• Home
  • »
  • News
  • »
  • state
  • »
  • Marriage of the Dead: 30 ವರ್ಷದ ಹಿಂದೆ ಸಾವನ್ನಪ್ಪಿದ್ದ ವಧು-ವರ ಮೊನ್ನೆ ರಾತ್ರಿ ಮದುವೆ ಆದ್ರು!

Marriage of the Dead: 30 ವರ್ಷದ ಹಿಂದೆ ಸಾವನ್ನಪ್ಪಿದ್ದ ವಧು-ವರ ಮೊನ್ನೆ ರಾತ್ರಿ ಮದುವೆ ಆದ್ರು!

ಮೃತರ ಮದುವೆ

ಮೃತರ ಮದುವೆ

ಇಲ್ಲೊಂದು ಜೋಡಿ ಸಾವನ್ನಪ್ಪಿ 30 ವರ್ಷ ಆದ ಮೇಲೆ ಮದುವೆಯಾಗಿದ್ದಾರೆ! ಅರೇ, ಇದೇನಿದು ಇವರು ಈ ರೀತಿ ಹೇಳ್ತಾ ಇದ್ದಾರೆ ಎಂದು ನಿಮಗೂ ಅನ್ನಿಸಬಹುದು. 30 ವರ್ಷದ ಹಿಂದೆ ನಿಧನರಾದವರು ಮದುವೆ ಆಗಲು ಹೇಗೆ ಸಾಧ್ಯ? ಎಂದು ಪ್ರಶ್ನೆ ಮೂಡಿರಬಹುದು. ಆದರೆ ಇದು ಸತ್ಯ...

  • Share this:

    ಮದುವೆ (Marriage) ಎನ್ನುವುದು ಎಲ್ಲರಿಗೂ ತಮ್ಮ ಜೀವನದ ಪ್ರಮುಖ ಘಟವಾಗಿರುತ್ತದೆ. ತಮಗೆ ಇಷ್ಟ ಆದವರ ಜೊತೆ ಅಥವಾ ಮನೆಯವರು ನಿಶ್ಚಿಯಿಸಿದವರ ಜೊತೆ ಮದುವೆ ಆಗುತ್ತಾರೆ. ಅದು ಬದುಕಿದ್ದಾಗ. ಆದ್ರೆ ಇಲ್ಲೊಂದು ಜೋಡಿ (Couple) ಸಾವನ್ನಪ್ಪಿ (Died) 30 ವರ್ಷ (30 years) ಆದ ಮೇಲೆ ಮದುವೆಯಾಗಿದೆ! ಅರೇ, ಇದೇನಿದು ಇವರು ಈ ರೀತಿ ಹೇಳ್ತಾ ಇದ್ದಾರೆ ಎಂದು ನಿಮಗೂ ಅನ್ನಿಸಬಹುದು. 30 ವರ್ಷದ ಹಿಂದೆ ನಿಧನರಾದವರು ಮದುವೆ ಆಗಲು ಹೇಗೆ ಸಾಧ್ಯ। ಎಂದು ನಿಮ್ಮಲ್ಲೂ ಹಲವಾರು ಪ್ರಶ್ನೆಗಳು ಮೂಡಿರಬಹುದು. ಕೂತಹಲವೂ ಬಂದಿರಬಹುದು. ಆದ್ರೆ ಇದು ಸತ್ಯ. ಇದು ದಕ್ಷಿಣ ಕನ್ನಡ ಸಂಪ್ರದಾಯದ ( Dakshin Kannada tradition) ಭಾಗವಾಗಿದೆ. ಇದು ತಮಾಷೆಯಲ್ಲ. ಇದೊಂದು ಸಂಪ್ರದಾಯ, ಅಲ್ಲಿನ ಜನರ ಪದ್ದತಿ.


    ದಕ್ಷಿಣ ಕನ್ನಡ ಸಂಪ್ರದಾಯದ ಭಾಗ
    ವಧು ಮತ್ತು ವರರು 30 ವರ್ಷಗಳ ಹಿಂದೆ ನಿಧನರಾಗಿದ್ದಾರೆ. ಮೊನ್ನೆ ರಾತ್ರಿ ಮಂಗಳೂರಿನಲ್ಲಿ ಇವರಿಬ್ಬರ ಮದುವೆ ನಡೆದಿದೆ. ಮೃತರ ಮದುವೆ ಸಂದರ್ಭದಲ್ಲಿ, ಮೃತ ವಧು ಮತ್ತು ವರರ ಕುಟುಂಬದವರು ಭಾಗವಹಿಸಿರುತ್ತಾರೆ. ನಿಶ್ಚಿತಾರ್ಥಕ್ಕಾಗಿ ಎರಡು ಕುಟುಂಬಗಳು ಪರಸ್ಪರರ ಒಪ್ಪಿಗೆ ಪಡೆದು ಮದುವೆ ಮಾಡಲಾಗುತ್ತೆ. ಇದು ದಕ್ಷಿಣ ಕನ್ನಡ ಸಂಪ್ರದಾಯದ ಭಾಗ. ಈ ಮದುವೆಗೆ ಸಾಕ್ಷಿಯಾಗಲು ಯಾವುದೇ ಮಕ್ಕಳಿಗೆ ಅನುಮತಿ ಇರುವುದಿಲ್ಲ.



    ಸಂಭ್ರಮದ ಮೆರವಣಿಗೆ
    ಇದು ಯಾವುದೇ ಸಂಭ್ರಮಾಚರಣೆಗೂ ಕಡಿಮೆ ಇರುವುದಿಲ್ಲ. ನೀವು ಆಶ್ಚರ್ಯ ಪಡುವಂತೆ, ಇದು ವಿಷಾದಕರ ಸಂಗತಿಯಲ್ಲ. ಮದುವೆ ಮೆರವಣಿಗೆ ಮಾಡಲಾಗುತ್ತೆ. ಮತ್ತು ಅಂತಿಮವಾಗಿ ಗಂಟುಗಳನ್ನು ಕಟ್ಟುವುದು ಇರುತ್ತದೆ. ಈ ಮದುವೆಯನ್ನು ಸರಿಪಡಿಸುವುದು ಸುಲಭ ಎಂದು ನೀವು ಯೋಚಿಸುತ್ತಿದ್ದರೆ, ಸುಲಭವಲ್ಲ.


    ವಧುವನ್ನು ತಿರಸ್ಕರಿಸಿದ್ದ ವರನ ಕುಟುಂಬ
    ಈ ರೀತಿ ಮೃತರ ಮದುವೆ ಮಾಡುವುದು ಸುಲಭವಲ್ಲ. 2 ಕುಟುಂಬಗಳ ಅನುಮತಿ ಇರಬೇಕು. ಆದ್ರೆ ಈ ಮದುವೆಗೆ ವರನ ಕುಟುಂಬದವರು ಮೊದಲು ಮದುವೆ ತಿರಸ್ಕರಿಸಿದ್ರಂತೆ. ವಧು, ವರನಿಗಿಂತ ದೊಡ್ಡವಳು ಎಂಬ ಕಾರಣಕ್ಕೆ. ನಂತರ ಹೇಗೋ ಒಪ್ಪಿಸಿ ಈ ಮದುವೆ ನಡೆದಿದೆ.


    ಇದನ್ನೂ ಓದಿ: Relationship Tips: ಹಸೆಮಣೆ ಏರುವ ಮೊದಲು ವಧು ಈ ವಿಷಯ ತಿಳಿದರೆ ದಾಂಪತ್ಯ ಮತ್ತಷ್ಟು ಸುಂದರ


    ಭರ್ಜರಿ ಊಟ ಹಾಕಿಸಿದ ಕುಟುಂಬಸ್ಥರು
    30 ವರ್ಷದ ಹಿಂದೆ ಸಾವನ್ನಪಿದವರನ್ನು ಮದುವೆ ಮಾಡಿಸಿದ ಎರಡು ಕುಟುಂಬದವರು, ಮದುವೆಗೆ ಬಂದವರಿಗೆ ಭರ್ಜರಿ ಊಟ ಹಾಕಿಸಿದ್ದಾರೆ. ಬಗೆ ಬಗೆಯ ಭೋಜನಗಳನ್ನು ಮಾಡಿಸಿದ್ದರು. ಬಂದವರು ಸಂತೃಪ್ತಿಯಿಂದ ಊಟ ಮಾಡಿ ಹೋಗಿದ್ದಾರೆ.


    ಮದುವೆ ಆಗದೇ ವಯಸ್ಕರು ಸತ್ತರೆ ಈ ರೀತಿ ಮಾಡ್ತಾರೆ
    ಈ ರೀತಿ ಮಾಡಲು ಸಹ ಒಂದು ಕಾರಣ ಇದೆ. ಯಾರಾದ್ರೂ ಮದುವೆ ಆಗದೇ ಸತ್ತು ಹೋಗಿದ್ರೆ, ಅಂದ್ರೆ ಮದುವೆ ಮಾಡುವ ವಯಸ್ಸಿನಲ್ಲಿ ತೀರಿ ಹೋಗಿದ್ರೆ ಈ ರೀತಿ ಸಹ ಮಾಡ್ತಾರಂತೆ. ಯಾಕಂದ್ರೆ ಕುಟುಂಬದ ಬೇರೆ ಅವರ ಮದುವೆಗೆ ತೊಂದರೆ ಆಗ ಬಾರದು ಎಂದು ಈ ರೀತಿ ಮಾಡುತ್ತಾರಂತೆ.


    ವಿಡಿಯೋ ಶೇರ್ ಮಾಡಿರುವ ಅರುಣ್ ಎಂಬ ವ್ಯಕ್ತಿ
    ಅರುಣ್ ಎಂಬುವವರು ಈ ಮದುವೆಯಲ್ಲಿ ಪಾಲ್ಗೊಂಡಿದ್ದರು. ಇದೊಂದು ಗಂಭೀರ ಸಂಪ್ರದಾಯ ಎಂದು ಕೆಲವು ವಿಡಿಯೋಗಳನ್ನು ಟ್ವಿಟರ್‍ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಜುಲೈ 28 ರಂದು ಈ ಮದುವೆ ಆಗಿದೆ. ಇದೊಂದು ವಿಶಿಷ್ಟ ಮದುವೆ ಎಂದು ವಿಡಿಯೋ ಹಾಕಿದ್ದೇನೆ. ಅರುಣ್ ಅವರು ಮದುವೆಯ ಹಲವಾರು ವೀಡಿಯೊಗಳನ್ನು ಹಂಚಿಕೊಂಡಿದ್ದಾರೆ. ಅಲ್ಲಿ ನಡೆದ ಆಚರಣೆಗಳನ್ನು ಅರುಣ್ ವಿವರಿಸಿದ್ದಾರೆ.


    ಇದನ್ನೂ ಓದಿ: Special Marriage: ಮಾತಿಲ್ಲ, ಕಥೆಯಿಲ್ಲ ಬರೀ ಪ್ರೀತಿ! ಮಾತುಬಾರದವರ ನಡುವೆ ವಿಶೇಷ ಮದುವೆ


    ಇದು ಆಶ್ಚರ್ಯ ಎನಿಸಿದ್ರೂ, ಅದೊಂದು ಸಂಪ್ರದಾಯ. ನಮ್ಮ ರಾಜ್ಯದಲ್ಲಿ ಸಂಪ್ರದಾಯಗಳಿಗೆ ತುಂಬ ಬೆಲೆ ಕೊಡಲಾಗುತ್ತೆ. ಅದಕ್ಕೆ ಎಲ್ಲ ಆಚರಣೆಗಳನ್ನು ಮಾಡಲಾಗುತ್ತದೆ. ಎಲ್ಲ ಸಂಪ್ರದಾಯಕ್ಕೂ ಅದರದ್ದೇ ಆದ ಮಹತ್ವ ಇರುತ್ತದೆ.

    Published by:Savitha Savitha
    First published: