MLC Electionನಲ್ಲಿ ಯಾವ ಪಕ್ಷವನ್ನು ಬೆಂಬಲಿಸುತ್ತಾರೆ ಎಂಬ ಗುಟ್ಟು ಬಿಟ್ಟು ಕೊಟ್ಟ ಸಂಸದೆ Sumalatha

ಯಾರನ್ನ ಆಯ್ಕೆ ಮಾಡಿದ್ರೆ ನಮ್ಮ ಜಿಲ್ಲೆಗೆ ಒಳ್ಳೆಯದಾಗತ್ತೋ ಅವರನ್ನ ಬೆಂಬಲಿಸಿ ಅಂತ ಹೇಳಿದ್ದೇನೆ ಎಂದು ನಾಜೂಕಾದ ಹೇಳಿಕೆ ನೀಡಿದರು. ಕಾಂಗ್ರೆಸ್​​ ಅಭ್ಯರ್ಥಿ ಬಗ್ಗೆ ಮೃದು ಧೋರಣೆ ಇರುವುದು ಅವರ ಮಾತುಗಳಿಂದ ವ್ಯಕ್ತವಾಗುತ್ತಿತ್ತು. ಜೊತೆಗೆ ಬಹಿರಂಗವಾಗಿ ಇಂಥಹದ್ದೇ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹೇಳದೆ ಜಾಣ ನಡೆ ಆಯ್ದುಕೊಂಡರು.

ಸಂಸದೆ ಸುಮಲತಾ

ಸಂಸದೆ ಸುಮಲತಾ

  • Share this:
ಮಂಡ್ಯ: ಸಂಸದೆ ಸುಮಲತಾ ಅಂಬರೀಶ್​ (MP Sumalatha Ambareesh) ಇಂದು ಜಿಲ್ಲೆಯಲ್ಲಿ ಮಳೆ ಹಾನಿಗೊಳಗಾದ (Rain Damage) ಪ್ರದೇಶಗಳಿಗೆ ಭೇಟಿ ನೀಡಿ, ಮನೆ ಕಳೆದುಕೊಂಡಿರುವ ಸಂತ್ರಸ್ತರಿಗೆ ಸಾಂತ್ವನ ಹೇಳಿದರು. ಈ ವೇಳೆ ಪರಿಷತ್ ಚುನಾವಣೆಯಲ್ಲಿ (MLC Election) ಕಾಂಗ್ರೆಸ್​ ಅಭ್ಯರ್ಥಿಯನ್ನು  ದಿನೇಶ್ ಗೂಳಿಗೌಡ ಬೆಂಬಲಿಸುವ ಸಂಬಂಧ ಮಾತನಾಡಿದರು. ಪಕ್ಷದ ಆದೇಶ ಉಲ್ಲಂಘಿಸಿ ನನಗೆ ಬೆಂಬಲ ನೀಡಿದ್ದರು, ಈಗ ಅವರ ಪಕ್ಷ ಕಾಂಗ್ರೆಸ್​​ ಪರವಾಗಿ ಕೆಲಸ ಮಾಡ್ತಿದ್ದಾರೆ. ನನ್ನ ಬೆಂಬಲಿಗರು ಮೊದಲಿನಿಂದ ಕಾಂಗ್ರೆಸ್​​​ ಪಕ್ಷದಲ್ಲಿ ಇದ್ದರು. ನನ್ನ ಚುನಾವಣೆ ಸಂದರ್ಭ ಪಕ್ಷದ ಆದೇಶ ಧಿಕ್ಕರಿಸಿ ನನಗೆ ಬೆಂಬಲ ನೀಡಿದ್ದರು. ಈಗ ಅವರು ಯಾವ ಪಕ್ಷದ ಪರವಾಗಿ ನಿಂತರು ಎಂಬುವುದು ಅವರಿಗೆ ಬಿಟ್ಟದ್ದು. ಇಂತವರನ್ನ ಬೆಂಬಲಿಸಿ ಅಂತ ನಾನು ಹೇಳೋದಿಲ್ಲ. ನಾನು ಈಗಾಗಲೇ ಕ್ಲಿಯರ್ ಕಟ್ ಆಗಿ ಹೇಳಿದ್ದೇನೆ ನಾನು ಯಾರ ಪರನೂ ಅಲ್ಲ ಅಂತ. ಯಾರನ್ನ ಆಯ್ಕೆ ಮಾಡಿದ್ರೆ ನಮ್ಮ ಜಿಲ್ಲೆಗೆ ಒಳ್ಳೆಯದಾಗತ್ತೋ ಅವರನ್ನ ಬೆಂಬಲಿಸಿ ಅಂತ ಹೇಳಿದ್ದೇನೆ ಎಂದು ನಾಜೂಕಾದ ಹೇಳಿಕೆ ನೀಡಿದರು. ಕಾಂಗ್ರೆಸ್​​ ಅಭ್ಯರ್ಥಿ ಬಗ್ಗೆ ಮೃದು ಧೋರಣೆ ಇರುವುದು ಅವರ ಮಾತುಗಳಿಂದ ವ್ಯಕ್ತವಾಗುತ್ತಿತ್ತು. ಜೊತೆಗೆ ಬಹಿರಂಗವಾಗಿ ಇಂಥಹದ್ದೇ ಪಕ್ಷವನ್ನು ಬೆಂಬಲಿಸುತ್ತೇನೆ ಎಂದು ಹೇಳದೆ ಜಾಣ ನಡೆ ಆಯ್ದುಕೊಂಡರು.

ಪರಿಹಾರದ ಭರವಸೆ

ಇನ್ನು ಸುಮಲತಾ ಅವರು ಕೆಆರ್‌ಪೇಟೆ, ಪಾಂಡವಪುರ, ಶ್ರೀರಂಗಪಟ್ಟಣ ತಾಲೂಕಿನ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದರು. ಮಳೆಯಿಂದ ಬೆಳೆ ಹಾನಿಗೊಳಗಾಗಿರೊ ಕೃಷಿ ಪ್ರದೇಶ ವೀಕ್ಷಿಸಿ ರೈತರಿಗೆ ಧೈರ್ಯ ಹೇಳಿದರು. ಮನೆ ಕಳೆದುಕೊಂಡವರಿಗೆ ಸಾಂತ್ವನ ಹೇಳಿ, ಸರ್ಕಾರದಿಂದ ಬರಬೇಕಿರುವ ಪರಿಹಾರ ದೊರಕಿಸಿಕೊಡುವುದಾಗಿ ಭರವಸೆ ನೀಡಿದರು. ಲಿಂಗಾಪುರ ಗ್ರಾಮದಲ್ಲಿ ಮಳೆಯಿಂದಾಗಿ 8 ಮನೆಗಳು ನೆಲಕ್ಕುರುಳಿದ್ದದವರು. ನವಂಬರ್ 13 ರ ರಾತ್ರಿ ಸುರಿದಿದ್ದ ಭಾರಿ ಮಳೆ ಮಳೆಯಿಂದಾಗಿ ಗ್ರಾಮ ಜಲಾವೃತ್ತವಾಗಿತ್ತು. 8 ಮನೆಗಳ ಗೋಡೆ ಸಂಪೂರ್ಣ ಕುಸಿದಿತ್ತು. ಇಡೀ ಗ್ರಾಮವನ್ನ ಸ್ಥಳಾಂತರ ಮಾಡುವ ಬಗ್ಗೆ ಚಿಂತನೆ ನಡೆದಿತ್ತು. ಈ ಹಿನ್ನೆಲೆ ಸಂಸದೆ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರ ಅಹವಾಲು ಸ್ವೀಕರಿಸಿದರು.

ಇದನ್ನೂ ಓದಿ : CM ಸಭೆಯಿಂದ ತೆರಳುತ್ತಿದ್ದಂತೆ ಬಿಜೆಪಿ MLA & MLC ಮಧ್ಯೆ ಗಲಾಟೆ; ಮೂಕ ಪ್ರೇಕ್ಷಕರಾಗಿ ನಿಂತ ಶೆಟ್ಟರ್

ಸಂಸದೆ ಎದುರು ಅಳಲು

ಈ ವೇಳೆ ಸಂಸದೆ ಬಳಿ ಗ್ರಾಮಸ್ಥರು ಅಳಲು ತೋಡಿಕೊಂಡರು. ಅಧಿಕಾರಿಗಳು ಬಂದು ನೋಡಿಕೊಂಡು ಹೋಗೋದೆ ಆಯ್ತು.ನೀರಿನಲ್ಲಿ ಮುಳುಗಡೆಯಾಗಿದ್ದ ಗೋಡೆ ಕುಸಿತಗೊಂಡಿರೊ ಮನೆಯ ಕೆಲವರು ಬಾಡಿಗೆ ಮನೆ ಮಾಡ್ಕೊಂಡು ಹೋಗಿದ್ದಾರೆ. ಉಳಿದ ನಾವು ಏನ್ ಮಾಡಲು ಸಾಧ್ಯವಾಗುತ್ತೆ ಎಂದು ಸಂಸದೆ ಬಳಿ ಅಳಲು ತೋಡಿಕೊಂಡರು. ಗ್ರಾಮದ ಸಮಸ್ಯೆ ಬಗ್ಗೆ, ಜಿಲ್ಲೆಯ ಮಳೆ ಹಾನಿಯ ಬಗ್ಗೆ ಸಿಎಂ ಜೊತೆ ಮಾತನಾಡಿದ್ದೀನಿ. ಮತ್ತೊಮ್ಮೆ ಅವರ ಜೊತೆ ಚರ್ಚಿಸಿ ಪರಿಹಾರ ಕೊಡಿಸೊ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಗ್ರಾಮಸ್ಥರಿಗೆ ಸಂಸದೆ ಸುಮಲತಾ ಭರವಸೆ ನೀಡಿದರು.

ಸುಮಲತಾರಿಗೆ ತರಾಟೆ

ಇದೇ ವೇಳೆ ಮನೆ ಕಳೆದುಕೊಂಡ ಗ್ರಾಮಸ್ಥರು ಸಂಸದರಿಗೆ ತರಾಟೆಯನ್ನು ತೆಗೆದುಕೊಂಡರು. ನ.13 ರಂದು 8 ಮನೆಗಳು ಬಿದ್ದಿದ್ದವು, ಅಂದಿನಿಂದ ಇಲ್ಲಿತನಕ ಪರಿಹಾರ ಬಂದಿಲ್ಲ. ಅಧಿಕಾರಿಗಳು ಬರ್ತಾರೆ ಹೋಯ್ತಾರೆ ಎಂದರು. ಇದಕ್ಕೆ ಸರ್ಕಾರದಿಂದ ಪರಿಹಾರ ಬರುತ್ತೆ ಎಂದು ಸಂಸದೆ ಸುಮಲತಾ ಸಮಾಧಾನ ಮಾಡಲು ಪ್ರಯತ್ನಿಸಿದರು. ಅಲ್ಲಿ ತನಕ ನಾವು ಏನ್ ಮಾಡ್ಬೇಕು? ಮಕ್ಕಳು ಮರಿ ಕಟ್ಕೊಂಡ್ ಎಲ್ಲಿಗೆ ಹೋಗೋಕೆ ಆಗುತ್ತೆ. ವಾಸ್ತವ್ಯಕ್ಕೆ ಪರ್ಯಾಯ ವ್ಯವಸ್ಥೆ ಮಾಡ್ಬೇಕಲ್ವಾ ಎಂದು ಸಂಸದೆಗೆ ಪ್ರಶ್ನೆ ಮಾಡಿದರು. ಮತ್ತೊಮ್ಮೆ ಅವರ ಜೊತೆ ಚರ್ಚಿಸಿ ಪರಿಹಾರ ಕೊಡಿಸೊ ನಿಟ್ಟಿನಲ್ಲಿ ಪ್ರಯತ್ನಿಸುವುದಾಗಿ ಗ್ರಾಮಸ್ಥರಿಗೆ ಸಂಸದೆ ಸುಮಲತಾ ಮನವರಿಕೆ ಮಾಡಿಕೊಟ್ಟರು.
Published by:Kavya V
First published: