Mandya : ಆರೋಪಿ ಬಿಡಿ, ಕೊಲೆಯಾದವರ ಬಗ್ಗೆ ಮಾಹಿತಿ ನೀಡಿದ್ರೂ ₹1 ಲಕ್ಷ ಬಹುಮಾನ: ನಿಗೂಢದಲ್ಲೇ ನಿಗೂಢ ಪ್ರಕರಣ

ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಮಾಹಿತಿ ಇದ್ದರೆ,  ಪೊಲೀಸ್ ಕಂಟ್ರೋಲ್ ರೂಂ. 0823 2-224888  9480804800 ಡಿವೈಎಸ್ಪಿ ಶ್ರೀರಂಗಪಟ್ಟಣ ಉಪವಿಭಾಗ 94808 04821, ಪಿಐ ಪಾಂಡವಪುರ - 9480804858 ಹಾಗೂ ಕೆ.  ಆರ್. ಸಾಗರ ವೃತ್ತ 9480804832  ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
ಮಂಡ್ಯ:  ಭೇದಿಸಲು ಸಾಧ್ಯವಾಗದ ಅದೆಷ್ಟೋ ಪ್ರಕರಣಗಳನ್ನ (Crime Cases) ಭೇದಿಸಿದ ಹೆಗ್ಗಳಿಕೆ ನಮ್ಮ ಕರ್ನಾಟಕ ಪೊಲೀಸರಿಗೆ (Karnataka Police) ಇದೆ. ಆದ್ರೆ ಮಂಡ್ಯದ ಆ ಒಂದು ಪ್ರಕರಣ ಮಾತ್ರ ಪತ್ತೆಯಾಗದೆ ಪೊಲೀಸರ (Mandya Police) ನಿದ್ದೆಗೆಡಿಸಿದೆ. ಕಳೆದ 15 ದಿನಗಳಿಂದ ಎಷ್ಟೆ ತನಿಖೆ ನಡೆಸಿದ್ರು ಒಂದು ಸಣ್ಣ ಸುಳಿವು ಕೂಡ ಸಿಕ್ತಿಲ್ಲ. ಹೀಗಾಗಿ ಪೊಲೀಸರು  ಜನಗಳ ಮೊರೆ ಹೋಗಿದ್ದಾರೆ. ಆಗಿದ್ರೆ ಪೊಲೀಸರಿಗೆ ತಲೆನೋವಾಗಿರುವ ಆ ಪ್ರಕರಣ ಯಾವುದು? ಅದಕ್ಕಾಗಿ ಮಂಡ್ಯ ಪೊಲೀಸರು ನೀಡಿರುವ ಆಫರ್​ ಏನು? ಸಂಪೂರ್ಣ ವಿವರ ಇಲ್ಲಿದೆ. 

ಇಬ್ಬರು ಮಹಿಳೆಯರ ಬಗ್ಗೆ ಮಾಹಿತಿ ನೀಡಿದವರಿಗೆ 1  ಲಕ್ಷ ರೂ. 

ಮಂಡ್ಯದಲ್ಲಿ ಇಬ್ಬರು ಮಹಿಳೆಯರನ್ನು ಭೀಕರವಾಗಿ ಕೊಲೆ ಮಾಡಿ, ಅವರ ರುಂಡ ಮುಂಡ ಬೇರೆ ಬೇರೆ ಮಾಡಿ ಬಿಸಾಡಿದ್ದ ಪ್ರಕರಣ ಪೋಲಿಸರಿಗೆ ಈಗ ಕಗ್ಗಂಟಾಗಿ ಪರಿಣಮಿಸಿದೆ. ಕೊಲೆಯಾದ ಮಹಿಳೆಯರ ಗುರುತು, ವಿಳಾಸದ ಬಗ್ಗೆಯಾಗಲಿ ಅಥವಾ ಆರೋಪಿಯ ಬಗ್ಗೆ ಆಗಲಿ ಮಂಡ್ಯ ಪೊಲೀಸರಿಗೆ ಯಾವುದೇ ಸುಳಿವು ಸಿಕ್ಕಿಲ್ಲ. ಈಗಾಗಲೇ ಜಿಲ್ಲೆ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಪೊಲೀಸರು  ಕರಪತ್ರದ  ಮೂಲಕ, ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಕೊಲೆಯಾಗಿರುವ ಮಹಿಳೆಯರ ಬಗ್ಗೆ ಹಾಗೂ ಆರೋಪಿಗಳ ಬಗ್ಗೆ ಮಾಹಿತಿ ಕಲೆ ಹಾಕುವ ಕೆಲಸ ಮಾಡಿದ್ರು. ಆದ್ರೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ಪೋಲಿಸ್ ವರಿಷ್ಟಾಧಿಕಾರಿ  ಕೊಲೆಯಾದ ಮಹಿಳೆಯರ ವಿಳಾಸ ಹಾಗೂ ಆರೋಪಿಯ ಬಗ್ಗೆ ಮಾಹಿತಿ ನೀಡಿದರೆ ಒಂದು ಲಕ್ಷ ರೂ.ಗಳ ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.ನಿಗೂಢವಾಗೇ ಉಳಿದ ಕೊಲೆ ಪ್ರಕರಣ 

ಮಂಡ್ಯದ ಪಾಂಡವಪುರ ಟೌನ್ ಪೊಲೀಸ್ ಠಾಣೆ ಹಾಗೂ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಹಿಳೆಯರಿಬ್ಬರ ಶವ ದೊರಕಿತ್ತು. ಜೂನ್ 7 ರಂದು ಪಾಂಡವಪುರ ತಾಲೂಕಿನ ಬೇಬಿಕೆರೆ ಹಾಗೂ ಕೆ.ಬೆಟ್ಟಹಳ್ಳಿ ಮಾರ್ಗ ಮಧ್ಯೆ ಇರುವ ಬೇಬಿ ಕೆರೆಯ ಬಳಿ 30 ರಿಂದ 32 ವರ್ಷದ ಮಹಿಳೆಯ ಹೊಟ್ಟೆಯಿಂದ ಕೆಳಭಾಗ ಇರುವ ಶವ ಪತ್ತೆಯಾಗಿತ್ತು. ಅದೇ ರೀತಿ ಅವತ್ತಿನ ದಿನವೇ ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆಯ ಮಾಡರಹಳ್ಳಿ ಗ್ರಾಮದ ಸಿಡಿಎಸ್ ನಾಲೆಯಲ್ಲಿ ಸುಮಾರು 40 ವರ್ಷದ ಮಹಿಳೆಯ ಅರ್ಧ ಭಾಗದ ಮೃತ ದೇಹ ಪತ್ತೆಯಾಗಿತ್ತು. ಇವೆರಡು ಮೃತ ದೇಹಗಳು ಒಂದೆ ರೀತಿ ಹತ್ಯೆ ಮಾಡಿ ಬೀಸಾಡಲಾಗಿದ್ದರಿಂದ ಮಂಡ್ಯ ಪೊಲೀಸರು ಈ ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿದ್ದಾರೆ‌.

ಇದನ್ನೂ ಓದಿ: Bengaluru Crime News: ಕೇವಲ 50 ರೂಪಾಯಿಗಾಗಿ ಬೆಂಗಳೂರಲ್ಲಿ ಬಿತ್ತು ಹೆಣ! ಏನಾಗ್ತಿದೆ ನಗರದಲ್ಲಿ?

ಹೊಟ್ಟೆಯ ಕೆಳ ಭಾಗ ಮಾತ್ರ ಇರುವ ಎರಡು ಮೃತ ದೇಹಗಳು.

ಎರಡೂ ಪ್ರಕರಣಗಳಲ್ಲಿ ಮಹಿಳೆಯರ ಹೊಟ್ಟೆಯ ಕೆಳಭಾಗ ಮಾತ್ರ ಸಿಕ್ಕಿದ್ದು, ಸಾಕ್ಷ್ಯ ನಾಶ ಮಾಡುವ ಉದ್ದೇಶದಿಂದ ಎರಡೂ ಶವಗಳ ಕಾಲುಗಳನ್ನು ಕಟ್ಟಿ ದೇಹದ ಕೆಳ ಭಾಗವನ್ನು ಕತ್ತರಿಸಿ ಚೀಲದಲ್ಲಿ ಹಾಕಿ ದುಷ್ಕರ್ಮಿಗಳು ನೀರಿಗೆ ಎಸೆದಿದ್ದಾರೆ. ಈ ಇಬ್ಬರೂ ಮಹಿಳೆಯರ ಬಗ್ಗೆ ಸಾಕಷ್ಟು ತನಿಖೆ ನಡೆಸಿದರೂ ಆರೋಪಿಗಳ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ಕೊಲೆಯಾದ ಮಹಿಳೆಯರ ಬಗ್ಗೆ ಅಥವಾ ಆರೋಪಿಯ ಬಗ್ಗೆ ಮಾಹಿತಿ ನೀಡಿದವರಿಗೆ ಒಂದು ಲಕ್ಷ ರೂ.ಬಹುಮಾನ ನೀಡುವುದಾಗಿ ಘೋಷಣೆ ಮಾಡಿದ್ದಾರೆ.

ಮಾಹಿತಿ ತಿಳಿದರೆ ಹೀಗೆ ಮಾಡಿ 

ಇನ್ನು ಮಾಹಿತಿದಾರರ ಹೆಸರನ್ನು ಗೌಪ್ಯವಾಗಿಡಲಾಗುವುದು ಎಂದು ಪೊಲೀಸರು ಭರವಸೆ ನೀಡಿದ್ದಾರೆ. ಮಾಹಿತಿ ಇದ್ದರೆ,  ಪೊಲೀಸ್ ಕಂಟ್ರೋಲ್ ರೂಂ. 0823 2-224888  9480804800 ಡಿವೈಎಸ್ಪಿ ಶ್ರೀರಂಗಪಟ್ಟಣ ಉಪವಿಭಾಗ 94808 04821, ಪಿಐ ಪಾಂಡವಪುರ - 9480804858 ಹಾಗೂ ಕೆ.  ಆರ್. ಸಾಗರ ವೃತ್ತ 9480804832  ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಮಂಡ್ಯ ಪೊಲೀಸರು ಈ ಪ್ರಕರಣವನ್ನ ಭೇದಿಸಿಯೇ ತೀರುತ್ತೇವೆ ಎಂದು ಪಣತೊಟ್ಟಿದ್ರೆ‌. ಅತ್ತ ಹತ್ಯೆ ಮಾಡಿದವರು ಒಂದು ಸಣ್ಣ ಸುಳಿವು ಸಿಗದಂತೆ ಹತ್ಯೆ ಮಾಡಿ ಮುಗಿಸಿಬಿಟ್ಟಿದ್ದಾರೆ‌. ಸದ್ಯ ಪೊಲೀಸರು ಘೋಷಣೆ ಮಾಡಿರುವ 1 ಲಕ್ಷ ಬಹುಮಾನ, ನಿಜವಾಗಲೂ ಆರೋಪಿಗಳನ್ನ ಹಿಡಿದುಕೊಡಲು ನೆರವಾಗತ್ತ  ಅಂತ ಕಾದು ನೋಡಬೇಕಿದೆ.
Published by:Kavya V
First published: