• ಹೋಂ
  • »
  • ನ್ಯೂಸ್
  • »
  • ರಾಜ್ಯ
  • »
  • ವಿದ್ಯಾರ್ಥಿನಿಗೆ ಬೇಬಿ ಎಂದು ಕರೆದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ; ಕಾಲೇಜು ಪರ ರಾಮಲಿಂಗಾರೆಡ್ಡಿ ಎಂಟ್ರಿ

ವಿದ್ಯಾರ್ಥಿನಿಗೆ ಬೇಬಿ ಎಂದು ಕರೆದ ಬೆಂಗಳೂರಿನ ಕ್ರೈಸ್ಟ್ ಕಾಲೇಜಿನ ಪ್ರಾಧ್ಯಾಪಕ; ಕಾಲೇಜು ಪರ ರಾಮಲಿಂಗಾರೆಡ್ಡಿ ಎಂಟ್ರಿ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ರಾಮಲಿಂಗಾರೆಡ್ಡಿ ಅವರು ಕ್ರೈಸ್ಟ್ ಕಾಲೇಜು ಪರ ನಿಂತಿರುವುದಕ್ಕೆ ವಿದ್ಯಾರ್ಥಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಪರ ನಿಲ್ಲಬೇಕಾದ ನಾಯಕರು ಹೀಗೆ ಮಾಡೋದು ಸರಿ ಅಲ್ಲ ಎಂದು ರಾಮಲಿಂಗಾರೆಡ್ಡಿ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

  • Share this:

ಬೆಂಗಳೂರು; ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಕಾಲೇಜಿನ ಪ್ರಾಧ್ಯಾಪಕರೊಬ್ಬರು ವಿದ್ಯಾರ್ಥಿನಿ ಜೊತೆಗೆ ಅಸಭ್ಯವಾಗಿ ವರ್ತಿಸಿರುವ ಆರೋಪ ಕೇಳಿಬಂದಿದೆ. ಪ್ರಾಧ್ಯಾಪಕರ ನಡೆಗೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೇ ಈ ಘಟನೆ ವಿಷಯದಲ್ಲಿ ಮಧ್ಯಪ್ರವೇಶ ಮಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ಘಟನೆ ಮುಂದುವರೆಯದಂತೆ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೋಲ್ ಆಗುತ್ತಿದೆ.


ನಗರದ ಪ್ರತಿಷ್ಠಿತ ಕ್ರೈಸ್ಟ್ ಯೂನಿವರ್ಸಿಟಿಯ ಪ್ರೊಫೆಸರ್ ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ನಡೆದುಕೊಂಡಿರುವ ಆರೋಪ ಕೇಳಿಬಂದಿದೆ. ಪ್ರೊ. ರಾಯ್ ಮ್ಯಾಥ್ಯೂ ಅವರು ವಿದ್ಯಾರ್ಥಿನಿಯನ್ನು ಬೇಬಿ ಎಂದು ಕರೆಯುವ ಮೂಲಕ ಅಸಭ್ಯ ವರ್ತನೆ ತೋರಿದ್ದಾರೆ. ವಿದ್ಯಾರ್ಥಿನಿ sir can I end the exam now I have submitted the pdf ಎಂದು ವಾಟ್ಸಾಪ್ ಗ್ರೂಪ್​ನಲ್ಲಿ ಮೆಸೇಜ್ ಮಾಡಿದಾಗ ಎಲ್ಲರ ಮುಂದೆ Another 3 minuets ಬೇಬಿ ಎಂದು ಹೇಳಿದ್ದಾರೆ. ಇದರಿಂದ ತೀವ್ರ ಮುಜುಗರಕ್ಕೆ ಒಳಗಾದ ವಿದ್ಯಾರ್ಥಿನಿಬೇಬಿ ಎಂದು ಕರೆದಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.


ವಿದ್ಯಾರ್ಥಿನಿಗೆ ಪ್ರಾಧ್ಯಾಪಕರು ಮಾಡಿದ ಮೆಸೇಜ್.


ಇದನ್ನು ಓದಿ: ಸಿಎಂ ಯಾರಾಗಬೇಕು ಎಂದು ತೀರ್ಮಾನಿಸುವವರು ದೆಹಲಿ ನಾಯಕರು: ಸಿದ್ದರಾಮಯ್ಯ ಬಣಕ್ಕೆ ಡಿಕೆಶಿ ಟಾಂಗ್


ಆನ್ ಲೈನ್ ಪರೀಕ್ಷೆ ವೇಳೆ ಈ ಘಟನೆ ನಡೆದಿದೆ. ಪ್ರೊಫೆಸರ್ ರಾಯ್ ಮ್ಯಾಥ್ಯೂ ಕಾಳಜಿಯಿಂದ ಹೀಗೆ ಕರೆದಿದ್ದು ಎಂದು ಸಮರ್ಥನೆ ಮಾಡಿಕೊಂಡಿದ್ದಾರೆ. ಸದ್ಯ ಪ್ರೊಪೆಸರ್ ಈ ವರ್ತನೆ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ. ಸದ್ಯ ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಲು ವಿದ್ಯಾರ್ಥಿ ಸಂಘಟನೆ ಎನ್​ಎಸ್​ಯುಐ ಕರ್ನಾಟಕ ಮುಂದಾಗಿದೆ. ಆ ಬಳಿಕ ಘಟನೆಗೆ ಸಂಬಂಧಿಸಿದಂತೆ ವಿದ್ಯಾರ್ಥಿ ಬಳಿ ಪ್ರೊಫೆಸರ್ ರಾಯ್ ಮ್ಯಾಥ್ಯೂ ಅವರು ಕ್ಷಮೆ ಕೇಳಿದ್ದಾರೆ.


ಘಟನೆ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಡೆಯುತ್ತಿರುವ ಚರ್ಚೆ.ವಿಷಯ ದೊಡ್ಡದಾಗುತ್ತಿದ್ದಂತೆ ಮಧ್ಯಪ್ರವೇಶ ಮಾಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಅವರು ವಿದ್ಯಾರ್ಥಿಗಳಿಗೆ ಪೊಲೀಸ್ ದೂರು ನೀಡದಂತೆ ಒತ್ತಡ ಹಾಕಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ವಿದ್ಯಾರ್ಥಿ ಮುಖಂಡರನ್ನು ತಮ್ಮ ನಿವಾಸಕ್ಕೆ ಕರೆಸಿಕೊಂಡು ಘಟನೆ ಸಂಬಂಧಿಸದಂತೆ ಮುಂದುವರೆಯದಂತೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ರಾಮಲಿಂಗಾರೆಡ್ಡಿ ಅವರು ಕ್ರೈಸ್ಟ್ ಕಾಲೇಜು ಪರ ನಿಂತಿರುವುದಕ್ಕೆ ವಿದ್ಯಾರ್ಥಿ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿನಿ ಪರ ನಿಲ್ಲಬೇಕಾದ ನಾಯಕರು ಹೀಗೆ ಮಾಡೋದು ಸರಿ ಅಲ್ಲ ಎಂದು ರಾಮಲಿಂಗಾರೆಡ್ಡಿ ಮೇಲೆ ಅಸಮಾಧಾನ ಹೊರಹಾಕಿದ್ದಾರೆ.

Published by:HR Ramesh
First published: