HOME » NEWS » State » MANDYA PEOPLE SAYING ACTOR DARSHAN FACING CONTROVERSYS AFTER PLAYING DURYODHANA ROLE IN MOVIEN KVD

ದುರ್ಯೋಧನನ ಪಾತ್ರ ಮಾಡಿದ್ದರಿಂದಲೇ ದರ್ಶನ್​​ಗೆ​​ ಸಂಕಷ್ಟಗಳಂತೆ.. ಪರಿಹಾರವನ್ನೂ ಹೇಳಿದ ಮಂಡ್ಯದ ಜನ

ದುರ್ಯೋಧನನ ಪಾತ್ರ ಮಾಡಿದ ಗ್ರಾಮದ ಅನೇಕರು ನಾನಾ ರೀತಿಯ ಸಂಕಷ್ಟಗಳನ್ನ ಎದುರಿಸಿದ್ದಾರಂತೆ. ದುರ್ಯೋಧನನ ಪಾತ್ರ ಮಾಡಿದ್ರೆ  ನಾನು ಎಂಬ ಅಹಂ ಬಂದು ಬಿಡುತ್ತೆ ಅಂತಿದ್ದಾರೆ ಉಪ್ಪರಕನಹಳ್ಳಿ ಗ್ರಾಮಸ್ಥರು.


Updated:July 21, 2021, 10:44 PM IST
ದುರ್ಯೋಧನನ ಪಾತ್ರ ಮಾಡಿದ್ದರಿಂದಲೇ ದರ್ಶನ್​​ಗೆ​​ ಸಂಕಷ್ಟಗಳಂತೆ.. ಪರಿಹಾರವನ್ನೂ ಹೇಳಿದ ಮಂಡ್ಯದ ಜನ
ದುರ್ಯೋಧನನ ಪಾತ್ರದಲ್ಲಿ ದರ್ಶನ್​
  • Share this:
ಮಂಡ್ಯ: ಗ್ರಾಮೀಣ ಭಾಗಗಳಲ್ಲಿ ನಾಟಕ ಮಾಡೋದು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಅದರಲ್ಲೂ ಸಕ್ಕರೆನಾಡು ಮಂಡ್ಯದ ಗ್ರಾಮೀಣ ಭಾಗಗಳಲಂತೂ ಪೌರಾಣಿಕ ಹಾಗೂ ಕುರುಕ್ಷೇತ್ರ ನಾಟಕಗಳನ್ನ ಅತಿ ಹೆಚ್ಚಾಗಿ ಮಾಡಿಕೊಂಡು ಬಂದಿದ್ದಾರೆ. ‌ಆದ್ರೆ ಈ ನಾಟಕ ಬರಿ ನಾಟಕವಾಗಿ ಮಾತ್ರವಿರದೆ ಆ ಪಾತ್ರ ನಿಜ ಜೀವನದಲ್ಲೂ ಅಳವಡಿಕೆಯಾಗತ್ತಾ ಎಂಬ ಪ್ರಶ್ನೆ ಈಗ ಜಿಲ್ಲೆಯ ಜನರಲ್ಲಿ ಕಾಡ್ತಿದೆ.

ದುರ್ಯೋಧನನ ಪಾತ್ರ ಮಾಡಿದ್ದೇ ನಟ ದರ್ಶನ್ ಗೆ ಕಂಠಕವಾಯ್ತಾ..?

ಜಿಲ್ಲೆಯಲ್ಲಿ ಈಗ ಇಂತದ್ದೊಂದು ಚೆರ್ಚೆ ಆರಂಭವಾಗಿದೆ. ಇದಕ್ಕೆ ಕಾರಣ ನಟ ದರ್ಶನ್. ಕುರುಕ್ಷೇತ್ರ ಸಿನಿಮಾದ ಬಳಿಕ ನಟ ದರ್ಶನ್ ಅವರಿಗೆ ಒಂದಿಲ್ಲೊಂದು ಸಂಕಷ್ಟ ಎದುರಾಗುತ್ತಿದೆ. ಇದಕ್ಕೆ ಕಾರಣ ಅವರು ಮಾಡಿದ ದುರ್ಯೋಧನನ ಪಾತ್ರವಂತೆ. ಈಗಂತ ಮಂಡ್ಯದ ಉಪ್ಪರಕನಹಳ್ಳಿ ಗ್ರಾಮಸ್ಥರು ಹೇಳ್ತಿದ್ದಾರೆ. ದುರ್ಯೋಧನನ ಪಾತ್ರ ಮಾಡಿದ ಗ್ರಾಮದ ಅನೇಕರು ನಾನಾ ರೀತಿಯ ಸಂಕಷ್ಟಗಳನ್ನ ಎದುರಿಸಿದ್ದಾರಂತೆ. ಹೀಗಾಗಿ ನಟ ದರ್ಶನ್ ಕೂಡ ಸಂಕಷ್ಟಕ್ಕೆ ಸಿಲುಕಿದ್ದು, ಅವರು ಮಾತನಾಡಿದ್ದೆ ಸರಿ, ಅವರು ಮಾಡಿದ್ದೆ ಸರಿ ಅಂತಿದ್ದಾರಂತೆ. ದುರ್ಯೋಧನನ ಪಾತ್ರ ಮಾಡಿದ್ರೆ  ನಾನು ಎಂಬ ಅಹಂ ಬಂದು ಬಿಡುತ್ತೆ ಅಂತಿದ್ದಾರೆ ಉಪ್ಪರಕನಹಳ್ಳಿ ಗ್ರಾಮಸ್ಥರು.

ಪಾತ್ರ ಮಾಡಿ ಸಂಕಷ್ಟಕ್ಕೆ ಸಿಲುಕಿದ್ದ ಪಾರಾಗಿದ್ದು ಹೇಗೆ?

ಉಪ್ಪರಕನಹಳ್ಳಿ ಗ್ರಾಮದಲ್ಲಿ ಹಿಂದಿನಿಂದಲೂ ನಾಟಕಗಳನ್ನ ಮಾಡಿಕೊಂಡು ಬಂದಿದ್ದಾರೆ. ಹೀಗಾಗಿ ಗ್ರಾಮದಲ್ಲಿ ಅನೇಕರು ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನ ಪಾತ್ರ ಮಾಡಿದ್ದಾರೆ. ಅವರು ಈಗ ಹೇಳುವ ಪ್ರಕಾರ ದುರ್ಯೋಧನನ ಪಾತ್ರ ಮಾಡಿದ ನಂತರ ತಮ್ಮಲ್ಲಿ ತಮಗೆ ಹರಿವೆ ಇಲ್ಲದಂತೆ ಹುಂಬರಾಗಿ ಬಿಡುತ್ತಿದ್ದರಂತೆ. ಗ್ರಾಮದಲ್ಲಿ ಯಾರೇ ಮಾತನಾಡಿಸಿದರು ನಕಾರಾತ್ಮಕ ಉತ್ತರವನ್ನ ಜಂಬದಿಂದ ನೀಡುತ್ತುದ್ದರಂತೆ. ಬಳಿಕ ಹಿರಿಯರ ಮಾರ್ಗದರ್ಶನದಂತೆ ಕೃಷ್ಣ ಅಥವಾ ಈಶ್ವರನ ಪಾತ್ರ ಮಾಡಿದ ಮೇಲೆ ಸಂಕಷ್ಟ ಪರಿಹಾರವಾಗ್ತಿತ್ತಂತೆ.

ಇನ್ನು ನಟ ದರ್ಶನ್ ಕೂಡ ಕುರುಕ್ಷೇತ್ರ ಸಿನಿಮಾದ ಬಳಿಕ ಈಗ ಒಂದಿಲ್ಲೊಂದು ವಿವಾದದ ಸುಳಿಯಲ್ಲಿ ಸಿಲುಕಿ ಚೆರ್ಚೆಯಲ್ಲಿದ್ದಾರೆ. 25 ಕೋಟಿ ಲೋನ್ ವಿವಾದ, ವೈಟರ್ ಮೇಲೆ ಹಲ್ಲೆ ವಿವಾದ, ನಿರ್ದೇಶಕ ಪ್ರೇಮ ಬಗೆಗಿನ ಹೇಳಿಕೆ ವಿವಾದ. ಹೀಗೆ ಸಾಲು ಸಾಲು ವಿವಾದಗಳು ದರ್ಶನ್ ಸುತ್ತ ಸುತ್ತಿಕೊಂಡಿವೆ. ಹೀಗಾಗಿ ಗ್ರಾಮಸ್ಥರು ಹೇಳುವ ರೀತಿ ನಟ ದರ್ಶನ್ ಮತ್ತೊಂದು ದೇವರ ಪಾತ್ರದ ಯಾವುದಾದರೂ ಒಂದು ಸಿನಿಮಾದಲ್ಲಿ ನಟಿಸಿದರೆ ಸಂಕಷ್ಟ ದೂರವಾಗುತ್ತಾ..? ಎಂಬ ಪ್ರಶ್ನೆ ಈಗ ಎಲ್ಲರಲ್ಲೂ ಮೂಡಿದೆ.

ಉಪ್ಪರಕನಹಳ್ಳಿ ಗ್ರಾಮಸ್ಥರು
ಇನ್ನು ಉಪ್ಪರಕನಹಳ್ಳಿ ಗ್ರಾಮದಲ್ಲಿ ಕುರುಕ್ಷೇತ್ರ ನಾಟಕದಲ್ಲಿ ದುರ್ಯೋಧನನ ಪಾತ್ರ ಮಾಡಿದ ಕೆಲವರು ತಮ್ಮ ಅಭಿಪ್ರಾಯಗಳನ್ನ ವ್ಯಕ್ತಪಡಿಸಿದ್ದಾರೆ. ಗ್ರಾಮದ ಮಾದೇವಪ್ಪ ದುರ್ಯೋಧನನ ಪಾತ್ರ ಮಾಡಿದ್ದರಂತೆ. ಬಳಿಕ ಅವರ ಮನಸ್ಸು ನಿಯಂತ್ರಣದಲ್ಲಿ ಇರದೆ ಗ್ರಾಮದ ಜನರ ಜೊತೆ ಮೇಲಿಂದ ಮೇಲೆ ಜಗಳವಾಗಿ, ಸಾಕಷ್ಟು ತೊಂದರೆಗಳನ್ನ ಅನುಭಸಿದ್ದರಂತೆ. ಅದೇ ರೀತಿ ಗ್ರಾಮದ ಮತ್ತೊರ್ವ ಶಿವಕುಮಾರ್ ಆರಾಧ್ಯ ಎಂಬಾತ ಕೂಡ ಇದನ್ನೆ ವಿವರಿಸಿದ್ದಾರೆ‌. ಸದ್ಯ ಇವರೆಲ್ಲರೂ ಬೇರೋಂದು ದೇವರ ಪಾತ್ರ ಮಾಡೋ ಮೂಲಕ ಆ ಸಂಕಷ್ಟದಿಂದ ಪಾರಾಗಿದ್ದಾಗೆ ಹೇಳ್ತಿದ್ದಾರೆ.

ವರದಿ - ಸುನೀಲ್ ಗೌಡ
Published by: Kavya V
First published: July 21, 2021, 10:42 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories