Mangaluru ಕೈಗಾರಿಕಾ ಪ್ರದೇಶದಲ್ಲಿ ಹೆಚ್ಚಾದ ಕ್ಯಾನ್ಸರ್ ರೋಗ; ಹೆಚ್ಚಿದ ಆತಂಕ

ಮಂಗಳೂರು ನಗರದ ವಿವಿಧೆಡೆ ಸಂಚರಿಸಿರುವ ಎಂಎಲ್ ಸಿಗಳ ತಂಡ ಬಾಕಿ ಭರವಸೆಗಳ ವಿಸ್ತೃತ ಅಧ್ಯಯನ ನಡೆಸಿತ್ತು. ಈ ತಂಡ ನಗರದ ಕೈಗಾರಿಕಾ ವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರಗಳ ವರದಿಯ ಮಾಹಿತಿ ಪಡೆದಿತ್ತು.

ಕೈಗಾರಿಕಾ ಪ್ರದೇಶ

ಕೈಗಾರಿಕಾ ಪ್ರದೇಶ

  • Share this:
ವಾಯುಮಾಲಿನ್ಯ, ಜಲಮಾಲಿನ್ಯ, ಅಂತರ್ಜಲ ಮಾಲಿನ್ಯದ (Pollution) ಪರಿಣಾಮ ನಗರದ ಎಂಆರ್ ಪಿಎಲ್ ಸುತ್ತಮುತ್ತಲಿನ ಕಾಟಿಪಳ್ಳ, ಸುರತ್ಕಲ್, ಕುಳಾಯಿ  ಪ್ರದೇಶಗಳಲ್ಲಿ ಕ್ಯಾನ್ಸರ್ (Cancer)  ಪ್ರಮಾಣ ಜಾಸ್ತಿಯಾಗುತ್ತಿದೆ ಎಂದು ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯು ಕಳವಳ ವ್ಯಕ್ತಪಡಿಸಿದೆ. ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯು ಮಂಗಳೂರು (Mangalore) ನಗರದ ವಿವಿಧೆಡೆ ಸಂಚರಿಸಿ ವಾಣಿಜ್ಯ, ಕೈಗಾರಿಕೆ, ನಗರಾಭಿವೃದ್ಧಿ, ಪರಿಸರ ಮಾಲಿನ್ಯ ಮಂಡಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಅಗ್ನಿಶಾಮಕ ದಳ, ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಸಂಬಂಧಿಸಿದಂತೆ ಬಾಕಿ ಭರವಸೆಗಳ ಕುರಿತಂತೆ ಇಲಾಖಾಧಿಕಾರಿಗಳೊಂದಿಗೆ ಎರಡು ದಿನಗಳ ಕಾಲ ಸ್ಥಳ ಪರಿಶೀಲನೆ ನಡೆಸಿತ್ತು.

ಈ ಹಿನ್ನೆಲೆಯಲ್ಲಿ  ದ.ಕ. ಜಿಪಂನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ,  ಈ ಆತಂಕವನ್ನು ತಳಡಿಕೊಂಡಿದೆ. ಪ್ರಾಥಮಿಕ ಆರೋಗ್ಯ ಕೇಂದ್ರದಿಂದ ನೀಡಿರುವ ವರದಿಯಂತೆ ಈ ಪ್ರದೇಶಗಳಲ್ಲಿ ಹೆಚ್ಚಿನ ಜನರಿಗೆ ಶ್ವಾಸಕೋಶದ ತೊಂದರೆಗಳು ಅನೇಕರಿಗೆ ಚರ್ಮದ ಕಾಯಿಲೆ, ಮಕ್ಕಳಲ್ಲಿ ಡೈರಿಯಾ ಇನ್ನಿತರ ಕಾಯಿಲೆಗಳು ಕಂಡು ಬರುತ್ತಿದೆ ಎಂದು ಸಮಿತಿಯು ಆತಂಕ ವ್ಯಕ್ತಪಡಿಸಿದೆ.

ಕಡಲು ಸೇರುತ್ತಿರುವ ತ್ಯಾಜ್ಯ

ಈ ಬಗ್ಗೆ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯ ಅಧ್ಯಕ್ಷ ಬಿ.ಎಂ.ಫಾರೂಕ್ ಮಾತನಾಡಿ, ಎಂಆರ್ ಪಿಲ್, ಎಂಎಸ್ಇಝಡ್ ಸೇರಿದಂತೆ ಬೈಕಂಪಾಡಿ ಕೈಗಾರಿಕಾ ವಲಯದ ಎಲ್ಲಾ ತ್ಯಾಜ್ಯಗಳು ಕುಡುಂಬೂರು ನದಿಯನ್ನು ಸೇರುತ್ತಿದೆ‌. ಕಪ್ಪು ತ್ಯಾಜ್ಯ, ಎಣ್ಣೆ ಮಿಶ್ರಿತವಾಗಿರುವ ಈ ನದಿಯು ಇದೀಗ ಅತ್ಯಂತ ವಿಷಕಾರಿ ನದಿಯಾಗಿ ಪರಿವರ್ತನೆಯಾಗಿದೆ. ಈ ನದಿಯಲ್ಲಿದ್ದ ಇರ್ಪೆ ಹಾಗೂ ಕುರ್ಡಿ ಮೀನಿನ ತಳಿಯೇ ಸಂಪೂರ್ಣ ನಾಶವಾಗಿದೆ. ಅಲ್ಲದೆ ಈ ನದಿಯ ಮೀನುಗಳನ್ನು ಸೇವನೆ ಮಾಡುವ ಮನುಷ್ಯರ ಆರೋಗ್ಯದ ಮೇಲೆ ಭೀಕರ ಪರಿಣಾಮ ಬೀರುವುದು ಖಂಡಿತಾ. ಜೊತೆಗೆ ಈ ಕಲುಷಿತ ನೀರು ಗುರುಪುರ ನದಿಯನ್ನು ಸೇರುತ್ತಿದ್ದು, ಅಲ್ಲಿಂದ ಕಡಲ ಒಡಲನ್ನು ಈ ತ್ಯಾಜ್ಯ ಸೇರುತ್ತಿದೆ. ಇದಕ್ಕೆ ಕೈಗಾರಿಕಾ ವಲಯದವರು ಇಟಿಪಿ ಪ್ಲ್ಯಾನ್ ಮೂಲಕ ಪ್ರೊಪೊಸಲ್ ಮಾಡಿದ್ದಾರೆ. ಈ ಮೂಲಕ ಕುಡುಂಬೂರು ನದಿಯ ಶುಚಿತ್ವಕ್ಕಾಗಿ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಬಿ‌.ಎಂ.ಫಾರೂಕ್ ಹೇಳಿದರು.

ಅನೇಕ ಸಮಸ್ಯೆಗಳಿಗೆ ತುತ್ತಾಗುತ್ತಿರುವ ಜನರು 

ಎಂಆರ್ ಪಿಎಲ್ ನ ಪೆಟ್ಕೊ ಪ್ಲ್ಯಾಂಟ್ ನಿಂದ ಸಾರ್ವಜನಿಕರಿಗೆ ಸಮಸ್ಯೆಯಾಗುತ್ತಿದೆ‌ ಎಂದು ಬೇರೆಡೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಹಳೆಯ ಪ್ಲ್ಯಾಂಟ್ ಅನ್ನು ತೆಗೆದು ಅಲ್ಲಿ ಹಸಿರು ವಲಯ ಮಾಡಬೇಕಿತ್ತು. ಆದರೆ ಇನ್ನೂ ಈ ಕಾರ್ಯವಾಗಿಲ್ಲ. ಅದಕ್ಕಾಗಿ ಜಿಲ್ಲಾಧಿಕಾರಿಯವರ ಪ್ರತ್ಯೇಕ ಸಭೆ ಕರೆದು ಅದರ ವರದಿಯನ್ನು ನಾವು ಕೇಳಲಿದ್ದೇವೆ. ಅಲ್ಲದೆ ಎಂಆರ್ ಪಿಎಲ್ ವಲಯದಲ್ಲಿ ಮಳೆನಾಡು ಗಿಡ್ಡ, ಇನ್ನಿತರ ಹಸುಗಳ ಸಂತತಿಕೂಡಾ ನಾಶವಾಗುತ್ತಿದೆ‌. ಮಲ್ಲಿಗೆಗಳು ಕಪ್ಪಾಗೋದು, ಬಾವಿಯ ನೀರಿನಲ್ಲಿ ತೈಲಗಳು ಗೋಚರವಾಗುತ್ತಿದೆ. ಇದು ಎಂಆರ್ ಪಿಲ್ ತೈಲದ ಪರಿಣಾಮವೇ ಎಂದು ಪರಿಶೀಲನೆ ನಡೆಸಿದ್ದೇವೆ. ಆದರೆ ಎಂಆರ್ ಪಿಎಲ್ ಸಂಸ್ಥೆ ಇದನ್ನು ಒಪ್ಪುತ್ತಿಲ್ಲ. ಆದರೆ ಈ ಬಗ್ಗೆ ನಾವು ಸಂಪೂರ್ಣ ಪರಿಶೀಲನೆ ನಡೆಸುತ್ತೇವೆ ಎಂದು ಬಿ.ಎಂ.ಫಾರೂಕ್ ಹೇಳಿದರು.

ಇದನ್ನು ಓದಿ: DK Shivakumar​ ಹೇಳಿಕೆಗೆ ರಮ್ಯಾ ಅಚ್ಚರಿ; ಎಂಬಿ ಪಾಟೀಲ್ ಕಟ್ಟಾ ಕಾಂಗ್ರೆಸ್ಸಿಗ ಎಂದ ಮಾಜಿ ಸಂಸದೆ

ಪರಿಸರಕ್ಕೆ ಮಾರಕವಾದ ತ್ಯಾಜ್ಯ
ಮಂಗಳೂರು ನಗರ ಅತಿದೊಡ್ಡ ಕೈಗಾರಿಕಾ ವಲಯವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಫಲ್ಗುಣಿ ನದಿಯ ದಡದುದ್ದಕ್ಕೂ ಎಂಆರ್ ಪಿಎಲ್, ಎಂಸಿಎಫ್, ಎಂಇಝಡ್, ಎಸ್ಇಝಡ್, ಬಿಎಸ್ಎಫ್, ಕುದುರೆಮುಖ ಸೇರಿದಂತೆ ಹಲವಾರು ಕೈಗಾರಿಕೆಗಳು ತಲೆಯೆತ್ತಿವೆ. ಈ ಕೈಗಾರಿಕೆಗಳ‌ ಪರಿಸರ ಮಾರಕ ತ್ಯಾಜ್ಯವು ನೇರವಾಗಿ ಸುತ್ತಮುತ್ತಲಿನ ನದಿಯನ್ನು ಸೇರುತ್ತಿವೆ‌ ಇದರಿಂದ ಜಲಚರಗಳ ಮಾರಣಹೋಮವಾಗುತ್ತಿದೆ ಎಂದು ಮೊನ್ನೆ ಅಧ್ಯಯನ ಪ್ರವಾಸ ನಡೆಸಿರುವ ರಾಜ್ಯ ವಿಧಾನ ಪರಿಷತ್ತಿನ ಭರವಸೆಗಳ ಸಮಿತಿಯು ಆತಂಕ ವ್ಯಕ್ತಪಡಿಸಿತ್ತು.

ಹೆಚ್ಚುತ್ತಿರುವ ರೋಗಿಗಳ ಸಂಖ್ಯೆ

ಅಲ್ಲದೆ ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ವಲಯಗಳಲ್ಲಿ ವಾಸಿಸುವ, ಕೆಲಸ ಮಾಡುವ ಜನರಲ್ಲಿ ಶ್ವಾಸಕೋಶದ ಸಮಸ್ಯೆ, ದೀರ್ಘಕಾಲದ ಕೆಮ್ಮು, ಚರ್ಮವ್ಯಾಧಿಗಳು ಕಾಣಿಸಿಕೊಳ್ಳಲು ಆರಂಭವಾಗಿದೆ. ಮಾರಕ ಕ್ಯಾನ್ಸರ್ ರೋಗವೂ ಕಂಡು ಬರುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದೆ. ಮಂಗಳೂರು ನಗರದ ವಿವಿಧೆಡೆ ಸಂಚರಿಸಿರುವ ಎಂಎಲ್ ಸಿಗಳ ತಂಡ ಬಾಕಿ ಭರವಸೆಗಳ ವಿಸ್ತೃತ ಅಧ್ಯಯನ ನಡೆಸಿತ್ತು. ಈ ತಂಡ ನಗರದ ಕೈಗಾರಿಕಾ ವಲಯದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಉಪಕೇಂದ್ರಗಳ ವರದಿಯನ್ನು ತರಿಸಿ ಮಾಹಿತಿ ಪಡೆದಿತ್ತು. ಆಗ ಬಜ್ಪೆ, ಸುರತ್ಕಲ್, ಕುಳಾಯಿ, ಕಾಟಿಪಳ್ಳ ಭಾಗಗಳಲ್ಲಿ ವಾಸಿಸುವ ಜನರಲ್ಲಿ ಆರೋಗ್ಯ ಕೇಂದ್ರಗಳಿಗೆ ಬರುವ ರೋಗಿಗಳಲ್ಲಿ ದಿನವೊಂದಕ್ಕೆ 4-5 ಮಂದಿ ಇಂತಹ ಸಮಸ್ಯೆಗಳಿಂದ ಬಳಲುತ್ತಿದ್ದಾರೆ ಎಂದಿದೆ. ಇದು ಆ ಭಾಗದಲ್ಲಿ ವಾಸಿಸುವ ಜನರನ್ನು ಇನ್ನಷ್ಟೂ ಭೀತಿಗೆ ಒಳಗಾಗುವಂತೆ ಮಾಡಿದೆ.

ಇದನ್ನು ಓದಿ: Sharad Pawar ಮುಂದೆ MES ನಾಡದ್ರೋಹ ಘೋಷಣೆ; ಮತ್ತೆ ಗಡಿ ಕಿರಿಕ್

ಕೈಗಾರಿಕೆಗಳು ದುಷ್ಟರಿಣಾಮ ಕುರಿತು ಕಳವಳ

ಈ ಬಗ್ಗೆ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಡಾ.ಕಿಶೋರ್ ಕುಮಾರ್ ಎಂ. ಮಾತನಾಡಿ, ಹೀಗೆ ಕಾಣಿಸಿಕೊಳ್ಳುತ್ತಿರುವ ಕಾಯಿಲೆಗಳು ಕೈಗಾರಿಕೆಯ ದುಷ್ಪರಿಣಾಮಗಳಿಂದಲೇ ಆಗಿದೆ ಎಂದು ಮೇಲ್ನೋಟಕ್ಕೆ ಹೇಳುವುದು ಕಷ್ಟ. ಇದಕ್ಕೆ ಕೈಗಾರಿಕಾ ವಲಯ ಹಾಗೂ ಇತರ ಪ್ರದೇಶಗಳ ನಡುವೆ ತೌಲನಿಕ ಅಧ್ಯಯನ ಮಾಡಬೇಕಾಗುತ್ತದೆ. ಅಲ್ಲದೆ ಆರೋಗ್ಯ ಕೇಂದ್ರಗಳ ಮಾಹಿತಿಯನ್ನು ಇರಿಸಿಕೊಂಡು ರೋಗ ಕಾಣಿಸಿಕೊಂಡಿರುವ ನಾಗರಿಕರು ಈ ಪ್ರದೇಶದಲ್ಲಿ ಎಷ್ಟು ಕಾಲದಿಂದ ವಾಸವಾಗಿದ್ದಾರೆ. ಪರಿಸರ ಮಾಲಿನ್ಯದಿಂದಲೇ ಈ ಕಾಯಿಲೆಗಳು ಕಾಣಿಸಿಕೊಂಡಿವೆಯೇ ಎಂಬ ಕೂಲಂಕಷ ಅವಲೋಕನ ಮಾಡಬೇಕಾಗುತ್ತದೆ.

ಈ ಬಗ್ಗೆ ವರದಿ ಮಾಡಲು ಹಿರಿಯ ಅಧಿಕಾರಿಗಳಿಂದ ನಮಗೆ ಸೂಚನೆ ಬಂದಿದೆ. ಆದ್ದರಿಂದ ಇನ್ನಷ್ಟು ಜನರ ಆರೋಗ್ಯ ಸಮಸ್ಯೆಗಳ ಕುರಿತು ವಿಶ್ಲೇಷಣೆ ನಡೆಸಿ ಅಧ್ಯಯನ ಮಾಡಿ ವರದಿ ಸಲ್ಲಿಸಲು ಜಿಲ್ಲಾಧಿಕಾರಿಯವರು ಸೂಚನೆ ನೀಡಿದ್ದಾರೆ ಎಂದು ಡಾ.ಕಿಶೋರ್ ಕುಮಾರ್ ಎಂ. ತಿಳಿಸಿದರು.
Published by:Seema R
First published: