House Damage: ಕುಸಿಯುವ ಹಂತದಲ್ಲಿರುವ ಮನೆಯಲ್ಲೇ ವೃದ್ಧ ದಂಪತಿ ವಾಸ! 2 ವರ್ಷಗಳಿಂದ ತಪ್ಪದ ಗೋಳಾಟ
ಅಡಿಕೆ ಮರದ ಪಾಲಗಳನ್ನು ಆಧಾರವಾಗಿಟ್ಟುಕೊಂಡು ಛಾವಣಿಯ ಮೇಲೆ ಟರ್ಪಾಲು ಹಾಸಲಾಗಿದೆ. ಎಲ್ಲವೂ ಧರಾಶಾಹಿಯಾಗಿ ಮುಂಭಾಗದ ಒಂದು ಕೊಠಡಿ ಮಾತ್ರ ಉಳಿದುಕೊಂಡಿದ್ದು ಅದರ ಎರಡೂ ಪಾರ್ಶ್ವಗಳು ಬಿರುಕು ಬಿಟ್ಟಿವೆ. ಹೀಗಾಗಿ ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯದಲ್ಲೇ ವೃದ್ಧ ದಂಪತಿ ಬದುಕುತ್ತಿದ್ದಾರೆ.
ಬಂಟ್ವಾಳ: ಮಳೆಯ (Rain) ಕಾರ್ಮೋಡ ಕವಿದಾಗಲೆಲ್ಲ ಆ ವೃದ್ದ ದಂಪತಿಗಳಲ್ಲಿ (Old Couple) ಆತಂಕ ಕವಿಯಲಾರಂಭಿಸುತ್ತದೆ. ಮಳೆ ಬಂದರೆ ಎಲ್ಲಿ ನೀರೆಲ್ಲಾ (Water) ಒಳಗೆ ಸೋರುತ್ತದೋ, ಗಾಳಿ (Air) ಬೀಸಿದರೆ ಸಿಮೆಂಟ್ ಛಾವಣಿ (Cement roof), ಟರ್ಪಾಲು (tarpaulin) ಹಾರಿ ಹೋಗುತ್ತದೆ, ಮನೆಗೆ ತಾಗಿಕೊಂಡೇ ಇರುವ ಮಾವಿನ ಮರ (Mango Tree) ಮನೆ ಮೇಲೆ ಬೀಳುತ್ತದೋ ಎನ್ನುವ ಭಯ ಆ ಹಿರಿ ಜೀವಗಳನ್ನು ಕಾಡುತ್ತಿದೆ. ಜೀವನ ಸಂಧ್ಯಾ ಕಾಲದಲ್ಲಿ ನೆಮ್ಮದಿಯಿಂದ ಬದುಕಬೇಕಾಗಿದ್ದ ದಂಪತಿಗಳು ಭದ್ರವಾದ ಸೂರಿಲ್ಲದೆ ಭಯದಲ್ಲಿ ಬದುಕುತ್ತಿದ್ದಾರೆ.ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಬಂಟ್ವಾಳ (Bantwal) ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿಗೆ (Gram Panchayat) ಒಳಪಟ್ಟ ನಾಟಿ, ತಂಜಕ್ ಪಲ್ಕೆ ನಿವಾಸಿ ಶಾಂತಪ್ಪ ಪೂಜಾರಿ ಹಾಗೂ ಹೇಮಾವತಿ ದಂಪತಿಗಳ ಕಥೆ ಇದು.
ಬಂಟ್ವಾಳದಲ್ಲಿ ವೃದ್ಧ ದಂಪತಿ ಪರದಾಟ
ಬಂಟ್ವಾಳ ತಾಲೂಕಿನ ನರಿಕೊಂಬು ಗ್ರಾಮ ಪಂಚಾಯತಿಗೆ ಒಳಪಟ್ಟ ನಾಟಿ, ತಂಜಕ್ ಪಲ್ಕೆ ನಿವಾಸಿ ಶಾಂತಪ್ಪ ಪೂಜಾರಿ ಹಾಗೂ ಹೇಮಾವತಿ ದಂಪತಿಗಳು ಸುರಕ್ಷಿತವಾದ ಸೂರಿಲ್ಲದೆ ಆತಂಕದಲ್ಲಿಯೇ ದಿನಕಳೆಯುತ್ತಿದ್ದಾರೆ. ತನ್ನ ಹಿರಿಯರಿಂದ ಬಳುವಳಿಯಾಗಿ ಬಂದ ಹಳೆಯ ಮುರುಕಲು ಮನೆಯಲ್ಲಿ ವಾಸವಾಗಿದ್ದಾರೆ. ಈಗಾಗಲೇ ಮನೆಯ ಬಹುಭಾಗ ಕುಸಿದು ಬಿದ್ದಿದ್ದು ಹೆಂಚುಗಳೆಲ್ಲಾ ಮನೆಯ ಸುತ್ತಮುತ್ತಾ ಬಿದ್ದಿದೆ. ಅಡಿಕೆ ಮರದ ಪಾಲಗಳನ್ನು ಆಧಾರವಾಗಿಟ್ಟುಕೊಂಡು ಛಾವಣಿಯ ಮೇಲೆ ಟರ್ಪಾಲು ಹಾಸಲಾಗಿದೆ.
ಮನೆ ಬೀಳುವ ಆತಂಕದಲ್ಲಿ ನಡೆದ ಬದುಕು
ಎಲ್ಲವೂ ಧರಶಾಹಿಯಾಗಿ ಮುಂಭಾಗದ ಒಂದು ಕೊಠಡಿ ಮಾತ್ರ ಉಳಿದುಕೊಂಡಿದ್ದು ಅದರ ಎರಡೂ ಪಾರ್ಶ್ವಗಳು ಬಿರುಕು ಬಿಟ್ಟು ಯಾವಾಗ ಕುಸಿದು ಬೀಳುತ್ತದೋ ಎನ್ನುವ ಭಯ ಎದುರಾಗಿದೆ. ಮನೆಯ ಪಕ್ಕ ಜೋಪಡಿ ನಿರ್ಮಿಸಿ ಅಡುಗೆ ಕೋಣೆಯಾಗಿ ಬಳಸಿಕೊಳ್ಳಲಾಗುತ್ತಿದೆ. ಅಳಿದುಳಿದಿರುವ ಒಂದು ಕೊಠಡಿಯಲ್ಲಿ ಬಡ ವೃದ್ದ ದಂಪತಿ ಜೀವನ ಸಾಗಿಸುತ್ತಿದ್ದಾರೆ. ಜೀವನ ದುಸ್ತರ: ಈ ದಂಪತಿಗೆ ಮಕ್ಕಳಿಲ್ಲ. ಪತಿಗೆ ಪತ್ನಿ, ಪತ್ನಿಗೆ ಪತಿ ಆಸರೆ. ಏನಾದರೂ ಕೂಲಿ ಕೆಲಸ ಸಿಕ್ಕರೆ ಆದಾಯ. ಅದೂ ಇಲ್ಲವಾದರೆ ಬದುಕು ಸಾಗಿಸುವುದೇ ದುಸ್ತರ.
ವಯೋ ಸಹಜ ಕಾರಣಗಳಿಂದ ಮೈ ಬಗ್ಗಿಸಿ ದುಡಿಯಲು ಸಾಧ್ಯವಾಗುವುದಿಲ್ಲ. ಪತ್ನಿ ಹೇಮಾವತಿ ಅವರು ಉಬ್ಬಸ ಕಾಯಿಲೆಯಿಂದ ಬಳಲುತ್ತಿದ್ದಾರೆ. ಒಟ್ಟಿನಲ್ಲಿ ಜೀವನ ನಿರ್ವಹಣೆಯ ಸವಾಲಿನೊಂದಿಗೆ ಅಭದ್ರ ಮನೆಯಲ್ಲಿ ಬದುಕು ಅನಿವಾರ್ಯತೆ ಈ ದಂಪತಿಗಳಿಗೆ ಬಂದೊದಗಿದೆ. ಮನೆಯ ಕನಸು ಭಗ್ನಕಳದೆ 2016-17 ನೇ ಸಾಲಿನ ಬಸವ ವಸತಿ ಯೋಜನೆಯಡಿ ನರಿಕೊಂಬು ಗ್ರಾಮ ಪಂಚಾಯತಿ ಶಾಂತಪ್ಪ ಅವರಿಗೆ ಸಹಾಯಧನ ಒಳಪಟ್ಟು ಮನೆ ಮಂಜೂರು ಮಾಡಿತ್ತು.
ಕೈಯಲ್ಲಿ ನಯಾಪೈಸೆ ಇಲ್ಲದೇ ಅರ್ಧಕ್ಕೆ ನಿಂತ ಮನೆ ಕೆಲಸ
ಅಂತೆಯೇ ಮೊದಲ ಎರಡು ಕಂತುಗಳನ್ನು ಪಡೆದುಕೊಂಡು ಈಗಿರುವ ಹಳೆಯ ಮನೆಯ ಪಕ್ಕವೇ ತಮ್ಮದೇ ಜಮೀನಿನಲ್ಲಿ ಪಂಚಾಂಗ ಹಾಗೂ ಗೋಡೆಯನ್ನು ನಿರ್ಮಿಸಿ ಕೊಂಡಿದ್ದಾರೆ. ಮುಂದಿನ ಕಂತಿನ ಹಣ ಬಿಡುಗಡೆಯಾಗಬೇಕಾದರೆ ಲಿಂಟಲ್ ಕೆಲಸ ಪೂರ್ಣಗೊಳ್ಳಬೇಕಾಗಿತ್ತು. ಆದರೆ ಕೈಯಲ್ಲಿ ನಯಾಪೈಸೆ ಹಣವಿಲ್ಲದೆ ಉಳಿದ ಕಾಮಗಾರಿಯನ್ನು ಪೂರ್ಣಗಳಿಸಲು ಸಾಧ್ಯವಾಗದೇ ಸಹಾಯಧನದ ಉಳಿದ ಮೊತ್ತ ಪಾವತಿಯಾಗಿಲ್ಲ.
ಇದರಿಂದಗಿ ಕಳೆದ ಎರಡು ವರ್ಷಗಳಿಂದ ಅದೇ ಸ್ಥಿತಿಯಲ್ಲಿ ಮನೆ ಉಳಿದು ಕಳೆ ಗಿಡಗಳು ಬೆಳೆಯಲಾರಂಭಿಸಿದೆ. ವಸತಿ ಯೋಜನೆಯ ಮನೆ ನಿರ್ಮಾಣದ ಅವಧಿಯು ಮೀರಿದ್ದು ಮುಂದೇನು ಎನ್ನುವ ಆತಂಕ ವೃದ್ದ ದಂಪತಿಗಳನ್ನು ಕಾಡುತ್ತಿದೆ.
Published by:Annappa Achari
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ