• ಹೋಂ
 • »
 • ನ್ಯೂಸ್
 • »
 • ರಾಜ್ಯ
 • »
 • Hijab Controversy: ಅಲ್ಲಾ ಹು ಅಕ್ಬರ್ ಎಂದಿದ್ದ ಹುಡುಗಿ ದುಬೈನಲ್ಲಿ! ಮದೀನಾದಿಂದ ಮುಸ್ಕಾನ್‌ ತಂದೆಯ ಸೆಲ್ಫಿ ವಿಡಿಯೋ!

Hijab Controversy: ಅಲ್ಲಾ ಹು ಅಕ್ಬರ್ ಎಂದಿದ್ದ ಹುಡುಗಿ ದುಬೈನಲ್ಲಿ! ಮದೀನಾದಿಂದ ಮುಸ್ಕಾನ್‌ ತಂದೆಯ ಸೆಲ್ಫಿ ವಿಡಿಯೋ!

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್

ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ ಮುಸ್ಕಾನ್ ಮತ್ತೊಮ್ಮೆ ಸುದ್ದಿಯಾಗಿದ್ದಾಳೆ. ಪೊಲೀಸರಿಗೆ ಮಾಹಿತಿ ನೀಡದೇ, ಕುಟುಂಬಸ್ಥರ ಜೊತೆ ವಿದೇಶಕ್ಕೆ ಹಾರಿದ್ದಾಳೆ. ಮದೀನಾದಿಂದ ಆಕೆಯ ತಂದೆ ಸೆಲ್ಫಿ ವಿಡಿಯೋ ಕಳಿಸಿದ್ದಾರೆ.

 • Share this:

ಮಂಡ್ಯ: ಹಿಜಾಬ್ ವಿವಾದ (Hijab Controversy) ಸದ್ಯಕ್ಕೆ ತಣ್ಣಗಾಗಿದೆ. ಆದರೆ ಹಿಜಾಬ್ ಗಲಾಟೆ ವೇಳೆ ಅಲ್ಲಾ ಹು ಅಕ್ಬರ್ (Allahu akbar) ಅಂತ ಕೂಗಿ ಭಾರೀ ಸುದ್ದಿ ಮಾಡಿದ್ದ ಮಂಡ್ಯದ ಮುಸ್ಲಿಂ ವಿದ್ಯಾರ್ಥಿನಿ (Mandya Muslim Student) ಮುಸ್ಕಾನ್ (Muskan) ಈಗ ಮತ್ತೆ ಸುದ್ದಿ ಮಾಡಿದ್ದಾಳೆ. “ಜೈ ಶ್ರೀರಾಮ್” ಎಂದವರ ಎದುರು “ಅಲ್ಲಾ ಹು ಅಕ್ಬರ್” ಅಂತ ಕೂಗುತ್ತಿದ್ದ  ಮುಸ್ಕಾನ್ ವಿಡಿಯೋ (Video) ಹಾಗೂ ಫೋಟೋ (Photo) ಸಖತ್ ವೈರಲ್ (Viral) ಆಗಿತ್ತು. ಮುಸ್ಕಾನ್‌ ಧೈರ್ಯಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿತ್ತು. ಮರುದಿನ ಆಕೆ ನಿವಾಸಕ್ಕೆ ಭೇಟಿ ನೀಡಿದ್ದ ಮುಸ್ಲಿಂ ಮುಖಂಡರು, ರಾಜಕಾರಣಿಗಳು, ವಿವಿಧ ಸಂಘಟನೆ ಮುಖ್ಯಸ್ಥರು ಆಕೆಗೆ ಹಣಕಾಸಿನ ಸಹಾಯ (Financial Help) ಮಾಡಿದ್ದರು. ಇದೆಲ್ಲಕ್ಕಿಂತ ಮಿಗಿಲಾಗಿ  ಅಲ್ ಖೈದಾ ಉಗ್ರ ಸಂಘಟನೆ ಮುಖ್ಯಸ್ಥ  ಅಯ್ಮಾನ್ ಅಲ್ ಜವಾಹಿರಿ (Ayman Al Zawahiri)  ಕೂಡ ಆಕೆಯ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿ, ಶ್ಲಾಘನೆಯ ವಿಡಿಯೋ ಪ್ರಸಾರ ಮಾಡಿದ್ದ. ಈ ವೇಳೆ ಆಕೆ ವಿರುದ್ಧ ತನಿಖೆ ನಡೆಸುವಂತೆ ಶ್ರೀರಾಮ ಸೇನೆ ಸೇರಿದಂತೆ ವಿವಿಧ ಸಂಘಟನೆಗಳು ಆಗ್ರಹಿಸಿದ್ದವು. ಇದೀಗ ವಿದ್ಯಾರ್ಥಿನಿ ಮುಸ್ಕಾನ್ ಏಕಾಏಕಿ ತಮ್ಮ ಕುಟುಂಬಸ್ಥರ ಜೊತೆ ದುಬೈಗೆ (Dubai) ಹಾರಿದ್ದಾಳೆ.


ದುಬೈಗೆ ಹಾರಿದ ಮಂಡ್ಯದ ವಿದ್ಯಾರ್ಥಿನಿ ಮುಸ್ಕಾನ್


ಕಳೆದ ತಿಂಗಳು ಅಂದರೆ ಏಪ್ರಿಲ್ 25ರಂದೇ ಮುಸ್ಕಾನ್ ಕುಟುಂಬದವರು ಧಾರ್ಮಿಕ ಪ್ರವಾಸ ಕೈಗೊಂಡಿದ್ದಾರೆ. ಮೆಕ್ಕಾ ಭೇಟಿಗೆ ಸೌದಿಗೆ  ತೆರಳಿರುವ ಕುಟುಂಬಸ್ಥರು ಮೇ 18ರಂದು ವಾಪಾಸ್ಸಾಗುವ ಮಾಹಿತಿ ಇದೆ. ಆದ್ರೆ ಮುಸ್ಕಾನ್ ಕುಟುಂಬದ ವಿದೇಶ ಪ್ರವಾಸ ಈಗ ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಯಾಕೆಂದರೆ ಅಲ್ಲಾ ಹು ಅಕ್ಬರ್ ಘೋಷಣೆ ಬಳಿಕ ದೇಶದಾದ್ಯಂತ ಚರ್ಚೆಗೆ ಬಂದಿದ್ದ ಮುಸ್ಕಾನ್, ಇದೀಗ ಪೊಲೀಸರಿಗೆ ಮಾಹಿತಿ ನೀಡದೆ ವಿದೇಶ ಪ್ರವಾಸ ಕೈಗೊಂಡಿದ್ದಾಳೆ ಎನ್ನಲಾಗಿದೆ.


ಪೊಲೀಸರಿಗೆ ತಿಳಿಸದೇ ವಿದೇಶ ಪ್ರವಾಸ


ಮುಸ್ಕಾನ್ ತನಿಖೆಗೆ ಒತ್ತಾಯಿಸಿ ಹಲವು ದೂರುಗಳು ದಾಖಲಾದ ಬಳಿಕ ಮಂಡ್ಯ ಪೊಲೀಸ್ ಇಲಾಖೆ ಮುಸ್ಕಾನ್ ಮೇಲೆ ನಿಗಾ ವಹಿಸಿತ್ತು. ಆಕೆಯ ಮನೆಗೆ ಯಾರೆಲ್ಲಾ ಭೇಟಿ ನೀಡ್ತಾರೆ ಎನ್ನುವುದರ ಬಗ್ಗೆಯೂ ಕಣ್ಣಿಟ್ಟಿದ್ದರು. ಜೊತೆಗೆ ಎಲ್ಲೇ ಹೋಗುವುದಾದರು ಮಾಹಿತಿ ನೀಡಿ ತೆರಳುವಂತೆಯೂ ಕೂಡ ಪೊಲೀಸರು ಮುಸ್ಕಾನ್ ಕುಟುಂಬಕ್ಕೆ ಮೌಖಿಕ ಸೂಚನೆ ನೀಡಿದ್ದರು ಎನ್ನಲಾಗಿದೆ. ಆದ್ರೆ ಏ.25ರಂದೇ ಸೌದಿ ಪ್ರವಾಸ ಕೈಗೊಂಡಿರುವ ಮುಸ್ಕಾನ್ ಕುಟುಂಬ ಪೊಲೀಸರಿಗೆ ಯಾವುದೇ ಮಾಹಿತಿ ಕೊಡದೆ ವಿದೇಶಕ್ಕೆ ತೆರಳಿದೆ.


 ಇದನ್ನೂ ಓದಿ: PSI ದೈಹಿಕ ಪರೀಕ್ಷೆಯಲ್ಲಿಯೂ ಅಕ್ರಮ: ಹುಬ್ಬಳ್ಳಿ ಯುವಕನ ವಶಕ್ಕೆ ಪಡೆದ CID


 ಮದೀನಾದಿಂದ ಮುಸ್ಕಾನ್ ತಂದೆಯ ಸೆಲ್ಫಿ ವಿಡಿಯೋ


ಮೆಕ್ಕಾ, ಮದೀನಾ ಸೇರಿದಂತೆ ದುಬೈ ಭಾಗದಲ್ಲಿರುವ ಮುಸ್ಲಿಮರ ಪವಿತ್ರ ತೀರ್ಥ ಕ್ಷೇತ್ರಗಳಿಗೆ ಮುಸ್ಕಾನ್ ಕುಟುಂಬ ಯಾತ್ರೆ ಕೈಗೊಂಡಿದೆ. ಮದೀನಾದ ವಿಶ್ವ ವಿಖ್ಯಾತ ಮಸೀದಿಯಿಂದ ಮುಸ್ಕಾನ್ ತಂದೆ ಮಹಮ್ಮದ್ ಹುಸೇನ್ ಸೆಲ್ಫೆ ವಿಡಿಯೋ ಒಂದನ್ನು ರೆಕಾರ್ಡ್ ಮಾಡಿ, ತಮ್ಮ ಆಪ್ತರು, ಕುಟುಂಬಸ್ಥರಿಗೆ ಕಳಿಸಿದ್ದಾರೆ.


ಇದನ್ನೂ ಓದಿ: Crime Story: ಒಡವೆಗಾಗಿ ಸ್ನೇಹಿತೆಯ ಕೊಲೆ, ಡೆಡ್​ಬಾಡಿ ಜೊತೆ ನಡುರಸ್ತೆಯಲ್ಲಿ ಸಿಕ್ಕಿಬಿದ್ದಿದ್ದು ಹೇಗೆ?


ಈ ಹಿಂದೆ ಮುಸ್ಕಾನ್ ಹೊಗಳಿದ್ದ ಆಲ್‌ ಖೈದಾ ಉಗ್ರ

top videos


  ಅಲ್‌ಖೈದಾ ಮುಖ್ಯಸ್ಥ ಅಲ್‌ ಜವಾಹಿರಿ ಕೂಡ ಮುಸ್ಕಾನ್‌ಳನ್ನು ಹೊಗಳಿ, ವಿಡಿಯೋ ಪ್ರಸಾರ ಮಾಡಿದ್ದ. ‘ಹಿಂದೂ ಭಾರತ’ದ ನಿಜ ಬಣ್ಣ ಬಯಲು ಮಾಡಿದೆ. ಆದರೆ ಇಂಥ ಸಂದರ್ಭದಲ್ಲಿ ಹಿಜಾಬ್‌ ಧರಿಸಿ ಬಂದ ತನ್ನನ್ನು ವಿರೋಧಿಸಿದ ವ್ಯಕ್ತಿಗಳನ್ನು ಮುಸ್ಕಾನ್‌ ಖಾನ್‌  ದಿಟ್ಟತನದಿಂದ ಎದುರಿಸಿದ್ದಾಳೆ. ಆಕೆ ‘ಅಲ್ಲಾ ಹು ಅಕ್ಬರ್‌’ ಎಂದು ಕೂಗಿದ್ದು ಶ್ಲಾಘನೀಯ. ಈ ಮೂಲಕ ಮುಸ್ಲಿಂ ಧರ್ಮದಲ್ಲಿ ಕೀಳರಿಮೆ ಹೊಂದಿರುವ ಇತರ ಮಹಿಳೆಯರಿಗೆ ಮುಸ್ಕಾನ್‌ ಖಾನ್‌ ನೈತಿಕ ಪಾಠ ಕಲಿಸಿದ್ದಾಳೆ ಅಂತ ಹೊಗಳಿದ್ದ. ಹೀಗಾಗಿ ಆಕೆ ವಿರುದ್ಧ ತನಿಖೆಗೆ ಶ್ರೀರಾಮಸೇನೆ ಸೇರಿದಂತೆ ಹಲವು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದವು.

  First published: