ಮಂಗಳೂರು: ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್‍ನಲ್ಲಿ 2023-24ನೇ ಸಾಲಿನಲ್ಲಿ 3 ವರ್ಷಗಳ ಪೂರ್ಣಾವಧಿ ಕೋರ್ಸ್‍ಗಳಿಗೆ ಪ್ರಥಮ ಸೆಮಿಸ್ಟಾರ್ ಇಂಜಿನಿಯರಿಂಗ್ ಹಾಗೂ ನಾನ್-ಇಂಜಿನಿಯರಿಂಗ್ ಡಿಪ್ಲೊಮಾ ಕೋರ್ಸ್‍ಗಳ ಮೆರಿಟ್ ಆಧಾರಿತ ಪ್ರವೇಶಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ (Diploma Students) ಅರ್ಜಿ ಆಹ್ವಾನಿಸಲಾಗಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಈ ಸಂಸ್ಥೆಯಲ್ಲಿ ಸೂಕ್ತ ಮೂಲ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳು ನೀಡಿರುವ ಆದ್ಯತೆ ಮತ್ತು ಮೆರಿಟ್ ಹಾಗೂ ರೋಷ್ಟರ್ಗೆ ಅನುಗುಣವಾಗಿ ಆನ್‍ಲೈನ್ ಮೂಲಕ ಸೀಟು ಹಂಚಿಕೆ ಮಾಡಲಾಗುವುದು.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಇಲಾಖೆಯ ಅಧಿಕೃತ ವೆಬ್‍ಸೈಟ್ https://dtek.karnataka.gov.in/ ಇಲ್ಲಿಂದ ಅರ್ಜಿ ಡೌನ್‍ಲೋಡ್ ಮಾಡಿಕೊಂಡು, ಭರ್ತಿ ಮಾಡಿದ ಅರ್ಜಿಯನ್ನು ಮೇ 18 ರೊಳಗೆ ಸಂಸ್ಥೆಯ ಸಂಬಂಧಪಟ್ಟ ಪಾಲಿಟೆಕ್ನಿಕ್ ಪ್ರಾಂಶುಪಾಲರಿಗೆ ಸಲ್ಲಿಸಬೇಕು.
ಸೀಟು ಹಂಚಿಕೆ ಯಾವಾಗ?
ಮೇ 19ರಂದು ಮೆರಿಟ್ ಪಟ್ಟಿ ಪ್ರಕಟಣೆ, ಮೇ 20ರಂದು ಸೀಟು ಹಂಚಿಕೆಯ ಪ್ರಕಟಣೆ ದಿನವಾಗಿದೆ. ಸೀಟು ಆಯ್ಕೆ ಮಾಡಿಕೊಂಡ ಅಭ್ಯರ್ಥಿಗಳು ನಿಗದಿತ ಶುಲ್ಕದೊಂದಿಗೆ ಪ್ರವೇಶ ಪಡೆಯಲು ಮೇ 21ರಂದು ಪ್ರಾರಂಭ ಹಾಗೂ 23 ರಂದು ಕೊನೆಯ ದಿನವಾಗಿರುತ್ತದೆ.
ಇದನ್ನೂ ಓದಿ: Patrode Recipe: ಮನೆಯಲ್ಲೇ ಮಾಡಿ ರುಚಿಯಾದ ಪತ್ರೊಡೆ, ಇಲ್ಲಿದೆ ಸಿಂಪಲ್ ರೆಸಿಪಿ
ಸೀಟುಗಳು ಭರ್ತಿಯಾಗದೇ ಉಳಿಕೆಯಾಗಿದ್ದಲ್ಲಿ ಅಂತಹ ಸೀಟುಗಳನ್ನು ಮೊದಲು ಬಂದವರಿಗೆ ಮೊದಲ ಆದ್ಯತೆಯ ಮೇಲೆ ಪ್ರಾಂಶುಪಾಲರ ಹಂತದಲ್ಲಿಯೇ ಮೇ.31ರೊಳಗೆ ಆಫ್-ಲೈನ್ ಮೂಲಕ ಹಂಚಿಕೆ ಮಾಡಲಾಗುವುದು.
ಇದನ್ನೂ ಓದಿ: Top 5 Beaches In Mangaluru: ಮಂಗಳೂರು ಪ್ರವಾಸಕ್ಕೆ ಬಂದ್ರೆ ಈ ಟಾಪ್ 5 ಬೀಚ್ಗಳಿಗೆ ಮಿಸ್ ಮಾಡ್ದೇ ಹೋಗ್ಬನ್ನಿ!
ಹೆಚ್ಚಿನ ಮಾಹಿತಿಗಾಗಿ
ಹೆಚ್ಚಿನ ವಿವರಗಳಿಗೆ ಇಲಾಖೆಯ ಅಧಿಕೃತ ವೆಬ್‍ಸೈಟ್ www.dtek.kar.nic.in ಅಥವಾ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಕಚೇರಿಯ ದೂರವಾಣಿ ಸಂಖ್ಯೆ: 0824-2211636, 3500437 ಅನ್ನು ಸಂಪರ್ಕಿಸಬಹುದು ಎಂದು ಸರ್ಕಾರಿ ಪಾಲಿಟೆಕ್ನಿಕ್‍ನ ಪ್ರಾಂಶುಪಾಲರು ತಿಳಿಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ