ಆರೋಪಿ ಆದಿತ್ಯರಾವ್​ನನ್ನು​ ಮಂಗಳೂರಿಗೆ ಕರೆದೊಯ್ಯಲು ಬೆಂಗಳೂರು ಕೋರ್ಟ್​​ ಅನುಮತಿ

ನಾಳೆ 5.30ರೊಳಗೆ ಮಂಗಳೂರು 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು ಎಂದು ಒಂದನೇ ಎಸಿಎಂಎಂ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

news18-kannada
Updated:January 22, 2020, 4:37 PM IST
ಆರೋಪಿ ಆದಿತ್ಯರಾವ್​ನನ್ನು​ ಮಂಗಳೂರಿಗೆ ಕರೆದೊಯ್ಯಲು ಬೆಂಗಳೂರು ಕೋರ್ಟ್​​ ಅನುಮತಿ
ಆದಿತ್ಯ ರಾವ್
  • Share this:
ಬೆಂಗಳೂರು(ಜ.22): ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್​ ಇರಿಸಿದ್ದ ಆರೋಪಿ ಆದಿತ್ಯ ರಾವ್​​ನನ್ನು ಪೊಲೀಸರು ಇಂದು ಒಂದನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಟ್ರಾನ್ಸಿಟ್​ ವಾರೆಂಟ್​ ಮೂಲಕ ಆರೋಪಿಯನ್ನು ಮಂಗಳೂರಿಗೆ ಕರೆದೊಯ್ಯಲು ನ್ಯಾಯಾಲಯವು ಅನುಮತಿ ನೀಡಿತು. ಸದ್ಯ ಮಂಗಳೂರು ಪೊಲೀಸರು ಆರೋಪಿ ಆದಿತ್ಯರಾವ್​ನನ್ನು ವಶಕ್ಕೆ ಪಡೆದಿದ್ಧಾರೆ.

ನಾಳೆ 5.30ರೊಳಗೆ ಮಂಗಳೂರು 6ನೇ ಎಸಿಎಂಎಂ ನ್ಯಾಯಾಲಯದ ಮುಂದೆ ಆರೋಪಿಯನ್ನು ಹಾಜರುಪಡಿಸಬೇಕು ಎಂದು ಒಂದನೇ ಎಸಿಎಂಎಂ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ.

ಸದ್ಯ ಹಸ್ತಾಂತರ ಪ್ರಕ್ರಿಯೆ ಮುಕ್ತಾಯವಾಗಿದ್ದು, ಆರೋಪಿ ಮಂಗಳೂರು ಪೊಲೀಸರ ವಶದಲ್ಲಿದ್ದಾನೆ. ಸಂಜೆ 7.15ಕ್ಕೆ ಆರೋಪಿಯನ್ನು ವಿಮಾನದ ಮೂಲಕ ಬೆಂಗಳೂರಿನಿಂದ ಮಂಗಳೂರಿಗೆ ಕರೆದೊಯ್ಯಲಿದ್ದಾರೆ. ಮಂಗಳೂರಿನ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ನಾಳೆ ಆರೋಪಿಯನ್ನು ಮಂಗಳೂರು ಕೋರ್ಟ್​ಗೆ ಹಾಜರು ಪಡಿಸುವ ಸಾಧ್ಯತೆ ಇದೆ.

Aditya Rao: ರಹಸ್ಯ ಸ್ಥಳದಲ್ಲಿ ಮಂಗಳೂರು ಬಾಂಬರ್​ ಆದಿತ್ಯ ರಾವ್​ ವಿಚಾರಣೆ

ಇಂದು ಬೆಳಗ್ಗೆ ಆರೋಪಿ ಆದಿತ್ಯರಾವ್​ ಬೆಂಗಳೂರಿನ ಡಿಜಿ ಕಚೇರಿಗೆ ಬಂದು ತಾನೇ ಬಾಂಬ್​ ಇಟ್ಟಿದ್ಧಾಗಿ ಒಪ್ಪಿಕೊಂಡು ಶರಣಾಗಿದ್ದ. ಬಳಿಕ ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಇನ್ಸ್​ಪೆಕ್ಟರ್ ಹರಿವರ್ಧನ್, ಆದಿತ್ಯರಾವ್ ಈತನನ್ನು ರಹಸ್ಯ ಸ್ಥಳಕ್ಕೆ ಕರೆದೊಯ್ದು ವಿಚಾರಣೆ ನಡೆಸಿದ್ದರು. ಬಂಧಿತ ಆರೋಪಿಯನ್ನು ಮಂಗಳೂರು ಪೊಲೀಸರು ಹಲಸೂರು ಗೇಟ್​ ಠಾಣೆಯಲ್ಲೇ ವಿಚಾರಣೆ ನಡೆಸಿದ್ದರು.

ಸೋಮವಾರ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು.  ಬೆಳಗ್ಗೆ 7 ರಿಂದ 8 ಗಂಟೆ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಆಟೋ ಮೂಲಕ ವ್ಯಕ್ತಿಯೋರ್ವ ಬಂದಿದ್ದ . ಈ ವೇಳೆ ಬಾಂಬ್ ಇದ್ದ ಲ್ಯಾಪ್​ಟಾಪ್​ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದ. ಆದರೆ, ಈ ಬ್ಯಾಗ್​ನಲ್ಲಿ ಸಜೀವ ಬಾಂಬ್ ಇರುವುದು ನಂತರ ಪತ್ತೆಯಾಗಿದೆ. ಹೀಗಾಗಿ ಕೆಲ ಕಾಲ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ನಂತರ ಈ ಬಾಂಬ್​ಅನ್ನು ಖಾಲಿ ಪ್ರದೇಶದಲ್ಲಿ ನಿಷ್ಕ್ರಿಯಗೊಳಿಸಿಸಲಾಗಿತ್ತು.
 
First published:January 22, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ