ಜಯದೇವ ಆಸ್ಪತ್ರೆ ವೈದ್ಯರಿಂದ 40 ದಿನದ ಮಗುವಿಗೆ ಯಶಸ್ವಿ ಓಪನ್ ಹಾರ್ಟ್ ಸರ್ಜರಿ

ಸದ್ಯ ಮಗುವನ್ನು ವೆಂಟಿಲೇಟರ್​ನಿಂದ ಹೊರ ತರಲಾಗಿದೆ. ಬಳಿಕ ಸ್ವಂತವಾಗಿ ಉಸಿರಾಡುತ್ತಿರುವ ಮಗು ಇದೀಗ ಚೇತರಿಸಿಕೊಳ್ಳುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮಗು ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿಎನ್​​​ ಮಂಜುನಾಥ್ ಮಾಹಿತಿ ನೀಡಿದ್ದಾರೆ

 ಜಯದೇವ ಆಸ್ಪತ್ರೆ

ಜಯದೇವ ಆಸ್ಪತ್ರೆ

  • Share this:
ಬೆಂಗಳೂರು(ಫೆ. 11): ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್​ನಲ್ಲಿ ಆ್ಯಂಬುಲೆನ್ಸ್​ನಲ್ಲಿ ಕರೆ ತಂದಿದ್ದ 40 ದಿನದ ಮಗು ಸೈಫುಲ್ ಅಝ್ಮಾನ್‍ನ ಓಪನ್ ಹಾರ್ಟ್ ಸರ್ಜರಿ ಮಾಡುವಲ್ಲಿ ಜಯದೇವ ಆಸ್ಪತ್ರೆಯ ವೈದ್ಯರ ತಂಡ ಯಶಸ್ವಿಯಾಗಿದೆ.

ಮಗು ಸೈಫುಲ್​​​​ ಅಝ್ಮಾನ್​​​​​​​​ ಪಲ್ಮನರಿ ವೇನ್ಸ್ ನಲ್ಲಿ ಸಮಸ್ಯೆಯಿಂದ ಬಳಲುತ್ತಿತ್ತು. ಈ ಹಿನ್ನೆಲೆಯಲ್ಲಿ ಚಿಕಿತ್ಸೆಗೆಂದು ಮಂಗಳೂರಿನಿಂದ ಜಯದೇವ ಆಸ್ಪತ್ರೆಗೆ ಕರೆತರಲಾಗಿತ್ತು.  ಶಸ್ತ್ರ ಚಿಕಿತ್ಸೆ ಮೂಲಕ ಬಲಗಡೆ ಇದ್ದ ಪಲ್ಮನರಿ ವೇನ್ಸ್ ಅನ್ನು ಎಡಕ್ಕೆ ಹಾಕಿದ ವೈದ್ಯರು ಯಶಸ್ವಿಯಾಗಿ ಶಸ್ತ್ರ ಚಿಕಿತ್ಸೆಯನ್ನು ಮಾಡಿ  ಮಗುವಿಗೆ ಜೀವದಾನ ನೀಡಿದ್ದಾರೆ.

ಸದ್ಯ ಮಗುವನ್ನು ವೆಂಟಿಲೇಟರ್​ನಿಂದ ಹೊರ ತರಲಾಗಿದೆ. ಬಳಿಕ ಸ್ವಂತವಾಗಿ ಉಸಿರಾಡುತ್ತಿರುವ ಮಗು ಇದೀಗ ಚೇತರಿಸಿಕೊಳ್ಳುತ್ತಿದೆ. ಇನ್ನು ಮೂರ್ನಾಲ್ಕು ದಿನಗಳಲ್ಲಿ ಮಗು ಸಂಪೂರ್ಣ ಗುಣಮುಖವಾಗುವ ಸಾಧ್ಯತೆ ಇದೆ ಎಂದು ಜಯದೇವ ಆಸ್ಪತ್ರೆ ನಿರ್ದೇಶಕ ಡಾ. ಸಿಎನ್​​​ ಮಂಜುನಾಥ್ ಮಾಹಿತಿ ನೀಡಿದ್ದಾರೆ.

ಡಾ. ಜಯಂತ್ ಕುಮಾರ್ ಅವರ ತಂಡ ಯಶಸ್ವಿಯಾಗಿ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದೆ. ಡಾ. ಆನಂದ್, ಡಾ. ಜಯಂತ್ ಸೇರಿದಂತೆ ಒಟ್ಟು 12 ವೈದ್ಯರ ತಂಡ ಮಗುವಿಗೆ ಶಸ್ತ್ರಚಿಕಿತ್ಸೆ ಮಾಡಿದೆ. ಮಗುವಿನ ಚಿಕಿತ್ಸೆಗೆ 2.5 ಲಕ್ಷ ರೂ. ಖರ್ಚಾಗಿದ್ದು, 1 ಲಕ್ಷ ರೂ ಬಿಪಿಎಲ್ ಕಾರ್ಡಿನಿಂದ ಭರಿಸಲಾಗುವುದು. ಉಳಿದ ಹಣವನ್ನು ಜಯದೇವ ಆಸ್ಪತ್ರೆಯೇ ನೋಡಿಕೊಳ್ಳಲಿದೆ ಎಂದು ತಿಳಿಸಿದರು.

ಇದನ್ನೂ ಓದಿ : ಹಸುಗೂಸಿನ ಹೃದಯದಲ್ಲಿ ರಂಧ್ರ; ಜೀರೋ ಟ್ರಾಫಿಕ್​ನಲ್ಲಿ ಶಿವಮೊಗ್ಗದಿಂದ ಬೆಂಗಳೂರಿಗೆ 7 ದಿನದ ಮಗು ರವಾನೆ

ಗುರುವಾರ ಸೈಫುಲ್‍ನನ್ನು ಹೃದಯದ ಶಸ್ತ್ರಚಿಕಿತ್ಸೆಗಾಗಿ ಮಂಗಳೂರಿನಿಂದ ಬೆಂಗಳೂರಿಗೆ ಝೀರೋ ಟ್ರಾಫಿಕ್ ನಲ್ಲಿ ಆ್ಯಂಬುಲೆನ್ಸ್​ನಲ್ಲಿ ಮೂಲಕ ರವಾನಿಸಲಾಗಿತ್ತು. ಮಂಗಳೂರಿನ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದ ಮಗುವಿಗೆ ತುರ್ತಾಗಿ ಶಸ್ತ್ರಚಿಕಿತ್ಸೆ ಆಗಬೇಕಿತ್ತು. ಅದಕ್ಕಾಗಿ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಗೆ ಮಗುವನ್ನು ರವಾನಿಸಲಾಗಿತ್ತು. ಚಾಲಕ ಹನೀಫ್ ಅವರು ಮಂಗಳೂರಿನಿಂದ ಆ್ಯಂಬುಲೆನ್ಸ್​ನಲ್ಲಿ ಮೂಲಕ ಝೀರೋ ಟ್ರಾಫಿಕ್ ವ್ಯವಸ್ಥೆಯಲ್ಲಿ ಮಗುವನ್ನು ಕೇವಲ 4 ಗಂಟೆ 32 ನಿಮಿಷದಲ್ಲಿ ಬೆಂಗಳೂರಿಗೆ ತಲುಪಿಸಿದ್ದರು.
First published: