Mangaluru Travel Alert: ಕೇಂದ್ರ ಸಚಿವ ಅಮಿತ್ ಶಾ ರೋಡ್ ಶೋ, ವಾಹನ ಸಂಚಾರದಲ್ಲಿ ಬದಲಾವಣೆ

ಅಮಿತ್ ಶಾ, ಗೃಹ ಸಚಿವ

ಅಮಿತ್ ಶಾ, ಗೃಹ ಸಚಿವ

ಅಮಿತ್ ಶಾ ರೋಡ್ ಶೋ ಹಿನ್ನೆಲೆಯಲ್ಲಿ ಮಂಗಳೂರು ನಗರದಲ್ಲಿನ ವಾಹನ ಸಂಚಾರದಲ್ಲಿ ಭಾರೀ ಬದಲಾವಣೆ ಮಾಡಲಾಗಿದೆ.

  • moneycontrol
  • 3-MIN READ
  • Last Updated :
  • Mangalore, India
  • Share this:

ಮಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು (Home Minister Amit Shah) ಏಪ್ರಿಲ್ 29ರ ಶನಿವಾರದಂದು ಮಂಗಳೂರು ನಗರದಲ್ಲಿ (Mangaluru News) ರೋಡ್ ಶೋ ನಡೆಸಲಿದ್ದಾರೆ. ಈ ಹಿನ್ನೆಲೆ ನಗರದಲ್ಲಿ ವಾಹನ ಸಂಚಾರದಲ್ಲಿ ಬದಲಾವಣೆ ನಡೆಸಲಾಗಿದ್ದು, ಶನಿವಾರ ನಗರಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ಸಂಚಾರ ಬದಲಾವಣೆ ಬಗ್ಗೆ ಗಮನಹರಿಸಿ ನಗರಕ್ಕೆ ಆಗಮಿಸಿದ್ದಲ್ಲಿ ಹೆಚ್ಚು ಅನುಕೂಲವಾಗಲಿದೆ.


ಅಮಿತ್ ಶಾ ರೋಡ್ ಶೋ ಮ್ಯಾಪ್
ಕೇಂದ್ರ ಗೃಹ ಸಚಿವ ಅಮಿತ್ ಶಾ ನಡೆಸುವ ರೋಡ್ ಶೋ ನಗರದ ಟೌನ್ ಹಾಲ್​ನಿಂದ ನವಭಾರತ್ ಸರ್ಕಲ್​ವರೆಗೆ ನಡೆಯಲಿದೆ. ಟೌನ್ ಹಾಲ್, ಕೆಬಿ ಕಟ್ಟೆ, ಹಂಪನಕಟ್ಟೆ, ಕೆಎಸ್ ರಾವ್ ರೋಡ್ ರಸ್ತೆಯಾಗಿ ನವಭಾರತ್ ಸರ್ಕಲ್​ವರೆಗೆ ರೋಡ್ ಶೋ ನಡೆಯಲಿದೆ. ಹೀಗಾಗಿ ರೋಡ್ ಶೋ ಸಮಯವಾದ ಮಧ್ಯಾಹ್ನ 3 ಗಂಟೆಯಿಂದ ಸಾಯಂಕಾಲ 7 ಗಂಟೆವರೆಗೆ ಈ ರಸ್ತೆಯಲ್ಲಿ ಸಂಪೂರ್ಣ ವಾಹನ ಸಂಚಾರ ನಿಷೇಧಿಸಲಾಗಿದೆ.


ಸಂಚಾರ ಬದಲಾವಣೆ ಗಮನಿಸಿ
1. ಉಡುಪಿಯಿಂದ ಮಂಗಳೂರು ಕಡೆಗೆ ಬರುವ ಎಲ್ಲ ಬಸ್​ಗಳು ಕೊಟ್ಟಾರಚೌಕಿ, ಕೆಪಿಟಿ, ನಂತೂರು, ಶಿವಭಾಗ್, ಬೆಂದೂರ್​ವೆಲ್, ಕರಾವಳಿ ಜಂಕ್ಷನ್, ಕಂಕನಾಡಿ ಜಂಕ್ಷನ್, ವೆಲೆನ್ಸಿಯಾ ಮಾರ್ಗವಾಗಿ ಮಂಗಳಾದೇವಿಗೆ ತಲುಪುವುದು. ನಂತರ ಅದೇ ಮಾರ್ಗವಾಗಿ ವಾಪಸ್ ಬರಬೇಕಿದೆ.


2. ಉಡುಪಿಯಿಂದ ಬರುವ ಕೆಎಸ್ಆರ್​ಟಿಸಿ ಬಸ್​ಗಳು ಕೊಟ್ಟಾರಚೌಕಿವರೆಗೆ ಬಂದು ಅಲ್ಲಿಂದ ಕೆಪಿಟಿ, ಸರ್ಕ್ಯೂಟ್ ಹೌಸ್, ಬಟ್ಟಗುಡ್ಡ, ಬಿಜೈ ಆಗಿ ಕೆಎಸ್ಆರ್​ಟಿಸಿ ನಿಲ್ದಾಣ ತಲುಪಬಹುದಾಗಿದೆ.




3. ತಲಪಾಡಿ ಹಾಗೂ ಪಡೀಲ್ ಕಡೆಯಿಂದ ಸ್ಟೇಟ್ ಬ್ಯಾಂಕ್ ಬರುವ ಬಸ್​ಗಳು ಪಂಪ್ವೆಲ್ ನಂತರ ಕಂಕನಾಡಿ ಜಂಕ್ಷನ್, ವೆಲೆನ್ಸಿಯಾ, ಮಂಗಳಾದೇವಿ ಕಡೆಗೆ ಸಂಚರಿಸುವುದು. ವಾಪಸ್ ಅದೇ ದಾರಿಯಲ್ಲಿ ಹಿಂದಿರುಗಬೇಕಿದೆ.


ಇದನ್ನೂ ಓದಿ: Mangaluru Positive News: ಮಂಗಳೂರು ಮಕ್ಕಳ ಸಾಮರಸ್ಯದ ಪ್ರವಾಸ! ಮಸೀದಿ, ಚರ್ಚ್, ದೇವಸ್ಥಾನ ದರ್ಶನ


4. ತಲಪಾಡಿ ಹಾಗೂ ಪಡೀಲ್ ಬರುವ ಕೆಎಸ್ಆರ್ ಟಿಸಿ ಬಸ್​ಗಳು ಪಂಪ್ವೆಲ್, ನಂತೂರು, ಕೆಪಿಟಿ, ಸರ್ಕ್ಯೂಟ್ ಹೌಸ್, ಬಟ್ಟಗುಡ್ಡ, ಬಿಜೈ ಆಗಿ ಕೆಎಸ್ಆರ್ಟಿಸಿ ನಿಲ್ದಾಣ ತಲುಪಬಹುದಾಗಿದೆ.


5. ಕೆಎಸ್ಆರ್​ಟಿಸಿಯಿಂದ ಹೊರಡುವ ಎಲ್ಲ ಬಸ್​ಗಳು ಕುಂಟಿಕಾನ ಮೂಲಕ ಕೆಪಿಟಿ ಅಥವಾ ಕೊಟ್ಟಾರಚೌಕಿ ತಲುಪಬಹುದಾಗಿದೆ.


6. ಕೊಟ್ಟಾರಚೌಕಿಯಿಂದ ಸ್ಟೇಟ್ ಬ್ಯಾಂಕ್ ಕಡೆ ಬರುವ ಎಲ್ಲ ವಾಹನಗಳು ಲೇಡಿಹಿಲ್, ಮಣ್ಣಗುಡ್ಡೆ, ಬಾಲಾಜಿ ಜಂಕ್ಷನ್, ಬಂದರ್ ಜಂಕ್ಷನ್ ಆಗಿ ಸಂಚರಿಸಬಹುದಾಗಿದೆ.


ಇದನ್ನೂ ಓದಿ: Dakshina Kannada: ಫಸ್ಟ್‌ ಕ್ಲಾಸ್​ನಲ್ಲಿ ಪಿಯುಸಿ ಪಾಸ್‌ ಆದ ಗ್ರಾಮ ಪಂಚಾಯತ್ ಅಧ್ಯಕ್ಷೆ!

top videos


    7. ಲಾಲ್ ಬಾಗ್ ಕಡೆಯಿಂದ ಬಲ್ಮಠ ಕಡೆಗೆ ತೆರಳುವ ವಾಹನಗಳು ಬೆಸೆಂಟ್ ಸರ್ಕಲ್, ಜೈಲು ರಸ್ತೆ, ಕರಂಗಲ್ಪಾಡಿ, ಬಂಟ್ಸ್ ಹಾಸ್ಟೆಲ್ , ಮಲ್ಲಿಕಟ್ಟೆಯಾಗಿ ಅಥವಾ ಪಿವಿಎಸ್, ಮಲ್ಲಿಕಟ್ಟೆಯಾಗಿ ಬಲ್ಮಠ ತಲುಪಬಹುದಾಗಿದೆ.

    First published: