Maneka Gandhi: ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಮನೇಕಾ ಗಾಂಧಿ ದೂರು; ಆನೆ ದಂತ ಮಾರಾಟದ ಆರೋಪಿಗಳ ರಕ್ಷಣೆಗೆ ಒತ್ತಡದ ಆರೋಪ

ಆರೋಪಿಗಳು ತಮ್ಮ ಪಕ್ಷದ ಬೆಂಬಲಿಗರಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತೆ ಸ್ಥಳೀಯ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. 

ಮನೇಕಾ ಗಾಂಧಿ ಮತ್ತು ಪ್ರಜ್ವಲ್ ರೇವಣ್ಣ

ಮನೇಕಾ ಗಾಂಧಿ ಮತ್ತು ಪ್ರಜ್ವಲ್ ರೇವಣ್ಣ

 • Share this:
  ಬೆಂಗಳೂರು: ಹಾಸನ ಸಂಸದ ಪ್ರಜ್ವಲ್ ರೇವಣ್ಣ  ವಿರುದ್ಧ ಗಂಭೀರ ಆರೋಪ ಮಾಡಿ ಸಂಸದೆ, ಪ್ರಾಣಿಗಳ ಹಕ್ಕು ಹೋರಾಟಗಾರ್ತಿ ಮನೇಕಾ ಗಾಂಧಿ ಪತ್ರ ಬರೆದಿರುವುದು ಭಾರೀ ಸಂಚಲನಕ್ಕೆ ಕಾರಣವಾಗಿದೆ. ಆನೆಯನ್ನು ಕೊಂದು ದಂತ ಮಾರಾಟ ಮಾಡುವಾಗ ಸಿಕ್ಕಿಬಿದ್ದ ಆರೋಪಿಯನ್ನು ಸಂಸದ ಪ್ರಜ್ವಲ್ ರೇವಣ್ಣ (MP Prajwal Revanna) ರಕ್ಷಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿ ಮನೆಕಾ ಗಾಂಧಿ ಸಿಎಂ ಬಸವರಾಜ ಬೊಮ್ಮಾಯಿಗೆ (CM Basavaraj Bommai) ಪತ್ರ ಬರೆದಿದ್ದಾರೆ. ಅಲ್ಲದೇ ಈ ಪ್ರಕರಣದಲ್ಲಿ ತಕ್ಷಣ  ಮಧ್ಯಪ್ರವೇಶ ಮಾಡಿ ಪ್ರಕರಣವನ್ನು ನಿಷ್ಪಕ್ಷಪಾತವಾಗಿ ನಡೆಸಲು ಒತ್ತಾಯಿಸಿ ಸಂಸದೆ ಮನೇಕಾ ಗಾಂಧಿ (Maneka Gandhi)  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಪತ್ರ ಬರೆದಿದ್ದಾರೆ.

  ಆರೋಪಿಗಳು ತಮ್ಮ ಪಕ್ಷದ ಬೆಂಬಲಿಗರಾಗಿದ್ದು, ಪ್ರಕರಣವನ್ನು ಮುಚ್ಚಿ ಹಾಕುವಂತೆ ಸ್ಥಳೀಯ ಸಂಸದ ಪ್ರಜ್ವಲ್ ರೇವಣ್ಣ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಒತ್ತಡ ಹೇರಲು ಯತ್ನಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಿದ್ದಾರೆ. ಹಾಸನ ಆರ್‌ಎಫ್‌ಒ ಕಾನೂನು ಪಾಲಿಸುತ್ತಿಲ್ಲ ಎಂದು ಮೇನಕಾ ಆರೋಪಿಸಿದ್ದಾರೆ.

  ಏನಿದು ಆನೆ ದಂತದ ಪ್ರಕರಣ?
  ಹಾಸನ ತಾಲ್ಲೂಕಿನ, ವೀರಾಪುರ ಗ್ರಾಮದಲ್ಲಿ ಆನೆಯನ್ನು ಕೊಂದಿದ್ದ ಚಂದ್ರೆಗೌಡ ಎಂಬಾತ ಬಳಿಕ ಸತ್ತ ಆನೆಯಿಂದ ದಂತ ಕತ್ತರಿಸಿ ಮಾರಾಟ ಮಾಡುವ ಯತ್ನದ ವೇಳೆ ಬೆಂಗಳೂರಿನಲ್ಲಿ ಸಿಕ್ಕಿ ಬಿದ್ದಿದ್ದರು. 

  ಈ ಪ್ರಕರಣದ ಆರೋಪಿಗಳು ಮಾರ್ಚ್ 19 ರಂದು ಬೆಂಗಳೂರಿನ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಈ ಪ್ರಕರಣದಲ್ಲಿ ಹಾಸನ ಅರಣ್ಯ ಇಲಾಖೆ ಕೇಸ್ ದಾಖಲಿಸಿ ತನಿಖೆ ನಡೆಸುತ್ತಿತ್ತು.

  ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್.ಎಫ್.ಓ. ಪ್ರಯತ್ನ?
  ಆದರೆ ಆರೋಪಿಗಳ ರಕ್ಷಣೆಗೆ ಸ್ಥಳೀಯ ವಲಯ ಅರಣ್ಯ ಅಧಿಕಾರಿ ಭಾರಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಿರುವ ಸಂಸದೆ ಮತ್ತು ಪ್ರಾಣಿಗಳ ಹಕ್ಕು ರಕ್ಷಣಾ ಹೋರಾಟಗಾರ್ತಿಯೂ ಆಗಿರುವ ಮನೇಕಾ ಗಾಂಧಿ ಉಲ್ಲೇಖಿಸಿದ್ದಾರೆ. 

  ಸಿಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ ಆರೋಪ
  ಈ ಕೇಸ್‌ನಲ್ಲಿ ಆರೋಪಿಗಳ ರಕ್ಷಣೆ ಮಾಡಲು ಹಾಸನ ಅರಣ್ಯ ಇಲಾಖೆ ಆರ್.ಎಫ್.ಓ. ಪ್ರಯತ್ನ ಮಾಡಿದ್ದಾರೆ. ಪದೇ ಪದೆ ಕೇಸ್ ಅನ್ನು ವರ್ಗಾಯಿಸಲು ಸಿಕೆ ಅಚ್ಚುಕಟ್ಟು ಪ್ರದೇಶದ ಪೊಲೀಸರಿಗೆ ಒತ್ತಡ ಹಾಕಿದ್ದಾರೆ ಎಂದು ಸಂಸದೆ ಮನೇಕಾ ಗಾಂಧಿ ಆರೋಪ ಮಾಡಿದ್ದಾರೆ.

  ಇದನ್ನೂ ಓದಿ: Kasturi Rangan Report: ಕಸ್ತೂರಿ ರಂಗನ್ ವರದಿ ಒಪ್ಪಿಕೊಳ್ಳಲ್ಲ; ಗೃಹ ಸಚಿವ ಆರಗ ಜ್ಞಾನೇಂದ್ರ ದೃಢ ಮಾತು

  ಜುಲೈ 18 ರಂದು ಪತ್ರ ಬರೆದಿರುವ ಸಂಸದೆ ಮನೇಕಾ ಗಾಂಧಿ, ಈ‌ ಕೇಸ್‌ನ ಆರೋಪಿಗಳು ಸಂಸದ ಪ್ರಜ್ವಲ್ ರೇವಣ್ಣ ಪಾರ್ಟಿಯ ಬೆಂಬಲಿಗರು ಎನ್ನುವ ಕಾರಣಕ್ಕೆ ಅವರ ಪರವಾಗಿ ಸಂಸದ ಪ್ರಜ್ವಲ್ ರೇವಣ್ಣ ಒತ್ತಡ ಹಾಕುತ್ತಿದ್ದಾರೆ ಪತ್ರದಲ್ಲಿ ಸಂಸದೆ ಮನೇಕಾ ಗಾಂಧಿ  ದೂರಿದ್ದಾರೆ. ಅಲ್ಲದೇ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಕೂಡಲೇ ಪ್ರಕರಣದಲ್ಲಿ ಮಧ್ಯ ಪ್ರವೇಶಿಸಿ ಸಮರ್ಪವಾಗಿ ತನಿಖೆ ನಡೆಸಲು ಅನುವು ಮಾಡಿಕೊಡುವಂತೆ ಅವರು ಒತ್ತಾಯಿಸಿದ್ದಾರೆ.

  ಇದನ್ನೂ ಓದಿ: HD Deve Gowda: ಇದೇ ಮೊದಲ ಬಾರಿಗೆ ವ್ಹೀಲ್​ಚೇರ್​ನಲ್ಲಿ ಕಾಣಿಸಿಕೊಂಡ ಮಾಜಿ ಪ್ರಧಾನಿ ದೇವೇಗೌಡ

  ಈ ಕೇಸ್‌ನಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಮಧ್ಯಪ್ರವೇಶ ಮಾಡಿ ನಿಷ್ಪಕ್ಷಪಾತವಾಗಿ ತನಿಖೆ ನಡೆಸಲು ಒತ್ತಾಯಿಸಿ ಪತ್ರ ಬರೆದಿದ್ದಾರೆ ಸಂಸದೆ ಮನೇಕಾ ಗಾಂಧಿ. ಆದರೆ ಈ ಕುರಿತು ಹಸನ ಸಂಸದ ಪ್ರಜ್ವಲ್ ರೇವಣ್ಣ ಈವರೆಗೂ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.
  Published by:guruganesh bhat
  First published: