ಹಿಜಾಬ್ ವಿವಾದದ (Hijab Controversy) ಪ್ರೊಟೆಸ್ಟ್ (Protest) ನಡೆಯುವ ವೇಳೆ ಮಂಡ್ಯದ (Mandya) ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು (Muslim Student) ಭಾರೀ ಸುದ್ದಿ ಮಾಡಿದ್ದಳು. ಆಕೆಯ ಹೆಸರು ಮುಸ್ಕಾನ್ (Muskan). ಇದೀಗ ಇದೇ ವಿದ್ಯಾರ್ಥಿನಿ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಅದು ಜಗತ್ತಿನ ಮೋಸ್ಟ್ ವಾಟೆಂಡ್ (Most Wanted) ಉಗ್ರ ಸಂಘಟನೆ ಆಲ್ ಖೈದಾದ (AL-Qaeda) ಉಗ್ರನೊಬ್ಬ ಈ ವಿದ್ಯಾರ್ಥಿನಿ ಮುಸ್ಕಾನ್ಳನ್ನು ಹಾಡಿ ಹೊಗಳಿದ್ದಾನೆ. ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ಮಾತವನ್ನಾಡಿದ್ದಾನೆ. ಇದೀಗ ಮತ್ತೆ ಚರ್ಚೆಗೆ ಗ್ರಾಸವಾಗಿದ್ದು, ಅಲ್ ಖೈದಾ ಉಗ್ರನ ಹೇಳಿಕೆಗೆ ವಿದ್ಯಾರ್ಥಿನಿ ಮುಸ್ಕಾನ್ ತಂದೆ (Father) ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ.
ಮುಸ್ಕಾನ್ ನನ್ನು ಹಾಡಿ ಹೊಗಳಿದ ಅಲ್ ಖೈದ
ಮಂಡ್ಯದಲ್ಲಿ ಮೊಳಗಿದ "ಜೈ ಶ್ರೀರಾಮ್" ಎಂಬ ಘೋಷಣೆಗೆ ಪ್ರತಿಯಾಗಿ "ಅಲ್ಲಾಹು ಅಕ್ಬರ್" ಎಂದು ಕೂಗಿದ ಮುಸ್ಕಾನ್ ಮುಸ್ಲಿಂ ಸಮುದಾಯಕ್ಕೆ ರಾತ್ರೋ ರಾತ್ರಿ ಹೀರೋ ಆದಳು. ಹಲವು ಮುಸ್ಲಿಂ ಸಂಘಟನೆಗಳು, ಮುಸ್ಲಿಂ ರಾಜಕಾರಣಿಗಳು ಲಕ್ಷ ಲಕ್ಷ ಬಹುಮಾನ ನೀಡಿದ್ದರು. ಅದರ ಮುಂದಿನ ಸರದಿಯಾಗಿ ವಿಶ್ವದ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಅಲ್ ಖೈದಾ ಮುಸ್ಕಾನ್ ಳನ್ನು ಹಾಡಿ ಹೊಗಳಿದೆ.
ಮುಸ್ಕಾನ್ ಮೊಳಗಿಸಿರುವ ಘೋಷಣೆಗೆ ಮೆಚ್ಚುಗೆ
ಅಲ್ ಖೈದಾ ಮುಖ್ಯಸ್ಥ ಅಮನ್-ಅಲ್-ಜವಾಹಿರಿಯು ಮುಸ್ಕಾನ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾನೆ. ಈ ಸಂಬಂಧ ಆಲ್ ಖೈದಾ ಮುಖವಾಣಿ ಅಸ್-ಸಾಹಬ್ ಎಂಬ ಸೋಷಿಯಲ್ ಮೀಡಿಯಾದಲ್ಲಿ ಅಮನ್-ಅಲ್- ಜವಾಹಿರಿ ಮಾತನಾಡಿದ್ದಾನೆ. 9 ನಿಮಿಷಗಳ ವಿಡಿಯೋದಲ್ಲಿ “ಮುಸ್ಕಾನ್ ಮೊಳಗಿಸಿರುವ ಘೋಷಣೆ ಮೆಚ್ಚುಗೆ ಪಡುವಂತದ್ದು, ಅವಳು ಜಿಹಾದ್ ಚೈತನ್ಯವನ್ನು ಹುರಿದುಂಬಿಸಿದ್ದಾಳೆ. ಮುಸ್ಕಾನ್ಳ ಳ ಘೋಷಣೆ ನನ್ನಲ್ಲಿ ಸ್ಪೂರ್ತಿ ತುಂಬಿದೆ. ಆಕೆಗಾಗಿ ನಾನು ಕೆಲವು ಸಾಲುಗಳ ಕವಿತೆ ಬರೆದಿದ್ದೇನೆ ಎಂದು ಹೇಳಿದ್ದಾನೆ.
ಇದನ್ನೂ ಓದಿ: Bagalakote: ಮುಸ್ಕಾನ್ನನ್ನು ಹೊಗಳಿದ ಅಲ್ ಖೈದಾ: ಎಲ್ಲಾ BJP ಅವ್ರೇ ಹುಟ್ಟು ಹಾಕೋದು ಎಂದ್ರು ಸಿದ್ದರಾಮಯ್ಯ
ವಿದ್ಯಾರ್ಥಿನಿ ತಂದೆ ಪ್ರತಿಕ್ರಿಯೆ
ಇನ್ನು ಉಗ್ರನ ಹೇಳಿಕೆ ಬಗ್ಗೆ ವಿದ್ಯಾರ್ಥಿನಿ ಹುಸೇನ್ ಖಾನ್ ಪ್ರತಿಕ್ರಿಯೆ ನೀಡಿದ್ದಾರೆ. ಅಲ್ಖೈದಾ ಏನು ಅಂತ ನಮಗೆ ಗೊತ್ತಿಲ್ಲ, ಮಾಧ್ಯಮದ ಮೂಲಕವೇ ನನಗೂ ಗೊತ್ತಾಗಿದ್ದು. ಈ ರೀತಿ ಮಾಡುತ್ತಿರುವುದು ತಪ್ಪು. ನಮ್ಮ ನಮ್ಮಲ್ಲಿ ತಂದು ಹಾಕುವ ಕೆಲಸ ಮಾಡುತ್ತಿದ್ದಾರೆ ಎಂದು ಮುಸ್ಕಾನ್ ತಂದೆ ಹುಸೇನ್ ಖಾನ್ ಹೇಳಿದ್ದಾರೆ.
"ಅವರು ಯಾರು ಅಂತ ಗೊತ್ತಿಲ್ಲ"
ನಮಗೆ ಅವರು ಯಾರು ಅಂತಾನೇ ಗೊತ್ತಿಲ್ಲ. ನಾವು ಅವರ ಬಗ್ಗೆ ಏನು ಹೇಳೋದು? ಇದೇ ಫಸ್ಟ್ ಟೈಮ್ ನಾವು ನೋಡಿದ್ದು ಅವರನ್ನು. ಅವರು ಏನೋ ಏನೋ ಮಾತನಾಡ್ತಾರೆ. ನಾವು ಮಂಡ್ಯದಲ್ಲಿ ಹಿಂದೂ ಮುಸ್ಲಿಮರು ಅಣ್ಣ-ತಮ್ಮಂದಿರ ರೀತಿ ಪ್ರೀತಿಯಿಂದ ಇದ್ದೇವೆ. ಈ ವಿಚಾರವಾಗಿ ನಮಗೆ ತೊಂದರೆಯಾಗುತ್ತಿದೆ ಎಂದು ಹೇಳುತ್ತಿದ್ದೇನೆ ಎಂದಿದ್ದಾರೆ.
“ನಾವು ಭಾರತದಲ್ಲಿ ನೆಮ್ಮದಿಯಿಂದ ಬದುಕುತ್ತಾ ಇದ್ದೆವೆ”
ಉಗ್ರ ಸಂಘಟನೆಯ ಶಹಬ್ಬಾಸ್ ಗಿರಿಯನ್ನು ತಪ್ಪು ಎಂದು ಹೇಳಿರುವ ಮುಸ್ಕಾನ್ ತಂದೆ ಹುಸೇನ್ ಖಾನ್, ನಾವು ಹಾಗೂ ನಮ್ಮ ಕುಟುಂಬದವರು ಭಾರತದಲ್ಲಿ ನೆಮ್ಮದಿಯಿಂದ ಬದುಕುತ್ತಿದ್ದೇವೆ. ನಾವು ಇಲ್ಲಿಯೇ ಇರಲು ಬಯಸುತ್ತೇವೆ ಎಂದು ಹೇಳಿದ್ದಾರೆ.
“ಯಾವುದೇ ತನಿಖೆಗೂ ನಾವು ಸಿದ್ಧ”
ಈ ರೀತಿಯ ಘಟನೆಗಳು ಕುಟುಂಬದಲ್ಲಿ ಶಾಂತಿಯನ್ನು ಹದಗೆಡಿಸುತ್ತದೆ. ಅಲ್ ಖೈದಾ ಉಗ್ರ ಸಂಘಟನೆ ನೀಡಿರುವ ಹೇಳಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆ ಯಾವುದೇ ರೀತಿಯ ತನಿಖೆಯನ್ನು ನಡೆಸಬಹುದಾಗಿದೆ ಅಂತ ಹೇಳಿದ್ದಾರೆ.
ಇದನ್ನೂ ಓದಿ: Love Jihad: ಹಿಂದೂ ಯುವಕನಂತೆ ಸೋಗು - ಯುವತಿ ಲವ್ ಜಿಹಾದ್ ಖೆಡ್ಡಾಕ್ಕೆ? ಇಬ್ರಾಹಿಂ-ಸ್ನೇಹಾ ಲವ್ಸ್ಟೋರಿ
ಇನ್ನು ಉಗ್ರ ಸಂಘಟನೆ ಮುಖ್ಯಸ್ಥನ ವಿಡಿಯೋ ಬಗ್ಗೆ ನಮಗೆ ಏನು ತಿಳಿದಿಲ್ಲ. ಇದೇ ಮೊದಲ ಬಾರಿಗೆ ಮುಸ್ಕಾನ್ ಬಗ್ಗೆ ಅಲ್ ಖೈದಾ ಉಗ್ರ ಸಂಘಟನೆ ಮಾತನಾಡಿರುವ ವಿಡಿಯೋ ನೋಡುತ್ತೇವೆ, ಅರೇಬಿಕ್ ನಲ್ಲಿ ಅವರೇನೋ ಹೇಳಿದ್ದಾರೆ. ಭಾರತದಲ್ಲಿ ನಾವೆಲ್ಲರೂ ನಂಬಿಕೆ, ಭ್ರಾತೃತ್ವದಲ್ಲಿ ನೆಲೆಸಿದ್ದೇವೆ"ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ