Mandya: ಪ್ರೇಯಸಿ ಜೊತೆ ಹೋದವ ಸಿಕ್ಕಿದ್ದು ಶವವಾಗಿ; ಸ್ನೇಹಿತ ಹಾಗೂ ಹುಡುಗಿ ತಾಯಿಯಿಂದಲೇ ನಡೀತಾ ಹತ್ಯೆ.?

26 ವರ್ಷದ ಯುವಕ ಕಾಂತರಾಜು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾರ ತಂಟೆಗೂ ಹೋಗದೇ ತಾನಾಯ್ತು, ತನ್ನ ಪಾಡಾಯ್ತು ಎಂಬಂತಿದ್ದ ಕಾಂತರಾಜು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

ಮೃತ ಯುವಕ

ಮೃತ ಯುವಕ

  • Share this:
    ಈ ಯುವಕ (Youth) ಎಂಟನೇ ತರಗತಿಗೆ ಶಾಲೆ ಬಿಟ್ಟು ಬೆಂಗಳೂರು (Bengaluru) ಸೇರಿದ್ದ. ಹೋಟೆಲ್ (Hotel)ನಲ್ಲಿ ಕೆಲಸ ಶುರುಮಾಡಿ ಬಳಿಕ ಸ್ವಂತದೊಂದು ಗೂಡ್ಸ್ ವಾಹನ (Goods Van) ಖರೀದಿಸಿ ಜೀವನ ಕಟ್ಟಿಕೊಳ್ಳುತ್ತಿದ್ದ. ಹೀಗಿರುವಾಗಲೇ ಆತನ ಜೀವನಕ್ಕೆ ಹುಡುಗಿಯೊಬ್ಬಳ (Young Girl) ಎಂಟ್ರಿ ಕೊಟ್ಟಿತ್ತು. ಆಕೆಯ ಜತೆ ಹೊಸ ವರ್ಷದಂದು ಮನೆಯಿಂದ ಹೊರಗೆ ಹೋಗಿದ್ದ ಯುವಕ ಬಳಿಕ ಸಿಕ್ಕಿದ್ದು ಹೆಣವಾಗಿ. ಮಂಡ್ಯ (Mandya) ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹೊಡಕಳ್ಳಿ ಗ್ರಾಮದಲ್ಲಿ (Hodaklli, KR Pete) ಜನವರಿ 6 ರಂದು ಗ್ರಾಮದ 26 ವರ್ಷದ ಯುವಕ ಕಾಂತರಾಜು ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಯಾರ ತಂಟೆಗೂ ಹೋಗದೇ ತಾನಾಯ್ತು, ತನ್ನ ಪಾಡಾಯ್ತು ಎಂಬಂತಿದ್ದ ಕಾಂತರಾಜು ಸಾವಿನ ಬಗ್ಗೆ ಅನುಮಾನ ವ್ಯಕ್ತವಾಗಿದೆ.

    ಸ್ನೇಹಿತ ಹಾಗೂ ಹುಡುಗಿ ತಾಯಿಯಿಂದಲೇ ನಡಿತಾ ಹತ್ಯೆ.?

    ಕಿತ್ತು ತಿನ್ನುವ ಬಡತನದಿಂದಾಗಿ ಕಾಂತರಾಜು 8ನೇ ತರಗತಿಗೆ ಶಾಲೆ ಬಿಟ್ಟು ಬೆಂಗಳೂರಿಗೆ ಸೇರಿದ್ದ. ಮೊದಲು ಹೋಟೆಲ್ ಕೆಲಸ ಮಾಡಿ, ಒಂದಿಷ್ಟು ಹಣ ಕೂಡಿಟ್ಟುಕೊಂಡು ಸ್ವಂತದೊಂದು ಗೂಡ್ಸ್ ವಾಹನ ಖರೀದಿಸಿ ಜೀವನ ಕಟ್ಟಿಕೊಳ್ಳುತ್ತಿದ್ದ.

    ಇದನ್ನೂ ಓದಿ:  Accident: ಜವರಾಯನ ಅಟ್ಟಹಾಸ: ದೇವರ ದರ್ಶನಕ್ಕೆ ಹೋಗಿದ್ದ ಒಂದೇ ಕುಟುಂಬದ 4 ಜನ ಸಾವು: 6 ಮಂದಿಗೆ ಗಾಯ

    ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತಿದ್ದಾಗಲೇ ತನ್ನದೇ ಊರಿನ ಲೋಕೇಶ್ ಜತೆ ಆತ್ಮೀಯತೆ ಹೆಚ್ಚಾಗಿತ್ತು. ಲೋಕೇಶ ತನಗೆ ಪರಿಚಯವಿದ್ದ ಪೂರ್ಣಿಮಾ ಎಂಬಾಕೆಯ ಮಗಳನ್ನು ನಿನಗೆ ಮದುವೆ ಮಾಡಿಸುತ್ತೇನೆಂದು ಆಸೆ ಹುಟ್ಟಿಸಿದ್ದ. ಅಲ್ಲದೆ ಪೂರ್ಣಿಮಾಳೂ ಮಗಳನ್ನು ಮದುವೆ ಮಾಡಿಕೊಡುವುದಾಗಿ ಒಪ್ಪಿದ್ದಳು. ಬಳಿಕ ಪೂರ್ಣಿಮಾಳ 17 ವರ್ಷದ ಮಗಳು ಹಾಗೂ ಕಾಂತರಾಜು ನಡುವೆ ಪ್ರೀತಿ ಹುಟ್ಟಿಕೊಂಡಿತಂತೆ.

    ನೇಣುಬಿಗಿದ ಸ್ಥಿತಿಯಲ್ಲಿ ಸಿಕ್ಕ ಪುತ್ರನ ಹೆಣ, ಹೆತ್ತವರಿಂದ ಕೊಲೆ ಶಂಕೆ.!?

    ಮದುವೆ ಹೆಸರೇಳಿಕೊಂಡು ಕಾಂತರಾಜು ಬಳಿ ಪೂರ್ಣಿಮಾ ಹಾಗೂ ಲೋಕೇಶ್ ಲಕ್ಷಾಂತರ ರೂಪಾಯಿ ಹಣ ಕಿತ್ತಿದ್ರಂತೆ. ಹಣ ಖಾಲಿಯಾಗುತ್ತಿದ್ದಂತೆ ವಯಸ್ಸಿನ ನೆಪ ಹೇಳಿ ಮದುವೆ ಮಾಡಿಕೊಡಲ್ಲ ಎಂದು ಕ್ಯಾತೆ ತೆಗೆದಿದ್ರಂತೆ. ವಿಚಾರ ಪೊಲೀಸ್ ಠಾಣೆ ಮೆಟ್ಟಿಲಿನವರೆಗೂ ಹೋಗಿತ್ತು. ಬಳಿಕ ಕಾಂತರಾಜು ತನಗೆ ಬೆಂಗಳೂರು ಬೇಡ ಹುಡಗಿಯ ಸಹವಾಸವೂ ಬೇಡ ಎಂದು ಊರು ಸೇರಿಕೊಂಡಿದ್ದ.

    ದೇವರ ದರ್ಶನಕ್ಕೆ ಹೋಗ್ತಿರೋದಾಗಿ ಹೇಳಿದ್ದ!

    ಜನವರಿ 1ರಂದು ತನ್ನ ತಾಯಿ ಪೂರ್ಣಿಮಾ ಜತೆ ಕಾಂತರಾಜು ಮನೆಗೆ ಬಂದ ಬಾಲಕಿ ಆತನನ್ನು ಬೆಂಗಳೂರಿಗೆ ಕರೆದುಕೊಂಡು ಹೋಗಿದ್ಲು. ಜನವರಿ 6 ರಂದು ಕಾಂತರಾಜು ತನ್ನ ತಾಯಿ ಶಾಂತಮ್ಮಗೆ ಫೋನ್ ಮಾಡಿ ತಾನು ದೇವರ ಬಳಿ ಹೋಗುತ್ತಿದ್ದೇನೆ ಎಂದು ಹೇಳಿ ಫೋನ್ ಕಟ್ ಮಾಡಿದ್ದ. ಬಳಿಕ ನಾಗಮಂಗಲದ ಸೂಳೆ ಕೆರೆ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಶವಪತ್ತೆಯಾಗಿದ್ದು, ಆತನ ಸಾವಿನ ಬಗ್ಗೆ ಹೆತ್ತವರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.

    ಸಾವಿಗೂ ಮುನ್ನ ಕಾಂತರಾಜು ಸೆಲ್ಫಿ ವಿಡಿಯೋ

    ಕಾಂತರಾಜು ಸಾವಿಗೂ ಮುನ್ನ ಸೆಲ್ಫಿ ವಿಡಿಯೋ ಮಾಡಿಕೊಂಡಿದ್ದು, ತನ್ನ ಸಾವಿಗೆ ಲೋಕೇಶ್ ಹಾಗೂ ಪೂರ್ಣಿಮಾ ಕಾರಣ ಎಂದು ಹೇಳಿಕೊಂಡಿದ್ದಾನೆ.

    ಇದನ್ನೂ ಓದಿ:  Need Help: ವೈದ್ಯರ ಯಡವಟ್ಟಿನಿಂದ ಹಾಸಿಗೆ ಹಿಡಿದ ಬಾಲಕ: ಆರ್ಥಿಕ ನೆರವಿಗಾಗಿ ದಾನಿಗಳಲ್ಲಿ ಹೆತ್ತವರ ಮನವಿ

    ಸದ್ಯ ನಾಗಮಂಗಲ ಟೌನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆದ್ರೆ ಹೆತ್ತವರು ದೂರು ನೀಡಿದ್ರೂ ಲೋಕೇಶ್ ಹಾಗೂ ಪೂರ್ಣಿಮಾ ವಿರುದ್ಧ ಕ್ರಮ ತೆಗೆದುಕೊಂಡಿಲ್ಲ. ಕನಿಷ್ಠ ಪಕ್ಷ ಠಾಣೆಗೆ ಕರೆಸಿ ವಿಚಾರಣೆಯನ್ನೂ ಮಾಡಿಲ್ಲ ಎಂದು ಪೊಲೀಸರ ಬಗ್ಗೆ ಗ್ರಾಮಸ್ಥರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.

    ಮಂಗಳೂರಿನಲ್ಲಿ ತಾಯಿಯ ಮೇಲೆ ಅತ್ಯಾಚಾರ

    ಮಗನೇ ಹೆತ್ತ ತಾಯಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿರುವ ಘಟನೆ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಹಳ್ಳಿಯೊಂದರಲ್ಲಿ ಗುರುವಾರ ನಸುಕಿನಲ್ಲಿ ಘಟನೆ ನಡೆದಿದ್ದು, ನಂತರ ಬೆಳಕಿಗೆ ಬಂದಿದೆ. 36 ವರ್ಷದ ಮಗ ಗುರುವಾರ ನಸುಕಿನ ಜಾವ ತಾಯಿ ಮಲಗಿದ್ದ ಕೋಣೆಗೆ ನುಗ್ಗಿದ್ದಾನೆ. ಕಿರುಚಾಡಿ ತೀವ್ರ ವಿರೋಧ ವ್ಯಕ್ತಪಡಿಸಿದರೂ ಬಿಡದೇ ತಾಯಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ವರದಿಯಾಗಿದೆ.
    Published by:Mahmadrafik K
    First published: