Mandya Politics: ಸುಮಲತಾ ಮಾತ್ರವಲ್ಲ ಇವರೆಲ್ಲರನ್ನ ಸೆಳೆಯಲು ಕಮಲ ಕಸರತ್ತು; JDS ಭದ್ರಕೋಟೆ ಕೆಡವಲು ತಂತ್ರಗಾರಿಕೆ

ಜೆಡಿಎಸ್ ಪ್ರಾಬಲ್ಯವಿರೋ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಮಂಡ್ಯದ ಜೆಡಿಎಸ್ ಕೋಟೆ ಮೇಲೆ ಕಮಲ ಬಾವುಟ ಹಾರಿಸಲು ಸಿದ್ಧತೆ ನಡೆಸಿದೆ.

ಬಿಜೆಪಿ ಧ್ವಜ

ಬಿಜೆಪಿ ಧ್ವಜ

  • Share this:
ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ಬಿಜೆಪಿಗೆ (BJP) ಮಂಡ್ಯದ (Mandya) ಜನರು ಮಾತ್ರ ಸಿಹಿ ನೀಡಿಲ್ಲ. ಮಂಡ್ಯ ಜಿಲ್ಲೆ ಜೆಡಿಎಸ್ (JDS) ಭದ್ರಕೋಟೆಯೇ ಎಂದು ಬಿಂಬಿತವಾಗಿದೆ. ಹಾಗಾಗಿ ಬಿಜೆಪಿಗೆ ಮಂಡ್ಯದಲ್ಲಿ ನಾಯಕರ ಕೊರತೆ ಇದೆ. ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ (Assembly Election 2023) ಜೆಡಿಎಸ್ ಭದ್ರಕೋಟೆಯನ್ನು ಕೆಡವಲು ಬಿಜೆಪಿ ಈಗಿನಿಂಲದೇ ತಂತ್ರಗಾರಿಕೆಯಲ್ಲಿ ತೊಡಗಿಕೊಂಡಿದೆ. ಪಕ್ಷಕ್ಕೆ ಯಾರು ಬಂದರೂ ಹಿತ ಅನ್ನೋದರ ಬಗ್ಗೆ ಕಮಲ ಅಂಗಳದಲ್ಲಿ ಲೆಕ್ಕಾಚಾರಗಳು ಆರಂಭಗೊಂಡಿವೆ. ಕಳೆದ ವಾರವಷ್ಟೇ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ (Nalin Kumar Kateel), ಹಳೇ ಮೈಸೂರು ಭಾಗದಲ್ಲಿ ಆಪರೇಷನ್ ಕಮಲದ (Operation Lotus) ಸುಳಿವು ನೀಡಿದ್ರು. ಇದರ ಬೆನ್ನಲ್ಲೇ ಸಚಿವರಾದ ನಾರಾಯಣಗೌಡ (Minister Narayan Gouda), ಆರ್.ಅಶೋಕ್ (R Ashok) ಸೇರಿದಂತೆ ಹಲವರು ಬಿಜೆಪಿ ನಾಯಕರ ಆಪರೇಷನ್ ಲೋಟಸ್ ಬಗ್ಗೆ ಬಹಿರಂಗವಾಗಿ ಮಾತನಾಡಿದ್ದಾರೆ.

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡ ಬಳಿಕ ನಡೆದ ಉಪಚುನಾವಣೆಯಲ್ಲಿ ಕೆ.ಆರ್.ಪೇಟೆ ವಿಧಾನಸಭಾ ಕ್ಷೇತ್ರದಿಂದ ನಾರಾಯಣಗೌಡರು ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಗೆಲುವು ದಾಖಲಿಸಿದ್ದರು.

ಕಮಲ ಬಾವುಟ ಹಾರಿಸಲು ಬಿಜೆಪಿ ಸಿದ್ಧತೆ

ಜೆಡಿಎಸ್ ಪ್ರಾಬಲ್ಯವಿರೋ ಕೆ.ಆರ್.ಪೇಟೆ ಕ್ಷೇತ್ರದಲ್ಲಿ ಮೊದಲ ಬಾರಿಗೆ ಕಮಲ ಗೆಲುವಿನ ನಗೆ ಬೀರಿತ್ತು. ಈ ಗೆಲುವಿನ ಹುಮ್ಮಸ್ಸಿನಲ್ಲಿರುವ ಬಿಜೆಪಿ ಮಂಡ್ಯದ ಜೆಡಿಎಸ್ ಕೋಟೆ ಮೇಲೆ ಕಮಲ ಬಾವುಟ ಹಾರಿಸಲು ಸಿದ್ಧತೆ ನಡೆಸಿದೆ.

ಪಕ್ಷೇತರ ಅಭ್ಯರ್ಥಿಯಾಗಿ ಗೆಲುವು ದಾಖಲಿಸಿರುವ ಸಂಸದೆ ಸುಮಲತಾ ಅಂಬರೀಶ್ ಅವರಿಗೆ ಲೋಕಸಭಾ ಚುನಾವಣೆಯಲ್ಲಿ ಅಭ್ಯರ್ಥಿಯನ್ನು ಕಣಕ್ಕೆ ಇಳಿಸದೇ ಸಂಪೂರ್ಣ ಬೆಂಬಲ ನೀಡುತ್ತಿತ್ತು. ಈ ಹಿನ್ನೆಲೆ ಸುಮಲತಾ ಅವರು ಬಿಜೆಪಿ ಸೇರ್ತಾರಾ ಅನ್ನೋ ಚರ್ಚೆಗಳು ನಡೆದಿವೆ.

ಇದನ್ನೂ ಓದಿ:  Karnataka Assembly Election: ರಾಜುಗೌಡ V/s ರಾಜಾ ವೆಂಕಟಪ್ಪ ನಾಯಕ; ಸುರಪುರದಲ್ಲಿ ಶುರುವಾಯ್ತು ಹೊಡಿಬಡಿ ರಾಜಕೀಯ

ಮಂಡ್ಯ ರಾಜಕಾರಣದಲ್ಲಿ ಒಂದಿಷ್ಟು ಗುಸು ಗುಸು

ಸುಮಲತಾ ಅವರ ಕೆಲ ಬೆಂಬಲಿಗರು ಸಹ ಬಿಜೆಪಿ ಸೇರುವ ಕುರಿತು ಒಲವು ತೋರಿದ್ದಾರೆ ಎನ್ನಲಾಗಿದೆ. ಇತ್ತ ಪುತ್ರ, ನಟ ಅಭಿಷೇಕ್ ಅಂಬರೀಶ್ ಅವರನ್ನು ಮದ್ದೂರು ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿಸಲು ಸುಮಲತಾ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ. ಮಗನ ರಾಜಕೀಯ ಭವಿಷ್ಯಕ್ಕಾಗಿ ಬಿಜೆಪಿ ಸೇರ್ತಾರೆ ಅನ್ನೋ ಗುಸು ಗುಸು ಮಂಡ್ಯದಲ್ಲಿ ಕೇಳಿ ಬರುತ್ತಿದೆ.

ಈ ನಡುವೆ ಸುಮಾಲತಾ  ಅವರು ಮಾತ್ರವಲ್ಲದೇ ಇನ್ನೂ ಕೆಲ ಜೆಡಿಎಸ್ ನಾಯಕರನ್ನು ಸೆಳೆಯಲು ಬಿಜೆಪಿ ತಂತ್ರಗಾರಿಕೆ ರಚಿಸುತ್ತಿದೆ. ಸ್ಥಳೀಯ ಪ್ರಭಾವಿ ಯುವ ನಾಯಕರನ್ನು ಸೆಳೆದು ಪಕ್ಷ ಬಲವರ್ಧನೆಗೆ ಮಾಸ್ಟರ್ ಪ್ಲಾನ್ ಮಾಡುತ್ತಿದೆ ಎಂದು ತಿಳಿದು ಬಂದಿದೆ.

ಇವರೆಲ್ಲ ಬಿಜೆಪಿ ಸೇರ್ತಾರಾ?

ಮುಂದಿನ ಚುನಾವಣೆ ಮಾತ್ರವಲ್ಲದೇ ಮಂಡ್ಯದಲ್ಲಿ ಬಿಜೆಪಿಗೆ ಭದ್ರ ಅಡಿಪಾಯ ಹಾಕಲು ತಯಾರಿ ನಡೆಸಿದ್ದು, ಮಾಜಿ IRS ಅಧಿಕಾರಿ ಹಾಗೂ ಮಾಜಿ ಸಚಿವರ ಪುತ್ರರ ಜೊತೆ ಮಾತುಕತೆ ಸಹ ನಡೆಸಿದೆ ಎನ್ನಲಾಗಿದೆ.

JDSನಲ್ಲಿ ಗುರುತಿಸಿಕೊಂಡಿದ್ದ ಲಕ್ಷ್ಮಿ ಅಶ್ವಿನ್ ಗೌಡ, ಮಾಜಿ ಸಚಿವ ಎಸ್.ಟಿ.ಜಯರಾಂ ಪುತ್ರ ಅಶೋಕ್ ಜಯರಾಂ ಜೊತೆಯಲ್ಲಿ ಬಿಜೆಪಿ ಈಗಾಗಲೇ ಒಂದು ಸುತ್ತಿನ  ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಅಶೋಕ್ ಜಯರಾಂ ಈಗಾಗಲೇ ಬಹಿರಂಗವಾಗಿಯೇ ಬಿಜೆಪಿ ನಾಯಕರ ಜೊತೆ ಗುರುತಿಸಿಕೊಳ್ಳಲು ಆರಂಭಿಸಿದ್ದಾರೆ. ಇತ್ತ ಲಕ್ಷ್ಮಿ ಅಶ್ವಿನ್ ಗೌಡ ಕೆಲವೇ ದಿನಗಳಲ್ಲಿ ಬಿಜೆಪಿ ಸೇರ್ಪಡೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾರು ಈ ಲಕ್ಷ್ಮಿ ಅಶ್ವಿನ್ ಗೌಡ?

ಲಕ್ಷ್ಮಿ ಅಶ್ವಿನ್ ಗೌಡ ಮಾಜಿ IRS ಅಧಿಕಾರಿಯಾಗಿದ್ದು, ಜೆಡಿಎಸ್ ಸೇರ್ಪಡೆಗೊಂಡಾಗ ಮಂಡ್ಯ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದೇ ಬಿಂಬಿತರಾಗಿದ್ರು. ಮಾಜಿ ಸಂಸದೆ ರಮ್ಯಾ ಅವರಿಗೆ ಟಕ್ಕರ್ ನೀಡಲು ಲಕ್ಷ್ಮಿ ಅವರನ್ನು ಕರೆ ತರಲಾಗಿದೆ ಎಂಬ ಮಾತುಗಳು ಬಲವಾಗಿ ಕೇಳಿ ಬಂದಿದ್ದವು.

ಇದನ್ನೂ ಓದಿ:  PSI Recruitment Scam: ರಾಜ್ಯ ಸರ್ಕಾರದ ವಿರುದ್ಧ ಪ್ರಧಾನಿ ಕಚೇರಿಗೆ ಬಿಜೆಪಿ ಶಾಸಕನ ಅತ್ಯಾಪ್ತನಿಂದ ದೂರು

ಬದಲಾದ ರಾಜಕೀಯದಲ್ಲಿ ಕಾಂಗ್ರೆಸ್-ಜೆಡಿಎಸ್ ಸರ್ಕಾರ ರಚನೆ ಮಾಡಿದ್ದರಿಂದ ನಿಖಿಲ್ ಕುಮಾರಸ್ವಾಮಿ ಮೈತ್ರಿ ಅಭ್ಯರ್ಥಿಯಾಗಿ ಕಣಕ್ಕೆ ಇಳಿಸಿದ್ದರು. ಕಾಂಗ್ರೆಸ್ ನಿಂದ ಟಿಕೆಟ್ ಸಿಗದ ಹಿನ್ನೆಲೆ ಸುಮಲತಾ ಅಂಬರೀಶ್ ಪಕ್ಷೇತರರಾಗಿ ಸ್ಪರ್ಧೆ ಮಾಡಿದ್ದರು. ಸುಮಲತಾ ಪರವಾಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಬಿರುಸಿನ ಪ್ರಚಾರ ನಡೆಸಿದ್ರು.
Published by:Mahmadrafik K
First published: