ಫೆ. 24ರಂದು ಮಂಗಳೂರು, ಕೇರಳ ಮೊದಲಾದ ಕಡೆ ಭಾರೀ ಜಲಪ್ರವಾಹ?

ಭೂಮಿಗೆ ಚಂದ್ರ ಅತ್ಯಂತ ಸಮೀಪ ಬರುತ್ತಿರುವ ಹಿನ್ನೆಲೆಯಲ್ಲಿ ಸಮುದ್ರದಲ್ಲಿ ಭಾರೀ ಉಬ್ಬರ ಉಂಟಾಗಿ ಪ್ರವಾಹ ಸೃಷ್ಟಿಯಾಗಬಹುದೆನ್ನಲಾಗಿದೆ.

Vijayasarthy SN | news18
Updated:February 22, 2019, 8:28 PM IST
ಫೆ. 24ರಂದು ಮಂಗಳೂರು, ಕೇರಳ ಮೊದಲಾದ ಕಡೆ ಭಾರೀ ಜಲಪ್ರವಾಹ?
ಕೇರಳ ಪ್ರವಾಹ ಪರಿಸ್ಥಿತಿಯ ಒಂದು ದೃಶ್ಯ
Vijayasarthy SN | news18
Updated: February 22, 2019, 8:28 PM IST
ಬೆಂಗಳೂರು(ಫೆ. 22): ಕರ್ನಾಟಕ ಸೇರಿದಂತೆ ಭಾರತದ ಹಲವು ರಾಜ್ಯಗಳ ಕರಾವಳಿ ಭಾಗದಲ್ಲಿ ಶನಿವಾರ ಅಥವಾ ಭಾನುವಾರ (ಫೆ. 24) ಜಲಪ್ರವಾಹ ಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ. ಸಮುದ್ರದಲ್ಲಿ ದೊಡ್ಡದೊಡ್ಡ ಅಲೆಗಳೇಳಲಿದ್ದು, ಸಮುದ್ರತಟದ ಸಮೀಪವಿರುವ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಲಿದೆ ಎಂದು ಇಲಾಖೆಯು ಮಾಹಿತಿ ನೀಡಿದೆ.

ಕಾರಣ ಏನು?

ಭೂಮಿ ಮತ್ತು ಚಂದ್ರನ ನಡುವಿನ ಅಂತರ ಕಡಿಮೆಯಾಗುವುದರಿಂದ ಸಮುದ್ರದ ಮೇಲೆ ಚಂದ್ರನ ಪ್ರಭಾವ ಹೆಚ್ಚೇ ಇರುತ್ತದೆ. ಇದಕ್ಕೆ ವೈಜ್ಞಾನಿಕವಾಗಿ ಪೆರಿಜಿಯನ್(Perigean) ಸ್ಪ್ರಿಂಗ್ ಟೈಡ್ ಎಂದು ಕರೆಯುತ್ತಾರೆ. ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಫೆ. 24ರೊಳಗೆ ಇಂಥದ್ದೊಂದು ಬೆಳವಣಿಗೆಯಾಗಲಿದೆ. ರಾತ್ರಿ 1 ಗಂಟೆಯ ಸಮಯದಲ್ಲಿ ಸಮುದ್ರದಲ್ಲಿ ಅಲೆಗಳು ಉಕ್ಕೇರುವ ಸಾಧ್ಯತೆ ಇದೆ. ಹಾಗೆಯೇ, ಭಾರೀ ಮಳೆಯೂ ರಾಚಬಹುದು. ಇದರಿಂದ ಕರಾವಳಿಯ ತಗ್ಗು ಪ್ರದೇಶಗಳಲ್ಲಿ ಸಮುದ್ರದ ಅಲೆಗಳ ನೀರು ಮತ್ತು ಮಳೆ ನೀರು ನುಗ್ಗಿ ಭೀಕರ ಪ್ರವಾಹವೂ ಆಗಬಹುದು ಎಂದು ಎಚ್ಚರಿಸಲಾಗಿದೆ.

ಇದನ್ನೂ ಓದಿ: ‘ಪಾಕಿಸ್ತಾನದ್ದು ಅಂತಿಂಥ ಸೇನೆಯಲ್ಲ… ಕೆಣಕಿದರೆ ಹುಷಾರ್’ – ಭಾರತಕ್ಕೆ ಪಾಕ್ ಸೇನೆ ಎಚ್ಚರಿಕೆ

ಆದರೆ, ಈವರೆಗೆ ಸಮುದ್ರದಲ್ಲಿ ಉಬ್ಬರವೇಳುವ ಯಾವ ಸೂಚನೆಯೂ ಈವರೆಗೆ ಸಿಕ್ಕಿಲ್ಲ ಎಂದು ಮೀನುಗಾರರು ಹೇಳಿದ್ದಾರಾದರೂ ಭಾನುವಾರದೊಳಗೆ ಏನು ಬೇಕಾದರೂ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಕರಾವಳಿ ಭಾಗದ ಜಿಲ್ಲಾಡಳಿತಗಳು ಮುನ್ನೆಚ್ಚರಿಕೆಯ ಕ್ರಮಕ್ಕೆ ಮುಂದಾಗಿವೆ.
First published:February 22, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...