• Home
 • »
 • News
 • »
 • state
 • »
 • 'ಮನೆ-ಮನ ಭೇಟಿ' ಅಭಿಯಾನದ ಉದ್ದೇಶವೇನು? ಶಾಸಕ ಸುರೇಶ್ ಕುಮಾರ್ ಹೇಳುವುದು ಹೀಗೆ!

'ಮನೆ-ಮನ ಭೇಟಿ' ಅಭಿಯಾನದ ಉದ್ದೇಶವೇನು? ಶಾಸಕ ಸುರೇಶ್ ಕುಮಾರ್ ಹೇಳುವುದು ಹೀಗೆ!

ಮನೆಗಳಿಗೆ ಶಾಸಕ ಸುರೇಶ್​ ಕುಮಾರ್ ಭೇಟಿ

ಮನೆಗಳಿಗೆ ಶಾಸಕ ಸುರೇಶ್​ ಕುಮಾರ್ ಭೇಟಿ

ತಮ್ಮ ಅಭಿಯಾನವಾದ 'ಮನೆ ಮನ ಭೇಟಿ' ಅಡಿಯಲ್ಲಿ ತಮ್ಮ ಕ್ಷೇತ್ರದಲ್ಲಿರುವ ಜನರನ್ನು ತಲುಪಲು ಅವರವರ ಮನೆಗಳಿಗೆ ಭೇಟಿ ನೀಡುವಂತಹ ವಿಭಿನ್ನ ಚಟುವಟಿಕೆ ಆರಂಭಿಸಿದ್ದಾರೆ.

 • Trending Desk
 • 5-MIN READ
 • Last Updated :
 • Bangalore [Bangalore], India
 • Share this:

ಬೆಂಗಳೂರಿನ(Bengaluru) ಒಂದು ಕ್ಷೇತ್ರದ ಶಾಸಕರಾದ(MLA) ಸುರೇಶ್ ಕುಮಾರ್(Suresh Kumar) ಅವರು ಕಳೆದ ವರ್ಷದ ಜೂನ್ ಅಂತ್ಯದಿಂದ ತಮ್ಮ ಕ್ಷೇತ್ರದ ನಿವಾಸಿಗಳನ್ನು ತಲುಪಲು ಅನುಕೂಲವಾಗುವಂತೆ "ಮನೆ ಮನ ಭೇಟಿ" ಎಂಬ ಅಭಿಯಾನವನ್ನು ನಡೆಸುತ್ತಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಹಾಗೂ ಜನಪ್ರಿಯ ಹಳೆಯ ಬಡಾವಣೆಗಳಲ್ಲೊಂದಾದ ರಾಜಾಜಿನಗರ ಕ್ಷೇತ್ರದ ಶಾಸಕರಾದ ಸುರೇಶ್ ಕುಮಾರ್ (Suresh Kumar) ಎಂದರೆ ಅಲ್ಲಿನ ಬಹುತೇಕ ನಿವಾಸಿಗಳಿಗೆ ಗೊತ್ತು. ಏಕೆಂದರೆ, ಅವರು ಇತರೆ ಶಾಸಕರಂತಿರದೆ, ಸರಳವಾಗಿದ್ದು ಸಾಮಾನ್ಯ ಜನರೊಡನೆ ಸರಳವಾಗಿ ಬೆರೆಯುತ್ತಾರೆ, ಜೊತೆಗೆ ಅವರನ್ನು ಜನರು ಸುಲಭವಾಗಿ ತಲುಪಬಹುದಾಗಿದೆ.


ಅಷ್ಟಕ್ಕೂ ಅವರು ತಮ್ಮ ಅಭಿಯಾನವಾದ 'ಮನೆ ಮನ ಭೇಟಿ' ಅಡಿಯಲ್ಲಿ ತಮ್ಮ ಕ್ಷೇತ್ರದಲ್ಲಿರುವ ಜನರನ್ನು ತಲುಪಲು ಅವರವರ ಮನೆಗಳಿಗೆ ಭೇಟಿ ನೀಡುವಂತಹ ವಿಭಿನ್ನ ಚಟುವಟಿಕೆ ಆರಂಭಿಸಿದ್ದಾರೆ. ಆ ಅಭಿಯಾನಕ್ಕೆ ಸಂಬಂಧಿಸಿದಂತೆ ಅವರ ಅನುಭವಕ್ಕೆ ಬಂದ ಎರಡು ಘಟನೆಗಳನ್ನು ಈ ಕೆಳಗಿನಂತೆ ಅವರು ವಿವರಿಸುತ್ತಾರೆ.


ಅದೊಂದು ಚಿಕ್ಕ ಮನೆ


"ನಾನು ಭೇಟಿ ನೀಡಿದ ಅದೊಂದು ಚಿಕ್ಕ ಮನೆಯಾಗಿತ್ತು ಹಾಗೂ ಸ್ಲಮ್ ನಲ್ಲಿದ್ದ ಕಿರಿದಾದ ರಸ್ತಯೊಂದಕ್ಕೆ ಹೊಂದಿಕೊಂಡಂತೆ ಇತ್ತು. ನಾನು ಮನೆ ಪ್ರವೇಶಿಸಿದೆ, ಅಲ್ಲಿನ ಸ್ಥಿತಿ ಕಂಡು ನನಗೆ ವಿಷಾದವೆನಿಸಿತು. ನಾನು ಅಲ್ಲಿ ಎಷ್ಟು ಜನ ಮಕ್ಕಳು ವಾಸಿಸುತ್ತಾರೆಂದು ಕೇಳಿದೆ, ಮೂರು ಜನ ಹುಡುಗಿಯರು ಎಂದು ಮನೆಯವರಿಂದ ಉತ್ತರ ಬಂತು.


ಇದನ್ನೂ ಓದಿ: Siddaramaiah: ಮಹಿಳೆಯರನ್ನು ಅಡಿಯಾಳಾಗಿ ನೋಡುವ ಮನುಸ್ಮೃತಿ ಮೇಲೆ ಬಿಜೆಪಿಗೆ ಒಲವು! ಸಿದ್ದರಾಮಯ್ಯ ಆರೋಪ


ಆ ಜಾಗ ಬಹಳ ಚಿಕ್ಕದಾಗಿತ್ತು, ಯಾವುದೇ ರೀತಿಯ ಖಾಸಗಿತನವಾಗಲಿ ಅಥವಾ ಒಂದೊಳ್ಳೆಯ ವಾಶ್ ರೂಂ ಅಲ್ಲಿರಲಿಲ್ಲ, ಅಂಥದ್ದರಲ್ಲಿ ಆ ಮೂರು ಹುಡುಗಿಯರು ಯಾವ ರೀತಿ ಬದುಕುತ್ತಿರಬಹುದು ಎಂದು ನೆನೆಸಿಕೊಂಡು ದುಃಖವಾಯಿತು. ನಾನು ಹಿರಿಯ ಮಗಳನ್ನು ಕುರಿತು ಏನು ಓದಿದ್ದೀ ಎಂದು ಕೇಳಿದಾಗ ಎಂಟೆಕ್ ಸರ್ ಎಂಬ ಉತ್ತರ ಬಂತು, ಎರಡನೆಯ ಮಗಳು ಸಿಎ ಪರೀಕ್ಷೆಗಾಗಿ ಸಿದ್ಧತೆ ನಡೆಸುತ್ತಿದ್ದರೆ, ಕಿರಿಯ ಮಗಳು ಬಿಕಾಂ ವ್ಯಾಸಂಗ ಮಾಡುತ್ತಿದ್ದಳು, ನನಗೆ ತುಂಬ ಸಂತೋಷವಾಯಿತು" ಎಂದಿದ್ದಾರೆ.


ಇನ್ನು ಎರಡನೆಯ ಘಟನೆಗೆ ಸಂಬಂಧಿಸಿದಂತೆ, ಮಾತನಾಡಿದ ಶಾಸಕರು "ನಾವು ಇನ್ನೊಂದು ಮನೆಗೆ ಭೇಟಿ ನೀಡಿದ್ದೆವು. ಬಹುಶಃ ನಾನು ನೋಡಿದ ಬಲು ಸುಂದರವಾದಂತಹ ಮನೆ ಅದಾಗಿತ್ತು. ನಾನು ಒಂದು ರೀತಿಯಲ್ಲಿ ಆ ಮನೆಯ ಪ್ರೀತಿಯಲ್ಲಿ ಬಿದ್ದು ಹೋಗಿದ್ದೆ, ತುಂಬಾ ಹಿರಿಯ ದಂಪತಿ ಅಲ್ಲಿ ವಾಸಿಸುತ್ತಿದ್ದರು. ಅವರಿಗೆ ಬೆಳೆದ ದೊಡ್ಡ ಮಕ್ಕಳಿದ್ದಾರೆ. ಅವರೆಲ್ಲರೂ ಸುಶಿಕ್ಷಿತರಾಗಿದ್ದು ಸದ್ಯ ವಿವಿಧ ದೇಶಗಳಲ್ಲಿ ನೆಲೆಸಿದ್ದಾರೆ. ಆದರೆ ಜೀವನದ ಕೊನೆಯ ಹಂತದಲ್ಲಿರುವ ಅವರ ಸ್ಥಿತಿ ಮುಂದೆ ಹೇಗೆ ಎಂಬ ಮನೋಭಾವ ನನ್ನಲ್ಲಿ ಕಾಡುತ್ತಿತ್ತು, ನನಗನಿಸುವಂತೆ ಅವರ ಮುಖದಲ್ಲಿ ಸ್ಪಷ್ಟವಾದ ನಗು ಇರಲಿಲ್ಲ" ಎಂದಿದ್ದಾರೆ.


ಮನೆ ಮನ ಭೇಟಿ


ಶಾಸಕ ಸುರೇಶ್ ಕುಮಾರ್ ಅವರು ಕಳೆದ ಜೂನ್ ಅಂತ್ಯದಿಂದಲೇ ತಮ್ಮ ಕ್ಷೇತ್ರದಲ್ಲಿರುವ ಜನರನ್ನು ತಲುಪಲು ಮನೆ ಮನ ಭೇಟಿ ಎಂಬ ಅಭಿಯಾನವನ್ನು ಕೈಗೆತ್ತಿಕೊಂಡರು. ಅವರ ತಂಡವು ಎರಡು ತಿಂಗಳುಗಳ ಅವಧಿಯಲ್ಲಿ ಸುಮಾರು 1500 ಕುಟುಂಬಗಳನ್ನು ಶಾಸಕರು ಭೇಟಿ ಮಾಡಲು ಶಕ್ತವಾಗುವಂತೆ ಕಾರ್ಯತಂತ್ರ ರೂಪಿಸಿತ್ತು.


ಈ ಅಭಿಯಾನದಲ್ಲಿ ಶಾಸಕರು ಎಷ್ಟು ಸಕ್ರಿಯವಾಗಿ ಪಾಲ್ಗೊಂಡರೆಂದರೆ, ಅವರೇ ಹೇಳುವಂತೆ 1500 ಮನೆಗಳ ಭೇಟಿಯ ಗುರಿಯನ್ನು ಅವರು ಕೇವಲ ಆಗಸ್ಟ್ ಒಂದೇ ತಿಂಗಳಿನಲ್ಲಿ ಮಾಡಿ ಮುಗಿಸಿದರಂತೆ. ಅಷ್ಟಕ್ಕೂ ಈ ವರ್ಷ ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಜರುಗಲಿದೆ. ಈ ಸಂದರ್ಭದಲ್ಲಿ ಶಾಸಕರ ಈ ಅಭಿಯಾನವು ಸಾಕಷ್ಟು ಮಹತ್ವ ಹೊಂದಿದ್ದು ಈ ಮೂಲಕ ಸುರೇಶ್ ಕುಮಾರ್ ಅವರು ತಮ್ಮ ಕ್ಷೇತ್ರದ ಜನತೆಗೆ ಇನ್ನೂ ಹತ್ತಿರವಾಗುವಂತಹ ಅವಕಾಶ ಕೊಟ್ಟಿದೆ ಎಂದರೂ ತಪ್ಪಿಲ್ಲ.


ವೇಳಾಪಟ್ಟಿ


ಇನ್ನು ಈ ಅಭಿಯಾನದಡಿ ಮನೆಗಳಿಗೆ ಭೇಟಿ ನೀಡಲು ಶಾಸಕರು ಹಾಗೂ ಅವರ ಕಾರ್ಯಪಡೆಯು ಬೆಳಗ್ಗೆ ಏಳು ಗಂಟೆಗೆಲ್ಲ ಕೆಲಸ ಪ್ರಾರಂಭಿಸಿ ಬಿಡುತ್ತಾರೆ. ಸುಮಾರು ಬೆಳಗ್ಗೆ 10:30 ಆಗುವವರೆಗೆ ಶಾಸಕರು ತಂಡ ಹಾಗೂ ಪಕ್ಷದ ಕಾರ್ಯಕರ್ತರೊಡನೆ ಸೇರಿ ಸಾಧ್ಯವಾಗುವಷ್ಟು ಮನೆಗಳಿಗೆ ಭೇಟಿ ನೀಡಿ ಮನೆಯವರ ಕುಶಲೋಪರಿ ವಿಚಾರಿಸಿ ಅವರ ಕುರಿತು ಇತರೆ ಮಾಹಿತಿ ಪಡೆಯುತ್ತಾರೆ.


ಬೆಳಗ್ಗೆ 10:30 ಗಂಟೆಯ ಸಮಯವು ಕೆಲಸಕ್ಕೆ ಹೋಗುವ, ಮಕ್ಕಳು ಶಾಲೆಗೆ ಹೋಗುವ ಪೀಕ್ ಸಮಯವಾಗಿರುವುದರಿಂದ ಶಾಸಕರು ವಿರಾಮ ತೆಗೆದುಕೊಳ್ಳುತ್ತಾರೆ ಹಾಗೂ ಮತ್ತೆ ತಮ್ಮ ಕೆಲಸವನ್ನು ಸಂಜೆ 4.30 ಗಂಟೆಯಿಂದ ಆರಂಭಿಸಿ ರಾತ್ರಿ ಒಂಭತ್ತು ಗಂಟೆಯವರೆಗೂ ಮುಂದುವರೆಸುತ್ತಾರೆ.


ಇದನ್ನೂ ಓದಿ: Priyanka Gandhi: "ರಾಜ್ಯದಲ್ಲಿ ಶೇಕಡಾ 40ರ ಸರ್ಕಾರವಿದೆ!" 'ನಾ ನಾಯಕಿ' ಕಾರ್ಯಕ್ರಮದಲ್ಲಿ ಪ್ರಿಯಾಕಾಗಾಂಧಿ ವಾಗ್ದಾಳಿ


ವೈಯಕ್ತಿಕ ಅಭಿಪ್ರಾಯ


ಈ ಅಭಿಯಾನ ಪ್ರಾರಂಭಿಸಿದಾಗಿನಿಂದ ಶಾಸಕ ಸುರೇಶ್ ಕುಮಾರ್ ಹೇಳಿಕೊಳ್ಳುವಂತೆ ಹಲವಾರು ಬದಲಾವಣೆ ಹಾಗೂ ಅನುಭವವನ್ನು ಅವರು ಪಡೆದುಕೊಂಡಿದ್ದಾರಂತೆ. ಈ ಬಗ್ಗೆ ಅವರು ತಮ್ಮ ಮಾತುಗಳಲ್ಲಿ, "ಇದೊಂದು ವಿಭಿನ್ನ ಹಾಗೂ ವೈಯಕ್ತಿಕವಾಗಿ ನನಗೆ ಬಲು ಹತ್ತಿರವಾದ ಅನುಭವವಾಗಿದೆ. ನಾನು ಸಮಾಜದ ಹಲವು ಸ್ತರಗಳಲ್ಲಿರುವ ಹಾಗೂ ಯಾವುದೇ ಪಕ್ಷದ ಭೇದ ಭಾವಗಳಿಲ್ಲದೆ ಹಲವು ಬಗೆಯ ಜನರನ್ನು ಭೇಟಿ ಮಾಡಿದ್ದೇನೆ. ದಿನಗೂಲಿ ಕಾರ್ಮಿಕನಿಂದ ಹಿಡಿದು ಉನ್ನತ ಮಟ್ಟದ ವಿಜ್ಞಾನಿಯವರೆಗೂ ನಾವು ಎಲ್ಲರನ್ನೂ ಭೇಟಿ ಮಾಡಿದ್ದೇವೆ.ಆದರೆ ಇದು ಇನ್ನೂ ಮುಗಿದಿಲ್ಲ" ಎನ್ನುತ್ತಾರೆ ಸುರೇಶ್ ಕುಮಾರ್.


ತಮ್ಮ ಕ್ಷೇತ್ರ ಭೇಟಿಯ ಅನುಭವದ ಬಗ್ಗೆ ಮಾತನಾಡುತ್ತ ಸುರೇಶ್ ಕುಮಾರ್ ಅವರು ಹೇಳುವಂತೆ ಅವರ ಕ್ಷೇತ್ರದಲ್ಲಿ ನಿರುದ್ಯೋಗಿಯಾಗಿರುವ ಯಾವೊಬ್ಬ ಇಂಜಿನಿಯರ್ ಸಹ ಇಲ್ವಂತೆ, ಇನ್ನು ಉಳಿದ ಪದವಿ ಪಡೆದ ಹಲವು ಪದವೀಧರರಿಗೆ ಅವರು ಹಾಗೂ ಅವರ ತಂಡ ಕೆಲಸಕ್ಕಾಗಿ ತಮಗಾಗುವಷ್ಟು ನೆರವು ನೀಡಿದ್ದಾರಂತೆ.ಚುನಾವಣೆಯೂ ಬಂದಿರುವುದರಿಂದ, ಈ ಅಭಿಯಾನ ರಾಜಕೀಯವಾಗಿ ಪ್ರೇರಿತ ಎಂದೆನಿಸಬಹುದಾದರೂ ಇದನ್ನು ನೇರವಾಗಿ ತಿರಸ್ಕರಿಸುವ ಶಾಸಕರು, "ಇದು ಯಾವ ರಾಜಕೀಯ ಚಟುವಟಿಕೆ ಅಲ್ಲ, ರಾಜಾಜಿನಗರದ ಪ್ರತಿನಿಧಿಯಾಗಿ ನಾನು ನನ್ನ ಹೃದಯಪೂರ್ವಕವಾಗಿ ಈ ಕೆಲಸವನ್ನು ಮಾಡುತ್ತಿರುವೆ. ಅಲ್ಲದೆ, ಇದರಿಂದ ನಮ್ಮ ಪಕ್ಷದ ಕಾರ್ಯಕರ್ತರಿಗೂ ಜನರ ಸಮಸ್ಯೆಗಳು, ಸವಾಲುಗಳು ಏನು ಎಂಬುದರ ಬಗ್ಗೆ ಅರಿವು ಮೂಡುತ್ತಿದೆ. ಇದೊಂದು ಜೀವನದ ಅತ್ಯುತ್ತಮ ಪಾಠವಾಗಿದೆ" ಎಂದು ನ್ಯೂಸ್ 18 ಜೊತೆಗೆ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

Published by:Latha CG
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು