Areca Nut Growers: ಅಡಿಕೆಯಿಂದ ನಷ್ಟದಲ್ಲಿರುವ ಬೆಳೆಗಾರರಿಗೆ ಹೊಸ ಭರವಸೆ.. ಮುತ್ತು-ಮೀನು ಲಾಭ ತರಲಿದೆಯಾ?

ಹಳದಿ ರೋಗದಿಂದ ಕಂಗೆಟ್ಟ ಕೃಷಿಕರಿಗೆ ಪರ್ಯಾಯ ಕೃಷಿಯನ್ನೂ ಪರಿಚಯಿಸುವ ಕಾರ್ಯವನ್ನು ಮೀನುಗಾರಿಕೆ,ಒಳನಾಡು ಸಾರಿಗೆ ಇಲಾಖೆಯ ಮೂಲಕ ಮಾಡಲಾಗುವುದು ಎಂದರು. ಅಡಿಕೆಯ ಜೊತೆಗೆ ಮೀನು, ಮುತ್ತು ಮತ್ತು ಪಾಚಿ ಕೃಷಿಯನ್ನೂ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು.

ಮುತ್ತಿನ ಕೃಷಿ

ಮುತ್ತಿನ ಕೃಷಿ

  • Share this:
ಪುತ್ತೂರು Puttur, Dakshina Kannada: ಹಳದಿ ರೋಗದಿಂದ ಕಂಗೆಟ್ಟ ಅಡಿಕೆ ಬೆಳೆಗಾರರ (Areca Nut Growers) ಸಂಕಷ್ಟಕ್ಕೆ ಸರಕಾರ ಸ್ಪಂದಿಸಲಿದ್ದು, ಈ ನಿಟ್ಟಿನಲ್ಲಿ ಪರ್ಯಾಯ ವ್ಯವಸ್ಥೆಯನ್ನು ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಹಾಗೂ ಬಂದರು-ಮೀನುಗಾರಿಕಾ ಮತ್ತು ಒಳನಾಡು ಸಾರಿಗೆ ಸಚಿವ ಎಸ್.ಅಂಗಾರ (Minister S Angara) ಭರವಸೆ ನೀಡಿದ್ದಾರೆ. ಹಳದಿ ರೋಗದಿಂದ ಕಂಗೆಟ್ಟ ಕೃಷಿಕರ ಬದುಕಿನ ಬಗ್ಗೆ ನ್ಯೂಸ್ 18 ಕನ್ನಡ ವಿಸ್ತೃತ ವರದಿಯನ್ನು ಇತ್ತೀಚೆಗಷ್ಟೇ ಪ್ರಸರಿಸಿತ್ತು. ಆ ಬಳಿಕದ ಬೆಳವಣಿಗೆಯಲ್ಲಿ ಪುತ್ತೂರು ಶಾಸಕ ಸಂಜೀವ ಮಠಂದೂರು (Puttur MLA Sanjeev Mathanduru_ ಸದನದಲ್ಲೂ ಹಳದಿ ರೋಗದಿಂದ‌ ಕಂಗೆಟ್ಟ ಅಡಿಕೆ ಬೆಳೆಗಾರರ ಕುರಿತು ಸದನದ ಗಮನಕ್ಕೆ ತಂದಿದ್ದರು. ಇದೀಗ ಈ ಬಗ್ಗೆ ಪ್ರತಿಕ್ರಿಯಿಸಿರುವ ಜಿಲ್ಲಾ ಉಸ್ತುವಾರಿ ಸಚಿವರೂ, ಸುಳ್ಯ ಶಾಸಕರೂ ಆಗಿರುವ ಎಸ್.ಅಂಗಾರ ಜಿಲ್ಲೆಯ ಸುಳ್ಯ,ಪುತ್ತೂರು ಭಾಗದಲ್ಲಿ ನೂರಾರು ಎಕರೆ ಪ್ರದೇಶದಲ್ಲಿರುವ ಅಡಿಕೆ ತೋಟದಲ್ಲಿ ಹಳದಿ ರೋಗ (Yellow Disease) ಕಾಣಿಸಿಕೊಂಡಿದ್ದು, ಈ ಬಗ್ಗೆ ರಾಜ್ಯ ತೋಟಗಾರಿಕಾ ಸಚಿವರಲ್ಲೂ ಮಾತನಾಡಿದ್ದೇನೆ ಎಂದರು.

ಅಡಿಕೆ ಬೆಳೆಗೆ ಬದಲಿ ಕೃಷಿ

ಹಳದಿ ರೋಗಕ್ಕೆ ಸಂಬಂಧಿಸಿದಂತೆ ಮುಂದಿನ 10 ದಿನಗಳ ಒಳಗಾಗಿ ತೋಟಗಾರಿಕಾ ಸಚಿವರೇ ಜಿಲ್ಲೆಯಲ್ಲಿ ಸಭೆ ನಡೆಸಲಿದ್ದಾರೆ ಎಂದ ಅವರು ಹಳದಿ ರೋಗದಿಂದ ಕಂಗೆಟ್ಟ ಕೃಷಿಕರಿಗೆ ಪರ್ಯಾಯ ಕೃಷಿಯನ್ನೂ ಪರಿಚಯಿಸುವ ಕಾರ್ಯವನ್ನು ಮೀನುಗಾರಿಕೆ,ಒಳನಾಡು ಸಾರಿಗೆ ಇಲಾಖೆಯ ಮೂಲಕ ಮಾಡಲಾಗುವುದು ಎಂದರು. ಅಡಿಕೆ ಬೆಳೆಗೆ ಬದಲಿ ಕೃಷಿಯ ಅನಿವಾರ್ಯತೆಯೂ ಇದ್ದು, ಈ‌ ನಿಟ್ಟಿನಲ್ಲಿ ಒಳನಾಡು ಮೀನುಗಾರಿಕೆಗೆ ಹೆಚ್ಚಿನ ಒತ್ತು ನೀಡಲು ತೀರ್ಮಾನಿಸಲಾಗಿದೆ ಎಂದರು. ಜಿಲ್ಲೆಯ ಮೀನಿನ ತಳಿಗಳಾದ ಮಡಂಜಿ ಸೇರಿದಂತೆ ವಿವಿಧ ತಳಿಗಳ ಅಭಿವೃದ್ಧಿಗೆ ಪೂರಲ ವ್ಯವಸ್ಥೆಯನ್ನು ಮಾಡುವ ಜೊತೆಗೆ ವಿವಿಧ ತಳಿಯ ಮೀನು ಸಾಕಾಣಿಕೆಗೂ ವಿಶೇಷ ಒತ್ತು ನೀಡಲಾಗಿದೆ ಎಂದರು.

ಇದನ್ನೂ ಓದಿ: Flower: ಬರದ ನಾಡಿನಲ್ಲಿ ರೈತನ ಬಾಳನ್ನ ಬಂಗಾರವಾಗಿಸಿದ ಚೆಂಡು ಹೂವಿನ ಬೆಳೆ

ಮುತ್ತು ಮತ್ತು ಪಾಚಿ ಕೃಷಿ

ಈ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಮುಂದಿನ 15 ದಿನಗಳಲ್ಲಿ ಕಾರ್ಯಾಗಾರವನ್ನು ನಡೆಸಲಾಗುವುದು. ಈ ಕಾರ್ಯಾಗಾರದಲ್ಲಿ ವಿವಿಧ ವಿಶ್ವ‌ವಿದ್ಯಾನಿಲಯಗಳ ತಜ್ಞರನ್ನೂ ಸೇರಿಸಿಕೊಳ್ಳಲಾಗುತ್ತಿದ್ದು,   ಯೋಜನೆಯ ಅನುಷ್ಟಾನದ ರೂಪುರೇಷೆಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು‌. ಪ್ರಧಾನಮಂತ್ರಿ ಮತ್ಸ್ಯಸಂಪದ ಯೋಜನೆಯ ಮೂಲಕ ಈ ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರಲಾಗುವುದು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಅಲ್ಲದೆ ಅಡಿಕೆಯ ಜೊತೆಗೆ ಮೀನು, ಮುತ್ತು ಮತ್ತು ಪಾಚಿ ಕೃಷಿಯನ್ನೂ ಬೆಳೆಸಲು ಪ್ರೋತ್ಸಾಹ ನೀಡಲಾಗುವುದು.

ಮೀನಿನ ಕೃಷಿ


ನೆರವಿನ ನಿರೀಕ್ಷೆಯಲ್ಲಿ ಬೆಳೆಗಾರರು

ದಕ್ಷಿಣಕನ್ನಡ ಜಿಲ್ಲೆಯ ಸುಳ್ಯ, ಸಂಪಾಜೆ,ಅರಂತೋಡು,ಮರ್ಕಂಜ ಭಾಗದಲ್ಲಿ ನೂರಾರು ಹೆಕ್ಟೇರ್ ಅಡಿಕೆ ತೋಟದಲ್ಲಿ ಹಳದಿ ರೋಗ ಮತ್ತೆ ಕಾಣಿಸಿಕೊಂಡಿದ್ದು, ಅಡಿಕೆ ಬೆಳೆಗಾರರ ಆತಂಕಕ್ಕೆ ಕಾರಣವಾಗಿದೆ. ಈ ನಡುವೆ ಹಳದಿ ರೋಗದಿಂದ ಕಂಗೆಟ್ಟ ಬೆಳೆಗಾರರಿಗೆ ಸರಕಾರ 25 ಕೋಟಿ ರೂಪಾಯಿ ಪರಿಹಾರವನ್ನೂ ಈ ಹಿಂದೆ ಘೋಷಿಸಿತ್ತು. ಆದರೆ ಈವರೆಗೂ ಈ ಪರಿಹಾರ ಹಳದಿ ರೋಗದಿಂದ ನಷ್ಟ ಅನುಭವಿಸಿದ ಬೆಳೆಗಾರನಿಗೆ ಸಿಕ್ಕಿಲ್ಲ.  ಅಡಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದ ಸಾವಿರಾರು ಅಡಿಕೆ ಬೆಳೆಗಾರ ಹಳದಿ ರೋಗದ ಸುಳಿಗೆ ಸಿಲುಕಿ ಸಂಕಷ್ಟದಲ್ಲಿದ್ದು, ಸರಕಾರದ ಈ ಪರ್ಯಾಯ‌ ಕೃಷಿ ಯೋಜನೆ ಬೆಳೆಗಾರರಿಗೆ ಯಾವ ರೀತಿ ನೆರವಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇನ್ನು ಬಸವಕಲ್ಯಾಣ ತಾಲೂಕಿನ ಗೊಗ್ಗಾ ಗ್ರಾಮದ ರೈತ ನಾಮದೇವ ಮೇತ್ರೆ ಎಂಬುವರಿಗೆ ಒಂದು ಎಕರೆ ಜಮೀನು ಇದ್ದು ಜಮೀನಿನಲ್ಲಿ ಬರೋಬ್ಬರಿ ಆರು ಸಾವಿರ ಚೆಂಡು ಹೂವಿನ ಸಸಿಗಳನ್ನು ನಾಟಿ ಮಾಡಿ ಉತ್ತಮ ಇಳುವರಿ ಕಂಡು ಆದಾಯ ಪಡೆದುಕೊಂಡಿದ್ದಾರೆ.  ಬರದ ನಾಡಿನ ರೈತನೊಬ್ಬ ಇರುವ 1 ಎಕರೆ ಭೂಮಿಯಲ್ಲಿ ಚಂಡು ಹೂವು ಬೆಳೆದು ಕೈತುಂಬಾ ಲಾಭ ಮಾಡಿಕೊಂಡಿದ್ದಾರೆ.
Published by:Kavya V
First published: