ಮೊಬೈಲ್ ಕ್ಯಾಂಟೀನ್​ಗೆ ಆಧುನಿಕ ಸ್ಪರ್ಶ ನೀಡಿದ ಯುವಕ, ಇದನ್ನೇ ಅನುಕರಿಸಿದರೆ ನೀವು ದುಡ್ಡು ಮಾಡಬಹುದು

ಅವಲಕ್ಕಿ

ಅವಲಕ್ಕಿ

  • Share this:
ಆಧುನಿಕ ಯುಗದಲ್ಲಿ ಜನ ಏನಾದರೂ ಒಂದು ಹೊಸತನ ಇರಬೇಕೆಂದು ಬಯಸುತ್ತಾರೆ. ಹೊಸತನದ ಟಚ್ ಇದ್ರೆ ಜನ ಬೇಗ ಆಕರ್ಷಿತರಾಗುತ್ತಾರೆ. 'ಏನಾದ್ರೂ ಡಿಫೆರೆಂಟ್ ಆಗಿ ಮಾಡ್ಬೇಕು ಮಗಾ' ಅಂದುಕೊಂಡವರಿಗೆಲ್ಲಾ ಅದನ್ನು ಮಾಡೋಕೆ ಆಗಲ್ಲ..ಆದರೆ‌ ದಕ್ಷಿಣ ಕನ್ನಡ ಜಿಲ್ಲೆಯ ಯುವಕನೋರ್ವ ಹೊಸತನದ ಕಲೆಯನ್ನು ಕರಗತ ಮಾಡಿಕೊಂಡು ಯಶಸ್ಸು ಸಾಧಿಸಿದ್ದಾನೆ. ಈ ಯುವಕನ ಆಲೋಚನೆ ಚಿಕ್ಕದಾದರೂ ಈಗ ಮಾತ್ರ ಯುವಕನ ಕಲ್ಪನೆಗೆ ಜನರಿಂದ ಸಖತ್ ರೆಸ್ಪಾನ್ಸ್ ಬಂದಿದೆ. ಯುವಕನ ತಯಾರು ಮಾಡಿರುವ ಮೊಬೈಲ್ ಕ್ಯಾಂಟೀನ್ ಈಗ ಜನರ ಗಮನ ಸೆಳೆದಿದೆ.

ಹೊರಗೆ ನೋಡೋಕೆ ರಂಗು ರಂಗಾಗಿ ಕಾಣುವ ವಾಹನ. ಒಳಗಡೆ ನೋಡಿದ್ರೆ ಜನ ಆರಾಮಾಗಿ ಕುಳಿತುಕೊಳ್ಳಬಹುದಾದ ಹೊಟೇಲ್..ಜನ ಈ ವಾಹನದ ಅಂದವನ್ನು ನೋಡಲೇಂದೇ ಬಂದು, ಊಟ ಮಾಡಿ ಹೋಗಬೇಕು ಅನ್ನುವಷ್ಟು ಹೈ ಜಿನಿಕ್ ಆಗಿದೆ ಈ ಮೊಬೈಲ್ ಕ್ಯಾಂಟೀನ್.

ಈ ವಿಶೇಷ ಕಲ್ಪನೆ ಮೂಲಕ ಮೊಬೈಲ್ ಕ್ಯಾಂಟೀನ್ ಗೆ ಆಧುನಿಕ ಸ್ಪರ್ಶ ನೀಡಿದವರು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಅರುಣ್ ಕೋಟ್ಯಾನ್.

ಅದೊಂದು ಹೊರಗಡೆಯಿಂದ ನೋಡುವುದಕ್ಕೆ ಟೆಂಪೋ ರೀತಿಯ ವಾಹನ. ಆದ್ರೆ ಒಳಗಡೆ ಮಾತ್ರ ವ್ಯವಸ್ಥಿತ ಹೋಟೆಲ್‌ನ ಕಿಚನ್‌ಗಿಂತ ಕಡಿಮೆಯೇನಿಲ್ಲ. ಕಡಲನಗರಿಯಲ್ಲಿ ಫೇಮಸ್ ಆಗಿರುವ ಈ ಮೊಬೈಲ್ ಕ್ಯಾಂಟೀನ್ ನಡೆಯುತ್ತಿರುವುದೇ ಸೋಲಾರ್ ಎನರ್ಜಿ ಮೂಲಕವೇ ಎಂಬುದು ಇದರ ಇನ್ನೊಂದು ವಿಶೇಷ.

ಈ ಮೊಬೈಲ್ ಕ್ಯಾಂಟಿನನ್ನು ತಮ್ಮ ವಿಶೇಷ ಕಲ್ಪನೆ ಮೂಲಕ ಸಾಕರಗೊಳಿಸಿದವರು ದಕ್ಷಿಣಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಕಟೀಲು ಪಂಚಾಯತ್‌‌ನ ಮಾಜಿ ಸದಸ್ಯ ಅರುಣ್ ಕುಮಾರ್. 407 ವಾಹನವನ್ನೇ ಮೊಬೈಲ್ ಕ್ಯಾಂಟಿನ್ ಆಗಿ ಪರಿವರ್ತಿಸಿ ಇದರಲ್ಲಿನ ಎಲ್ಲಾ ಉಪಕರಣಗಳು ಸೋಲಾರ್ ಎನರ್ಜಿ ಉಪಯೋಗಿಸಿಕೊಂಡು ನಡೆಯೋದು ಈ ಕ್ಯಾಂಟಿನ್ ವಿಶೇಷ. 407 ವಾಹನವನ್ನು ಮಿನಿ ಬಸ್ ನಂತೆ ಪರಿವರ್ತಿಸಿ ಕ್ಯಾಂಟಿನ್ ಮಾಡಲಾಗಿದೆ. ಅದರ ಮೇಲ್ಬಾಗದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ ಇದರಿಂದ ಕ್ಯಾಂಟಿನ್ ಒಳಗಿರುವ ಪ್ರಿಜ್, ಮಿಕ್ಸರ್, ವೊವೆನ್, ಎಕ್ಸಾಸ್ಟ್ ಪ್ಯಾನ್ ಮತ್ತಿತರ ವಿದ್ಯುತ್ ಉಪಕರಣಗಳು ಕಾರ್ಯನಿರ್ವಹಿಸುತ್ತಿದೆ.  ಎಲ್ಲಾ ತಿಂಡಿ ತಿನಸುಗಳನ್ನು ಇದರಲ್ಲಿಯೇ ತಯಾರಿಸಲಾಗುತ್ತದೆ.

ಗ್ರಾಹಕರಿಗೆ ಕೈ ತೊಳೆಯಲು ಬಸ್‌ನ ಹಿಂಬಾಗದಲ್ಲಿ ವಾಶ್ ಬೇಸಿನ್ ಮಾಡಲಾಗಿದ್ದು, ನೀರಿಗಾಗಿ ಬಸ್‌ನ ಮೇಲ್ಭಾಗದಲ್ಲಿ 500 ಲೀಟರ್ ಸಾಮರ್ಥ್ಯದ ಟ್ಯಾಂಕ್ ಅಳವಡಿಸಲಾಗಿದೆ. ಕೈ ತೊಳೆದ ತ್ಯಾಜ್ಯ ನೀರು ಬಸ್‌ನ ಅಡಿ ಬಾಗದ ಇನ್ನೊಂದು 300 ಲೀಟರ್ ಸಾಮರ್ಥ್ಯದ ಟ್ಯಾಂಕ್‌ನಲ್ಲಿ ಸಂಗ್ರಹವಾಗುತ್ತಿದ್ದು ವಿಲೇವಾರಿ ಮಾಡಲು ಸುಲಭವಾಗುವಂತೆ ಅಳವಡಿಸಲಾಗಿದೆ. ಮೊಬೈಲ್ ಕ್ಯಾಂಟೀನ್ ವಾಹನದ ಇನ್ನೊಂದು ವಾಹನದ ಚೇಸ್ ಅನ್ನು ಕೋಣೆಯಂತೆ ಮಾಡಿ ಅದರಲ್ಲಿ ಕುರ್ಚಿ ಮತ್ತು ಟೇಬಲ್‌ನ್ನು ಅಳವಡಿಸಲಾಗಿದೆ. ಗ್ರಾಹಕರಿಗೆ ಕುಳಿತುಕೊಂಡು ತಿನ್ನುವ ವ್ಯವಸ್ಥೆಯನ್ನು ಮಾಡಲಾಗಿದೆ. ಸದ್ಯಕ್ಕೆ ಇದು ಕಟೀಲು ಬಸ್ ನಿಲ್ದಾಣದ ಪಕ್ಕ ನಿಂತಿದ್ದು ವ್ಯಾಪಾರಕ್ಕೆ ಬೇರೆ ಬೇರೆ ಕಡೆಗಳಿಗೆ ಕೊಂಡೊಯ್ಯಬಹುದಾಗಿದೆ.

ಈ ಕ್ಯಾಂಟಿನ್‌ನ ವಿನ್ಯಾಸಕ್ಕಾಗಿ ಒಟ್ಟು 9.25 ಲಕ್ಷ ಖರ್ಚು ಮಾಡಲಾಗಿದೆ. ಜಿಲ್ಲೆಯಲ್ಲಿ ನಡೆಯುವ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿಯೂ ಈ ಕ್ಯಾಂಟೀನ್‌ಗೆ ಭಾರೀ ಬೇಡಿಕೆಯಿದೆ.
Published by:Sharath Sharma Kalagaru
First published: