Mandya: ಮಂಡ್ಯದಲ್ಲಿ 'ಕೊರೊನಾ ನೀ ಮುಂದ್ಲೂರಿಗೆ ಹೋಗಮ್ಮ' ಹಬ್ಬದ್ದೇ ಸದ್ದು!

ಮೊದಲೇ ಕೊರೊನಾ ಸಂಕಷ್ಟದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ನಿತ್ಯ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಹೀಗಿರುವಾಗ ಮಂಡ್ಯ ಜಿಲ್ಲೆಯಾದ್ಯಂತ ಮೌಢ್ಯತೆ ಹೆಚ್ಚಾಗುತ್ತಿದೆ.

ಮಂಡ್ಯದಲ್ಲಿ ವಿಚಿತ್ರ ಆಚರಣೆ

ಮಂಡ್ಯದಲ್ಲಿ ವಿಚಿತ್ರ ಆಚರಣೆ

  • Share this:
    ಮಂಡ್ಯ (ಮೇ 30): ಕೊರೊನಾದಿಂದ ದೇಶ ಮುಕ್ತವಾಗಲಿ ಎಂದು ಜನರು ಹಲವಾರು ರೀತಿಯಲ್ಲಿ ವಿಶೇಷ ಪ್ರಾರ್ಥನೆ ಮಾಡುತ್ತಿದ್ದಾರೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೊಪ್ಪ ಹೋಬಳಿಯ ಹಲವು ಹಳ್ಳಿಗಳಲ್ಲಿ 'ಕೊರೊನಾ ನೀನು ಮುಂದ್ಲೂರಿಗೆ ಹೋಗಮ್ಮ'  ಎಂಬ ವಿಶೇಷ ಹಬ್ಬದ ಆಚರಣೆಯೊಂದಿಗೆ ಪೂಜೆ ಸಲ್ಲಿಸಲಾಗುತ್ತಿದೆ.

    ಕೊರೊನಾ ರೋಗ ನಮ್ಮ ಊರು ಬಿಟ್ಟು ಮುಂದಿನ ಊರಿಗೆ ಹೋಗು ಎಂದು ಮಣ್ಣಿನಿಂದ ಮಾಡಿದ ಮೂರ್ತಿಗೆ ಮಹಿಳೆಯರು ಮತ್ತು ಗ್ರಾಮಸ್ಥರು ಪೂಜೆ ಮಾಡುತ್ತಿದ್ದಾರೆ. ಊರಿನ ಹೊರ ಭಾಗದಲ್ಲಿ ನಿರ್ಮಿಸಿದ ಮೂರ್ತಿಗೆ ಕೋಳಿ, ಕುರಿ, ಪ್ರಾಣಿ ಬಲಿ ನೀಡಿ ಅದರ ರಕ್ತವನ್ನು ಮೂರ್ತಿಗೆ ಪ್ರೋಕ್ಷಣೆ ಮಾಡಲಾಗುತ್ತಿದೆ. ಸಂಜೆ ವೇಳೆಗೆ ಸೂರ್ಯ ಮುಳುಗಿದ ಮೇಲೆ ಮಣ್ಣಿನ ಮೂರ್ತಿಯನ್ನು ಬೇರೆ ಗ್ರಾಮದ ಗಡಿ ಬಳಿ ಈ ಗ್ರಾಮದ ಯುವಕರು ಇಡುತ್ತಿದ್ದಾರೆ. ಈ ಗ್ರಾಮದಲ್ಲಿ ಇದೇ ರೀತಿ ವಿಶೇಷ ಪೂಜೆ ಮತ್ತು ಪ್ರಾಣಿ ಬಲಿ ನೀಡಿ ಅಲ್ಲಿಂದ ಬೇರೆ ಊರಿಗೆ ಮಣ್ಣಿನ ಮೂರ್ತಿ ಕಳುಹಿಸಿ ಕೊಡುತ್ತಿದ್ದಾರೆ.

    ಈ ರೀತಿ ನಿರಂತರವಾಗಿ ಪ್ರತಿ ಹಳ್ಳಿಯಲ್ಲೂ ಹಬ್ಬ ಆಚರಿಸಿ ಪೂಜೆ ಸಲ್ಲಿಸಲಾಗುತ್ತಿದೆ ಈ ಮಣ್ಣಿನ ಮೂರ್ತಿ ನಾಗಮಂಗಲದಿಂದ ಬಂದಿದ್ದು, ಮದ್ದೂರು ತಾಲೂಕಿನ ಕೆ.ಜಿ. ಕೊಪ್ಪಲು, ತರಮನಕಟ್ಟೆ ಸೇರಿ ಇನ್ನಿತರ ಹಳ್ಳಿಗಳನ್ನು ಹಾದು ಹೋಗಿದೆ. ಈ ರೀತಿ ಪೂಜೆಯಿಂದ ಒಳ್ಳೆಯದಾಗುತ್ತದೆ ಎಂಬುದು ಜನರ ನಂಬಿಕೆ.

    ಇದನ್ನೂ ಓದಿ: Karnataka Lockdown Extension: ಕರ್ನಾಟಕದಲ್ಲಿ ಲಾಕ್​ಡೌನ್ ವಿಸ್ತರಣೆ ಬಗ್ಗೆ ಜೂನ್ 6ರೊಳಗೆ ತೀರ್ಮಾನ; ಸಿಎಂ ಯಡಿಯೂರಪ್ಪ

    ಮೊದಲು ಜಿಲ್ಲೆಯ ಮಳವಳ್ಳಿ ತಾಲೂಕಿನಲ್ಲಿ ಕೊರೊನ ಶಾಂತಿಗಾಗಿ ಜನರು ರಸ್ತೆಗಳಲ್ಲಿ ಮಾರಮ್ಮನ ತಂಪು ಮಾಡೋ ವಿಶೇಷ ಪೂಜೆಗಳನ್ನ ನೆರವೇರಿಸಿದ್ದರು. ಗ್ರಾಮಗಳ ಹೆಬ್ಬಾಗಿಲಲ್ಲಿ ಮಣ್ಣಿನ ಮೂರ್ತಿಗಳನ್ನ ನಿರ್ಮಿಸಿ ಅದಕ್ಕೆ ಅರಿಶಿನ, ಕುಂಕುಮಗಳನ್ನ ಹಚ್ಚಿ ಹೆಂಗಳೆಯರು ವಿಶೇಷ ಪೂಜೆಗಳನ್ನ ಸಲ್ಲಿಸಿದ್ದರು. ಬಳಿ ಕೆಲ ಗ್ರಾಮಗಳಲ್ಲಿ ಕೋಳಿ ಹಾಗೂ ಮೇಕೆ ಬಲಿಯನ್ನ ಕೊಟ್ಟು ಸಂಜೆ ವೇಳೆಗೆ ಎಲ್ಲಾ ಗ್ರಾಮಸ್ಥರಿಗೆ ಮಾಂಸದೂಟ ಮಾಡಿ ಬಡಿಸಲಾಗ್ತಿತ್ತು. ಇದರಿಂದ ಮುನಿಸಿದ ಕೊರೊನ ಮಾರಮ್ಮ ತಂಪಾಗುತ್ತಾಳೆ, ಶಾಂತವಾಗುತ್ತಾಳೆ ಅನ್ನೋ ನಂಬಿಕೆ ಗ್ರಾಮಸ್ಥರದ್ದಾಗಿದೆ.

    ಈಗ ನಾಗಮಂಗಲ ತಾಲೂಕು ಹಾಗೂ ಮದ್ದೂರು ತಾಲ್ಲೂಕು ಜನರು ಅದಕ್ಕೂ ಒಂದು ಹೆಜ್ಜೆ ಮುಂದೇ ಹೋಗಿದ್ದು, ಕೊರೊನಾ ನೀ ಮುಂದ್ಲೂರಿಗೆ ಹೋಗಮ್ಮ ಎಂಬ ವಿಶೇಷ ಹಬ್ಬ ಆಚರಣೆ ಮಾಡ್ತಿದ್ದಾರೆ.

    ಮೊದಲೆ ಕೊರೊನಾ ಸಂಕಷ್ಟದಲ್ಲಿ ಜನರು ತತ್ತರಿಸಿ ಹೋಗಿದ್ದಾರೆ. ಪ್ರತಿ ನಿತ್ಯ ಜಿಲ್ಲೆಯಲ್ಲಿ 15ಕ್ಕೂ ಹೆಚ್ಚು ಸಾವುಗಳು ಸಂಭವಿಸುತ್ತಿವೆ. ಹೀಗಿರುವಾಗ ಜಿಲ್ಲೆಯಾಧ್ಯಂತ ಮೌಢ್ಯತೆ ಜನರಲ್ಲಿ ಹೆಚ್ಚಾಗ್ತಿದೆ. ಇದರಿಂದ ಅನೇಕ ಪ್ರಾಣಿಗಳನ್ನ ಬಲಿ ಕೊಡಲಾಗ್ತಿದೆ. ಇದರಿಂದ ಪ್ರಕೃತಿ ವಿಕೋಪ ಹೆಚ್ಚಾಗಿ ಕೊರೊನಾದಂತ ಮಹಾಮಾರಿಗಳು ಇನ್ನು ಅಧಿಕವಾಗುತ್ತವೆ ಹೊರತು ಕೊರೊನಾ ನಿರ್ಮೂಲನೆ ಆಗೋದಿಲ್ಲ.  ಜನರು ಮೂಡ ನಂಬಿಕೆಗಳನ್ನ ಬಿಟ್ಟು. ಮೆನೆಯಿಂದ ಹೊರ ಬರದೆ ಮನೆಯಲ್ಲೆ ಇದ್ದು, ಸಾಮಾಜಿಕ ಅಂತರ ಕಾಪಾಡುತ್ತ, ಮಾಸ್ಕ್ ಗಳನ್ನ ಹಾಕಿದ್ರೆ ಕೊರೊನಾ ತಾನಾಗೆ ಹೊರಟು ಹೋಗುತ್ತದೆ ಅಂತ ಪ್ರಾಣಿ ಪ್ರಿಯರು ತಮ್ಮ ಅಭಿಪ್ರಾಯ ವ್ಯಕ್ತಪಡಿಸ್ತಿದ್ದಾರೆ.

    (ವರದಿ: ಸುನೀಲ್ ಕುಮಾರ್)
    Published by:Sushma Chakre
    First published: