ಮಂಡ್ಯ: ಮಾಜಿ ಸಿಎಂ ಕುಮಾರಸ್ವಾಮಿ (HD Kumaraswamy) ಮಾತಿನಿಂದ ಹೇಸಿಗೆಯಾಗುತ್ತೆ. ಅಂಬರೀಶ್ಗೆ (Ambareesh ) ಒಬ್ಬರಿಂದ ಗೌರವ ಸಿಕ್ಕಿಲ್ಲ. ನಾನೇ ನಾನೇ ಅಂತ ಎಚ್ಡಿ ಕುಮಾರಸ್ವಾಮಿ ಹೇಳುವುದು ಸರಿಯಲ್ಲ ಎಂದು ಮಂಡ್ಯ (Mandya) ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ಅಸಮಾಧಾನ ಹೊರ ಹಾಕಿದ್ದಾರೆ. ಅಂಬರೀಶ್ ಮೃತ ದೇಹ ಮಂಡ್ಯಕ್ಕೆ ತಂದ ವಿಚಾರದ ಬಗ್ಗೆ ಕುಮಾರಸ್ವಾಮಿ ಹೇಳಿಕೆಗೆ ಸುಮಲತಾ ಗರಂ ಆಗಿ ಪ್ರತಿಕ್ರಿಯೆ ನೀಡಿದ್ದು, ಕುಮಾರಸ್ವಾಮಿಯವರ ಈ ರೀತಿ ಮಾತುಗಳು ಕೇಳಲು ತುಂಬಾ ಹೇಸಿಗೆ ಅನಿಸುತ್ತದೆ. ಅಂಬರೀಶ್ ಅವರಿಗೆ ಗೌರವ (Respect) ಸಿಕ್ಕಿದ್ದು ಒಬ್ಬ ನಾಯಕನಿಂದ ಅಲ್ಲ. ರಾಜ್ಯದ (State) ಜನತೆ ಅವರಿಗೆ ಕೊಟ್ಟಿರುವ ಗೌರವ, ಸ್ಥಾನಮಾನ ಕೊಟ್ಟಿರುವುದು. ಆದರೆ ನಾನೇ ನಾನೇ ಎಂದು ಕುಮಾರಸ್ವಾಮಿ ಹೇಳುವುದು ಅವರಿಗೆ ಶೋಭೆ ತರಲ್ಲ ಎಂದರು.
ಇತ್ತೀಚೆಗಷ್ಟೇ ಮಾತನಾಡಿದ್ದ ಕುಮಾರಸ್ವಾಮಿ ಅವರು, ನಾನು ಅವರಿಗೆ ಏನು ಅನ್ಯಾಯ ಮಾಡಿದ್ದೀನಿ ಎಂದು ಈ ರೀತಿ ದ್ವೇಷ ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು. ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಸುಮಲತಾ ಅವರು, ನಾನಾ ದ್ವೇಷ ಮಾಡಿದ್ದು, ಅವರ ಏನು ಎಂದು ಜನ ನೋಡಿಕೊಂಡು ಬಂದಿದ್ದಾರೆ.
ಒಂದೊಂದು ದಿನ ಒಂದೊಂದು ಹೇಳಿಕೆ ಕೊಡುವ ಮೂಲಕ ದಾರಿ ತಪ್ಪಿಸಲು ಹೊರಟಿದ್ದಾರೆ. ದ್ವೇಷದ ರಾಜಕಾರಣ ಅವರು ಮತ್ತು ಅವರ ಕಡೆಯವರು ಮಾಡಿಕೊಂಡು ಬಂದಿದ್ದಾರೆ. ಅಂಬರೀಶ್ ಹಾಗೂ ಅವರ ಕುಟುಂಬ ಪ್ರೀತಿಯಿಂದನೇ ಎಲ್ಲರನ್ನ ಗೆದ್ದಿರೋದು. ಹಿಂದಿನ ರೆಕಾರ್ಡ್ ತೆಗೆದು ನೋಡಿಕೊಂಡು ಆಮೇಲೆ ಈ ರೀತಿ ಹೇಳಿಕೆ ನೀಡಲಿ ಎಂದರು.
ಅಲ್ಲದೆ, ಅಂಬರೀಶ್ ರಿಂದ ಮಂಡ್ಯದಲ್ಲಿ ಜೆಡಿಎಸ್ 7ಕ್ಕೆ 7 ಸ್ಥಾನ ಗೆದ್ದಿತು ಎಂಬ ಸುಮಲತಾ ಹೇಳಿಕೆಯನ್ನು ಜೆಡಿಎಸ್ ನಾಯಕರು ಒಪ್ಪದ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅವರು ಒಪ್ಪಿಕೊಳ್ಳೊಕೆ ಸಾಧ್ಯ ಇಲ್ಲ. ಅವರ ಮನಸ್ಸನ್ನು ಅವರನ್ನು ಕೇಳಿ ಕೊಳ್ಳಲಿ. ಒಪ್ಪಿಕೊಳ್ಳದೇ ಇರೋರು ನಮ್ಮ ಮನೆಗೆ ಎಷ್ಟು ಬಾರಿ ಬಂದಿದ್ದಾರೆ, ಅಂಬರೀಶ್ ಅವರನ್ನು ಸಂಪರ್ಕಿಸಲು ಎಷ್ಟು ಬಾರಿ ಬಂದಿದ್ದಾರೆ ಗೊತ್ತಿದೆ ಎಂದು ಟಾಂಗ್ ನೀಡಿದರು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ