ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಸುಮಲತಾ ಅಂಬರೀಶ್​; ಮಂಡ್ಯ ಸಂಸದೆ ತೆಗೆದುಕೊಂಡಿದ್ದಾರೆ ಮಹತ್ವದ ನಿರ್ಧಾರ

ಸಂಸದೆ ಸುಮಲತಾಗೆ ಅದ್ದೂರಿ  ಸ್ವಾಗತಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜಾಗಿದ್ದಾರೆ. ಸುಮಲತಾ ಬರುತ್ತಿದ್ದಾರೆ ಎನ್ನುವ ಕಾರಣಕ್ಕೇ ಇಂದಿನ ಸಭೆಗೆ ಚಲುವರಾಯಸ್ವಾಮಿ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

Rajesh Duggumane | news18-kannada
Updated:October 11, 2019, 8:56 AM IST
ಡ್ಯಾಮೇಜ್ ಕಂಟ್ರೋಲ್​ಗೆ ಮುಂದಾದ ಸುಮಲತಾ ಅಂಬರೀಶ್​; ಮಂಡ್ಯ ಸಂಸದೆ ತೆಗೆದುಕೊಂಡಿದ್ದಾರೆ ಮಹತ್ವದ ನಿರ್ಧಾರ
ಸುಮಲತಾ ಅಂಬರೀಶ್.
  • Share this:
ಮಂಡ್ಯ (ಅ.11): ಸುಮಲತಾ ಅಂಬರೀಶ್​ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದಾಗ ಬಿಜೆಪಿ ಅವರಿಗೆ ನೇರ ಬೆಂಬಲ ನೀಡಿತ್ತು. ಚುನಾವಣೆ ಗೆದ್ದ ನಂತರ ಅವರು ಬಿಜೆಪಿ ಜೊತೆ ಹೆಚ್ಚು ಗುರುತಿಸಿಕೊಳ್ಳುತ್ತಿದ್ದಾರೆ ಎನ್ನುವ ಚರ್ಚೆ ಜೋರಾಗಿದೆ. ಈ ಮಧ್ಯೆ ಅವರು ಮಂಡ್ಯ ಬಿಜೆಪಿ ಕಚೇರಿ ಪ್ರವೇಶಿಸಿದ್ದು ಈ ಚರ್ಚೆಗೆ ಹೊಸ ಅರ್ಥ ನೀಡಿದೆ. ಇದರಿಂದ ಉಂಟಾಗಿರುವ ಡ್ಯಾಮೇಜ್ ಕಂಟ್ರೋಲ್​​ಗೆ ಸುಮಲತಾ ಮುಂದಾಗಿದ್ದಾರೆ.

ಮೊನ್ನೆ ಮಂಡ್ಯದ ಬಿಜೆಪಿ ಕಚೇರಿ ಭೇಟಿ ನೀಡಿದ ಬೆನ್ನಲ್ಲೇ ಸುಮಲತಾ ವಿರುದ್ಧ ಕಾಂಗ್ರೆಸ್​ ಕಾರ್ಯಕರ್ತರು ಸಿಡಿದೆದಿದ್ದರು. ಸುಮಲತಾ ಬೆನ್ನಿಗೆ ನಿಂತಿದ್ದ ಚಲುವರಾಯಸ್ವಾಮಿ ಕೂಡ ಅಸಮಧಾನಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಅವರು ನಾಗಮಂಗಲದ ಕಾಂಗ್ರೆಸ್​ ಕಚೇರಿಗೆ ಭೇಟಿ ನೀಡಲಿದ್ದಾರೆ.

ಇಂದು ನಾಗಮಂಗಲದ ಕೆಡಿಪಿ ಸಭೆ ಇದ್ದು ಸಭೆಗೂ ಮುನ್ನ ನಾಗಮಂಗಲದ ಕಾಂಗ್ರೇಸ್ ಕಚೇರಿಗೆ ಭೇಟಿ ನೀಡಲಿದ್ದಾರೆ. ಈ ಮೂಲಕ ಮುನಿಸಿಕೊಂಡಿರುವ ಆಪ್ತ ಬೆಂಬಲಿಗ  ಚಲುವರಾಯಸ್ವಾಮಿ ಕೋಪ ಶಮನಕ್ಕೆ ಅವರು ಮುಂದಾಗಿದ್ದಾರೆ ಎನ್ನುವ ಮಾತು ಕೇಳಿ ಬಂದಿದೆ. ಸಂಸದೆ ಸುಮಲತಾಗೆ ಅದ್ದೂರಿ  ಸ್ವಾಗತಕ್ಕೆ ಕಾಂಗ್ರೆಸ್‌ ಕಾರ್ಯಕರ್ತರು ಸಜ್ಜಾಗಿದ್ದಾರೆ. ಸುಮಲತಾ ಬರುತ್ತಿದ್ದಾರೆ ಎನ್ನುವ ಕಾರಣಕ್ಕೇ ಇಂದಿನ ಸಭೆಗೆ ಚಲುವರಾಯಸ್ವಾಮಿ ಗೈರಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಆಗಿದ್ದೇನು?

ಸುಮಲತಾ ಇತ್ತೀಚೆಗೆ ಮಂಡ್ಯ ಬಿಜೆಪಿ ಕಚೇರಿ ಪ್ರವೇಶಿಸಿ ಕಮಲ ನಾಯಕರ ಜೊತೆ ಮಾತುಕತೆ ನಡೆಸಿದ್ದರು. ಇದಕ್ಕೆ ಕಾಂಗ್ರೆಸ್​ ಕಾರ್ಯಕರ್ತರು ಅಸಮಾಧಾನ ಹೊರ ಹಾಕಿದ್ದರು. ಅಷ್ಟೇ ಅಲ್ಲ, ಅಧಿಕಾರಕ್ಕೋಸ್ಕರ ಸುಮಲತಾ ಈ ರೀತಿ ಮಾಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿತ್ತು. ಇನ್ನು, ಪದೇ ಪದೆ ಬಿಜಪಿ ನಾಯಕರನ್ನು ಭೇಟಿ ಮಾಡುತ್ತಿರುವುದರಿಂದ ಕಾಂಗ್ರೆಸ್​ ಹಾಗೂ ಜೆಡಿಎಸ್​ ನಾಯಕರು ಸುಮಲತಾ ಕಮಲ ಪಾಳಯ ಸೇರುತ್ತಾರೆ ಎನ್ನುವ ಆರೋಪ ಹೊರಿಸಿದ್ದರು. ಈಗ ಅವರು ಕಾಂಗ್ರೆಸ್​​ ಕಚೇರಿ ಪ್ರವೇಶಿಸುವ ಮೂಲಕ ಈ ಎಲ್ಲ ಊಹಾಪೋಹಗಳಿಗೆ ತೆರೆ ಎಳೆಯಲಿದ್ದಾರೆ.

(ವರದಿ: ರಾಘವೇಂದ್ರ ಗಂಜಾಮ್​)

First published: October 11, 2019, 8:56 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading