HOME » NEWS » State » MANDYA WIFE MURDERS HER HUSBAND AND HIS PARENTS IN MANDYA CRIME NEWS RGM SCT

Mandya: ಕೋಪದ ಕೈಗೆ ಬುದ್ಧಿ ಕೊಟ್ಟು ಗಂಡ, ಅತ್ತೆ, ಮಾವನನ್ನು ಕೊಂದ ಮಂಡ್ಯದ ಗೃಹಿಣಿ

Crime News: ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ಅ. 18ರಂದು ಗೃಹಿಣಿಯೊಬ್ಬಳು ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ, ಅತ್ತೆ, ಮಾವನನ್ನು ಕೊಂದಿದ್ದಾಳೆ. ಆಕೆ ಈಗ ಜೈಲು ಪಾಲಾಗಿದ್ದು, ಮಕ್ಕಳು ಬೀದಿಪಾಲಾಗಿದ್ದಾರೆ.

news18-kannada
Updated:November 2, 2020, 10:34 AM IST
Mandya: ಕೋಪದ ಕೈಗೆ ಬುದ್ಧಿ ಕೊಟ್ಟು ಗಂಡ, ಅತ್ತೆ, ಮಾವನನ್ನು ಕೊಂದ ಮಂಡ್ಯದ ಗೃಹಿಣಿ
ಗಂಡ, ಅತ್ತೆ-ಮಾವನನ್ನು ಕೊಂದ ಮಂಡ್ಯದ ಗೃಹಿಣಿ ನಾಗಮಣಿ
  • Share this:
ಮಂಡ್ಯ (ನ. 2): ಕೋಪದ ಕೈಗೆ ಬುದ್ದಿ ಕೊಟ್ಟ ಮಂಡ್ಯದ ಗೃಹಿಣಿಯೊಬ್ಬಳು ತನ್ನ ಇಡೀ ಕುಟುಂಬವನ್ನು ನಾಶ ಮಾಡಿದ್ದಾಳೆ‌. ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ ಸೇರಿದಂತೆ ಅತ್ತೆ ಮಾವನ ಮೇಲೆ ಮಾರಣಾಂತಿಕ ಹಲ್ಲೆ ಮಾಡಿ‌ದ್ದು, ಹಲ್ಲೆಯಿಂದಾಗಿ  ಮೂವರೂ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂವರನ್ನು ಕೊಲೆ ಮಾಡಿದ ತಪ್ಪಿಗೆ ಆಕೆ ಇದೀಗ ಜೈಲು ಕಂಬಿ ಎಣಿಸುತ್ತಿದ್ದಾಳೆ. ಆಕೆಯ ತಪ್ಪಿನಿಂದ ಇಬ್ಬರು ಮಕ್ಕಳು ಅನಾಥರಾಗಿ, ಬೀದಿಪಾಲಾಗಿದ್ದಾರೆ.

ಹೌದು! ಮಂಡ್ಯದ ಕೆ.ಆರ್. ಪೇಟೆ ತಾಲೂಕಿನ ಹೆಮ್ಮಡಹಳ್ಳಿಯಲ್ಲಿ ಅ. 18ರಂದು ಗೃಹಿಣಿಯೊಬ್ಬಳು ಮನೆಯಲ್ಲಿ ತನ್ನ ಮಾತು ಕೇಳದ ಕಾರಣಕ್ಕೆ ಗಂಡ, ಅತ್ತೆ, ಮಾವನಿಗೆ ಕಾಯಿ ತುರಿಯವ  ಮಣೆಯಿಂದ ಹಲ್ಲೆ ಮಾಡಿದ್ದಳು. ಈ ಘಟನೆಯಲ್ಲಿ ಆಕೆಯ ಗಂಡ  ನಾಗರಾಜು (47) ಅತ್ತೆ ಕುಳ್ಳಮ್ಮ, ಮಾವ ವೆಂಕಟೇ ಗೌಡ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರು. ಅ. 21ರಂದು ಗಂಡ ನಾಗರಾಜು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದ. ಅತ್ತೆ-ಮಾವನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಗಂಡನನ್ನು ಕೊಲೆಗೈದ ಆರೋಪದ ಮೇಲೆ ಆರೋಪಿ ನಾಗಮಣಿಯನ್ನು ಪೊಲೀಸರು ಬಂಧಿಸಿದ್ದರು‌. ಗಂಡ ನಾಗರಾಜು ಸಾವಿನಿಂದ ಆ ಕುಟುಂಬಕ್ಕೆ ಆಘಾತವಾಗಿತ್ತು. ಊರಿನವರು ಸೇರಿ ನಾಗರಾಜು ಅಂತ್ಯಸಂಸ್ಕಾರ ಮಾಡಿದ್ದರು.

ಇದನ್ನೂ ಓದಿ: RR Nagar, Sira Bypolls: ಆರ್​ಆರ್​ ನಗರ, ಶಿರಾ ಉಪಚುನಾವಣೆ; ಅಭ್ಯರ್ಥಿಗಳಿಂದ ಇಂದು ಮನೆ ಮನೆ ಪ್ರಚಾರ

ಇನ್ನು, ಗಂಭೀರವಾಗಿ ಗಾಯಗೊಂಡು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿಯ ಅತ್ತೆ, ಮಾವ ಕೂಡ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಇದರಿಂದಾಗಿ ಆ ಕುಟುಂಬ ಇದೀಗ ಬೀದಿ ಪಾಲಾಗಿದೆ. ಗಂಡ ಸೇರಿ ಅತ್ತೆ ಹಾಗೂ ಮಾವ ಮೂವರು ನಾಗಮಣಿ ಕೈಯಿಂದ ಕೊಲೆಯಾಗಿದ್ದಾರೆ. ನಾಗಮಣಿಗೆ ಇದ್ದ ಇಬ್ಬರು ಮಕ್ಕಳು ಈಗ ಅನಾಥವಾಗಿದ್ದು, ಎರಡು ಮಕ್ಕಳು ಪೋಷಕರು ಯಾರೂ ಇಲ್ಲದೆ  ಬೀದಿ ಪಾಲಾಗಿವೆ. ಇಬ್ಬರು ಗಂಡು ಮಕ್ಕಳನ್ನು ಸದ್ಯ ಊರಿನವರು ನೋಡಿಕೊಳ್ಳುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

ಒಟ್ಟಾರೆ, ಕೋಪದ ಕೈಗೆ ಬುದ್ದಿ ಕೊಟ್ಟ ಪತ್ನಿ ನಾಗಮಣಿ ತನ್ನ ಹಠದ ಕಾರಣದಿಂದ ಸುಂದರವಾಗಿದ್ದ ತನ್ನ ಇಡೀ ಸಂಸಾರಕ್ಕೆ ಕೊಳ್ಳಿ ಇಟ್ಟುಕೊಂಡಿದ್ದಾಳೆ. ಆಕೆಯ‌ ಹಠದ ಕಾರಣದಿಂದ ಇಡೀ ಕುಟುಂಬವೇ ಇದೀಗ ಸರ್ವನಾಶದ ಅಂಚಿಗೆ ಬಂದಿದ್ದು, ತನ್ನ ಮಕ್ಕಳನ್ನು ಅನಾಥರನ್ನಾಗಿಸಿ ತಾನು ಕೂಡ ಜೈಲು ಪಾಲಾಗಿದ್ದು ಆ‌ ಸುಂದರ ಕುಟುಂಬ ದುರಂತವೇ ಸರಿ.
Published by: Sushma Chakre
First published: November 2, 2020, 10:33 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories