Mandya Crime News: ವೇಶ್ಯೆಯ ಪ್ರೀತಿಗೆ ಬಿದ್ದು ಆದ ಸೈಕೋ ಕಿಲ್ಲರ್; ಬಯಲಾಯ್ತು ಮರ್ಡರ್ ಮಿಸ್ಟ್ರಿ

ಪ್ರೀತಿ ಮಾಯೆ ಹುಷಾರು ಅನ್ನೋದು ಇದಕ್ಕೆ ಅನ್ಸತ್ತೆ. ಮಂಡ್ಯದ ಈತನಿಗೆ ಸಪ್ತಪದಿ ತುಳಿದು ಹೆಜ್ಜೆಯಿಟ್ಟು ಬಂದ ಹೆಂಡತಿಯಿದ್ದಳು. ಆದರೂ ಪರಸ್ತ್ರೀ ಮೇಲೆ ಮೋಹ. ಈ ಬಲೆಗೆ ಬಿದ್ದವನೇ ಮಾಡಿದ್ದು ಮಾತ್ರ ಒಂದಲ್ಲ ಎರಡಲ್ಲ ಮೂರು ಕೊಲೆ.

ಸಾಂಧರ್ಬಿಕ ಚಿತ್ರ

ಸಾಂಧರ್ಬಿಕ ಚಿತ್ರ

  • Share this:
ಮಂಡ್ಯ(ಆ.05): ಕಾವೇರಿ ಕಣಿವೆಯಲ್ಲಿ (Cauvery) ಒಂದಾದ ಸಕ್ಕರೆ ನಾಡು ಮಂಡ್ಯದಲ್ಲಿ(Mandya) ಈಗ ನೀರಿಗಿಂತ ಹೆಚ್ಚಾಗಿ ರಕ್ತಪಾತದ (Murder) ಕಥೆಗಳೇ ಹೆಚ್ಚು ಹೊರಬರ್ತಿದೆ. ಅದರಲ್ಲೂ ನಾಲೆಯಲ್ಲಿ, ಕೆರೆಯಲ್ಲಿ (River) ಹೆಚ್ಚಾಗಿ ಹೆಣಗಳು ಬರ್ತಿದೆ. ಇದು ಸಕ್ಕರೆನಾಡನ್ನು ಆತಂಕಕ್ಕೆ ದೂಡಿದೆ. ಎರಡು ತಿಂಗಳ ಹಿಂದೆ ನಾಲೆಯಲ್ಲಿ ತೇಲಿಬಂದ ರುಂಡವಿಲ್ಲದ 2 ಮಹಿಳೆಯರ ಮೃತದೇಹ (Women Deadbody) ಪ್ರಕರಣ ಮಂಡ್ಯ ಜನರನ್ನು ಬೆಚ್ಚಿಬೀಳಿಸಿತ್ತು. ಈ ಸುದ್ದಿ ಕೇಳಿ ಸಕ್ಕರೆನಾಡು ಭಯಗೊಂಡಿತ್ತು. ಈಗ ನಮ್ಮ ಖಾಕಿ (Police) ಈ ಕೇಸ್​ನ್ನು ಭೇದಿಸಿದ್ದಾರೆ. ಈ ಮೂಲಕ ಪೊಲೀಸರಿಗೆ, ಜನತೆಗೆ ತಲೆನೋವಾಗಿದ್ದ ಪ್ರಕರಣದ ರಹಸ್ಯ ಹೊರಬಿದ್ದಿದೆ. ಹಾಗಾದರೆ ರುಂಡವಿಲ್ಲದ ಮೃತದೇಹದ ಹಿಂದಿನ ರಹಸ್ಯವೇನು? ಖಾಕಿ ತಲಾಶ್​ ವೇಳೆ ಸಿಕ್ಕಿದ್ದೇನು ಅನ್ನೋದರ ವಿವರ ಇಲ್ಲಿದೆ.

ಪ್ರೀತಿ ಮಾಯೆ ಹುಷಾರು ಅನ್ನೋದು ಇದಕ್ಕೆ ಅನ್ಸತ್ತೆ. ಮಂಡ್ಯದ ಈತನಿಗೆ ಸಪ್ತಪದಿ ತುಳಿದು ಹೆಜ್ಜೆಯಿಟ್ಟು ಬಂದ ಹೆಂಡತಿಯಿದ್ದಳು. ಆದರೂ ಪರಸ್ತ್ರೀ ಮೇಲೆ ಮೋಹ. ಈ ಬಲೆಗೆ ಬಿದ್ದವನೇ ಮಾಡಿದ್ದು ಮಾತ್ರ ಒಂದು ಎರಡಲ್ಲ ಮೂರು ಕೊಲೆ.

ಮಿಸ್ಸಿಂಗ್​ ಕೇಸ್​ನಿಂದ ತಗ್ಲಾಕೊಂಡ್ರು!

ಮಂಡ್ಯದಲ್ಲಿ 2 ತಿಂಗಳ ಹಿಂದೆ ನಾಲೆಯಲ್ಲಿ ಎರಡು ರುಂಡವಿಲ್ಲದ ಮೃತದೇಹ ತೇಲಿಬಂದಿತ್ತು. ಈ ಪ್ರಕರಣದ ಬೆನ್ನುಬಿದ್ದ ಶ್ರೀರಂಗಪಟ್ಟಣ ಪೊಲೀಸರಿಗೆ ಸಿಕ್ಕಿದ್ದು ಚಾಮರಾಜನಗರದಲ್ಲಿನ ಒಂದು ಮಿಸ್ಸಿಂಗ್ ಕೇಸ್. ಆ ಮಿಸ್ಸಿಂಗ್ ಕೇಸ್​ನ್ನು ಬೆನ್ನತ್ತಿದಾಗ ರುಂಡವಿಲ್ಲದ ಮೃತದೇಹ ಪ್ರಕರಣ ಹೊರಬಿದ್ದಿದೆ.

Mandya 2 ladies murder secret out accused arrest
ಸಾಂಕೇತಿಕ ಚಿತ್ರ


ಹೆಂಡತಿಯ ಸಂಬಂಧಿ ಜೊತೆ ಲವ್ವಿಡವ್ವಿ!

ಬೆಂಗಳೂರು ಮೂಲದ ಸಿದ್ದಲಿಂಗಪ್ಪ(35) ಎಂಬಾತನೇ ಈ 2 ಕೊಲೆಯ ಆರೋಪಿ. ಈತನಿಗೆ ಮದುವೆಯಾಗಿದ್ದರೂ ಪತ್ನಿ ಸಂಬಂಧಿಯ ಜೊತೆ ಲವ್ವಲ್ಲಿ ಬಿದ್ದಿದ್ದ. ಆದರೆ ಆಕೆಗೆ ವೇಶ್ಯಾವಟಿಕೆ ಲಿಂಕ್ ಇತ್ತು. ಇದನ್ನು ಸಿದ್ದಲಿಂಗಪ್ಪ ಸಹಿಸಲಾರನಾಗಿದ್ದ. ಅದಕ್ಕಾಗಿ ಪ್ರೇಯಸಿಯ ಲಿಂಕ್‌ನಲ್ಲಿದ್ದ ಮಹಿಳೆಯರನ್ನೇ ಟಾರ್ಗೆಟ್ ಮಾಡಿಕೊಂಡು ಕೊಲೆಗೈಯ್ಯುತ್ತಿದ್ದ.

ಇದನ್ನೂ ಓದಿ: ಮನೆಯಲ್ಲಿ ಕತ್ತಿ ಸುಳಿಬಾರದು, ಕೊಲೆ ಆಗಬಾರದು ಅಂದ್ರೆ ಹಿಂದೂಗಳ ಬಳಿ ವ್ಯವಹರಿಸಿ; ಮುತಾಲಿಕ್ ಕರೆ

ಪ್ರೇಯಸಿ ಗುಂಗಲ್ಲಿ ಸೈಕೋ ಆಗಿದ್ದ!

ಪ್ರೇಯಸಿಯ ಗುಂಗಲ್ಲಿ ಸಿದ್ದಲಿಂಗಪ್ಪ ಸೈಕೋ ಆಗಿದ್ದ. ಅದಕ್ಕಾಗಿ ಪ್ರೇಯಸಿಗೆ ಹಣ, ಚಿನ್ನಾಭರಣ ಆಸೆ ಹುಟ್ಟಿಸಿ ಮೂವರು ಮಹಿಳೆಯರ ಕೊಲೆಗೈದಿದ್ದಾನೆ. ಜೂ.7ರಂದು ಇಬ್ಬರು ಮಹಿಳೆಯರ ಕೊಲೆಗೈದು ರುಂಡ-ಮುಂಡ ಬೇರೆ ಮಾಡಿ ಮಂಡ್ಯದ ಬೇಬಿ ಗ್ರಾಮದ ಕೆರೆ ಹಾಗೂ ಅರಕೆರೆ ಸಮೀಪದ ಕಿರುನಾಲೆಯಲ್ಲಿ ಮೃತದೇಹ ಎಸೆದಿದ್ದ.

ಕಾಲ್ ಲಿಸ್ಟ್ ಕೆದಕಿದಾಗ ಸಿಕ್ತು ಸುಳಿವು!

ಸಾವಿರಾರು ನಾಪತ್ತೆ ಪ್ರಕರಣಗಳನ್ನ ಜಾಲಾಡಿದ್ರು ಪೊಲೀಸರಿಗೆ ಸುಳಿವು ಸಿಕ್ಕಿರಲಿಲ್ಲ. ಇತ್ತ ದೇಹದ ಮೇಲ್ಭಾಗ ಸಿಗದೆ, ಮೃತರ ನಾಪತ್ತೆ ಪ್ರಕರಣವೂ ದಾಖಲಾಗದೆ ಪೊಲೀಸರಿಗೆ ತಲೆನೋವಾಗಿತ್ತು. ಹೀಗಿರೋವಾಗ ಜು.25ರಂದು ಚಾಮರಾಜನಗರದಲ್ಲಿ ಮಿಸ್ಸಿಂಗ್‌ ಕೇಸ್‌ ದಾಖಲಾಗಿತ್ತು. ಕಾಲ್ ಲಿಸ್ಟ್ ಆಧರಿಸಿ ತನಿಖೆ ನಡೆಸಿದಾಗ 3 ಕೊಲೆ ಪ್ರಕರಣ ಬಯಲಾಗಿದೆ.

ಇದನ್ನೂ ಓದಿ: ಯಾದಗಿರಿಯಲ್ಲಿ ಭೀಕರ ಅಪಘಾತ; ಕಂದಮ್ಮ ಸೇರಿ ಒಂದೇ ಕುಟುಂಬದ ಆರು ಜನ ಸಾವು

ಮೇ 30ರಂದು ಚಿತ್ರದುರ್ಗ ಮೂಲದ ಮಹಿಳೆಯೊಬ್ಬರ ಕೊಲೆಯಾಗಿತ್ತು. ಜು.3ರಂದು ಚಾಮರಾಜನಗರ ಮೂಲದ ಮತ್ತೊಂದು ಮಹಿಳೆಯ ಕೊಲೆಯಾಗಿತ್ತು. ಇಬ್ಬರನ್ನೂ ಮನೆಗೆ ಕರೆಸಿ ಕುತ್ತಿಗೆ ಬಿಗಿದು ಹತ್ಯೆಗೈದು, ನಂತರ ಇಬ್ಬರ ರುಂಡ ಮುಂಡ ಬೇರ್ಪಡಿಸಿ ನಾಲೆಗೆ ಎಸೆಯಲಾಗಿತ್ತು.

ಅದರಲ್ಲೂ ಚಾಮರಾಜನಗರ ಮೂಲದ ಮಹಿಳೆ ನಾಪತ್ತೆ ಪ್ರಕರಣ ಬಳಿಕ ಈ ಎಲ್ಲಾ ಕೊಲೆ ರಹಸ್ಯ ಬಯಲಾಗಿದೆ. ಸಿದ್ದಲಿಂಗಪ್ಪ ಮತ್ತು ಉಳಿದ ಹಂತಕರು ತಗ್ಲಾಕೊಂಡಿದ್ದಾರೆ. ವಿಚಾರಣೆಯಲ್ಲಿ ಎರಡರ ಜೊತೆ ಮತ್ತೊಂದು ಕೊಲೆ ಹಾಗೂ 5 ಹತ್ಯೆ ಸ್ಕೆಚ್​​ಗಳನ್ನು ಪಾಪಿಗಳು ಬಾಯ್ಬಿಟ್ಟಿದ್ದಾರೆ. ಮಂಡ್ಯದ ನಾಲೆಯಲ್ಲಿ ಮಾತ್ರವಲ್ಲದೇ ಅದಕ್ಕೂ ಮೊದಲು ಬೆಂಗಳೂರಿನಲ್ಲೂ ಒಂದು ಕೊಲೆ ಮಾಡಿರೋದು ಗೊತ್ತಾಗಿದೆ. ಪ್ರಕರಣ ಭೇದಿಸಿದ ಮಂಡ್ಯ ಪೊಲೀಸರಿಗೆ ಒಂದು ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ.
Published by:Thara Kemmara
First published: