news18-kannada Updated:December 27, 2020, 7:58 PM IST
ಯುವಕರ ತಂಡ
ಮಂಡ್ಯ(ಡಿಸೆಂಬರ್. 27): ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಕರ್ನಾಟಕದ ಒಂದಲ್ಲ ಒಂದು ವಿಚಾರವನ್ನು ಇಲ್ಲವೇ ಕರ್ನಾಟಕದ ಓರ್ವ ವ್ಯಕ್ತಿಯ ಸಾಧನೆಯನ್ನು ಕುರಿತು ಮಾತನಾಡುತ್ತಾ ಬರುತ್ತಿದ್ದಾರೆ. ಅದರಲ್ಲೂ ಕಳೆದ ಬಾರಿ ರಾಜ್ಯದ ಮಂಡ್ಯ ಜಿಲ್ಲೆಯ ಕೆರೆ ಕಾಮೇಗೌಡರ ಬಗ್ಗೆ ಮಾತನಾಡಿ ಅವರ ಸಾಧನೆಯನ್ನು ಪ್ರಶಂಸಿದರು. ಈ ಬಾರಿ ಕೂಡ ರಾಜ್ಯದ ಮಂಡ್ಯ ಜಿಲ್ಲೆಯ ಯುವಕರ ತಂಡವೊಂದರ ಸಾಧನೆಯ ಕುರಿತು ಮಾತನಾಡಿ ಆ ಯುವಕರ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ. ಮಂಡ್ಯದ ಶ್ರೀರಂಗಪಟ್ಟಣದ ಯುವ ಬ್ರಿಗೇಡ್ ನ ಕಾರ್ಯಕರ್ತರು ಹಾಳು ಕೊಂಪೆಯಾಗಿದ್ದ ನೂರಾರು ವರ್ಷದ ಪ್ರಾಚೀನ ಶಿವ ದೇಗುಲವನ್ನು ಸ್ವಚ್ಚಗೊಳಿಸಿ ಪುನರುಜ್ಜೀವನಗೊಳಿಸಿ ಜೀರ್ಣೋದ್ದಾರ ಮಾಡಿರುವುದನ್ನು ಪ್ರಶಂಸಿಸಿ ಯುವಕರ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ.
ಇನ್ನು ಶ್ರೀರಂಗಪಟ್ಟಣ ಟೌನ್ ವ್ಯಾಪ್ತಿಯ ಗಂಜಾಮ್ ನ ಹೊರವಲಯದಲ್ಲಿ ನೂರಾರು ವರ್ಷಗಳ ಇತಿಹಾಸವಿದ್ದ ವೀರಭದ್ರಸ್ವಾಮಿ ದೇಗುಲ ಸರಿಯಾದ ನಿರ್ವಹಣೆ ಇಲ್ಲದೆ ಶಿಥಿಲಗೊಂಡಿತ್ತು. ಅಲ್ಲದೇ ಯಾರು ಭಕ್ತರು ಹೋಗದ ಕಾರಣಕ್ಕೆ ಆ ದೇಗುಲದ ಸುತ್ತ ಗಿಡಗೆಂಟೆಗಳು ಬೆಳೆದು ಆ ದೇಗುಲ ಗಿಡಮರಗಳು ಮುಳುಕಂಟಿಗಳಿಂದ ಮುಚ್ಚಿ ಹೋಗಿತ್ತು.
ಇಂತಹ ಪ್ರಾಚೀನ ಇತಿಹಾಸದ ದೇಗುಲವನ್ನು ಪತ್ತೆ ಹಚ್ಚಿದ ಯುವ ಬ್ರಿಗೇಡ್ ತಂಡದ 30 ಕ್ಕೂ ಹೆಚ್ಚು ಸದಸ್ಯರು ಆ ದೇಗುಲವನ್ನು ಶ್ರಮದಾನದ ಮೂಲಕ ಸ್ವಚ್ಚ ಮಾಡಿ ಆ ದೇಗುಲದ ಸುತ್ತಲು ಬೆಳೆದ ಗಿಡಗೆಂಟೆ ಹಾಗೂ ಮುಳ್ಳುಗಳನ್ನು ಸ್ವಚ್ಚ ಮಾಡಿದ್ದಾರೆ.
ಇದನ್ನೂ ಓದಿ :
ಖರ್ಗೆಗೆ ಸಿಎಂ ಸ್ಥಾನ ತಪ್ಪಿಸಿದ್ದು ಯಾರು ಅಂತ ಹೆಸರು ಹೇಳಿಬಿಡಿ: ದೇವೇಗೌಡರಿಗೆ ಸಿದ್ದು ಸವಾಲ್
ಅಲ್ಲದೇ ಆ ದೇಗುಲಕ್ಕೆ ಸುಣ್ಣ ಬಣ್ಣ ಬಳಿದು ವಿದ್ಯುತ್ ಸಂಪರ್ಕಕೊಡಿಸಿ ದೇಗು ಲದ ಜೀರ್ಣೋದ್ದಾರ ಕಾರ್ಯ ಕೈಗೊಂಡು ದೇಗುಲದ ಕಾಯಕಲ್ಪ ಮಾಡಿ ಶಿವನ ಮೂರ್ತಿಯನ್ನು ಮತ್ತೆ ಪ್ರತಿಷ್ಠಾಪಿಸಿ ಇದೀಗ ನಿತ್ಯ ಪೂಜೆಯ ಕೈಂಕರ್ಯ ನೆರವೇ ರುವಂತೆ ಮಾಡಿದ್ದಾರೆ.
ಒಟ್ಟಾರೆ ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣದ ಯುವ ಬ್ರಿಗೇಡ್ ಸದಸ್ಯರ ಈ ಸಾಮಾಜಿಕ ಕಳಕಳಿಯ ಈ ಕಾರ್ಯ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಗಮನ ಸೆಳೆದಿದೆ. ಅಲ್ಲದೇ ಈ ಯುವ ಬ್ರಿಗೇಡ್ ನ ಯುವಕರ ಕಾರ್ಯವ ನ್ನು ಸ್ವತಃ ಪ್ರಧಾನಿ ಮೋದಿಯವರೇ ಪ್ರಶಂಸಿರುವುದು ಇದೀಗ ಇದೀಗ ಯುವ ವರ್ಗದವರೆ ಮತ್ತಷ್ಟು ಪ್ರೇರಣೆಯಾ ಗೋದ್ರ ಜೊತೆಗೆ ಮತ್ತೊಬ್ಬರಿಗೆ ಆದರ್ಶವಾಗೋದ್ರಲ್ಲಿ ಸಂದೇಹವಿಲ್ಲ.
Published by:
G Hareeshkumar
First published:
December 27, 2020, 7:48 PM IST