HOME » NEWS » State » MANGALORE BOMB CASE ACCUSED ADITYA RAO TO PARADE TODAY GNR

ಮಂಗಳೂರು ಬಾಂಬ್​ ಕೇಸ್​​: ಇಂದು ಸಾಕ್ಷಿಗಳ ಮುಂದೆ ಶಂಕಿತ ಆರೋಪಿ ಆದಿತ್ಯರಾವ್‌ ಪರೇಡ್

ಈ ಹಿಂದೆಯೇ ಗುರುತು ಪತ್ತೆಗಾಗಿ ಪರೇಡ್ ನಡೆಸಲು ಕ್ರಮ ಕೈಗೊಳ್ಳುವಂತೆ ಬೆಳ್ಳಿಯಪ್ಪ ಮಂಗಳೂರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು. ಅದರಂತೆಯೇ ಈಗ ಆದಿತ್ಯರಾವ್​​ನ ಪರೇಡ್​ ನಡೆಸಲಾಗವುದು ಎನ್ನಲಾಗುತ್ತಿದೆ.

news18-kannada
Updated:March 10, 2020, 7:30 AM IST
ಮಂಗಳೂರು ಬಾಂಬ್​ ಕೇಸ್​​: ಇಂದು ಸಾಕ್ಷಿಗಳ ಮುಂದೆ ಶಂಕಿತ ಆರೋಪಿ ಆದಿತ್ಯರಾವ್‌ ಪರೇಡ್
ಆದಿತ್ಯ ರಾವ್​
  • Share this:
ಬೆಂಗಳೂರು(ಮಾ.10): ಮಂಗಳೂರು ವಿಮಾನ ನಿಲ್ದಾಣ ಬಾಂಬ್​​ ಪತ್ತೆ ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಶಂಕಿತ ಆರೋಪಿ ಆದಿತ್ಯರಾವ್ ಗುರುತು ದೃಢೀಕರಣಕ್ಕಾಗಿ ಸಾಕ್ಷಿಗಳ ಮುಂದೆ ಪರೇಡ್ ನಡೆಸಲಿದ್ದಾರೆ. ಇಂದು ಬೆಳಗ್ಗೆ 10:30ಕ್ಕೆ ಆರೋಪಿ ಆದಿತ್ಯರಾವ್​​ನ ಪರೇಡ್​​ ನಡೆಯಲಿದೆ ಎಂದು ಮಂಗಳೂರು ಉತ್ತರ ಉಪವಿಭಾಗದ ಎಸಿಪಿ ಕೆ.ಯು. ಬೆಳ್ಳಿಯಪ್ಪ ತಿಳಿಸಿದ್ದಾರೆ.

ಇನ್ನು, ಪ್ರಕರಣದ ತನಿಖೆ ನಡೆಸುತ್ತಿರುವ ಎಸಿಪಿ ಬೆಳ್ಳಿಯಪ್ಪ ನೇತೃತ್ವದ ತಂಡ ಸುಮಾರು 50ಕ್ಕೂ ಅಧಿಕ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಂಡಿದೆ. ಇವರ ಮುಂದೆ ಆದಿತ್ಯತರಾವ್​​ ಪರೇಡ್​​ ನಡೆಯಲಿದೆ. ಈ ಹಿಂದೆಯೇ ಗುರುತು ಪತ್ತೆಗಾಗಿ ಪರೇಡ್ ನಡೆಸಲು ಕ್ರಮ ಕೈಗೊಳ್ಳುವಂತೆ ಬೆಳ್ಳಿಯಪ್ಪ ಮಂಗಳೂರು ತಹಶೀಲ್ದಾರ್‌ಗೆ ಪತ್ರ ಬರೆದಿದ್ದರು. ಅದರಂತೆಯೇ ಈಗ ಆದಿತ್ಯರಾವ್​​ನ ಪರೇಡ್​ ನಡೆಸಲಾಗವುದು ಎನ್ನಲಾಗುತ್ತಿದೆ.​

ಇತ್ತೀಚೆಗೆ ಮಂಗಳೂರು(ಜ.23) ನ್ಯಾಯಲಯವೂ ಆರೋಪಿ ಆದಿತ್ಯರಾವ್​​ನನ್ನು 10 ದಿನಗಳ ಕಾಲ ಪೊಲೀಸರ ವಶಕ್ಕೆ ಒಪ್ಪಿಸಿತ್ತು. ಬೆಂಗಳೂರಿನಿಂದ ಮಂಗಳೂರಿಗೆ ಕರೆತಂದ ಪೊಲೀಸರು ಆದಿತ್ಯರಾವ್​​ನನ್ನು ಇಲ್ಲಿನ ಪ್ರಥಮ ದರ್ಜೆ 6ನೇ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಈ ವೇಳೆ 10 ದಿನಗಳ ಪೊಲೀಸರ ವಶಕ್ಕೆ ಒಪ್ಪಿಸಿ ನ್ಯಾಯಾಧೀಶ ಕೆ.ಎನ್. ಕಿಶೋರ್ ಕುಮಾರ್​ ಆದೇಶ ಹೊರಡಿಸಿದ್ದರು.

ಇದನ್ನೂ ಓದಿ: ಕರ್ನಾಟಕಕ್ಕೆ ಕೊರೋನಾ ಪ್ರವೇಶ; ಒಬ್ಬ ವ್ಯಕ್ತಿಗೆ ಸೋಂಕು; ಐದನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ರಜೆ ಘೋಷಣೆ

ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.

ಉಡುಪಿ ಜಿಲ್ಲೆಯ ಮಣಿಪಾಲದವನಾದ ಆದಿತ್ಯ ರಾವ್ 2018ರಲ್ಲಿ ಬೆಂಗಳೂರಿನಲ್ಲಿ ಬಂಧಿತನಾಗಿದ್ದ. ಬೆಂಗಳೂರು ವಿಮಾನ ನಿಲ್ದಾಣಕ್ಕೂ ಹುಸಿಬಾಂಬ್ ಕರೆ ಮಾಡಿದ್ದ ಆದಿತ್ಯ ರಾವ್​ನನ್ನು ಪೊಲೀಸರು ಬಂಧಿಸಿದ್ದರು. ಆತನಿಗೆ 6 ತಿಂಗಳು ಜೈಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಮಂಗಳೂರಲ್ಲಿ ಕೃತ್ಯ ನಡೆದ ದಿನವೂ ಮತ್ತೆ ಮಂಗಳೂರು ಏರ್​ಪೋರ್ಟ್​ಗೆ ಕರೆ ಮಾಡಿ ಬಾಂಬ್ ಇಟ್ಟಿರುವ ಬೆದರಿಕೆಯೊಡ್ಡಿದ್ದ. ನನ್ನನ್ನು ಜೈಲುಪಾಲು ಮಾಡಿದ್ದಕ್ಕೆ ಪೊಲೀಸರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿದ್ದೇನೆ ಎಂದಿದ್ದ ಆದಿತ್ಯ ರಾವ್ ಮಂಗಳೂರು ವಿಮಾನ ನಿಲ್ದಾಣದಲ್ಲಿ 3 ಕಡೆ ಬಾಂಬ್ ಇಟ್ಟಿರುವುದಾಗಿ ತಿಳಿಸಿದ್ದ.
Youtube Video
First published: March 10, 2020, 7:30 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories