ಮಂಗಳೂರು: ಇಡೀ ಜಿಲ್ಲೆ ದಸರಾ ಸಂಭ್ರಮದಲ್ಲಿತ್ತು. ಒಂದೆಡೆ ಮಂಗಳೂರು ದಸರಾವನ್ನು ಭಕ್ತರು ಕಣ್ತುಂಬಿಕೊಳ್ಳುತ್ತಿದ್ರೆ, ಇತ್ತ ಮದ್ಯದ ನಶೆಯಲ್ಲಿದ್ದ ಸ್ನೇಹಿತರು ಕಾಳಗಕ್ಕೆ ಇಳಿದು ಬಿಟ್ಟಿದ್ದರು. ದಸರಾ ಹಬ್ಬದ ಸಂಭ್ರಮಕ್ಕೆಂದು ಲಾಡ್ಜ್ ನಲ್ಲಿ ಪಾರ್ಟಿ ಗೆ ಸೇರಿದ್ದ ಸ್ನೇಹಿತರಿಗೆ ಮದ್ಯದ ಕಿಕ್ಕು ಏರುತ್ತಿದ್ದಂತೆಯೇ ಪರಸ್ಪರ ಮಾತಿಗೆ ಮಾತು ಬೆಳೆದು ಓರ್ವನ ಕೊಲೆಯಾಗಿದೆ. ದಸರಾ ಹಬ್ಬದ ಮೋಜು ಮಸ್ತಿಯ ಪಾರ್ಟಿಯಲ್ಲಿ ತೊಡಗಿದ್ದ ಸ್ನೇಹಿತರ ನಡುವೆ ಗಲಾಟೆ ನಡೆದು ಕೊಲೆಯಲ್ಲಿ ಅಂತ್ಯಗೊಂಡಿದೆ. ಎಣ್ಣೆ ಪಾರ್ಟಿ ಅತಿರೇಕಕ್ಕೆ ತಿರುಗಿ ಕೊಲೆ ನಡೆದಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಎಣ್ಣೆ ನಶೆಯಲ್ಲಿ ಯುವಕನ ಕೊಲೆ
ದಸರಾ ಮೋಜು ಮಸ್ತಿ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ದಸರಾ ಲೆಕ್ಕದಲ್ಲಿ ಪಾರ್ಟಿ ಮಾಡುವ ಹಿನ್ನೆಲೆಯಲ್ಲಿ ಮಂಗಳೂರು ನಗರದ ಪಂಪ್ವೆಲ್ ಸರ್ಕಲ್ ಬಳಿ ಇರುವ ಸಾಯಿ ಪ್ಯಾಲೇಸ್ ಹೊಟೇಲ್ ನಲ್ಲಿ ಸ್ನೇಹಿತರ ತಂಡ ರೂಮ್ ಮಾಡಿತ್ತು. ಗುಂಡು -ತುಂಡು ಪಾರ್ಟಿ ಮಾಡುತ್ತಿದ್ದ ಸ್ನೇಹಿತರ ನಡುವಲ್ಲೇ ತಡ ರಾತ್ರಿ ಗಲಾಟೆ ನಡೆದು ಎಣ್ಣೆ ನಶೆಯಲ್ಲಿ ಯುವಕನೊಬ್ಬನನ್ನು ಕೊಲೆಗೈದಿದ್ದಾರೆ. ಮಂಗಳೂರು ನಗರದ ಪಚ್ಚನಾಡಿ ನಿವಾಸಿ 20 ವರ್ಷ ಪ್ರಾಯದ ಧನುಷ್ ಕೊಲೆಯಾದ ಯುವಕ.
ಸ್ನೇಹಿತನಿಂದಲೇ ಬರ್ಬರ ಹತ್ಯೆ
ನಗರದ ಪಂಪ್ವೆಲ್ ಬಳಿಯ ಲಾಡ್ಜ್ ನಲ್ಲಿ ಧನುಷ್ ಮತ್ತು ಸ್ನೇಹಿತರು ಪಾರ್ಟಿ ಮಾಡಲೆಂದು ಅಕ್ಟೋಬರ್ 14ರಂದು ರೂಮ್ ಬುಕ್ ಮಾಡಿದ್ದರು. ಶುಕ್ರವಾರ ಕುದ್ರೋಳಿಯಲ್ಲಿ ಶಾರದಾ ವಿಸರ್ಜನೆಗೆ ತೆರಳಿದ್ದ ತಂಡ ಆನಂತರ ಇನ್ನಿಬ್ಬರು ಸ್ನೇಹಿತರು ಸೇರಿಕೊಂಡು ಹೊಟೇಲಿಗೆ ಬಂದಿದ್ದಾರೆ. ಲಾಡ್ಜ್ ನಲ್ಲಿ ಪಾರ್ಟಿ ಆಗುತ್ತಿದ್ದಾಗಲೇ ಇವರ ನಡುವೆ ಮಾತಿಗೆ ಮಾತು ಬೆಳೆದು ಜಗಳ ನಡೆದಿದೆ. ಈ ವೇಳೆ, ಸುರತ್ಕಲ್ ನಿವಾಸಿ ಜೈಸನ್ ಎಂಬಾತ ತನ್ನಲ್ಲಿದ್ದ ಹರಿತವಾದ ಚೂರಿಯಿಂದ ಧನುಷ್ ನ ಎದೆ ಭಾಗಕ್ಜೆ ಇರಿದಿದ್ದಾನೆ. ರಾತ್ರಿ 1.30ರ ಸುಮಾರಿಗೆ ಘಟನೆ ನಡೆದಿದ್ದು, ಧನುಷ್ ನನ್ನು ಪಕ್ಕದ ಇಂಡಿಯಾನ ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಮೃತ ಪಟ್ಟಿದ್ದಾನೆ.
ಕೊಲೆಯಾದವನು, ಆರೋಪಿ ಇಬ್ಬರಿಗೆ ಅಪರಾಧದ ಹಿನ್ನೆಲೆ ಇತ್ತು
ಘಟನೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ, ಪಾರ್ಟಿಯಲ್ಲಿದ್ದ ಐವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪಾರ್ಟಿಯಲ್ಲಿದ್ದ ಜೈಸನ್, ಪ್ರಮೀತ್, ಕಾರ್ತಿಕ್, ದುರ್ಗೇಶ್ ಮತ್ತು ಪ್ರಜ್ವಲ್ ಎಂಬ ಐದು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಧನುಷ್ ಮತ್ತು ಜೈಸನ್ ಇಬ್ಬರ ಮೇಲೂ ಈ ಹಿಂದೆ ಅಪರಾಧ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪೊಲೀಸ್ ಕೇಸು ದಾಖಲಾಗಿದೆ. ಈ ಪ್ರಕರಣದ ತನಿಖೆಯನ್ನು ಪೊಲೀಸರು ಮುಂದುವರೆಸಿದ್ದು ಅರೋಪಿಗಳ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಹುಟ್ಟಿದಾಗ ಹೆಣ್ಣು ಮಗು ಅಂದ್ರು, ಡಿಸ್ಚಾರ್ಜ್ ವೇಳೆ ಗಂಡು ಮಗು ಕೊಟ್ರು.. Mangalore Hospital ಯಡವಟ್ಟು!
ಎಣ್ಣೆ ಕಿಕ್ಕು ಯುವಕನ ಕೊಲೆಗೆ ಕಾರಣವಾಗಿದೆ.. ದಸರಾ ಹಬ್ಬದ ದಿನ ದೇವಿಯ ದರ್ಶನ ಪಡೆಯುವ ಬದಲು ಎಣ್ಣೆ ಬಾಟಲಿಯನ್ನು ಹಿಡಿದುಕೊಂಡು ಹತ್ಯೆ ಮಾಡಿದವರು ಜೈಲು ಸೇರುವಂತಾಗಿದೆ. ಅಮಲಿನ ಜಗತ್ತು ಯಾವುದೇ ಕ್ಷಣದಲ್ಲಿ ಏನು ಬೇಕಾದರೂ ಮಾಡಬಹುದಾದ ಕಂಟಕವಾಗಿರೋದರಿಂದ ಅಮಲಿನ ದಾಸನಾಗುವ ಮುನ್ನ ಯುವಕರು ಸ್ವಲ್ಪ ಯೋಚಿಸಬೇಕಾಗಿದೆ.
ಇತ್ತೀಚೆಗೆ ಬೆಳಗಾವಿಯಲ್ಲೊಂದು ವಿಲಕ್ಷಣ ಪ್ರಕರಣ
ವಿಲಕ್ಷಣ ಘಟನೆ ನಡೆದಿರೋದು ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನಲ್ಲಿ. 24 ವರ್ಷದ ಯುವಕನೋರ್ವ ತನ್ನ ಊರಿಗೆ ತೆರಳಲು ಬಸ್ ಗಾಗಿ ಕಾದು ಕುಳಿತ್ತಿದ್ದ ಅತ್ತ ಕಡೆಯಿಂದ ಬಂದ ಬೈಕ್ ಸವಾರೊಬ್ಬ ಲಿಪ್ಟ ಕೊಡುವುದಾಗಿ ಹೇಳಿ ಮಾರ್ಗ ಮದ್ಯೆ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರ ವೇಸಗಿದ್ದಾನೆ ಎಂದು ಸದ್ಯ ಅತ್ಯಾಚಾರಕ್ಕೆ ಒಳಗಾದ ಯುವಕ ಅಥಣಿ ಪೊಲೀಸ ಠಾಣೆಯಲ್ಲಿ ದೂರು ಸಲ್ಲಿದ್ದಾನೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ