• Home
 • »
 • News
 • »
 • state
 • »
 • Dakshina Kannada: ಭಾರತದಲ್ಲೇ ಮೊದಲ ಬಾರಿಗೆ ಆಳ್ವಾಸ್​ನಲ್ಲಿ ಅಂತರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ವಿವರ

Dakshina Kannada: ಭಾರತದಲ್ಲೇ ಮೊದಲ ಬಾರಿಗೆ ಆಳ್ವಾಸ್​ನಲ್ಲಿ ಅಂತರಾಷ್ಟ್ರೀಯ ಜಾಂಬೂರಿ, ಇಲ್ಲಿದೆ ವಿವರ

ಆಳ್ವಾಸ್ ಕಾಲೇಜು (ಸಂಗ್ರಹ ಚಿತ್ರ)

ಆಳ್ವಾಸ್ ಕಾಲೇಜು (ಸಂಗ್ರಹ ಚಿತ್ರ)

ಮೊಟ್ಟ ಮೊದಲ ಬಾರಿಗೆ ಸಾಂಸ್ಕೃತಿಕ ಜಾಂಬೂರಿಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರತಿದಿನ ಲಕ್ಷಾಂತರ ಮಂದಿ ಸೇರಲಿದ್ದು, ನಿತ್ಯವೂ 2 ಲಕ್ಷ ಮಂದಿಗೆ ಬೇಕಾದ ಊಟೋಪಚಾರ ನಡೆಯಲಿದೆ.

 • News18 Kannada
 • 2-MIN READ
 • Last Updated :
 • Mangalore, India
 • Share this:

  ಮಂಗಳೂರು: ನುಡಿಸಿರಿ, ವಿರಾಸತ್ ಮೂಲಕ ಸುದ್ದಿ ಮಾಡುತ್ತಿದ್ದ ಆಳ್ವಾಸ್ ಈ ಬಾರಿ ಅದೆಲ್ಲಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ ಸಜ್ಜಾಗಿದೆ. ಆಳ್ವಾಸ್ ವಿದ್ಯಾಸಂಸ್ಥೆಯ ವಿದ್ಯಾಗಿರಿ ಕ್ಯಾಂಪಸ್ ಅಂತರಾಷ್ಟ್ರೀಯ ಸ್ಕೌಟ್ಸ್ ಗೈಡ್ಸ್ ಸಾಂಸ್ಕೃತಿಕ ಜಾಂಬೂರಿಗೆ (Cultural Jamboree of Scouts and Guides) ವೇದಿಕೆಯಾಗಿದೆ. ಭಾರತದಲ್ಲೇ ಮೊಟ್ಟ ಮೊದಲ ಬಾರಿಗೆ ನಡೆಯುತ್ತಿರುವ ಈ ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿಗೆ ಮೂಡಬಿದಿರೆಯ ಆಳ್ವಾಸ್ (Alva’s Education Foundation) ಸರ್ವ ರೀತಿಯಲ್ಲಿ ಸನ್ನದ್ಧವಾಗಿದೆ.


  ಯಾವಾಗ ಜಾಂಬೂರಿ?
  ಅಂತರಾಷ್ಟ್ರೀಯ ಸಾಂಸ್ಕೃತಿಕ ಜಾಂಬೂರಿ ಡಿಸೆಂಬರ್ 21 ರಿಂದ ಡಿಸೆಂಬರ್ 27ರ ವರೆಗೆ ಒಂದು ವಾರ ಕಾಲ ನಡೆಯಲಿದೆ. ದೇಶ, ವಿದೇಶಗಳ 50 ಸಾವಿರ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಪ್ರತಿನಿತ್ಯ ಒಂದು ಲಕ್ಷ ಜನ ಸೇರುವ ನಿರೀಕ್ಷೆ ಹೊಂದಲಾಗಿದೆ. ಸಾವಿರಕ್ಕೂ ಅಧಿಕ ಸಂಪನ್ಮೂಲ ವ್ಯಕ್ತಿಗಳು ಆಗಮಿಸಲಿದ್ದು, ಕಾರ್ಯಕ್ರಮದ ಯಶಸ್ವಿಗಾಗಿ 3 ಸಾವಿರ ಸ್ವಯಂ ಸೇವಕರು ದುಡಿಯಲಿದ್ದಾರೆ.


  ವಿವಿಧ ಮೇಳ, ಭರದ ಸಿದ್ಧತೆ
  ಆಳ್ವಾಸ್ ವಿದ್ಯಾಗಿರಿ ಕ್ಯಾಂಪಸ್​ನಲ್ಲಿ ಸಾಂಸ್ಕೃತಿಕ ಜಾಂಬೂರಿಗೆ ಸಕಲ ಸಿದ್ಧತೆ ನಡೆದಿದೆ. ಜಾಂಬೂರಿಯಲ್ಲಿ ಕೃಷಿ, ವಿಜ್ಞಾನ, ಆಹಾರ, ಪುಸ್ತಕ ಹಾಗೂ ಸ್ವದೇಶಿ ಮೇಳಗಳು ಮೇಳೈಸಲಿದೆ. ಇದು ಮಾತ್ರವಲ್ಲದೇ ಮ್ಯಾಜಿಕ್ ಶೋ, ಗಾಳಿಪಟ ಪ್ರದರ್ಶನ, ಪಪೆಟ್ ಶೋ, ಫಲಪುಷ್ಪ ಪ್ರದರ್ಶನ, ಸಿನಿ ಸಿರಿ, ಫೋಟೋಗ್ರಫಿ, ಮ್ಯಾರಥಾನ್ ಓಟ, ಯೋಗಥಾನ್ ಇನ್ನೂ ಹಲವು ಬಗೆಯ ಕಾರ್ಯಕ್ರಮಗಳು ನಡೆಯಲಿದೆ.


  ಸಾಂಸ್ಕೃತಿಕ ಕಾರ್ಯಕ್ರಮ, ಸಾಹಸ ಪ್ರದರ್ಶನ
  ಅಂತರಾಷ್ಟ್ರೀಯ ಜಾಂಬೂರಿಯಲ್ಲಿ 42 ಸಾಹಸ ಕಲೆಗಳು ಪ್ರದರ್ಶನಗೊಳ್ಳಲಿದೆ. ಇನ್ನುಳಿದಂತೆ ಏಕಕಾಲಕ್ಕೆ ಹತ್ತು ವೇದಿಕೆಗಳಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯಲಿದೆ. ಪ್ರತಿದಿನ ಸಂಜೆ 5 ರಿಂದ 8.30 ರವರೆಗೆ ಸಾಂಸ್ಕೃತಿಕ ಕಲಾ ಪ್ರದರ್ಶನ ಇರಲಿದೆ. ದೇಶೀಯ ಕಲೆಗಳ ಪ್ರದರ್ಶನಕ್ಕೆ ಇದರಲ್ಲಿ ಆದ್ಯತೆ ಸಿಗಲಿದೆ.


  50 ಸಾವಿರ ಮಂದಿಗೆ ಆಸನ
  ಜಾಂಬೂರಿ ಪ್ರಮುಖ ವೇದಿಕೆಯಿರುವ ಬಯಲು ರಂಗ ಮಂಟಪದಲ್ಲಿ ಏಕಕಾಲಕ್ಕೆ 50 ಸಾವಿರ ಮಂದಿ ಆಸೀನರಾಗುವ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿಯೇ ಪ್ರಮುಖ ಕಾರ್ಯಕ್ರಮಗಳು ಜರುಗಲಿದೆ. ಖ್ಯಾತ ಗಾಯಕರಾದ ಶಂಕರ ಮಹಾದೇವನ್, ವಿಜಯ್ ಪ್ರಕಾಶ್ ಸಂಗೀತ ರಸಸಂಜೆ ನಡೆಯಲಿದೆ.


  ಇದನ್ನೂ ಓದಿ: Positive Story: ಉತ್ತರ ಕನ್ನಡಕ್ಕೆ ಮಲ್ಟಿ ನ್ಯಾಷನಲ್ ಕಂಪನಿಗಳು! ಸರ್ಕಾರಕ್ಕೇ ಮಾದರಿಯಾಗ್ತಿದೆ ಮನುವಿಕಾಸ


  2 ಲಕ್ಷ ಮಂದಿಗೆ ನಿತ್ಯ ಊಟ
  ಇಡೀ ಜಾಂಬೂರಿಯ ಅಂದಾಜು ವೆಚ್ಚ 35 ಕೋಟಿ ರೂ. ಎಂದು ಅಂದಾಜಿಸಲಾಗಿದೆ. ಮೊಟ್ಟ ಮೊದಲ ಬಾರಿಗೆ ಸಾಂಸ್ಕೃತಿಕ ಜಾಂಬೂರಿಗೆ ಸಾರ್ವಜನಿಕರಿಗೂ ಮುಕ್ತ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರತಿದಿನ ಲಕ್ಷಾಂತರ ಮಂದಿ ಸೇರಲಿದ್ದು, ನಿತ್ಯವೂ 2 ಲಕ್ಷ ಮಂದಿಗೆ ಬೇಕಾದ ಊಟೋಪಚಾರ ನಡೆಯಲಿದೆ.


  ಇದನ್ನೂ ಓದಿ: Yakshagana: ಯಕ್ಷಪ್ರೇಮಿಗಳೇ ಇಲ್ಲಿ ಕೇಳಿ, ಸುಪ್ರೀಂ ಕೋರ್ಟ್ ಆದೇಶಕ್ಕೂ ಸಿಕ್ತು ವಿನಾಯಿತಿ


  ಜಾಂಬೂರಿಗೆ ರಜತ ಸಂಭ್ರಮ
  ಸ್ಕೌಟ್ಸ್ ಗೈಡ್ಸ್ ಇದುವರೆಗೂ 24 ಅಂತರಾಷ್ಟ್ರೀಯ ಜಾಂಬೂರಿ ನಡೆಸಿದ್ದು, 25 ನೇ ಜಾಂಬೂರಿಗೆ ಭಾರತದ ಮೂಡಬಿದ್ರಿಯ ಆಳ್ವಾಸ್ ಶಿಕ್ಷಣ ಸಂಸ್ಥೆ ವೇದಿಕೆಯಾಗಲಿದೆ.

  Published by:ಗುರುಗಣೇಶ ಡಬ್ಗುಳಿ
  First published: