ಬೇರೊಬ್ಬರ ಹೆಂಡತಿ ಜೊತೆ ಪೊಲೀಸ್​ ಕಾನ್​ಸ್ಟೇಬಲ್ ಪರಾರಿ; ಮಂಡ್ಯದಲ್ಲಿ ವಿಚಿತ್ರ ಪ್ರಕರಣ

ಕೊಳ್ಳೇಗಾಲ ತಾಲೂಕಿನ ನಾಗರಾಜಪ್ಪ ತನ್ನ ಪತ್ನಿ ಹಾಗೂ ಇಬ್ಬರು‌ ಹೆಣ್ಣು ಮಕ್ಕಳು ಮಕ್ಕಳೊಂದಿಗೆ ವಾಸವಾಗಿದ್ದ‌. ಆದರೆ ಅದೇನಾಯ್ತೋ ಗೊತ್ತಿಲ್ಲ, ಈತನ‌ ಹೆಂಡತಿ ಶಿಲ್ಪಾಳ ಜೊತೆ ಸಂಬಂಧ ಇಟ್ಟುಕೊಂಡ ಮಂಡ್ಯದ ಹಲಗೂರು ಪೊಲೀಸ್ ಕಾನ್​ಸ್ಟೇಬಲ್ ಹರೀಶ್​ ಆಕೆಯೊಂದಿಗೆ ಪರಾರಿಯಾಗಿದ್ದಾನೆ.

news18-kannada
Updated:August 26, 2020, 7:56 AM IST
ಬೇರೊಬ್ಬರ ಹೆಂಡತಿ ಜೊತೆ ಪೊಲೀಸ್​ ಕಾನ್​ಸ್ಟೇಬಲ್ ಪರಾರಿ; ಮಂಡ್ಯದಲ್ಲಿ ವಿಚಿತ್ರ ಪ್ರಕರಣ
ಪ್ರಾತಿನಿಧಿಕ ಚಿತ್ರ
  • Share this:
ಮಂಡ್ಯ: ನಿಮ್ಮದೇ ಇಲಾಖೆಯ  ಕಾನ್​ಸ್ಟೇಬಲ್ ನನ್ನ ಪತ್ನಿಯನ್ನು ಅಪಹರಿಸಿದ್ದಾನೆ. ಆತನಿಂದಾಗಿ ನನ್ನ ಸಂಸಾರ ಬೀದಿಗೆ ಬಂದಿದೆ. ದಯಮಾಡಿ ನನಗೆ ನ್ಯಾಯ ಕೊಡಿಸಿ ಎಂದು ಚಾಮರಾಜನಗರ ಜಿಲ್ಲೆಯ ವ್ಯಕ್ತಿಯೊಬ್ಬ ಮಂಡ್ಯ ಎಸ್​ಪಿಗೆ ದೂರು ನೀಡಿರುವ ವಿಚಿತ್ರ ಪ್ರಕರಣ ಸಕ್ಕರೆನಾಡು ಮಂಡ್ಯದಲ್ಲಿ ಬೆಳಕಿಗೆ ಬಂದಿದೆ. ವಿಚಿತ್ರವಾದರೂ ಇದು ಸತ್ಯ!

ದೂರು ನೀಡಿರುವ ವ್ಯಕ್ತಿಯ ಹೆಸರು ನಾಗರಾಜಪ್ಪ. ಈತ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ‌ ಮುಳ್ಳೂರು ನಿವಾಸಿ. ಕೊಳ್ಳೇಗಾಲ ಪಟ್ಟಣದಲ್ಲಿ ತನ್ನ ಪತ್ನಿ ಹಾಗೂ ಇಬ್ಬರು‌ ಹೆಣ್ಣು ಮಕ್ಕಳು ಮಕ್ಕಳೊಂದಿಗೆ ವಾಸವಾಗಿದ್ದ‌. ಆದರೆ ಅದೇನಾಯ್ತೋ ಗೊತ್ತಿಲ್ಲ, ಈತನ‌ ಹೆಂಡತಿ ಶಿಲ್ಪಾಳನ್ನು ಮಂಡ್ಯ ಹಲಗೂರು ಪೊಲೀಸ್ ಠಾಣೆಯಲ್ಲಿ ಕೆಲಸ ಮಾಡುತ್ತಿರುವ ಹರೀಶ್ ಎಂಬಾತ ಪಟಾಯಿಸಿಕೊಂಡಿದ್ದಾನೆ.‌ ಅಲ್ಲದೆ, ಆಕೆಯನ್ನು ಗಂಡ‌ ಮತ್ತು ಮಕ್ಕಳಿಂದ ದೂರ ಮಾಡಿ ತನ್ನ ಜೊತೆ ಕರೆದೊಯ್ದಿದ್ದಾನೆಂದು ಪತಿ ನಾಗರಾಜಪ್ಪ ಆರೋಪಿಸಿದ್ದಾನೆ. ಇದರಿಂದಾಗಿ ನನ್ನ ಕುಟುಂಬ ಇದೀಗ ಬೀದಿಗೆ ಬಿದ್ದಿದೆ. ಹಾಗಾಗಿ, ನನ್ನ ಹೆಂಡತಿಯನ್ನು ಹುಡುಕಿಕೊಟ್ಟು ಆ ಪೇದೆಯಿಂದ  ನನ್ನ ಪತ್ನಿಯನ್ನು ದೂರ ಮಾಡಿಸಿ ಕೊಡಿ ಎಂದು ಹೆಂಡತಿಯನ್ನು ಕಳೆದುಕೊಂಡ ವ್ಯಕ್ತಿ ಮಂಡ್ಯ ಎಸ್ಪಿ ಕಚೇರಿಗೆ ದೂರು ನೀಡಿದ್ದಾನೆ.

ಇದನ್ನೂ ಓದಿ: Crime News: ಬುದ್ಧಿ ಹೇಳಿದ ಅಪ್ಪನನ್ನು ನಡುರಸ್ತೆಯಲ್ಲಿ ಕೊಂದ ಮಗ; ಬೆಳ್ತಂಗಡಿಯಲ್ಲಿ ಭೀಕರ ಕೃತ್ಯ

ಈ ಸಂಬಂಧವಾಗಿ ನಾಗರಾಜಪ್ಪ ಕೊಳ್ಳೆಗಾಲ ಪೊಲೀಸ್ ಠಾಣೆಯಲ್ಲಿ ಪತ್ನಿ ಕರೆದೊಯ್ದ ಪೇದೆ ವಿರುದ್ದ ದೂರು ನೀಡಿದ್ದರೆ ಅಲ್ಲಿನ ಪೊಲೀಸರು ದೂರು ಸ್ವೀಕರಿಸಿಲ್ಲವಂತೆ. ಪೇದೆ ಜೊತೆ ಹೋಗಿರೋ ಆಕೆಯೇ ಬಂದು ದೂರು ನೀಡಲಿ, ಹೋಗು ಎಂದು ದಬಾಯಿಸಿ ಕಳಿಸಿದ್ದರಂತೆ. ಇದರಿಂದ ಕಂಗಾಲಾಗಿರುವ ನಾಗರಾಜಪ್ಪ ಮಂಡ್ಯ ಎಸ್ಪಿಗೆ ದೂರು ನೀಡಿದ್ದಾನೆ.

ಪತ್ನಿಯನ್ನು ಕರೆದೊಯ್ದಿರೋ ಪೇದೆ ಹರೀಶ್ ತನ್ನ ಹೆಂಡತಿಯ ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಾನೆ. ತನ್ನ ಈ  ಸಂಬಂಧದ ಅಶ್ಲೀಲ ವಿಡಿಯೋ ರೆಕಾರ್ಡ್ ಮಾಡಿಸಿ ಬ್ಲಾಕ್ ಮೇಲ್ ಮಾಡುತ್ತಿದ್ದು, ನನಗೆ ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದಾನೆ. ನನಗೆ ಇಬ್ಬರು  ಹೆಣ್ಣು ಮಕ್ಕಳಿವೆ. ಹೆಂಡತಿಯನ್ನು ಆತನ ಸೆರೆಯಿಂದ ಬಿಡಿಸಿಕೊಡಿ ಮತ್ತು ಬೆದರಿಕೆ ಹಾಕಿರೋ ಪೇದೆಗೆ ಶಿಕ್ಷೆ ಕೊಡಿಸಿ, ನನಗೆ ನ್ಯಾಯ ದೊರಕಿಸಿಕೊಡುವಂತೆ ಮನವಿ ಮಾಡುತ್ತಿದ್ದಾನೆ.

ಒಟ್ಟಾರೆ, ತನ್ನ ಹೆಂಡತಿಯನ್ನು ಕರೆದೊಯ್ದಿರುವ ಪೊಲೀಸ್ ಪೇದೆಯ ವಿರುದ್ದ ಸಂತ್ರಸ್ಥ ಪತಿ ಇದೀಗ ನ್ಯಾಯಕ್ಕಾಗಿ ಮಂಡ್ಯ ಎಸ್ಪಿಯ ಮೊರೆ ಹೋಗಿದ್ದಾನೆ. ಈಗಲಾದರೂ ಈ ವ್ಯಕ್ತಿಗೆ ಎಸ್ಪಿ ನ್ಯಾಯ ದೊರಕಿಸಿ ಕೊಡ್ತಾರಾ?ಅಥವಾ ತಮ್ಮ ಇಲಾಖೆಯ ಸಿಬ್ಬಂದಿಯನ್ನು ರಕ್ಷಣೆ ಮಾಡಿಕೊಳ್ತಾರಾ? ಎಂಬುದನ್ನು‌ ಕಾದು ನೋಡಬೇಕಿದೆ.
Published by: Sushma Chakre
First published: August 26, 2020, 7:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading