Mandya: ಕೋವಿಡ್ ರಿಪೋರ್ಟ್​ ಇಲ್ಲದೆ ಗರ್ಭಿಣಿ ಪರದಾಟ; ಮಂಡ್ಯದ ಆಸ್ಪತ್ರೆ ಎದುರು ನಿಂತಲ್ಲೇ ಹೆರಿಗೆ; ಮಗು ಕೆಳಗೆ ಬಿದ್ದು ಸಾವು!

Mandya Hospital: ಕೋವಿಡ್ ನೆಗೆಟಿವ್ ರಿಪೋರ್ಟ್​ ಇಲ್ಲದ ಗರ್ಭಿಣಿಗೆ ಮಂಡ್ಯದ ಜಿಲ್ಲಾಸ್ಪತ್ರೆಯ ವೈದ್ಯರು ಹೆರಿಗೆ ಮಾಡಿಸಲು ನಿರಾಕರಿಸಿದ್ದಾರೆ. 2 ಗಂಟೆ ಆಸ್ಪತ್ರೆ ಎದುರು ಕಾದ ಗರ್ಭಿಣಿಗೆ ನಿಂತಲ್ಲಿಯೇ ಹೆರಿಗೆಯಾಗಿದ್ದು, ಕೆಳಗೆ ಬಿದ್ದ ಮಗು ಸಾವನ್ನಪ್ಪಿರುವ ಮನಕಲಕುವ ಘಟನೆ ಇಂದು ನಡೆದಿದೆ.

ಮಗುವನ್ನು ಕಳೆದುಕೊಂಡ ಸೋನು

ಮಗುವನ್ನು ಕಳೆದುಕೊಂಡ ಸೋನು

  • Share this:
    ಮಂಡ್ಯ (ಮೇ 26): ರಾಜ್ಯಾದ್ಯಂತ ಕೊರೋನಾ ತಡೆಗಟ್ಟಲು ಸಾಕಷ್ಟು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ, ಈ ನಿಯಮಾವಳಿಗಳಿಂದ ಹಸುಗೂಸಿನ ಜೀವವೇ ಹೋದ ಘಟನೆ ಇಂದು ನಡೆದಿದೆ. ಮಂಡ್ಯದ ಜಿಲ್ಲಾಸ್ಪತ್ರೆಯಲ್ಲಿ (MIMS) ಹೆರಿಗೆ ನೋವಿನಿಂದ ದಾಖಲಾಗಲು ಬಂದಿದ್ದ ಗರ್ಭಿಣಿಯ ಬಳಿ ಕೊರೋನಾ ರಿಪೋರ್ಟ್​ ಇರಲಿಲ್ಲ. ಕೋವಿಡ್ ಟೆಸ್ಟ್ ಮಾಡಿಸಿ, ನೆಗೆಟಿವ್ ರಿಪೋರ್ಟ್​ ಬಾರದಿದ್ದರೆ ಆಸ್ಪತ್ರೆಯ ಒಳಗೆ ಬಿಡುವುದಿಲ್ಲ ಎಂದು ಜಿಲ್ಲಾಸ್ಪತ್ರೆಯ ಸಿಬ್ಬಂದಿ ಆ ಮಹಿಳೆಯನ್ನು ಆಸ್ಪತ್ರೆಯಿಂದ ಹೊರಗೆ ಕಳುಹಿಸಿದ್ದರು. 2 ಗಂಟೆಗೂ ಹೆಚ್ಚು ಕಾಲ ಆಸ್ಪತ್ರೆಯ ಹೊರಗೆ ಕಾದ ಆ ಗರ್ಭಿಣಿಗೆ ಆಸ್ಪತ್ರೆ ಎದುರಲ್ಲೇ ಹೆರಿಗೆಯಾಗಿದೆ. ಆದರೆ, ಹುಟ್ಟಿದ ಮರುಕ್ಷಣವೇ ಮಗು ಸಾವನ್ನಪ್ಪಿದೆ!

    ಗರ್ಭಿಣಿ ನಿನ್ನೆಯೇ ಕೊರೋನಾ ಟೆಸ್ಟ್ ಮಾಡಿಸಿದ್ದರೂ ಇನ್ನೂ ರಿಪೋರ್ಟ್ ಬಂದಿರಲಿಲ್ಲ. ಅಷ್ಟರಲ್ಲಾಗಲೇ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಕೆ ಆಸ್ಪತ್ರೆಗೆ ದಾಖಲಾಗಲು ಬಂದಿದ್ದರು. ಕೋವಿಡ್ ರಿಪೋರ್ಟ್ ಇಲ್ಲ ಎಂದು ಗರ್ಭಿಣಿಯನ್ನು ಮಂಡ್ಯ ಜಿಲ್ಲಾಸ್ಪತ್ರೆಯ ಸಿಬ್ಬಂದಿ ದಾಖಲು ಮಾಡಿಕೊಂಡಿಲ್ಲ. ಹೀಗಾಗಿ, ಆಸ್ಪತ್ರೆಯ ಹೆರಿಗೆ ವಾರ್ಡ್​ನ ಬಾಗಿಲಲ್ಲೇ ಆಕೆ 2 ಗಂಟೆಗೂ ಹೆಚ್ಚು ಕಾಲ ಕಾದಿದ್ದಾಳೆ. ನೋವಿನಿಂದ ನರಳುತ್ತಿದ್ದ ಆಕೆಗೆ ನಿಂತಲ್ಲಿಯೇ ಹೆರಿಗೆಯಾಗಿದ್ದು, ಕೆಳಗೆ ಬಿದ್ದ ಮಗು ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಮಿಮ್ಸ್​ ಆಸ್ಪತ್ರೆಯಲ್ಲಿ ನಡೆದಿದೆ.

    ಇದನ್ನೂ ಓದಿ: Coronavirus Updates: ಭಾರತದಲ್ಲಿ ಕೊರೋನಾ ಅಟ್ಟಹಾಸ; ಕೇರಳ, ತಮಿಳುನಾಡಿನಲ್ಲಿ ಅತಿ ಹೆಚ್ಚು ಸೋಂಕು

    ನಿನ್ನೆ ಹೆರಿಗೆಗಾಗಿ ಆಸ್ಪತ್ರೆಗೆ ಬಂದಿದ್ದ ಸೋನು ಎಂಬ ಮಹಿಳೆ ಕೊರೋನಾ ತಪಾಸಣೆ ಮಾಡಿಸಿರಲಿಲ್ಲ. ಆಕೆಯ ಬಳಿ ಕೋವಿಡ್ ರಿಪೋರ್ಟ್ ಇಲ್ಲ ಎನ್ನುವ ಕಾರಣಕ್ಕೆ ಆಕೆಯನ್ನು ಅಡ್ಮಿಟ್ ಮಾಡಿಕೊಳ್ಳಲು ಸಿಬ್ಬಂದಿ ನಿರಾಕರಿಸಿದ್ದರು. ಇಂದು ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಮತ್ತೆ ಆಸ್ಪತ್ರೆಗೆ ಬಂದ ಆ ಗರ್ಭಿಣಿ ಬೆಳಗ್ಗೆ 2 ಗಂಟೆ ಕಾದರೂ ಆಸ್ಪತ್ರೆಯವರು ದಾಖಲು ಮಾಡಿಕೊಂಡಿರಲಿಲ್ಲ. ಈ ವೇಳೆ ಆಸ್ಪತ್ರೆ ಮುಂಭಾಗ ನಿಂತಿದ್ದ ಮಹಿಳೆಗೆ ನಿಂತಲ್ಲಿಯೇ ಹೆರಿಗೆಯಾಗಿದ್ದು, ಕೆಳಗೆ ಬಿದ್ದ ಮಗು ಸಾವನ್ನಪ್ಪಿದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಸಿಎಂ ಬದಲಾವಣೆ ವಿಚಾರ; ಹೈಕಮಾಂಡ್ ಭೇಟಿಗೆ ತೆರಳಿದ್ದ ಬಿಜೆಪಿ ಬಂಡಾಯ ನಾಯಕರಿಗೆ ಹಿನ್ನಡೆ

    ಮಂಡ್ಯ ಜಿಲ್ಲಾಸ್ಪತ್ರೆ ಸಿಬ್ಬಂದಿಯ ನಿರ್ಲಕ್ಷ್ಯದ ವಿರುದ್ಧ ಮಹಿಳೆಯ ಕುಟುಂಬಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಂಡ್ಯದ ಗುತ್ತಲು ಬಡಾವಣೆ ನಿವಾಸಿ ಇಸ್ಮಾಯಿಲ್ ಎಂಬುವವರ ಹೆಂಡತಿ ಸೋನುಗೆ ಇಂದು ಹೆರಿಗೆ ಮಾಡಲು ವೈದ್ಯರು ದಿನಾಂಕ ಕೊಟ್ಟಿದ್ದರು. ಹೆರಿಗೆಗೂ ಮುನ್ನ ಕೋವಿಡ್ ರಿಪೋರ್ಟ್ ತರಬೇಕೆಂದು ನಿನ್ನೆ ಹೇಳಿಕಳಿಸಿದ್ದರಿಂದ ಆಕೆ ನಿನ್ನೆ ಕೋವಿಡ್ ಟೆಸ್ಟ್ ಮಾಡಿಸಿಕೊಂಡಿದ್ದರು. ಆದರೆ, ಒಂದು‌ ದಿನವಾದರೂ ಕೋವಿಡ್ ಟೆಸ್ಟ್ ವರದಿ ಬಂದಿರಲಿಲ್ಲ.

    ಇಂದು ಮುಂಜಾನೆ 6 ಗಂಟೆಗೆ ಹೆರಿಗೆ ನೋವಿನಿಂದ ಆಸ್ಪತ್ರೆಗೆ ಬಂದ ಆಕೆಯ ಬಳಿ ಕೋವಿಡ್ ವರದಿ ಇಲ್ಲ ಎಂದು ಆಸ್ಪತ್ರೆ ಸಿಬ್ಬಂದಿ ಆಕೆಯನ್ನು ಆಸ್ಪತ್ರೆಗೆ ದಾಖಲು ಮಾಡಿಕೊಂಡಿರಲಿಲ್ಲ. ಇದರಿಂದ ಆಕೆಯ ಮಗು ಹುಟ್ಟಿದ ಮರುಕ್ಷಣವೇ ಸಾವನ್ನಪ್ಪಿದೆ.
    Published by:Sushma Chakre
    First published: