ಆಷಾಢ ಮಾಸದಲ್ಲಿ ಕುಣಿಯುವ ಈ ನೃತ್ಯಕ್ಕಿದೆ ಕರಾವಳಿ ಭಾಗದಲ್ಲಿ ಭಾರೀ ಮಹತ್ವ

ಆಷಾಢ ತಿಂಗಳ ಮಾರಿ ಭಯವನ್ನು ನಿವಾರಿಸಲು ಕರಾವಳಿಯ ಅನಾದಿಕಾಲದಿಂದಲೂ ಆಟಿ ಕಳಂಜೆ ಕುಣಿತವನ್ನು ಆಚರಿಸುತ್ತಿದ್ದಾರೆ.

ಆಂಟಿ ಕಳಂಜೆ

ಆಂಟಿ ಕಳಂಜೆ

  • Share this:
ಪುತ್ತೂರು (ಆ. 5): ಕರಾವಳಿ ಪ್ರದೇಶ ಜಾನಪದ ಆಚರಣೆಗಳ ತವರೂರು, ಕೃಷಿ ಪ್ರಧಾನವಾದ ಕರಾವಳಿ ಜಿಲ್ಲೆಯ ಜನರಿಗೆ ಆಷಾಡ (ತುಳುವಿನಲ್ಲಿ ಆಟಿ)  ತಿಂಗಳು ಧಾರ್ಮಿಕ ಹಾಗೂ ಶುಭ ಕಾರ್ಯಗಳಿಗೆ ನಿಷಿದ್ದ. ರೋಗ ರುಜಿನಗಳು ಬರುವ ಆಟಿ ತಿಂಗಳಿನಲ್ಲಿ ತುಳುನಾಡ ಜನರ ಆಹಾರ ಪದ್ದತಿಯೂ ಬದಲಾಗುತ್ತದೆ. ಆಟಿ ತಿಂಗಳ ಪ್ರಕೃತಿ ವಿಕೊಪವನ್ನು ಸರಿದೂಗಿಸಲು ತುಳು ಜಾನಪದರು ಅನಾದಿ ಕಾಲದಿಂದಲೂ ಕಳೆಂಜ ಕುಣಿತವನ್ನು ಕರಾವಳಿಯಾದ್ಯಂತ ಆಚರಿಸುತ್ತಿದ್ದಾರೆ. ಈ ಹಿಂದೆ ಜನಜನಿತವಾಗಿದ್ದ ಆಟಿ ಕಳೆಂಜ ಇಂದು ಕರಾವಳಿಯ ಕೆಲವು ಭಾಗಗಳಿಗಷ್ಟೇ ಸೀಮಿತವಾಗಿದೆ. ತುಳುನಾಡಿನಲ್ಲಿ ಆಷಾಡ ಅಥವಾ ಆಟಿ ತಿಂಗಳಿಗೆ ವಿಶೇಷ ಪ್ರಾಧಾನ್ಯತೆಯಿದೆ. ಆಟಿ ತಿಂಗಳಲ್ಲಿ ಎಲ್ಲ ಶುಭ ಹಾಗೂ ಧಾರ್ಮಿಕ ಕಾರ್ಯಗಳಿಗೆ ನಿಷೇಧ. ಮನುಷ್ಯರಿಗೆ,ಬೆಳೆ ಹಾಗೂ ಜಾನುವಾರುಗಳಿಗೆ ರೋಗ-ರುಜಿನಗಳು ಬರುವುದು ಆಷಾಡ ತಿಂಗಳಲ್ಲಿ ಎಂಬುವುದು ತುಳುನಾಡ ಜನರ ನಂಬಿಕೆ.

ಆಷಾಡ ತಿಂಗಳ ಮಾರಿ ಭಯವನ್ನು ನಿವಾರಿಸಲು ಕರಾವಳಿಯ ಅನಾದಿಕಾಲದಿಂದಲೂ ಆಟಿ ಕಳಂಜೆ ಕುಣಿತವನ್ನು ಆಚರಿಸುತ್ತಿದ್ದಾರೆ. ಊರಿಗೆ ತಗುಲಿದ ರೋಗ ರುಜಿನಗಳನ್ನು ಕಳೆಯಲು ಕೈಲಾಸದಿಂದ ಶಿವನು ಕಳುಹಿಸಿದ ದೈವಿಕ ಶಕ್ತಿಯೇ  ಕನ್ನಿ ಹಾಗು ಆಟಿ ಕಳೆಂಜನೆಂಬುವುದು ಈ ಭಾಗದ ಜನರ ನಂಬಿಕೆ. ಮನೆ-ಮನೆಗೆ ಬಂದು ತೊಟದ ಫಲವೊಂದನ್ನು ಎಳೆದೊಯ್ಯುವ ಕನ್ನಿ ಹಾಗೂ ಆಟಿ ಕಳಂಜೆ ತಮ್ಮ ಕುಣಿತ ಹಾಗು ಪಾಡ್ದನಗಳ ಮೂಲಕ ತುಳುನಾಡಿಗೆ ಬಂದ ಮಾರಿಯನ್ನು ಒಡಿಸುತ್ತಾನೆ ಎಂಬುದು ತುಳುನಾಡ ಜನರ ನಂಬಿಕೆ, ಕರಾವಳಿಗರು ಮನೆಗೆ ಬಂದ ಕಳಂಜೆ ಕುಟುಂಬವನ್ನು ಸ್ವಾಗತಿಸಿ ಸಂಪ್ರದಾಯದಂತೆ ,ಕಾಯಿ ,ಮೆಣಸು ,ಅರಸಿನ ,ಎಣ್ಣೆ , ಕೊತ್ತಂಬರಿ ಹಾಗೂ ಅಕ್ಕಿಕಾಳುಗಳನ್ನು ನೀಡಿ ಆಶೀರ್ವಾದ ಪಡೆಯುತ್ತಾರೆ.

ಕಳೆಂಜ ಕುಣಿತ ಭಾವ ಶುದ್ಧಿಗಾಗಿ ತುಳು ಜಾನಪದರು ಕೈಗೊಂಡ ಆಚರಣಿ ಹಾಡು, ಕುಣಿತ, ಹಿಮ್ಮೇಳ, ವೇಷ ಭೂಷಣ ಪುರಾಣ ಹಾಗು ಸಂಪ್ರದಾಯ ಎಲ್ಲ ಪ್ರಕ್ರಿಯೆಗಳನ್ನೊಳಗೊಂಡ ರಂಗಭೂಮಿ, ವೇಷ ಭೂಷಣ, ಆಚರಣೆ ಹಾಗೂ ಕಳೆಂಜ ಕಟ್ಟವುದರಲ್ಲೂ ಪ್ರಾದೇಶಿಕತೆಗುಣವಾಗಿ ವೈವಿದ್ಯಗಳಿವೆ. ದಕ್ಷಿಣಕನ್ನಡ ಜಿಲ್ಲೆಯ ಕೆಲವು ಕಡೆಗಳಲ್ಲಿ ಆಚರಿಸುವ ಕಳಂಜನ ವೇಷಭೂಷಣವು ಸಾಧಾರಣವಾಗಿದ್ದರೆ, ಸುಳ್ಯ, ಕಾಸರಗೋಡು  ಕೆಲವು ಕಡೆ ಆಚರಿಸಲ್ಪಡುವ ಕಳಂಜದ ರೂಪವು ವಿಕೃತವಾಗಿರುವುದು ಇದರ ವಿಶೇಷವಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಅಧುನಿಕತೆಯ ಪ್ರಭಾವ  ಈ ಜಾನಪದ ಆಚರಣೆಯ ಮೇಲೂ ಬಿದ್ದಿವೆ.

ಆಟಿ ಕಳಂಜಗಳು ತಮ್ಮ ಮಹತ್ವವನ್ನು ಕಳೆದುಕೊಂಡು ನೇಪತ್ಯದೆಡೆಗೆ ಸಾಗುತ್ತಿದೆ. ಕಾಸರಗೋಡಿನ ಕೆಲವು ಕಡೆಗಳಲ್ಲಿ ಇದನ್ನು ಒಂದು ಧಾರ್ಮಿಕ ಕಟ್ಟುಪಾಡುಗಳಂತೆ ಆಚರಿಸುವ ಉದ್ಧೇಶದಿಂದ ಆ ಭಾಗದಲ್ಲಿ ಇಂದಿಗೂ ಕಳಂಜಗಳು ಕಂಡುಬರುತ್ತಿದ್ದು, ಉಳಿದ ಪ್ರದೇಶಗಳಲ್ಲಿ ಇದು ಮರೆಯಾಗುತ್ತಿದೆ. ಸಾಮಾನ್ಯವಾಗಿ ಈ ನೃತ್ಯವನ್ನು ಕರಾವಳಿ ಭಾಗದಲ್ಲಿ ಆಚರಣೆಯಲ್ಲಿರುವ ಭೂತಾರಾಧನೆಯಲ್ಲಿ ತೊಡಗಿಕೊಂಡಿರುವ ನರ್ತಕರೇ ಮಾಡುತ್ತಾರೆ. ಸಣ್ಣ ಮಕ್ಕಳಿಂದ ಹಿಡಿದು ಯುವಕರು ಈ ನೃತ್ಯವನ್ನು ಮಾಡುತ್ತಿದ್ದು, ಕರಾವಳಿಯ ಸಂಪ್ರದಾಯದಲ್ಲಿ ಈ ನೃತ್ಯಕ್ಕೂ ಹೆಚ್ಚಿನ ಮಹತ್ವ ನೀಡಲಾಗಿದೆ.

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು
Published by:Seema R
First published: