ಲಾಕ್​ಡೌನ್​ ಹಿನ್ನಲೆ ಸರ್ಕಾರಿ ಶಾಲಾ ಕಂಪ್ಯೂಟರ್​ ಕಳ್ಳತನ ಮಾಡುತ್ತಿದ್ದ ಖತರ್ನಾಕ್​ ಕಳ್ಳರ ಬಂಧನ

ಲಾಕ್​ಡೌನ್​ ಸಂದರ್ಭದಲ್ಲಿ ಆನ್​ಲೈನ್​ ಕ್ಲಾಸ್​ ಶುರುವಾದ ನಂತರ ಕಂಪ್ಯೂಟರ್​ಗೆ ಬೇಡಿಕೆ ಹೆಚ್ಚಿತ್ತು. ಈ ಹಿನ್ನಲೆ ಈ ಕಳ್ಳರ ತಂಡ ಸರ್ಕಾರಿ ಶಾಲೆಯಲ್ಲಿದ್ದ ಕಂಪ್ಯೂಟರ್​ ಅನ್ನು ಗುರಿಯಾಗಿಸಿ ಕೊಂಡು ಕಳ್ಳತನ ಮಾಡಿ ದುಡ್ಡು ಮಾಡುತ್ತಿದ್ದರು

ಬಂಧಿತ ಆರೋಪಿಗಳು

ಬಂಧಿತ ಆರೋಪಿಗಳು

  • Share this:
ಮಂಡ್ಯ (ಅ.28): ಲಾಕ್​ಡೌನ್​ ಆದಾಗಿನಿಂದ ಸರ್ಕಾರಿ ಶಾಲೆಗಳಿಗೆ ಬೀಗ ಬಿದ್ದಿರುವುದನ್ನು ಗಮನಿಸಿದ ಖತರ್ನಾಕ್​ ಕಳ್ಳರ ಗ್ಯಾಂಗ್​ವೊಂದು ಶಾಲೆಯ ಕಂಪ್ಯೂಟರ್​ ಕಳ್ಳತನವನ್ನೇ ಕಸುಬಾಗಿಸಿಕೊಂಡಿದ್ದರು. ಸುತ್ತಮುತ್ತ ಜಿಲ್ಲೆಯ ಸರ್ಕಾರಿ ಶಾಲೆಗಳಿಗೆ ಕನ್ನ ಹಾಕುತ್ತಿದ್ದ ಈ ಗ್ಯಾಂಗ್​ನ್ನು ಪೊಲೀಸರು ಬಂಧಿಸಿದ್ದು, ಇವರ ಬಳಿಯಿದ್ದ 160 ಕಂಪ್ಯೂಟರ್​ನ್ನು ವಶಕ್ಕೆ ಪಡೆದಿದ್ದಾರೆ. ಕಳೆದ ಆರು ತಿಂಗಳಿನಿಂದ ಸರ್ಕಾರಿ ಶಾಲೆಗಳನ್ನು ಗುರಿಯಾಗಿಸಿಕೊಂಡ ಈ ತಂಡ ಮಂಡ್ಯ, ರಾಮನಗರ, ಹಾಸನ, ತುಮಕೂರು ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಕಳ್ಳತನ ನಡೆಸಿದ್ದಾರೆ. ಸರ್ಕಾರಿ ಶಾಲೆ-ಕಾಲೇಜುಗಳಲ್ಲಿ ಕಾವಲುಗಾರರು ಇರುವುದಿಲ್ಲ ಎಂದು ಅರಿತ ಅವರು, ಬೀಗ ಮುರಿದು ಕಳ್ಳತನ ಎಸಗುತ್ತಿದ್ದರು. ಈ ಖತರ್ನಾಕ್​ ತಂಡವನ್ನು ಶಿವಳ್ಳಿ ಪೊಲೀಸರು ಏಳು ಜನ ಆರೋಪಿಗಳನ್ನು ಬಂಧಿಸಿದ್ದಾರೆ. 

ಬಂಧಿತ ಆರೋಪಿಗಳಿಂದ 160 ಕಂಪ್ಯೂಟರ್‌ಗಳು, ಎರಡು ಕಾರು ಸೇರಿದಂತೆ 61 ಲಕ್ಷ ರೂ  ಮೌಲ್ಯದ ಕಂಪ್ಯೂಟರ್ ಹಾಗೂ ಇನ್ನಿತರ ಪರಿಕರವನ್ನು  ವಶಕ್ಕೆ ಪಡೆಯಲಾಗಿದೆ, . ನಾಗ ಮಂಗಲ ತಾಲೂಕಿನ ರವಿಕುಮಾರ್, ಮಂಡ್ಯದ ಸೂನಗಹಳ್ಳಿ ಗ್ರಾಮದ ಎಸ್‌.ಆರ್‌.ಮಂಜುನಾಥ, ಎಸ್‌.ಪಿ.ನಾಗರಾಜು, ಸಿ.ಬಿ.ಹೇಮಂತ್‌ಕುಮಾರ್, ಬೆಂಗಳೂರು ಮಾರುತಿ ನಗರದ ಎಸ್‌.ವೈ.ರಾಮಕೃಷ್ಣ, ಅನ್ನಪೂರ್ಣೇಶ್ವರಿ ನಗರದ ಬಿ.ಜಿ.ವೆಂಕಟೇಶ್‌, ಮಂಡ್ಯ ದ ವಿ.ವಿ ಪುರಂ ನಿವಾಸಿ ಸಾಧಿಕ್‌ ಬಂಧಿತ ಆರೋಪಿಗಳು.

Mandya Shivalli police Arrest of thieves who were robbing a government school computer

ಆರೋಪಿಗಳು ಶಾಲೆಗಳಿಂದ ಕದ್ದ ಕಂಪ್ಯೂಟರ್‌ಗಳನ್ನು ಬೆಂಗಳೂರಿನಲ್ಲಿ ರಾಮಕೃಷ್ಣ ಹಾಗೂ ವೆಂಕಟೇಶ್‌ ಎಂಬುವವರಿಗೆ ಮಾರಾಟ ಮಾಡುತ್ತಿದ್ದರು. ಬ್ಯಾಟರಿಗಳನ್ನು ಮಂಡ್ಯದ ಸಾದಿಕ್‌ಗೆ ಮಾರುತ್ತಿದ್ದರು.  ಬಂಧಿತರಿಂದ 160 ಕಂಪ್ಯೂಟರ್‌, 16 ಬ್ಯಾಟರಿ, 3 ಟಿವಿ, 1 ವಾಷಿಂಗ್‌ ಮಷಿನ್‌, 1 ವೇಯಿಂಗ್‌ ಮಷಿನ್‌, 2 ಯುಪಿಎಸ್‌, 3 ಜೆರಾಕ್ಸ್‌ ಯಂತ್ರ, 1 ಪ್ರಿಂಟ ರ್‌ ಹಾಗೂ ಕೃತ್ಯಕ್ಕೆ ಬಳಸುತ್ತಿದ್ದ ಎರಡು ಕಾರು, ಒಂದು ಸರಕು ಸಾಗಣೆ ವಾಹನವನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನು ಓದಿ: ಭಾರೀ ವಿರೋಧ ಹಿನ್ನಲೆ: ಬಂಡೀಪುರದ ನುಗು ವನ್ಯಜೀವಿ ವಲಯದಲ್ಲಿ ಸಫಾರಿಗೆ ಬ್ರೇಕ್

ಲಾಕ್​ಡೌನ್​ ಸಂದರ್ಭದಲ್ಲಿ ಆನ್​ಲೈನ್​ ಕ್ಲಾಸ್​ ಶುರುವಾದ ನಂತರ ಕಂಪ್ಯೂಟರ್​ಗೆ ಬೇಡಿಕೆ ಹೆಚ್ಚಿತ್ತು. ಈ ಹಿನ್ನಲೆ ಈ ಕಳ್ಳರ ತಂಡ ಸರ್ಕಾರಿ ಶಾಲೆಯಲ್ಲಿದ್ದ ಕಂಪ್ಯೂಟರ್​ ಅನ್ನು ಗುರಿಯಾಗಿಸಿ ಕೊಂಡು ಕಳ್ಳತನ ಮಾಡಿ ದುಡ್ಡು ಮಾಡುತ್ತಿದ್ದರು. ಶಾಲೆಗೆ ಶಿಕ್ಷಕರು ಸೇರಿದಂತೆ ಯಾರು ಸುಳಿಯದ ಹಿನ್ನಲೆ ಇವರ ಕೃತ್ಯ ಸಲಿಸಾಗಿ  ಸಾಗುತ್ತಿತ್ತು. ಮಕ್ಕಳ ಕಲಿಕೆಗೆಗಾಗಿ ಸರ್ಕಾರದಿಂದ ಕೊಟ್ಟ ಕಂಪ್ಯೂಟರ್​ಗಳು ಕಳ್ಳರ ಪಾಲಾಗುತ್ತಿದ್ದು, ಇವರನ್ನು ಹಿಡಿಯುವುದೇ ಪೊಲೀಸರಿಗೆ ದೊಡ್ಡ ಸವಾಲ್​ ಆಗಿತ್ತು. ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಗಳಲ್ಲಿಯೂ ಆರೋಪಿಗಳು ಇದೇ ರೀತಿ ಕಳ್ಳತನ ಮಾಡುತ್ತಿದ್ದರು. ಇವರ ಪತ್ತೆಗಾಗಿ ಪೊಲೀಸರು ಹರಸಾಹಸ ನಡೆಸಿದ್ದರು. ಈ ಪ್ರಕರಣವನ್ನು ಇದೀಗ ಶಿವಳ್ಳಿ ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಪ್ರಶಂಸಿಸಿ ಬಹುಮಾನ ಘೋಷಿಸಿದ್ದಾರೆ.

ಆರೋಪಿಗಳು  ಮಂಡ್ಯ ಜಿಲ್ಲೆ ಮಾತ್ರವಲ್ಲದೆ ಮೈಸೂರು, ರಾಮನಗರ, ಹಾಸನ, ತುಮಕೂರು, ಬೆಂಗಳೂರು ನಗರದಲ್ಲಿ ನಡೆದಿದ್ದ ಸರ್ಕಾರಿ ಶಾಲೆಗಳ ಕಂಪ್ಯೂಟರ್ ಕಳ್ಳತನದ 34 ಪ್ರಕರಣಗಳನ್ನು ಭೇದಿಸಲಾಗಿದೆ. ಬೆಂಗಳೂರು ನಗರದಲ್ಲಿ ಕಳ್ಳತನ ಮಾಡಿದ್ದ 6 ಲಕ್ಷ ಮೌಲ್ಯದ ಇನೋ  ಕಾರನ್ನು ವಶಪಡಿಸಿಕೊಳ್ಳಲಾಗಿದ್ದು,ಈ ಪ್ರಕರಣ ಮತ್ತೊಬ್ಬ ಪ್ರಮುಖ ಆರೋಪಿ ತಲೆಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆಸುತ್ತಿದ್ದೇವೆ  ಎಂದಿದ್ದಾರೆ
Published by:Seema R
First published: