ಮಂಡ್ಯ(ಏ.22): ಕರ್ನಾಟಕ ಚುನಾವಣೆಗೆ (Karnataka Elections) ಇನ್ನು ಕೆಲವೇ ದಿನಗಳು ಬಾಕಿ ಇವೆ. ಹೀಗಿರುವಾಗ ರಾಜಕೀಯ ಅಖಾಡದಲ್ಲಿ ಹೊಸ ಬೆಳವಣಿಗೆಗಳು ಸಂಭವಿಸುತ್ತಿದ್ದು, ರಾಜಕೀಯ ನಾಯಕರ ನಡೆ ಜನ ಸಾಮಾನ್ಯರನ್ನು ಮತ್ತಷ್ಟು ಕುತೂಹಲಕ್ಕೀಡು ಮಾಡುತ್ತಿದೆ. ಒಂದೆಡೆ ಪಕ್ಷಗಳ ರಣತಂತ್ರ, ಮತ್ತೊಂದೆಡೆ ಎದುರಾಳಿಗಳನ್ನು ಸೋಲಿಸಲು ನಾಯಕರ ಪಣ ಇವೆಲ್ಲವೂ ರಾಜಕೀಯ ವಲಯದಲ್ಲಿ ಮತ್ತಷ್ಟು ಸಂಚಲನ ಮುಡಿಸುತ್ತಿದೆ. ಸದ್ಯ ಮಂಡ್ಯದ ಕೆ. ಆರ್ ಪೇಟೆ ಕ್ಷೇತ್ರದ (KR Pete Constituency) ರಾಜಕೀಯ ಅಖಾಡ ಮತದಾರನ ಗಮನ ಸೆಳೆಯುತ್ತಿದೆ. ಇಲ್ಲಿ ಸದ್ಯ ಜೆಡಿಎಸ್ ಮಣಿಸಲು ಬಿಜೆಪಿ ಶಾಸಕ ನಾರಾಯಣ ಗೌಡ ರಣತಂತ್ರ ಹೆಣೆದಿರುವುದು ಭಾರೀ ಸದ್ದು ಮಾಡುತ್ತಿದೆ.
ಇದನ್ನೂ ಓದಿ: Ramadan: ಶನಿವಾರ ಬೆಂಗಳೂರಲ್ಲಿ ರಂಜಾನ್ ಸಂಭ್ರಮ, ಮೈಸೂರು ರಸ್ತೆಯಲ್ಲಿ ಸಂಚಾರ ಬದಲಾವಣೆ
ಹೌದು ಕೆ.ಆರ್.ಪೇಟೆಯ ರಾಜಕೀಯ ಅಖಾಡ ರಂಗೇರಿದೆ. ಕ್ಷೇತ್ರದಲ್ಲಿ ಜೆಡಿಎಸ್ ಅಭ್ಯರ್ಥಿ ಮಣಿಸಲು ಸಚಿವ ನಾರಾಯಣಗೌಡ ರಣತಂತ್ರ ಹೆಣೆದಿದ್ದು, ಜೆಡಿಎಸ್ ಅಭ್ಯರ್ಥಿ ಎಚ್.ಟಿ.ಮಂಜು ವಿರೋಧಿ ಮುಖಂಡರಿಗೆ ಗಾಳ ಹಾಕಿದ್ದಾರೆ. ತಾ.ಪಂ.ಮಾಜಿ ಸದಸ್ಯ ರಾಜಾಹುಲಿ ದಿನೇಶ್ ಮತ್ತು ಜೆಡಿಎಸ್ ಮುಖಂಡ ಬಸ್ ಸಂತೋಷ್ಗೆ ಗಾಳ ಹಾಕಿರುವ ನಾರಾಯಣ ಗೌಡ ಇಬ್ಬರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದಾರೆ.
ಇನ್ನು ಸಚಿವ ನಾರಾಯಣಗೌಡ ಜೊತೆ ನಡೆದ ಮಾತುಕತೆ ಬಳಿಕ ರಾಜಾ ಹುಲಿ ದಿನೇಶ್ ಬಿಜೆಪಿಗೆ ಬೆಂಬಲ ಸೂಚಿಸಿದ್ದಾರೆ. ಆದರೆ ಅತ್ತ ಬಸ್ ಸಂತೋಷ್ ಇನ್ನೆರಡು ದಿನದಲ್ಲಿ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ. ಅದೇನಿದ್ದರೂ ಸದ್ಯ ನಾರಾಯಣಗೌಡ ಅವರು ಎಚ್.ಟಿ.ಮಂಜು ವಿರೋಧಿಗಳನ್ನು ಬಿಜೆಪಿಗೆಗೆ ಸೇರ್ಪಡೆ ಮಾಡಿಸಿ ಜೆಡಿಎಸ್ ಗೆ ಟಕ್ಕರ್ ಕೊಟ್ಟಿದ್ದಾರೆ ಎಂಬುವುದರಲ್ಲಿ ಅನುಮಾನವಿಲ್ಲ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ