಲ್ಲಾ ಒಬ್ಬನೇ ದೇವರು ಬೇರೆ ಯಾರೂ ದೇವರಿಲ್ಲ ಅನ್ನೋದನ್ನು ಪ್ರತಿಯೊಬ್ಬ ಹಿಂದೂ ಕೇಳೋಕೆ ಸಾಧ್ಯ ಇಲ್ಲ ಎಂದು ಹೇಳಿದರು.

ಬೆಳಗ್ಗಿನ ಜಾವದ ಅಜಾನ್ ಎಲ್ಲರ ನಿದ್ದೆ ಹಾಳು ಮಾಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ನ ಆದೇಶ ಕೂಡಾ ಇದೆ. ಆದರೆ ಕರ್ನಾಟಕ ಸರ್ಕಾರ ಸುಧೀರ್ಘ ನಿದ್ರೆಯಲ್ಲಿದೆ. ಸರ್ಕಾರಕ್ಕೆ ಎಷ್ಟೇ ಒತ್ತಡ ಹಾಕಿದರೂ ಬೆಳಗ್ಗಿನ ಆಜಾನ್ ಧ್ವನಿ ನಿಲ್ಲಿಸುವ ಪ್ರಯತ್ನ ಮಾಡುತ್ತಿಲ್ಲ.

ಅಜಾನ್ ನಿಲ್ಲಿಸುವ ಬದಲು ಹಿಂದೂ ದೇವಾಲಯಗಳಿಗೆ ಆರು ಗಂಟೆ ಮೊದಲು ಹಾಕುವ ಧ್ವನಿ ವರ್ಧಕದ ಧ್ವನಿ ಕಡಿಮೆ ಮಾಡುವ ದಾರ್ಷ್ಯ ತೋರಿದೆ..ಸರ್ಕಾರದ ನಿರ್ಧಾರ ತೆಗೆದುಕೊಳ್ಳದೇ ಇದ್ದಾಗ ಸಮಾಜವೇ ಮುಂದೆ ನಿಂತು ನಿರ್ಧಾರ ತೆಗೆದುಕೊಂಡಿದೆ.

ನೀವು ಕಾನೂನು ಮೀರಿದವರನ್ನು ಹಿಡಿಯದಿದ್ದರೆ ನಾವೂ ಕಾನೂನು ಮೀರುತ್ತೇವೆ. ಹಿಡಿಯೋದಿದ್ದರೆ ಎಲ್ಲರನ್ನೂ ಹಿಡಿಯಿರಿ ಎಂಬ ಸವಾಲನ್ನು ಸಮಾಜ ಹಾಕಿದೆ. ಇದು ಸ್ವಾಗತಾರ್ಹ ನಿರ್ಧಾರವಾಗಿದೆ ಅಂತಾ ಮಂಗಳೂರಿನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ

ಇದನ್ನೂ ಓದಿ: Belagavi: ಬೆಳಗಾವಿಯಿಂದ ಹೊರಟಿದ್ದ 187 ಪ್ರಯಾಣಿಕರಿದ್ದ ವಿಮಾನಕ್ಕೆ ಹಕ್ಕಿ ಡಿಕ್ಕಿ

ಇಂದು ಹಿಂದೂ ಸಂಘಟನೆಗಳ ಕೂಗು

ಯಾವ ಪ್ರಾರ್ಥನೆ ಯಾವ ಸದ್ದೂ ಬೆಳಗ್ಗಿನ ಆರು ಗಂಟೆಯ ಮುಂಚೆ ಇರಬಾರದು.ಆದರೆ ಒಂದು ಪಂಥಕ್ಕೆ ಮಾತ್ರ ಅವಕಾಶ ಕೊಟ್ಟಿದ್ದಾರೆ. ಹೀಗಾಗಿ ಹಿಂದೂ ಧರ್ಮವೂ ಇವತ್ತು ಸೆಟೆದು ನಿಂತಿದೆ. ಸರ್ಕಾರ ಎಲ್ಲರ ಬಾಯಿ ಮುಚ್ಚಿಸುವ ಕೆಲಸವನ್ನು ಈ ಹಂತದಲ್ಲಿ ಮಾಡಬೇಕು.ಇವತ್ತು ಇದು ಕೇವಲ ಹಿಂದೂ ಸಂಘಟನೆಗಳ ಕೂಗಾಗಿದೆ. ಆದರೆ ನಾಳೆ ಇದು ಸಮಾಜದ ಕೂಗಾಲಿದೆ.

ಸಮಾಜದ ಪ್ರತೀ ದೇವಸ್ಥಾನದಲ್ಲೂ ಹನುಮಾನ್ ಚಾಲೀಸಾ ಗಣೇಶ ಮಂತ್ರ ಹಾಕಿದರೆ ಸಮಾಜದಲ್ಲಿ ದೊಡ್ಡ ಸಮರ ಆಗಲಿದೆ. ಇದಾಗುವ ಮುನ್ನ ಸರ್ಕಾರ ಸೂಕ್ತ ನಿರ್ಣಯ ಕೈಗೊಳ್ಳಬೇಕು ಅಂತಾ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.

ಇನ್ನೂ ತಾಳ್ಮೆ ಸಹಿಸಲು ಆಗಲ್ಲ

ಮುಸ್ಲಿಂ ಧರ್ಮದಲ್ಲಿ ಎಲ್ಲೂ ಪ್ರಾರ್ಥನೆ ಸಂಧರ್ಭದಲ್ಲಿ ಮೈಕ್ ಅಳವಡಿಸಬೇಕೆಂದು ಹೇಳಿಲ್ಲ. ಆದರೆ ನಿಯಮ ಮೀರಿ ಮೈಕ್ ನಲ್ಲಿ ಜೋರಾದ ಸ್ವರದಲ್ಲಿ ಮೈಕ್‌ ನಲ್ಲಿ ಅಲ್ಲಾಹು ಒಬ್ಬನೇ ದೇವರು. ಬೇರೆ ಯಾರೂ ದೇವರಿಲ್ಲ ಅಂತಾ ಹೇಳುತ್ತಾರೆ.ಈ ಸದ್ದನ್ನು ಕಳೆದ 75 ವರ್ಷದಿಂದ ಭಾರತದಲ್ಲಿ ಹಿಂದೂ ಕೇಳಿಕೊಂಡು ಬಂದಿದ್ದಾನೆ. ಆದರೆ ಇನ್ನು ತಾಳ್ಮೆಯನ್ನು ಸಹಿಸಲು ಸಾಧ್ಯವಿಲ್ಲ. ಹಿಂದೂ ಈಗ ಜಾಗೃತನಾಗಿದ್ದಾನೆ. ಮುಂದೆ ಈ ಹೋರಾಟ ಮತ್ತಷ್ಟು ತೀವ್ರವಾಗಲಿದೆ ಅಂತಾ ಸೂಲಿಬೆಲೆ ಹೇಳಿದ್ದಾರೆ.

ಅಜಾನ್ ಸದ್ದು ನಿಯಂತ್ರಣ ಮಾಡಬೇಕು ಎನ್ನೋದು ಕೋರ್ಟ್ ಆದೇಶವಾಗಿದೆ..ಸರ್ಕಾರದ ಜವಾಬ್ದಾರಿ ಕೋರ್ಟ್ ಆದೇಶ ಪಾಲಿಸೋದಾಗಿದೆ. ದುರಾದೃಷ್ಟವಶಾತ್ ಈ ಸರ್ಕಾರ ಕೋರ್ಟ್ ಆದೇಶ ಪಾಲಿಸುತ್ತಿಲ್ಲ. ವಿರೋಧ ಪಕ್ಷಗಳು ಸರ್ಕಾರ ಕೋರ್ಟ್ ಆದೇಶ ಪಾಲಿಸಲು ಹಿಂದೆ ಬಿದ್ದಾಗ ಒತ್ತಾಯವೂ ಮಾಡುತ್ತಿಲ್ಲ.ಸರ್ಕಾರ ಮತ್ತು ವಿರೋಧ ಪಕ್ಷಗಳು ಈ ವಿಚಾರದಲ್ಲಿ ಒಂದಾಗಿದೆ.ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷಗಳು ಮುಸ್ಲಿಮರ ಓಟು ಯಾರು ಜಾಸ್ತಿ ತೆಗೋತಾರೆ ಎಂಬ ಜಿದ್ದಿಗೆ ಬಿದ್ದಿದೆ.

ಬಿಜೆಪಿ ಫೇಲ್ಯೂರ್ ಆಗಿದೆ

ವೋಟಿನ ನೆಪದಲ್ಲಿ ರಾಜ್ಯದ ಹಿತಾಸಕ್ತಿ ಕಡೆಗಣಿಸುತ್ತಿದ್ದಾರೆ.ಯುಪಿ ಸರ್ಕಾರ ಕೋರ್ಟ್ ಆದೇಶವನ್ನು ಸ್ಪಷ್ಟವಾಗಿ ಪಾಲಿಸಿದೆ.ಎಲ್ಲಾ ಧರ್ಮದ 50 ಸಾವಿರಕ್ಕೂ ಅಧಿಕ ಲೌಡ್ ಸ್ಪೀಕರ್ ಗಳನ್ನು ತೆಗೆದಿದೆ. ಕರ್ನಾಟಕದಲ್ಲಿ ಇದು ಸಾಧ್ಯವಿಲ್ಲ ಅಂತಾದ್ರೆ ಬಿಜೆಪಿ ಸಿದ್ಧಾಂತ ಚಿಂತನೆ ಪಕ್ಕಕಿಡಿ. ಕೊನೆಯ ಪಕ್ಷ ನ್ಯಾಯಾಲಯದ ಆದೇಶವನ್ನಾದರೂ ಪಾಲಿಸಿ.ಈ ವಿಚಾರದಲ್ಲಿ ಬಿಜೆಪಿ ನೂರು ಪ್ರತಿಶತ ಫೈಲ್ಯೂರ್ ಆಗಿದೆ ಅಂತಾ ಮಂಗಳೂರಿನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಇದನ್ನೂ ಓದಿ:  Bride Exchange: ಕರೆಂಟು ಹೋದ ಟೈಮಲಿ ವಧು-ವರರೇ ಅದಲು ಬದಲು; ಅವನ ಹುಡುಗಿಗೆ ಇವನು, ಇವನ ಹುಡುಗಿಗೆ ಅವನು ತಾಳಿ ಕಟ್ಟಿದ!

ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರದ ವೈಫಲ್ಯ ಎದ್ದು ಕಾಣುತ್ತಿದೆ.ಮುಸ್ಲಿಮರು ಬಹಿರಂಗ ಬೆದರಿಕೆ ಹಾಕುತ್ತಿದ್ದಾರೆ. ಬಹಿರಂಗವಾಗಿ ಕಲ್ಲೆಸೆಯುತ್ತಾರೆ.ಹಾಡುಹಗಲೇ ಕೊಲೆ ಮಾಡುತ್ತಾರೆ. ಕಲ್ಲೆಸೆದವರಿಗೆ ಶಿಕ್ಷೆ ಆಗಬೇಕೆಂದು ಆಗ್ರಹಿಸುವ ಮೊದಲು ಶಾಸಕ ಮನೆಗೆ ಹೋಗಿ ಅವರ ಮನೆಗೆ ಹತ್ತು ಸಾವಿರ ರೂಪಾಯಿ ಹಣ ಕೊಡ್ತಾರೆ.

ಇಬ್ಬರನ್ನ ಎನ್ ಕೌಂಟರ್ ಬಿಸಾಡಬೇಕಿತ್ತು

ಇದು ಸರ್ಕಾರದ ದಿವಾಳಿತನವನ್ನು ತೋರಿಸುತ್ತದೆ. ಶಿವಮೊಗ್ಗ ಹತ್ಯೆಯಾದಾಗ ಯುಪಿ ಮಾದರಿಯಲ್ಲಿ ಇಬ್ಬರನ್ನು ಎನ್ ಕೌಂಟರ್ ಮಾಡಿ ಬಿಸಾಡಬೇಕಿತ್ತು. ಅವರ ಮನೆಗಳನ್ನು ಬುಲ್ಡೋಜರ್ ತಂದು ಉರುಳಿಸಬೇಕಿತ್ತು.ಎಲ್ಲರೂ ಮುಸ್ಲಿಮರು ಓಟುಗಾಗಿ ಹಪಾಹಪಿಸುತ್ತಿದ್ದಾರೆ. ಮುಸ್ಲಿಮರು ಏನೇ ಮಾಡಿದ್ರೂ ಸಹಿಸುಕೊಳ್ಳುತ್ತಿದ್ದಾರೆ ಅಂತಾ ಚಕ್ರವರ್ತಿ ಸೂಲಿಬೆಲೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಎಂಡಿಎಫ್ ಮೊದಲಿದೇನಲ್ಲ,ಕೊನೆಯದ್ದೂ ಅಲ್ಲ.ಹೊಸ ಹೊಸ ಸ್ವರೂಪದಲ್ಲಿ ಬರುತ್ತಾರೆ. ಮಂಗಳೂರು ಮುಸ್ಲಿಂ ಪೇಜ್ ಮೂಲಕ ಹಿಂದೂ, ಮುಸ್ಲಿಮರಿಗೂ ಬೆದರಿಕೆ ಹಾಕಿದ್ರು.ಎಂಡಿಎಫ್ ಮೂಲಕ ಮುಸ್ಲಿಂ ಹೆಣ್ಣುಮಕ್ಕಳಿಗೆ ವಾರ್ನ್ ಮಾಡುತ್ತಾರೆ.

ಮನೆಯಿಂದ ಆಚೆ ಬರೋವಾಗ ಬುರ್ಖಾದಲ್ಲಿರಬೇಕು. ಸೆಲ್ಫಿ ತೆಗೆದುಕೊಳ್ಳೋದಕ್ಕೂ ಬುರ್ಖಾ ತೆಗೆದರೆ ಎಚ್ಚರಿಕೆ ನೀಡುತ್ತಾರೆ. ಇದು ಸಮಾಜದಲ್ಲಿ ಭೀತಿಯನ್ನು ಸೃಷ್ಠಿ ಮಾಡುತ್ತದೆ.ಭಯೋತ್ಪಾದಕ ಕೃತ್ಯವನ್ನು ಇಂಟರ್ನೆಟ್ ಬಳಸಿ ಮಾಡುತ್ತಿದ್ದಾರೆ.

ಚಕ್ರವರ್ತಿ ಸೂಲಿಬೆಲೆ ಒತ್ತಾಯ

ಈ ಭಯೋತ್ಪಾದಕ ಕೃತ್ಯಕ್ಕೆ ಕಾಂಗ್ರೆಸ್, ಜೆಡಿಎಸ್ ನೇರವಾಗಿ ಬೆಂಬಲ ನೀಡುತ್ತಾರೆ. ಈ ಬೆಂಬಲಕ್ಕೆ ಸರ್ಕಾರವೂ ಸಹಾಯ ಮಾಡುತ್ತದೆ.ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಅದನ್ನು ಸರಿ ಮಾಡೋಕೆ ಸರ್ಕಾರ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಬೇಕು ಅಂತಾ ಮಂಗಳೂರಿನಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಒತ್ತಾಯಿಸಿದ್ದಾರೆ.
Published by:Mahmadrafik K
First published: