ಮಂಗಳೂರು: ಸ್ಕೇಟಿಂಗ್ ರಿಂಕ್ಗೆ ಇಳಿದ್ರೆ ಸಾಕು ಈ ಪುಟ್ಟ ಪೋರಿಯದ್ದು ಮಿಂಚಿನ ವೇಗದ ಓಟ. ಸುಯ್ಯನೆ ಗಾಳಿಯಲ್ಲಿ ತೇಲಿದಂತೆ ಸ್ಕೇಟಿಂಗ್ ಮಾಡುವ ಈಕೆ, ಪೈಪೋಟಿಗೆ ಇಳಿದ್ರಂತೂ ಪದಕ ಬಾಚೋದು (Success Story) ಗ್ಯಾರಂಟಿ. ಇನ್ನೂ 7ರ ಹರೆಯದ ಈ ಬಾಲಕಿಗೆ ಭವಿಷ್ಯದ ಅತ್ಯುತ್ತಮ ಸ್ಕೇಟರ್ (Skater) ಆಗುವ ಹುಮ್ಮಸ್ಸು. ಇವರೇ ಕಡಲನಗರಿ (Mangaluru News) ಮಂಗಳೂರಿನ ಆರ್ನಾ ರಾಜೇಶ್. ಇದೀಗ ಇವರ ಸಾಧನೆಗೆ ಕಿರಿಯ ವಯಸ್ಸಿನಲ್ಲಿಯೇ 2023ನೇ ಸಾಲಿನ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಪ್ರಶಸ್ತಿ (Keladi Chennamma Award) ಅರಸಿ ಬಂದಿದೆ.
ಇನ್ನೂ ಒಂದನೇ ತರಗತಿ ಸೇರುವ ಮುನ್ನವೇ ಆರ್ನಾ ರಾಜೇಶ್ ಸ್ಕೇಟಿಂಗ್ ರಿಂಕ್ನಲ್ಲಿ ಕಾಣಿಸಿಕೊಂಡವರು. ಈ ಮೂಲಕ ಜಿಲ್ಲಾ, ರಾಜ್ಯ, ರಾಷ್ಟ್ರ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಕೀರ್ತಿ ಪತಾಕೆ ಹಾರಿಸಿದವರು. ಇವರ ಪ್ರಮುಖ ಸಾಧನೆ ಅಂದರೆ 2021ರಲ್ಲಿ ರೋಲರ್ ಸ್ಕೇಟಿಂಗ್ ಫೆಡರೇಷನ್ ಆಫ್ ಇಂಡಿಯಾ ದೆಹಲಿಯಲ್ಲಿ ಆಯೋಜಿಸಿದ 59ನೇ ರಾಷ್ಟಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್‌ನಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಎರಡು ಪದಕಗಳನ್ನು ಪಡೆದು ರಾಜ್ಯಕ್ಕೆ ಕೀರ್ತಿ ತಂದಿದ್ದರು.
ಇನ್ನು 2022ರಲ್ಲಿ ಸಿಬಿಎಸ್‌ಸಿ ಬೋರ್ಡ್ ಹಾಗೂ ಬೆಳಗಾವಿಯ ಬಿ.ಬಿ ಹಂಜಿ ಇಂಟರ್ ನ್ಯಾಷನಲ್ ಸ್ಕೂಲ್ ಆಯೋಜಿಸಿದ್ದ ಸೌತ್ ಝೋನ್ ಸ್ಕೇಟಿಂಗ್ ಚಾಂಪಿಯನ್ಶಿಪ್ನಲ್ಲಿ 2 ಚಿನ್ನದ ಪದಕ ಪಡೆದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದರು.
ಇನ್ನೂ 2ನೇ ತರಗತಿ ಬಾಲಕಿ
ಆರ್ನಾ ರಾಜೇಶ್ ಮಂಗಳೂರಿನ ಕದ್ರಿ ಹಿಲ್ಸ್ನ ವೈದ್ಯ ದಂಪತಿಯಾದ ಡಾ. ರಾಜೇಶ್ ಹುಕ್ಕೇರಿ ಹಾಗೂ ಡಾ. ಅನಿತಾ ರಾಜೇಶ್ ದಂಪತಿಯ ಪುತ್ರಿಯಾಗಿದ್ದಾರೆ. ಪ್ರಸ್ತುತ ಆರ್ನಾ ಬಿಜೈಯ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್ನ 2ನೇ ತರಗತಿ ವಿದ್ಯಾರ್ಥಿನಿಯಾಗಿದ್ದಾರೆ. ಕದ್ರಿ ರೋಲರ್ಸ್ ಸ್ಕೇಟಿಂಗ್ ಕ್ಲಬ್ನ ಹೆಮ್ಮೆಯ ವಿದ್ಯಾರ್ಥಿನಿಯೂ ಆಗಿದ್ದಾರೆ.
ಇದನ್ನೂ ಓದಿ: Mangaluru New Traffic Rules: ಪ್ರಯಾಣಿಸುವ ಮುನ್ನ ಗಮನಿಸಿ, ಮಂಗಳೂರಿನಲ್ಲಿ ಟ್ರಾಫಿಕ್ ನಿಯಮ ಬದಲಾವಣೆ
ಕೆಳದಿ ಚೆನ್ನಮ್ಮ ಪ್ರಶಸ್ತಿಯ ಗರಿ
ಸ್ಕೇಟಿಂಗ್ ರಿಂಕ್ನಲ್ಲಿ ಮಿಂಚು ಹರಿಸುವುದರ ಜೊತೆಗೆ, ಭವಿಷ್ಯದ ಭರವಸೆಯಾಗಿರುವ ಪುಟ್ಟ ಬಾಲಕಿ ಆರ್ನಾ ರಾಜೇಶ್ ಅವರಿಗೆ ಅರ್ಹವಾಗಿಯೇ 2023ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಪ್ರಶಸ್ತಿ ಅರಸಿ ಬಂದಿದೆ. ಮಂಗಳೂರು ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣ್ಯರ ಸಮ್ಮುಖದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಇದನ್ನೂ ಓದಿ: Mangaluru New Traffic Rules: ಪ್ರಯಾಣಿಸುವ ಮುನ್ನ ಗಮನಿಸಿ, ಮಂಗಳೂರಿನಲ್ಲಿ ಟ್ರಾಫಿಕ್ ನಿಯಮ ಬದಲಾವಣೆ
ವಿಶೇಷ ಅಂದ್ರೆ ಆರ್ನಾ ಸಹೋದರಿ ಅನಘಾ ರಾಜೇಶ್ ಕೂಡಾ ಸ್ಕೇಟಿಂಗ್ ನಲ್ಲಿ ಅಂತರಾಷ್ಟ್ರೀಯ ಮಟ್ಟದ ಸಾಧನೆ ಮಾಡಿದ್ದು, ಅವರ ಹಾದಿಯಲ್ಲೇ ಇದೀಗ ಆರ್ನಾ ಮುಂದುವರೆದಿದ್ದಾರೆ. ಆಲ್ ದಿ ಬೆಸ್ಟ್ ಆರ್ನಾ ರಾಜೇಶ್!
ವರದಿ: ಇರ್ಷಾದ್ ಕಿನ್ನಿಗೋಳಿ, ಮಂಗಳೂರು
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ