HOME » NEWS » State » MANGALORE BOMB ACCUSED ADITHYA RAO BROTHER AKSHAT RAO REVEALED INTERESTING DETAILS SCT

ಅಣ್ಣನ ಬಗ್ಗೆ ನಮಗೂ ಭಯವಿದೆ; ಮಂಗಳೂರು ಬಾಂಬರ್ ಆದಿತ್ಯ ರಾವ್ ತಮ್ಮ ಅಕ್ಷತ್ ರಾವ್ ಹೇಳಿದ್ದೇನು?

ಬೆಂಗಳೂರಿನ ಪೊಲೀಸರ ಮುಂದೆ ಶರಣಾಗಿರುವ ಆರೋಪಿ ಆದಿತ್ಯ ರಾವ್​ನ ಅಪ್ಪ ಕೃಷ್ಣಮೂರ್ತಿ ನಿವೃತ್ತ ಬ್ಯಾಂಕ್ ಉದ್ಯೋಗಿ. ಉಡುಪಿಯಿಂದ ಮಂಗಳೂರಿಗೆ ಶಿಫ್ಟ್​ ಆಗಿರುವ ಅವರು ತಮ್ಮ 2ನೇ ಮಗನೊಂದಿಗೆ ಮಂಗಳೂರಿನ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದಾರೆ.

news18-kannada
Updated:January 22, 2020, 1:22 PM IST
ಅಣ್ಣನ ಬಗ್ಗೆ ನಮಗೂ ಭಯವಿದೆ; ಮಂಗಳೂರು ಬಾಂಬರ್ ಆದಿತ್ಯ ರಾವ್ ತಮ್ಮ ಅಕ್ಷತ್ ರಾವ್ ಹೇಳಿದ್ದೇನು?
ಆದಿತ್ಯ ರಾವ್
  • Share this:
ಮಂಗಳೂರು (ಜ. 22): 'ನಮ್ಮಣ್ಣ ಈಗ ನಮ್ಮ ಜೊತೆಗಿಲ್ಲ. ಆತ ಈ ಹಿಂದೆ ಬೆದರಿಕೆ ಕರೆ ಮಾಡಿದಾಗ ನಾವು ಬುದ್ಧಿವಾದ ಹೇಳಿದ್ದೆವು. ಆತನ ಬಗ್ಗೆ ನಮಗೆ ಯಾವ ಮಾಹಿತಿಯೂ ಇಲ್ಲ. ಅವನ ಕುರಿತು ನಮಗೂ ಭಯವಿದೆ' ಎಂದು ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಇಟ್ಟಿದ್ದ ಆರೋಪಿ ಆದಿತ್ಯ ರಾವ್​ನ ತಮ್ಮ ಅಕ್ಷತ್ ರಾವ್ ಹೇಳಿದ್ದಾರೆ.

ಆದಿತ್ಯ ರಾವ್​ನ ನಮ್ಮ ಸಂಪರ್ಕದಲ್ಲಿಲ್ಲ. ಆತ ಹಿಂದೊಮ್ಮೆ ಹುಸಿಬಾಂಬ್ ಬೆದರಿಕೆ ಕರೆ ಮಾಡಿದ್ದಾಗ ನಾವೇ ಬುದ್ಧಿ ಹೇಳಿದ್ದೆವು. ಆದಿತ್ಯನನ್ನು ಮನೆಯಿಂದಲೇ ಹೊರಗೆ ಹಾಕಿದ್ದೇವೆ. ನಮ್ಮ ತಾಯಿ ತೀರಿಕೊಂಡಾಗಲೂ ಆತ ಬಂದಿಲ್ಲ. ಆಗ ಆತ ಚಿಕ್ಕಬಳ್ಳಾಪುರದ ಜೈಲಿನಲ್ಲಿದ್ದ. ನಮ್ಮಷ್ಟಕ್ಕೆ ನಾವು ಕೆಲಸ ಮಾಡಿ ದುಡಿಯುತ್ತಿದ್ದೇವೆ. ಆತನಿಗೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಅಕ್ಷತ್ ರಾವ್ ಹೇಳಿದ್ದಾರೆ.

ಆದಿತ್ಯ ಚಿಕ್ಕಂದಿನಲ್ಲಿ ಸರಿಯಾಗೇ ಇದ್ದ. ಹಾಸ್ಟೆಲ್​ನಲ್ಲಿದ್ದುಕೊಂಡು ಓದುತ್ತಿದ್ದ ಆದಿತ್ಯ ಇಂಜಿನಿಯರಿಂಗ್ ಮುಗಿಸಿ, ಎಂಬಿಎ ಮಾಡಿದ್ದ. ಅವನು ಯಾಕೆ ಈ ರೀತಿ ಮಾಡಿದ್ದಾನೆಂದು ತಿಳಿಯುವ ಕುತೂಹಲ ಕೂಡ ನಮಗಿಲ್ಲ. ಈ ದುಷ್ಕೃತ್ಯದಲ್ಲಿ ನಾವು ಅವನಿಗೆ ಯಾವ ರೀತಿಯಲ್ಲೂ ಸಹಾಯ ಮಾಡಿಲ್ಲ. ಆತನ ಬಗ್ಗೆ ವಿಚಾರಿಸಿದ ಪೊಲೀಸರಿಗೆ ಎಲ್ಲ ರೀತಿಯ ಸಹಕಾರ ನೀಡಿದ್ದೇವೆ. ಆತ ಜಾಮೀನು ತೆಗೆದುಕೊಳ್ಳುವಾಗಲೂ ನಾವು ನೆರವಾಗಿರಲಿಲ್ಲ. ಆತ ಮನೆ ಬಿಟ್ಟು 3 ವರ್ಷ ಆಯಿತು. ನೀನು ಮನೆಗೆ ಬರೋದು ಬೇಡ ಅಂತ ನಮ್ಮಪ್ಪ ಹೇಳಿ ಕಳುಹಿಸಿದ್ದರು ಎಂಬ ಮಾಹಿತಿಯನ್ನು ಆರೋಪಿಯ ತಮ್ಮ ನೀಡಿದ್ದಾರೆ.

ಇದನ್ನೂ ಓದಿ: ಯಾರು ಈ ಆದಿತ್ಯ ರಾವ್?; ಮಂಗಳೂರು ಬಾಂಬರ್ ಬಗ್ಗೆ ಇಲ್ಲಿದೆ ಮಾಹಿತಿ...

ಇಂದು ಬೆಳಗ್ಗೆ ಬೆಂಗಳೂರಿನ ಪೊಲೀಸರ ಮುಂದೆ ಶರಣಾಗಿರುವ ಆರೋಪಿ ಆದಿತ್ಯ ರಾವ್ ಅಪ್ಪ ಕೃಷ್ಣಮೂರ್ತಿ ನಿವೃತ್ತ ಬ್ಯಾಂಕ್ ಉದ್ಯೋಗಿ. ಮಗನ ನಡವಳಿಕೆಗೆ ಬೇಸತ್ತು ಉಡುಪಿಯಿಂದ ಮಂಗಳೂರಿಗೆ ಶಿಫ್ಟ್​ ಆಗಿರುವ ಅವರು ತಮ್ಮ 2ನೇ ಮಗನೊಂದಿಗೆ ಮಂಗಳೂರಿನ ಚಿಲಿಂಬಿಯಲ್ಲಿರುವ ಅಪಾರ್ಟ್​ಮೆಂಟ್​ನಲ್ಲಿ ವಾಸವಾಗಿದ್ದಾರೆ.

ಏನಿದು ಘಟನೆ?:

ಸೋಮವಾರ ಮಂಗಳೂರು ಏರ್​ಪೋರ್ಟ್​ನಲ್ಲಿ ಸಜೀವ ಬಾಂಬ್ ಇರುವ ಬ್ಯಾಗ್ ಪತ್ತೆಯಾಗಿತ್ತು. ಈ ಕಾರಣ ವಿಮಾನಗಳ ಹಾರಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಗಿತ್ತು. ಏರ್​​ಪೋರ್ಟ್​ನಲ್ಲಿದ್ದ ಪ್ರಯಾಣಿಕರನ್ನು ಸುರಕ್ಷಿತ ಸ್ಥಳಕ್ಕೆ ರವಾನಿಸಲಾಗಿತ್ತು. ಈ ಬಗ್ಗೆ ಸಿಸಿಟಿವಿ ಪರಿಶೀಲಿಸಿದಾಗ ಆಟೋದಲ್ಲಿ ಬಂದಿದ್ದ ವ್ಯಕ್ತಿಯೋರ್ವ ಆ ಬ್ಯಾಗ್ ಅನ್ನು ವಿಮಾನ ನಿಲ್ದಾಣದಲ್ಲೇ ಬಿಟ್ಟು ಹೋಗಿದ್ದು ಕಂಡು ಬಂದಿತ್ತು. ನಂತರ ಬಾಂಬ್ ನಿಷ್ಕ್ರಿಯ ದಳದವರು ಆ ಬಾಂಬನ್ನು ಕೆಂಜಾರು ಮೈದಾನಕ್ಕೆ ತೆಗೆದುಕೊಂಡು ಹೋಗಿ, ಸ್ಫೋಟಿಸಲಾಗಿತ್ತು. ಇದರಿಂದಾಗಿ ಭಾರೀ ಅಪಾಯವೊಂದು ತಪ್ಪಿತ್ತು.ಇದನ್ನೂ ಓದಿ: ಆರೋಪಿ ಆದಿತ್ಯ ರಾವ್ ಬಂಧನ ಹಿನ್ನೆಲೆ; ವಿಚಾರಣೆಗಾಗಿ ಬೆಂಗಳೂರಿಗೆ ದೌಡಾಯಿಸಿದ ಮಂಗಳೂರು ಪೊಲೀಸರು

ಶಂಕಿತನ ಜಾಡು ಹಿಡಿದ ಪೊಲೀಸರು ಉಡುಪಿ ಮನೆಯನ್ನು ಶೋಧಿಸಿದ್ದರು. ಮನೆಯಲ್ಲಿದ್ದವರನ್ನು ವಿಚಾರಣೆ ಮಾಡಿದ್ದರು. ಪ್ರಕರಣದಲ್ಲಿ ಆದಿತ್ಯ ರಾವ್ ಕೈವಾಡದ ಬಗ್ಗೆ ಪ್ರಶ್ನೆ ಮಾಡಲಾಗಿತ್ತು. ಈಗ ಬೆಂಗಳೂರಿಗೆ ಬಂದು ಆದಿತ್ಯ ರಾವ್ ಶರಣಾಗಿದ್ದಾನೆ.  ಬೆಂಗಳೂರು ಡಿಜಿ ಕಚೇರಿಗೆ ಹೋಗಿ ನಾನೇ ಆದಿತ್ಯರಾವ್ ಅಂತ ಹೇಳಿಕೊಂಡಿದ್ದ. ತಕ್ಷಣ ಹೊಯ್ಸಳ ವಾಹನದಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಗೆ ಈತನನ್ನು ಕರೆತರಲಾಗಿತ್ತು. ಠಾಣೆಗೆ ಬಂದ ಇನ್ಸ್​ಪೆಕ್ಟರ್ ಹರಿವರ್ಧನ್ ಆರೋಪಿ ಆದಿತ್ಯ ರಾವ್​ನನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
Youtube Video

 
First published: January 22, 2020, 1:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories