HOME » NEWS » State » MANDYA WOMEN SUICIDE WITH HER CHILDREN SESR RGM

ಯುವಕನನ್ನು ನಂಬಿ ಮೋಸ ಹೋದ ವಿಧವೆ; ಮಕ್ಕಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ

ಈ ವಿಚಾರ ಕುರಿತು ಗ್ರಾಮದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಗ್ರಾಮದ ಪಂಚಾಯತಿ ನ್ಯಾಯ ತೀರ್ಮಾನ ಮಾಡಿದರೂ ವಿಧವೆಗೆ ನ್ಯಾಯ ಸಿಕ್ಕಿರಲಿಲ್ಲ

news18-kannada
Updated:November 3, 2020, 8:24 PM IST
ಯುವಕನನ್ನು ನಂಬಿ ಮೋಸ ಹೋದ ವಿಧವೆ; ಮಕ್ಕಳಿಗೆ ವಿಷ ಉಣಿಸಿ ತಾಯಿ ಆತ್ಮಹತ್ಯೆ
ಸಾಂದರ್ಭಿಕ ಚಿತ್ರ
  • Share this:
ಮಂಡ್ಯ (ನ. 03): ಮದುವೆಯಾಗುವುದಾಗಿ ನಂಬಿಸಿದ್ದ ಯುವಕ ಕೈಕೊಟ್ಟ ಕಾರಣಕ್ಕೆ ಮನನೊಂದ ವಿಧವೆಯೋರ್ವಳು ತನ್ನ ಮಕ್ಕಳಿ ಬ್ಬರಿಗೂ ವಿಷನೀಡಿ ತಾನೂ ವಿಷಕುಡಿದ  ಆತ್ಮಹತ್ಯೆ ಮಾಡಿಕೊಂಡ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಮದ್ದೂರು ತಾಲೂಕಿನ ಬೋರಾ ಪುರ ಗ್ರಾಮದಲ್ಲಿ ನಡೆದಿದೆ.  ನೇತ್ರಾವತಿ(30) ಆಕೆಯ ಮಗಳಾದ ಶೋಭಿತಾ(9) ಹಾಗೂ ಮಗ ನಂದೀಶ್(7) ಸಾವಿಗೀಡಾದವರು. ತಕ್ಷಣಕ್ಕೆ ಸ್ಥಳೀಯರು ಇವರನ್ನು ಮೈಸೂರಿನ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಮೃತ ನೇತ್ರಾವತಿ ಹಲವು ವರ್ಷಗಳ ಹಿಂದೆ ಬೋರಾ ಪುರ ಗ್ರಾಮದ ಸೋಮ ಎಂಬುವನನ್ನು ಮದುವೆ ಯಾಗಿದ್ದಳು. ಬಳಿಕ  ಅನಾರೋಗ್ಯದಿಂದ ಗಂಡನನ್ನು ಕಳೆದುಕೊಂಡಿದ್ದು ಊರನಲ್ಲಿ ತನ್ನರಡು ಮಕ್ಕಳ ಜೊತೆ ವಾಸವಾಗಿದ್ದಳು.  ಕಳೆದೊಂದು ವರ್ಷದಿಂದ ನೇತ್ರಾ ವತಿಯನ್ನು ಮದುವೆ ಯಾಗುವುದಾಗಿ ಅದೇ ಗ್ರಾಮದ ಆನಂದ್ ಎಂಬಾತ ನಂಬಿಸಿದ್ದನು ಎನ್ನಲಾಗಿದೆ.

ಆದರೆ ಇತ್ತೀಚೆಗೆ ಈತ ಬೇರೆ ಮಹಿಳೆ ಜತೆ ಹೋಗಿ ಮದುವೆ ಯಾಗಲು ಸಿದ್ಧತೆ ಮಾಡಿ ಕೊಂಡಿದ್ದ.ಈ ವಿಚಾರ ಕುರಿತು ಗ್ರಾಮದಲ್ಲಿ ಪಂಚಾಯತಿ ಕೂಡ ನಡೆದಿತ್ತು. ಗ್ರಾಮದ ಪಂಚಾಯತಿ ನ್ಯಾಯ ತೀರ್ಮಾನ ಮಾಡಿದರೂ ವಿಧವೆಗೆ ನ್ಯಾಯ ಸಿಕ್ಕಿರಲಿಲ್ಲ

ಈ ಎಲ್ಲದರಿಂದ ಮನನೊಂದು ಸೋಮವಾರ ಸಂಜೆ ಮನೆಯಲ್ಲಿ  ಮಕ್ಕಳಿಗೆ ವಿಷ ಕೊಟ್ಟು ತಾನು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸ್ಥಳೀಯರು ಮನೆಯಲ್ಲಿ ಕಿರುಚಾಟ ಗಮನಿಸಿ  ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಿಸದೇ ಬಾಲಕಿ ಮೃತಪಟ್ಟಿ ದ್ದಾಳೆ. ಈ ಕುರಿತಾಗಿ ನೇತ್ರಾವತಿ ಅತ್ತೆ ಗೌರಮ್ಮ ಕೆಎಂ ದೊಡ್ಡಿ ಪೊಲೀಸ್ ಠಾಣೆಗೆ  ಈ ಸಂಬಂಧ ದೂರು ನೀಡಿದ್ದಾರೆ. ಘಟನಾ ಸ್ಥಳಕ್ಕೆ ಡಿವೈಎಸ್ಪಿ ಪೃಥ್ವಿ, ಸಿಪಿಐ ಶಿವಮಲ್ಲ ಯ್ಯ,ಎಸ್ಐ ಶೇಷಾದ್ರಿ ಭೇಟಿ ನೀಡಿ ಪರಿಶೀಲನೆ ನಡೆಸಿ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿ ದ್ದಾರೆ‌.

ವಿಧವೆಯೊಬ್ಬಳು ತನ್ನ ಬಾಳಿಗೆ ಯುವಕ ನೊಬ್ಬ ಆಸರೆಯಾಗುತ್ತಾನೆಂದು ನಂಬಿ ಕೊನೆಗೆ ಆತನ ವಂಚನೆಗೊಳಗಾಗಿ ತನ್ನ ಬಾಳಿಗೆ ಕೊಡಲಿ ಇಟ್ಟು ಕೊಂಡಿದ್ದಾಳೆ. ಮಾತ್ರವಲ್ಲದೆ  ಇನ್ನಿ ಬಾಳಿ ಬದುಕ ಬೇಕಾದ ತನ್ನಿಬ್ಬರು ಎಳೆಯ ಮಕ್ಕಳಿಗೆ ಕೈಯ್ಯಾರೆ ವಿಷವುಣಿಸಿ ಕೊಂದಿದ್ದು ನಿಜಕ್ಕೂ ದುರಂತವೇ ಸರಿ
Published by: Seema R
First published: November 3, 2020, 8:20 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories