• ಹೋಂ
  • »
  • ನ್ಯೂಸ್
  • »
  • state
  • »
  • Mangaluru: ಜೂನ್‌ 1 ರಿಂದ ಮೀನುಗಾರಿಕೆ ನಿಷೇಧ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ!

Mangaluru: ಜೂನ್‌ 1 ರಿಂದ ಮೀನುಗಾರಿಕೆ ನಿಷೇಧ, ನಿಯಮ ಉಲ್ಲಂಘಿಸಿದ್ರೆ ಕಠಿಣ ಕ್ರಮ!

ಬಂದರು

ಬಂದರು

ಮೀನುಗಳ ಸಂತಾನೋತ್ಪತ್ತಿ ನಡೆಯುವ ಹಿನ್ನೆಲೆ ಜೂನ್‌ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಈ ಎರಡು ತಿಂಗಳ ಕಾಲ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಆಯಾಯ ಜಿಲ್ಲಾಡಳಿತಗಳು ನಿಷೇಧ ಹೇರಿವೆ.

  • News18 Kannada
  • 5-MIN READ
  • Last Updated :
  • Mangalore, India
  • Share this:

ಮಂಗಳೂರು: ಸರಕಾರದ ನಿಯಮದಂತೆ (Government Rules) ಜೂನ್‌ 1 ರಿಂದ ಎರಡು ತಿಂಗಳ ಕಾಲ ಕರಾವಳಿಯ ಕಡಲ ತೀರದಲ್ಲಿ ಮೀನುಗಾರಿಕಾ (Fishing)  ಚಟುವಟಿಕೆಗಳು ಸ್ಥಗಿತಗೊಳ್ಳಲಿದೆ. ಮೀನುಗಳ ಸಂತಾನೋತ್ಪತ್ತಿ ನಡೆಯುವ ಹಿನ್ನೆಲೆ ಜೂನ್‌ 1 ರಿಂದ ಜುಲೈ 31ರ ವರೆಗೆ ಮೀನುಗಾರಿಕೆಗೆ ನಿಷೇಧ ಹೇರಲಾಗುತ್ತಿದೆ. ಈ ಎರಡು ತಿಂಗಳ ಕಾಲ ಯಾವುದೇ ಮೀನುಗಾರಿಕಾ ಚಟುವಟಿಕೆ ನಡೆಸದಂತೆ ಉಡುಪಿ ಹಾಗೂ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಆಯಾಯ ಜಿಲ್ಲಾಡಳಿತಗಳು ನಿಷೇಧ ಹೇರಿವೆ. ಹೀಗಾಗಿ ಆಳಸಮುದ್ರ ಮೀನುಗಾರಿಕೆಗಾಗಿ ತೆರಳಿದ್ದ ಬೋಟ್‌ ಗಳು ಈಗಾಗಲೇ ದಡ ಸೇರಲು ಆರಂಭಿಸಿವೆ. ಬಂದರು ಪ್ರದೇಶಗಳಾದ ಮಂಗಳೂರಿನ ಹಳೆ ಬಂದರು ಹಾಗೂ ಉಡುಪಿಯ ಮಲ್ಪೆಯಲ್ಲಿ ಬೋಟ್‌ ಗಳು ಲಂಗರು ಹಾಕುತ್ತಿವೆ. 


ಜನರಿಗೆ ಮೀನು ಸಿಗಲ್ವೇ?


ಮೀನುಗಾರಿಕೆ ನಿಷೇಧ ಸಮಯದಲ್ಲಿ ನಾಡ ದೋಣಿ ಮೀನುಗಾರಿಕಾ ಚಟುವಟಿಕೆ ಗರಿಗೆದರುತ್ತವೆ. ಹೆಚ್ಚಿನ ಪ್ರಮಾಣದ ಬಲೆ ಬಳಸದೇ ಸ್ಥಳೀಯವಾಗಿ ಮೀನುಗಾರಿಕೆ ನಡೆಸುತ್ತಾರೆ. ಆದರೆ, ತೀವ್ರ ಗಾಳಿ, ಮಳೆ ಸಮಯದಲ್ಲಿ ಜಿಲ್ಲಾಡಳಿತದ ಎಚ್ಚರಿಕೆ ಗಮನಿಸಿಕೊಂಡು ಚಟುವಟಿಕೆ ನಡೆಸಬೇಕಾಗುತ್ತದೆ.



ಹಾಗಾಗಿ ಜನರಿಗೆ ಮಳೆಗಾಲದಲ್ಲೂ ಮೀನು ಸಾಮಾನ್ಯವಾಗಿ ಸಿಗುತ್ತವೆ. ಇನ್ನು ಶೀತಲೀಕರಣದಲ್ಲಿ ಸಂಗ್ರಹಿಸಿ ಮೀನುಗಳನ್ನು ಈ ಸಮಯದಲ್ಲಿ ಮಾರಾಟ ಮಾಡಲಾಗುತ್ತದೆ.


ಇದನ್ನೂ ಓದಿ: ಪುಣ್ಯ ಕ್ಷೇತ್ರಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಳ, ಈಗ ಪ್ರಯಾಣಿಸೋದು ಒಳ್ಳೆಯದೇ?

ನಿಯಮ ಉಲ್ಲಂಘಿಸಿದ್ರೆ ಏನು ಕ್ರಮ?


ಇನ್ನು ಎರಡು ತಿಂಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ಹಾಕಲಾದ ನಿರ್ಬಂಧವನ್ನು ಉಲ್ಲಂಘಿಸಿದರೆ, ಕರ್ನಾಟಕ ಸಮುದ್ರ ಮೀನುಗಾರಿಕಾ ನಿಯಂತ್ರಣ ಕಾಯ್ದೆ 1986ರ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ. ಅದರಂತೆ ಒಂದು ವರ್ಷದ ಡೀಸೆಲ್‌ ಸಬ್ಸಿಡಿ ಕಡಿತಗೊಳಿಸುವ ಅವಕಾಶ ಸರಕಾರಕ್ಕೆ ಇರುತ್ತದೆ.

top videos
    First published: