HOME » NEWS » State » MANGALORE BJP COVID WAR ROOM MEMBERS SAVE LIFE OF A LOVER FROM COMMITTING SUICIDE AKP SNVS

ಹುಡುಗಿ ಕೈಕೊಟ್ಟಳೆಂದು ಆತ್ಮಹತ್ಯೆಗೆ ಯತ್ನ; ಬಿಜೆಪಿ ವಾರ್ ರೂಮಲ್ಲಿ ಯುವಕನಿಗೆ ಮರುಜನ್ಮ

ಗುಜರಾತ್​ನ ಹೋಟೆಲ್​ವೊಂದರಲ್ಲಿ ಕೆಲಸ ಮಾಡುತ್ತಿದ್ದ ಮೈಸೂರು ಮೂಲದ ವ್ಯಕ್ತಿಯೊಬ್ಬ ಹುಡುಗಿ ಕೈಕೊಟ್ಟಳೆಂದು ಪುತ್ತೂರಿಗೆ ಬಂದು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಶಾಸಕರ ವಾರ್ ರೂಮ್ ಸದಸ್ಯರು ಈತನನ್ನು ರಕ್ಷಿಸಿದ್ದಾರೆ.

news18-kannada
Updated:May 4, 2021, 3:28 PM IST
ಹುಡುಗಿ ಕೈಕೊಟ್ಟಳೆಂದು ಆತ್ಮಹತ್ಯೆಗೆ ಯತ್ನ; ಬಿಜೆಪಿ ವಾರ್ ರೂಮಲ್ಲಿ ಯುವಕನಿಗೆ ಮರುಜನ್ಮ
ಆತ್ಮಹತ್ಯೆಗೆ ಯತ್ನಿಸಿದ ನಂದೀಶ್ (ಎಡಗಡೆ)
  • Share this:
ಪುತ್ತೂರು(ಮೇ 04): ತಾನು ಕೆಲಸ ನಿರ್ವಹಿಸುತ್ತಿದ್ದ ಗುಜರಾತ್​ನಲ್ಲಿ ಪ್ರೀತಿಸಿದ ಪ್ರೇಯಸಿ ಕೈಕೊಟ್ಟಳೆಂದು ಯುವಕನೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಪುತ್ತೂರಿನಲ್ಲಿ ನಡೆದಿದೆ‌. ಕೊರೋನಾ ಲಾಕ್ ಡೌನ್ ನಡುವೆಯೇ ಗುಜರಾತ್ ನಿಂದ ಪುತ್ತೂರಿಗೆ ಆಗಮಿಸಿದ್ದ ಈ ಯುವಕ ರಸ್ತೆ‌ ಬದಿಯಲ್ಲಿ ಆತ್ಮಹತ್ಯೆಗೆ‌ ಯತ್ನಿಸಿರುವುದನ್ನು ಪತ್ತೆ ಮಾಡಿದ ಪುತ್ತೂರು ಶಾಸಕರ ಕೋವಿಡ್ ವಾರ್ ರೂಂ ಸದಸ್ಯರು ಆತನನ್ನು ಕರೆತಂದು ಮನವೊಲಿಸಿ ಮತ್ತೆ ಆತನ ಊರಿಗೆ ಕಳುಹಿಸಿದ್ದಾರೆ.

ಮೂಲತ ಮೈಸೂರು ಮೂಲದವರಾಗಿದ್ದು ಕಳೆದ ಹಲವಾರು ವರ್ಷಗಳಿಂದ ಗುಜರಾತ್‌ನ ಹೊಟೇಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ನಂದೀಶ್ ಎಂಬವರೇ ಆತ್ಮಹತ್ಯೆಗೆ ಪ್ರಯತ್ನಿಸಿದವರು. ಪ್ರೇಯಸಿ ಕೈ ಕೊಟ್ಟಳೆಂದು ಮನನೊಂದು ಊರೂರು ಅಲೆದು ಕೊನೆಗೆ ಪುತ್ತೂರಿಗೆ ಆಗಮಿಸಿದ್ದ. ಪುತ್ತೂರು ನಗರದ ಹೊರವಲಯದ ಕಬಕ ಸಮೀಪದ ಪೋಳ್ಯ ತಿರುವಿನಲ್ಲಿ ರಸ್ತೆ ಬದಿ ಬಿದ್ದಿರುವುದನ್ನು ನಾಗರಾಜ್ ಮಿತ್ತೂರು ಎಂಬವರು ಗಮನಿಸಿ ಪುತ್ತೂರು ಬಿಜೆಪಿ ಕಚೇರಿಯ ಬಳಿ ಕರೆ ತಂದಿದ್ದರು. ಅಲ್ಲಿ ಶಾಸಕರ ವಾರ್‌ರೂಮ್ ಮೂಲಕ ನಂದೀಶ್ ನನ್ನು ವಿಚಾರಿಸಿದಾಗ ಸರಿಯಾಗಿ ಉತ್ತರಿಸದೇ ಇರುವುದನ್ನು ಗಮನಿಸಿ ವಿಶ್ವಹಿಂದೂ ಪರಿಷತ್ ಕಾರ್ಯಾಲಯಲ್ಲಿ ಆಶ್ರಯ ನೀಡಲಾಗಿತ್ತು.

ಆ ಸಂದರ್ಭದಲ್ಲಿ‌ ಯುವಕ ತನ್ನ ಬಗ್ಗೆ ಎಲ್ಲಾ ಮಾಹಿತಿಯನ್ನು ಒಂದೊಂದಾಗಿ ಬಿಚ್ಚಿಟ್ಟಿದ್ದಾನೆ. ತಾನು ಮೈಸೂರು ಮೂಲದವನು. ತನ್ನ ತಂದೆ ತಾಯಿ, ಅಕ್ಕಂದಿರು ಮೈಸೂರಿನಲ್ಲಿದ್ದಾರೆ. ತಾನು ಗುಜರಾತಿನಲ್ಲಿ ಹೊಟೇಲೊಂದರಲ್ಲಿ ಕೆಲಸ ಮಾಡುತ್ತಿದ್ದೆ. ಅಲ್ಲಿ ಓರ್ವ ಯುವತಿಯೊಂದಿಗೆ ಪ್ರೇಮಾಂಕುರವಾಗಿತ್ತು. ಆಕೆ ಕೊನೆಗೆ ನನ್ನ ಕೈ ಬಿಟ್ಟಿದ್ದಾಳೆ. ಇದರಿಂದ ನೊಂದು ನಾನು ಆತ್ಮಹತ್ಯೆ ಮಾಡಿಕೊಳ್ಳಲು ತೀರ್ಮಾನಿಸಿ ಅಲ್ಲಿಂದ ಕರ್ನಾಟಕಕ್ಕೆ ಬಂದಿದ್ದೇನೆ ಎಂದು ಆತ ತಿಳಿಸಿದ್ದಾನೆ.

ಇದನ್ನೂ ಓದಿ: ಕಲಬುರ್ಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ನಾಲ್ವರು ಸಾವು; ಅಫ್ಜಲಪುರದಲ್ಲಿ ರೋಗಿಗಳು ಕಂಗಾಲು

ಈ ವೇಳೆ ಶಾಸಕರ ವಾರ್ ರೂಮ್‌ನ ಸದಸ್ಯರು ಮತ್ತು ವಿಶ್ವ ಹಿಂದೂ ಪರಿಷದ್, ಬಜರಂಗದಳ ನಾಯಕರು ನಂದೀಶ್​ಗೆ ಕೌನ್ಸಿಲಿಂಗ್ ಮಾಡಿದ್ದಾರೆ. ಬಳಿಕ ಆತ ತಾನು ಪುನಃ ಗುಜರಾತಿಗೆ ಹೋಗಬೇಕು ಎಂದು ಅವಲತ್ತುಕೊಂಡಿದ್ದಾನೆ. ಶಾಸಕರ ವಾರ್ ರೂಮ್ ಮೂಲಕ ಆತನನ್ನು ಗುಜರಾತಿಗೆ ಕಳುಹಿಸಿಕೊಡುವ ವ್ಯವಸ್ಥೆ ಮಾಡುವ ಕುರಿತು ಇದೀಗ ತೀರ್ಮಾನಿಸಲಾಗಿದೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಿರಂತರವಾಗಿ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಪುತ್ತೂರಿನಲ್ಲೂ ಪಾಸಿಟೀವ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪುತ್ತೂರು ಶಾಸಕರ ವಾರ್ ರೂಂ ವಿವಿಧ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಬಿದ್ದಿದ್ದ ಈ ಯುವಕನ ಪತ್ತೆಯಾಗಿದೆ. ಕೊರೊನಾ ಜೊತೆಗೆ ಈ ಯುವಕನ ಪ್ರಾಣ ಉಳಿಸುವ ಜವಾಬ್ದಾರಿಯೂ ವಾರ್ ರೂಂ ಹೆಗಲಿಗೆ ಬಂದ ಹಿನ್ನೆಲೆಯಲ್ಲಿ ಯುವಕನನ್ನು ಇಡೀ ದಿನ ತಮ್ಮ ಜೊತೆಗೇ ಇರಿಸಿಕೊಳ್ಳುವ ಮೂಲಕ ಆತನ ಜೀವನಕ್ಕೂ ವ್ಯವಸ್ಥೆ ಮಾಡಲಾಗಿದೆ. ಜನ ಕೊರೋನಾದಿಂದ ಜೀವ ಉಳಿಸಿಕೊಳ್ಳುವುದು ಹೇಗೆ ಎನ್ನುವ  ಟೆನ್ಷನ್ ನಲ್ಲಿ ಒಂದೆಡೆ ಇದ್ದರೆ, ಈ ಯುವಕ ಮಾತ್ರ ಲವ್ ಫೇಲ್ ಆಗಿದೆ ಎಂದು ಜೀವ ಕಳೆದುಕೊಳ್ಳುವ ಹುಚ್ಚಾಟದಲ್ಲಿದ್ದ. ಯುವಕನನ್ನು ಆತ್ಮಹತ್ಯೆಯ ಮನಸ್ಥಿತಿಯಿಂದ ಹೊರತರಲು ವಾರ್ ರೂಂ ಸದಸ್ಯರು ದಿನವಿಡೀ ಪಟ್ಟ ಪಾಡು ಮಾತ್ರ ಮೆಚ್ಚುವಂತಹುದೇ.

ವರದಿ: ಅಜಿತ್ ಕುಮಾರ್
Published by: Vijayasarthy SN
First published: May 4, 2021, 3:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories