HOME » NEWS » State » MANDYA ROWDY SHEETER SAMANTH MURDER CASE SOLVED BY POLICE SESR RGM

ಮಂಡ್ಯ ರೌಡಿ ಶೀಟರ್​ ಹತ್ಯೆ ಪ್ರಕರಣ: ರೌಡಿಸಂನಲ್ಲಿ ಹೆಸರು ಮಾಡಲು ಕೃತ್ಯಕ್ಕೆ ಸಹಾಯ ಮಾಡಿದ ಯುವಕರು

‌ ರೌಡಿಸಂ ನಲ್ಲಿ ಹೆಸರು ಮಾಡುವ ಆಸೆಗೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ. 

news18-kannada
Updated:November 27, 2020, 8:21 PM IST
ಮಂಡ್ಯ ರೌಡಿ ಶೀಟರ್​ ಹತ್ಯೆ ಪ್ರಕರಣ: ರೌಡಿಸಂನಲ್ಲಿ ಹೆಸರು ಮಾಡಲು ಕೃತ್ಯಕ್ಕೆ ಸಹಾಯ ಮಾಡಿದ ಯುವಕರು
ಮಂಡ್ಯ ಪೊಲೀಸ್​ ಠಾಣೆ
  • Share this:
ಮಂಡ್ಯ (ನ.27): ನಗರವನ್ನು ಬೆಚ್ಚಿ ಬೀಳಿಸಿದ್ದ ರೌಡಿ ಶೀಟರ್​ ಹತ್ಯೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಅ.30ರಂದು ಇಲ್ಲಿ ಗುತ್ತಲು ಬಡಾವಣೆಯಲ್ಲಿ ಹಾಲು ಹಾಕಲು ಬಂದ ರೌಡಿಶೀಟ ರ್ ಯುವಕ ಸುಮಂತ್ ನನ್ನು  ಬೈಕ್ ನಲ್ಲಿ ಬಂದ ಅಪರಿಚಿತ ಯುವಕರ ತಂಡವೊಂದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆಮಾಡಿ ಬೈಕ್ ಬಿಟ್ಟು ಪರಾರಿಯಾಗಿದ್ದರು. ಈ ಹತ್ಯೆ ಜನರಲ್ಲಿ ಸಾಕಷ್ಟು ಭಯಭೀತಿ ಉಂಟು ಮಾಡಿತ್ತು. ಈ ಪ್ರಕರಣವನ್ನು ಗಂಭೀರವಾಗಿ ತನಿಖೆ ನಡೆಸಿದ ಪೊಲೀಸ್​ ಅಧಿಕಾರಿಗಳು ಎಂಟು ಜನ ಆರೋಪಿಗಳನ್ನು ಬಂಧಿಸಿದ್ದಾರೆ.  ಮಂಜುನಾಥ್(23), ಪವನ್(20), ಚಂದನ(23), ಅಪ್ನಾನ್ ಖಾನ್(19),ದರ್ಶನ್(22)ಬಂಧಿತರಾಗಿದ್ದಾರೆ.  ಮೂವರು ಅಪ್ರಾಪ್ತ ಬಾಲಕರು ಕೂಡ ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ.  ಪ್ರಕರಣ ಸಂಬಂಧ  ಐದು ಜನ ಆರೋಪಿಗಳನ್ನು ನ್ಯಾಯಾಂಗ ಬಂಧನದ ವಶಕ್ಕೆ ಒಪ್ಪಿಸಲಾಗಿದ್ದು, ಮೂವರು ಅಪ್ರಾಪ್ತರನ್ನು ಬಾಲ ಮಂದಿರಕ್ಕೆ ಕಳುಹಿಸಲಾಗಿದೆ. 

ರೌಡಿ ಶೀಟರ್​ ಸುಮಂತ್​ ಹತ್ಯೆಗೆ ಹಳೇ ದ್ವೇಷ ಕಾರಣವಾಗಿದೆ. ಕೊಲೆಯಾದ ದಿನ‌ ಸುತ್ತಮುತ್ತಲ ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯದಲ್ಲಿ ಈ ಆರೋಪಿಗಳ ಸುಳಿವು ಪಡೆದು ಆರೋಪಿಗಳನ್ನು ಬಂಧಿಸಲಾಗಿತ್ತು. ಪ್ರಮುಖ ಕೊಲೆ ಆರೋಪಿ ಮಂಜುನಾಥ್ ಬೆಂಗಳೂರಿನ‌ ಜೈಲಿನಲ್ಲಿದ್ದು ತನ್ನ ಸಹಚರರಿಂದ ಈ‌ಕೃತ್ಯ ಎಸಗಿದ್ದಾನೆ. ಸಹಚರರು‌ ರೌಡಿಸಂ ನಲ್ಲಿ ಹೆಸರು ಮಾಡುವ ಆಸೆಗೆ ಈ ಕೃತ್ಯ ಎಸಗಿರುವುದಾಗಿ ಪೊಲೀಸರ ವಿಚಾರಣೆ ವೇಳೆ ತಿಳಿಸಿದ್ದಾರೆ.

ಇದನ್ನು ಓದಿ: ದೆಹಲಿ ಭೇಟಿ ಬಳಿಕ ಲಿಂಗಾಯತ-ವೀರಶೈವ ಸಮುದಾಯಕ್ಕೆ ಒಬಿಸಿ ಮೀಸಲು ಕುರಿತು ನಿರ್ಧಾರ; ಸಿಎಂ ಬಿಎಸ್​ ಯಡಿಯೂರಪ್ಪ

ಒಟ್ಟಾರೆ ಈ ಕೊಲೆ ಪ್ರಕರಣ ದಾಖಲಿಸಿ ಕೊಂಡಿದ್ದ  ಮಂಡ್ಯದ ಪೂರ್ವ ಠಾಣೆಯ ಪೊಲೀಸರು ಕೂಲಕುಂಶ ತನಿಖೆ ನಡೆಸಿ ಆರೋಪಿಗಳನ್ನು ಪತ್ತೆ ಹಚ್ಚಿ‌ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.ಈ‌ ಮೂಲಕ ಮಂಡ್ಯದಲ್ಲಿ ರೌಡಿಸಂ ಹೆಸರಲ್ಲಿ ಅಪರಾಧ ನಡೆಸಲು ಸಿದ್ದವಾಗುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ನಗರದ ಪೊಲೀಸರ ಈ ಕಾರ್ಯಕ್ಕೆ ಪೊಲೀಸ್​ ವರಿಷ್ಠಾಧಿಕಾರಿ ಅಭಿನಂದಿಸಿದ್ದಾರೆ.
Published by: Seema R
First published: November 27, 2020, 8:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories